ಹುಮನಾಬಾದ್‌ | ನ.4ರಂದು ಸಿಂಧನಕೇರಾ ಘನತ್ಯಾಜ್ಯ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

Date:

ಹುಮನಾಬಾದ್ ನಗರದಲ್ಲಿ ಸಂಗ್ರಹವಾಗುವ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾ ಗ್ರಾಮದ ವ್ಯಾಪ್ತಿಯಲ್ಲಿ ಸುರಿಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ನ. 4ರಂದು ಹುಮನಾಬಾದ್ ನಗರಸಭೆ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ.

- Advertisement -

ನಗರಸಭೆಯ ಕಸವನ್ನು ಸಿಂಧನಕೇರಾ ಗ್ರಾಮದಲ್ಲಿ ಸುರಿಯುತ್ತಿರುವುದರಿಂದ ಗ್ರಾಮಸ್ಥರು ದುರ್ವಾಸನೆ, ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಆತಂಕ ಎದುರಿಸುತ್ತಿದ್ದಾರೆ. ಗ್ರಾಮಸ್ಥರ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಹಿತದೃಷ್ಟಿಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು;...

ಅಮೆರಿಕದ ಕಾಂಗ್ರೆಸ್‌ಗೆ ನ. 3ರಂದು ನಡೆಯಲಿರುವ 'ಮಧ್ಯಂತರ ಚುನಾವಣೆ' ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ. ಈ ಸಮರದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೂ ಅವರ ಅಧ್ಯಕ್ಷ ಸ್ಥಾನಕ್ಕೇನೂ ಕುತ್ತಿಲ್ಲ;...

ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು...

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ....

ಹುಮನಾಬಾದ್ ನಗರಸಭೆಯ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾ ಗ್ರಾಮದಲ್ಲಿ ಸುರಿಯುವುದನ್ನು ತಕ್ಷಣ ನಿಲ್ಲಿಸಬೇಕು. ತ್ಯಾಜ್ಯ ಸುರಿಯುತ್ತಿರುವ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತ್ಯಾಜ್ಯದಿಂದ ಉಂಟಾಗಬಹುದಾದ ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಆರೋಗ್ಯದ ಅಪಾಯಗಳ ಕುರಿತು ಸಮಗ್ರ ತನಿಖೆ ನಡೆಸಬೇಕು.

Advertisements
WhatsApp Image 2026 10 10 at 7.46.08 PM 31

ಗ್ರಾಮಕ್ಕೆ ಯಾವುದೇ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಧರಣಿ ಮುಂದುವರಿಸಲಾಗುವುದು ಎಂದು ಪ್ರತಿಭಟನೆ ಆಯೋಕರಾದ ಯುವರಾಜ ಐಹೊಳ್ಳಿ, ಭೀಮರೆಡ್ಡಿ, ಶೇಖ್‌ ಫಿರ್ದೋಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೀದರ್‌ | ಅರಣ್ಯ ಭವನ, ಟ್ರೀ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

WhatsApp Image 2026 10 10 at 6.59.09 PM 12
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಮಮಂದಿರ ಲೂಟಿ ಪ್ರಕರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿಗಳ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾಣಿಕೆ ಕಳವು ಮತ್ತು ಹಣಕಾಸು...

ಬೀದರ್‌ | ಅರಣ್ಯ ಭವನ, ಟ್ರೀ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಬೀದರ್ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ತಲಾ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ...

ಸಿದ್ದರಾಮಯ್ಯ ನಕಲಿ ಸ್ಟಿಂಗ್ ಪ್ರಕರಣ: ಪವರ್ ಟಿವಿ ಕಚೇರಿ, ರಾಕೇಶ್ ಶೆಟ್ಟಿ ಮನೆ ಮೇಲೆ ಸಿಸಿಬಿ ದಾಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆಸಲಾಗಿದೆ...