ಕೋಳಿ ವಿಚಾರದಲ್ಲಿ ಹೊಸ ಪ್ರಶ್ನೆ ಉದ್ಭವ : ‘ಕೋಳಿ ಪ್ರಾಣಿಯೋ-ಪಕ್ಷಿಯೋ’

Date:

  • ಗುಜರಾತ್ ಹೈಕೋರ್ಟ್‌ನಲ್ಲಿ ಪಿಐಎಲ್
  • ಕೋಳಿ ಅಂಗಡಿ ಮುಚ್ಚುವಂತೆ ಆದೇಶ

ಚಿಕ್ಕ ಮಕ್ಕಳಿಂದಿಡಿದು ದೊಡ್ಡವರವರೆಗೂ ಎಲ್ಲರೂ ಒಂದಲ್ಲೊಂದು ಸಂದರ್ಭದಲ್ಲಿ ‘ಕೋಳಿ ಮೊದಲೋ-ಮೊಟ್ಟೆ ಮೊದಲೋ’ ಎಂಬ ಪ್ರಶ್ನೆ ಕೇಳಿರುತ್ತಾರೆ. ಈಗ ಆ ಪ್ರಶ್ನೆ ಹಳತಾಗುತ್ತಿದೆ. ಆ ಪ್ರಶ್ನೆಯನ್ನು ಕೇಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಬದಲಾಗಿ, ಹೊಸ ಪ್ರಶ್ನೆಯೊಂದು ಮುನ್ನೆಲೆಗೆ ಬಂದಿದೆ. ‘ಕೋಳಿ ಪ್ರಾಣಿಯೋ ಅಥವಾ ಪಕ್ಷಿಯೋ’ ಎಂಬುದು ಹೊಸ ಗೊಂದಲವನ್ನು ಹುಟ್ಟುಹಾಕಿದೆ.

ಮಾಂಸದ ಅಂಗಡಿಗಳಲ್ಲಿ ಕೋಳಿಯನ್ನು ಕೊಲ್ಲಬಾರದು, ಕಸಾಯಿಖಾನೆಯಲ್ಲಿ ಮಾತ್ರವೇ ಕೊಲ್ಲಬೇಕೆಂದು ಗುಜರಾತ್‌ ಹೈಕೋರ್ಟ್‌ನಲ್ಲಿ ಅಲ್ಲಿನ ಪ್ರಾಣಿ ದಯಾಸಂಘ ಮತ್ತು ಅಹಿಂಸಾ ಮಹಾಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದೆ. ಕಸಾಯಿಖಾನೆಗಳ ಸರಿಯಾದ ಕಾರ್ಯನಿರ್ವಹಣೆಗೆ ವಿವಿಧ ಕಾನೂನುಗಳು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಅರ್ಜಿದಾರರು ವಾದಿಸಿದ್ದಾರೆ. ಬುಧವಾರ ಆ ಅರ್ಜಿ ವಿಚಾರಣೆ ನಡೆಸಿದ್ದು, ಈ ವೇಳೆ ‘ಕೋಳಿ ಪ್ರಾಣಿಯಾ-ಪಕ್ಷಿಯಾ’ ಎಂಬ ಪ್ರಶ್ನೆ ಉದ್ಭವಿಸಿತ್ತು. ಕೋರ್ಟ್‌ ಅಂಗಳದಲ್ಲಿ ಸ್ತಬ್ಧತೆ ಉಂಟುಮಾಡಿತ್ತು.

ಪ್ರಾಣಿ ದಯಾ ಸಂಘದ ಅರ್ಜಿಯ ವಿರುದ್ಧ ಕೋಳಿ ವ್ಯಾಪಾರಿಗಳು ಮತ್ತು ಕೋಳಿ ಅಂಗಡಿ ಮಾಲೀಕರು ‘ಪ್ರತಿ ಅರ್ಜಿ’ ಸಲ್ಲಿಸಿದ್ದಾರೆ. ತಮ್ಮ ಅಂಗಡಿಗಳನ್ನು ತೆರೆಯುವಂತೆ ಕೋರ್ಟ್‌ ಮುಂದೆ ಮನವಿ ಮಾಡಿದ್ದಾರೆ. ಆದರೆ, ಕೋಳಿ ಮಾಂಸದ ಅಂಗಡಿಗಳಲ್ಲಿ ನೈರ್ಮಲ್ಯ ಮಾನದಂಡಗಳನ್ನು ಅನುಸರಿಸದ ಕಾರಣ ಮಾಂಸ ಮತ್ತು ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಹೈಕೋರ್ಟ್ ಆದೇಶಿಸಿದೆ.

ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ಹಲವಾರು ಸ್ಥಳೀಯ ಸಂಸ್ಥೆಗಳು, “ಕೋಳಿಗಳು ಮತ್ತು ಪ್ರಾಣಿಗಳನ್ನು ಕಸಾಯಿಖಾನೆಗಳಲ್ಲಿ ಕೊಲ್ಲಬೇಕು. ಅಂಗಡಿಗಳಲ್ಲಿ ಕೊಲ್ಲಬಾರದು” ಎಂದು ಹೇಳಿಕೊಂಡು ಹಲವಾರು ಅಂಗಡಿಗಳನ್ನು ಮುಚ್ಚಿಸಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡಮಾರುತ | ತಮಿಳುನಾಡಿನಲ್ಲಿ ಹೈ ಅಲರ್ಟ್‌; ಶಾಲಾ-ಕಾಲೇಜು ರಜೆ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದೆ. ಈ ಹಿನ್ನೆಲೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನತ್ತ...

ಮಿಚಾಂಗ್ ಚಂಡಮಾರುತಕ್ಕೆ ಆಂಧ್ರ – ತಮಿಳುನಾಡು ತತ್ತರ; 120 ರೈಲುಗಳ ಸಂಚಾರ ರದ್ದು

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಆಂಧ್ರ...

ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

ಇಂದು ಪ್ರಕಟಗೊಂಡ ಚುನಾವಣಾ ಫಲಿತಾಂಶಗಳ ಬಗ್ಗೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ...

ಈ ಫಲಿತಾಂಶ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ

'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವು 2024ರ...