ಇನ್ಮುಂದೆ ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲ; ದೆಹಲಿ ಪೊಲೀಸರ ಧೋರಣೆಗೆ ಸಿಜೆಪಿ ಕಿಡಿ

Date:

ದೆಹಲಿಯ ಐತಿಹಾಸಿಕ ಪ್ರತಿಭಟನಾ ತಾಣವಾದ ಜಂತರ್ ಮಂತರ್‌ಅನ್ನು ಅಧಿಕೃತ ಧರಣಿ ಸ್ಥಳಗಳ ಪಟ್ಟಿಯಿಂದ ದೆಹಲಿ ಪೊಲೀಸರು ತೆಗೆದುಹಾಕಿದ್ದಾರೆ. ಪೊಲೀಸರು ಈ ಧೋರಣೆಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸಂಪೂರ್ಣವಾಗಿ ಅಸಮ್ಮತ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಪ್ರತಿಭಟನಾ ಹಕ್ಕನ್ನು ದಮನ ಮಾಡಲು ನಡೆಸುತ್ತಿರುವ ಹುನ್ನಾರ ಎಂದು ಸಿಜೆಪಿ ಖಂಡಿಸಿದ್ದಾರೆ.

- Advertisement -

ದೇಶದ ರಾಜಧಾನಿಯಲ್ಲಿ ಪ್ರಜಾಸತ್ತಾತ್ಮಕ ಹೋರಾಟಗಳು ಮತ್ತು ಸಾರ್ವಜನಿಕರ ಧ್ವನಿಗೆ ಜಂತರ್ ಮಂತರ್ ದಶಕಗಳಿಂದ ಪ್ರಮುಖ ಕೇಂದ್ರವಾಗಿದೆ. ಆದರೆ, ಈಗ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಧರಣಿ ನಡೆಸುವುದನ್ನು ನಿಷೇಧಿಸಿ, ಪ್ರತಿಭಟನೆಗಳಿಗಾಗಿ ಪರ್ಯಾಯವಾಗಿ ಮೂರು ಹೊಸ ಸ್ಥಳಗಳನ್ನು ಗುರುತಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ...

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ ಅದಾನಿ ಪಾಲು! ಆಸ್ತಿಯ ಮೌಲ್ಯವನ್ನು ‘ಶೂನ್ಯ’ ಎಂದು ಬಿಂಬಿಸಿದ್ದು ಹೇಗೆ? ಕೊರ್ಬಾ ವೆಸ್ಟ್‌ನಲ್ಲಿ ತನ್ನದೇ ಕಂಪನಿಗೆ ತಾನೇ ಮತ ಹಾಕಿಕೊಂಡ...

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಪೊಲೀಸರ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಖಂಡಿಸಿರುವ ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್, “ಜಂತರ್ ಮಂತರ್ ಯಾವುದೇ ಸರ್ಕಾರಕ್ಕೆ ಸೇರಿದ ಆಸ್ತಿಯಲ್ಲ. ಅದು ಭಾರತದ ಜನತೆಗೆ ಸೇರಿದ ಜಾಗ. ಸಾರ್ವಜನಿಕರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

“ಈಗ ಇಡೀ ದೇಶವೇ ಜಂತರ್ ಮಂತರ್ ಆಗಲಿದೆ. ಸರ್ಕಾರದ ಈ ಕ್ರಮಕ್ಕೆ ದೇಶಾದ್ಯಂತ ಪ್ರತಿಭಟನೆಯ ರೂಪದಲ್ಲಿ ತಕ್ಕ ಉತ್ತರ ನೀಡಲಾಗುವುದು” ಎಂದು ಸಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕೆಲದಿನಗಳಿಂದ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾದವರನ್ನೆಲ್ಲ ಪೊಲೀಸರು ಬಂಧಿಸುವುದು ನಡೆಯುತ್ತಲೇ ಇದೆ. ಶನಿವಾರ,ಸಿಜೆಪಿ ಕರೆಕೊಟ್ಟಿದ್ದ ಪ್ರತಿಭಟನೆ ವೇಳೆ ಸುಮಾರು 4,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು. ಇಡೀ ಮಧ್ಯ ದೆಹಲಿಯಲ್ಲಿ ಬ್ಯಾರಿಕೇಟ್‌ಗಳು ಮತ್ತು ಮೊಳೆಗಳ ಹಾಸುಗಳೊಂದಿಗೆ ನಿರ್ಬಂಧಿಸಿದ್ದರು. ಇಂತಹ ಬೃಹತ್ ಹೋರಾಟಗಳು ನಡೆಯುತ್ತಿರುವ ಸಮಯದಲ್ಲೇ, ಭದ್ರತೆ ಮತ್ತು ಸಂಚಾರ ದಟ್ಟಣೆಯ ನೆಪವೊಡ್ಡಿ ಜಂತರ್ ಮಂತರ್ ಅನ್ನು ಧರಣಿ ಸ್ಥಳಗಳ ಪಟ್ಟಿಯಿಂದ ದೆಹಲಿ ಪೊಲೀಸರು ರದ್ದುಗೊಳಿಸಿದ್ದಾರೆ.

ವಿರೋಧ ಪಕ್ಷಗಳು ಮತ್ತು ಸಾಂವಿಧಾನಿಕ ಹಕ್ಕುಗಳ ಹೋರಾಟಗಾರರು ಸಹ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಇದು ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ನೀಡದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೇರೊಬ್ಬರೊಂದಿಗೆ ಮದುವೆ ನಿಶ್ಚಯ: ಪ್ರಿಯತಮೆಯನ್ನು ಸಾವಿರ ಅಡಿ ಆಳದ ಕಮರಿಗೆ ನೂಕಿ ಕೊಂದ ಪಾಪಿ!

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಅತ್ಯಂತ ಭೀಕರ ಘಟನೆಯೊಂದು ವರದಿಯಾಗಿದೆ. ತನ್ನ ಪ್ರಿಯತಮೆಗೆ...

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ ನಾಮ ಹಾಕಿದ ಅದಾನಿ ವೃತ್ತಾಂತ

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ...