‘ನ್ಯಾಯಾಂಗ ಮಧ್ಯಪ್ರವೇಶಿಸದಿದ್ದರೆ, ಗಣತಂತ್ರ ನಾಶ’; ಸಿಜೆಐಗೆ ‘ಇಂಡಿಯಾ’ ಮೈತ್ರಿಕೂಟದ ಪತ್ರ

Date:

ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ವಿಚಾರದಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸದಿದ್ದರೆ, ಗಣರಾಜ್ಯದ ಸಂಪೂರ್ಣ ಕುಸಿದು ಬೀಳುತ್ತದೆ ಎಂದು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದೆ.

- Advertisement -

ತಾವು ಬರೆದಿರುವ 6 ಪುಟಗಳ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಮೈತ್ರಿಕೂಟದ ನಾಯಕರು ಹಂಚಿಕೊಂಡಿದ್ದಾರೆ. ಅದರಲ್ಲಿ, ವಿರೋಧ ಪಕ್ಷಗಳ 23 ಉನ್ನತ ನಾಯಕರು ಮತ್ತು ಒಬ್ಬರು ಪಕ್ಷೇತರ ಸಂಸದರು ಸಹಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದಿಂದ ದೂರ ಉಳಿದಿದ್ದ ಎಎಪಿ ಮತ್ತು ಡಿಎಂಕೆ ನಾಯಕರು ಕೂಡ ಈ ಪತ್ರಕ್ಕೆ ಸಹಿ ಹಾಕಿದ್ದಾರೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

 “ನಾವು ಸಾಮಾನ್ಯ ಸಂದರ್ಭಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುತ್ತಿರಲಿಲ್ಲ. ಆದರೆ, ಪ್ರಸ್ತುತ, ನಮ್ಮ ಪ್ರಜಾಪ್ರಭುತ್ವವು ಅಪಾಯದಲ್ಲಿರುವ ಕಾರಣದಿಂದಾಗಿ ನಾವು ಈ ಪತ್ರ ಬರೆಯಬೇಕಾದ ಮಾರ್ಗವನ್ನು ಆರಿಸಿಕೊಂಡಿದ್ದೇವೆ” ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.

“ಎಲ್ಲ ಮಾರ್ಗಗಳು ಮುಚ್ಚಿದಾಗಲೂ, ಎಲ್ಲ ಆಯಾಮಗಳು ವಿಫಲವಾದಾಗಲೂ ಜನರು ನ್ಯಾಯಾಂಗದ ಮೇಲೆ ನಂಬಿಕೆ ಇಡುತ್ತಾರೆ. ಹಾಗಾಗಿ, ನ್ಯಾಯಾಂಗವೂ ಸ್ಪಂದಿಸಲು ವಿಫಲವಾದರೆ, ಅದು ಗಣರಾಜ್ಯದ ಸಂಪೂರ್ಣ ಕುಸಿತವನ್ನು ಸೂಚಿಸುತ್ತದೆ. ಸಾಂಸ್ಥಿಕ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲವಾದಾಗ ಪ್ರಜಾಪ್ರಭುತ್ವಗಳು ಅರಾಜಕತೆಯಾಗಿ ಬದಲಾಗುತ್ತವೆ” ಎಂದು ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

“ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ವಿಶ್ವಾಸವು ಉಳಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದಕ್ಕಾಗಿ ನ್ಯಾಯಾಂಗವು ತಮ್ಮ ಪಾತ್ರವನ್ನು ನಿರ್ವಹಿಸಬೇಕು. ನಾವು ನ್ಯಾಯಾಂಗವನ್ನು ಪ್ರಶ್ನಿಸುತ್ತಿಲ್ಲ. ವಾಸ್ತವವಾಗಿ, ಪ್ರತಿಯೊಂದು ವ್ಯವಸ್ಥೆಯೂ ವಿಫಲವಾದಾಗ ನಾವು ನ್ಯಾಯಾಲಯಗಳ ಕಡೆಗೆ ಎದುರು ನೋಡುತ್ತೇವೆ. ಇದೂ ವಿಫಲವಾದರೆ, ನಾವು ಈಗ ಯಾರ ಕಡೆಗೆ ನೋಡಬೇಕು ಎಂಬ ಪ್ರಶ್ನೆ ದಟ್ಟವಾಗಿ ಉಳಿಯುತ್ತದೆ” ಎಂದು ಇಂಡಿಯಾ ಮೈತ್ರಿಕೂಟ ಹೇಳಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸಾಂವಿಧಾನಿಕ ಅಗತ್ಯತೆಯಾಗಿದೆ ಎಂದು ಪ್ರತಿಪಾದಿಸಿರುವ ವಿರೋಧ ಪಕ್ಷಗಳು, “ಚುನಾವಣಾ ಪ್ರಕ್ರಿಯೆಯು ಯಾವುದೋ ಒಂದು ರೀತಿಯಲ್ಲಿ ಕಲುಷಿತಗೊಂಡಾಗ, ಅದರ ಫಲಿತಾಂಶವು ಸಂಶಯಾಸ್ಪದವಾಗಿರುತ್ತದೆ. ಜನರ ಇಚ್ಛೆಯು ಇಂತಹ ವಂಚನೆಗೆ ಬಲಿಯಾಗುತ್ತದೆ” ಎಂದು ಹೇಳಿವೆ.

“ಬಿಜೆಪಿಯನ್ನು ದೃಢವಾಗಿ ವಿರೋಧಿಸುವ, ಸಮಾನ ಮನಸ್ಕ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ನಾವೆಲ್ಲರೂ, ‘ಪ್ರಸ್ತುತ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಫಲಿತಾಂಶಗಳು ಜನರ ಇಚ್ಛೆಗೆ ವಿರುದ್ಧವಾಗಿದೆ’ ಎಂಬುದನ್ನು ಬಲವಾಗಿ ನಂಬುತ್ತೇವೆ. ಇದಕ್ಕೆ ಹಲವು ಕಾರಣಗಳಿವೆ” ಎಂದು ಪತ್ರದಲ್ಲಿ ವಿವರಿಸಿವೆ.

“ಭಾರತೀಯ ಚುನಾವಣಾ ಆಯೋಗದ (ECI), ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತರ ಬಹಿರಂಗ ಪಕ್ಷಪಾತದ ನಡವಳಿಕೆಯು ನಮಗೆ ತೀವ್ರ ಕಳವಳ ಉಂಟುಮಾಡಿದೆ. ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಮತ್ತು ಅದರ ಫಲಿತಾಂಶಗಳಲ್ಲಿ ಬಿಜೆಪಿಗೆ ಆಯೋಗದಿಂದ ಬಹಿರಂಗ ಮತ್ತು ನಿಸ್ಸಂಶಯವಾದ ಬೆಂಬಲ ಸಿಗುತ್ತಿದೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಮಾದರಿ ನೀತಿ ಸಂಹಿತೆಯನ್ನು (MCC) ಉಲ್ಲಂಘಿಸಿದಾಗ ಆಯೋಗವು ಯಾವುದೇ ಕ್ರಮ ಕೈಗೊಳ್ಳದೆ ತಟಸ್ಥ ಧೋರಣೆ ತಳೆದಿದೆ. ಅದೇ ಸಮಯದಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕ್ರಮ ಜರುಗಿಸುತ್ತಿದೆ” ಎಂದು ಮೈತ್ರಿಕೂಟ ದೂರಿದೆ.

“ಸಂವಿಧಾನ ಮತ್ತು 1951ರ ‘ಪ್ರಜಾಪ್ರತಿನಿಧಿ ಕಾಯ್ದೆ’ಯ ನಿಬಂಧನೆಗಳ ಪ್ರಕಾರ ಮತದಾನದ ಹಕ್ಕನ್ನು ಹೊಂದಿರುವವರನ್ನು ಮಾತ್ರ ಒಳಗೊಳ್ಳಲು ಚುನಾವಣಾ ಆಯೋಗವು, ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರತಿ ರಾಜ್ಯದಲ್ಲಿ ಮತದಾರರ ಪಟ್ಟಿಗಳನ್ನು ಪರಿಷ್ಕರಿಸಲು ಮುಂದಾದಾಗ ದೊಡ್ಡ ಆಘಾತ ಎದುರಾಯಿತು. ಮತದಾರರ ಪಟ್ಟಿಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅಗತ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದರು. ಆದರೆ, ಇದರ ಫಲಿತಾಂಶ ಮಾತ್ರ ತದ್ವಿರುದ್ಧವಾಗಿದೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

“ಎಸ್‌ಐಆರ್‌ ಪ್ರಕ್ರಿಯೆಯು ‘ಅಕಾಲಿಕ ಮತ್ತು ಭಾರೀ ದುರಂತ’. ಮೊದಲ ಬಾರಿಗೆ ಅಳವಡಿಸಿಕೊಳ್ಳಲಾದ ಈ ಪ್ರಕ್ರಿಯೆಯು ಸ್ವಾಭಾವಿಕವಾಗಿಯೇ ಜನರನ್ನು ಮತಪಟ್ಟಿಯಿಂದ ಹೊರಗಿಡುವ ರೀತಿಯದ್ದಾಗಿತ್ತು ಮತ್ತು ರಾಜಕೀಯ ಪ್ರೇರಿತವಾಗಿತ್ತು. ಫಾರ್ಮ್‌ಗಳನ್ನು ತುಂಬುವುದು ಮತ್ತು ದಾಖಲೆಗಳನ್ನು ಹಾಜರುಪಡಿಸುವುದರ ಆಧಾರದ ಮೇಲೆ ಮತದಾರರ ಪರಿಶೀಲನೆ ನಡೆಸುವುದು ಹಾಗೂ ಪೌರತ್ವವನ್ನು ಪ್ರಶ್ನಿಸುವುದು ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಿದೆ” ಎಂದು ಮೈತ್ರಿಕೂಟ ಆರೋಪಿಸಿದೆ.

ಭವಿಷ್ಯದಲ್ಲಿ ಹಲವು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಮೈತ್ರಿಕೂಟ, “ಎಲೆಕ್ಟ್ರಾನಿಕ್ ವೋಟಿಂಗ್ ಮತ್ತು ವಿಶೇಷವಾಗಿ ವಿದ್ಯುನ್ಮಾನ ಮತಯಂತ್ರಗಳ (EVM) ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ” ಎಂದು ಹೇಳಿದೆ.

ವಿಪಕ್ಷಗಳು ಬರೆದಿರುವ ಈ ಪತ್ರಕ್ಕೆ ಸಂಸತ್ತಿನ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ, ಡಿಎಂಕೆಯ ತಿರುಚ್ಚಿ ಸಿವಾ, ಆರ್‌ಜೆಡಿಯ ತೇಜಸ್ವಿ ಯಾದವ್, ಎಎಪಿಯ ಸಂಜಯ್ ಸಿಂಗ್ ಹಾಗೂ ಮೈತ್ರಿಕೂಟದ ಇತರ ಹಿರಿಯ ನಾಯಕರು ಸಹಿ ಹಾಕಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...