ಬಾಗೇಪಲ್ಲಿ | ರೆಡ್ಡಿಕೆರೆಗೆಹಳೆ ಕಟ್ಟಡಗಳ ತ್ಯಾಜ್ಯ ಮತ್ತು ಇತರೆ ಕಸ ಕೆರೆಯಾಂಗಣಕ್ಕೆ: ಜಲಮೂಲ ಕಲುಷಿತ

Date:

ಪಟ್ಟಣದ ಹೊರವಲಯದ ರೆಡ್ಡಿಕೆರೆಗೆ ಹಳೆ ಕಟ್ಟಡಗಳ ತ್ಯಾಜ್ಯ ಮತ್ತು ಇತರೆ ಕಸವನ್ನು ಕೆರೆಯಾಂಗಣಕ್ಕೆ ಸುರಿಯಲಾಗುತ್ತಿರುವುದರಿಂದ ಜಲಮೂಲ ಕಲುಷಿತಗೊಳ್ಳುತ್ತಿದೆ.
ಸ್ಥಳೀಯರು ಕೆರೆಯನ್ನು ಸಂರಕ್ಷಿಸಿ, ಈ ರೀತಿ ತ್ಯಾಜ್ಯ ತಂದು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಪರಿಸರಪ್ರೇಮಿಗಳು ಆಗ್ರಹಿಸಿದ್ದಾರೆ.

- Advertisement -

ಪಟ್ಟಣದ ಹೊರವಲಯದ ರೆಡ್ಡಿಕೆರೆಗೆ ಹಳೆ ಕಟ್ಟಡಗಳ ಅವಶೇಷ, ಕಸ. ತ್ಯಾಜ್ಯ ಸುರಿದಿದ್ದು, ಕೆರೆ ಅಂಗಳ ಅಕ್ಷರಶಃ ಕಸ, ಕಟ್ಟಡಗಳ ಕಲ್ಲು, ಮಣ್ಣಿನ ತಾಣವಾಗಿ ಪರಿಣಮಿಸಿದೆ.
ಗೂಳೂರು, ಮಾರ್ಗಾನುಕುಂಟೆ, ತಿಮ್ಮಂಪಲ್ಲಿ, ಗೊರ್ತಪಲ್ಲಿ, ಬಿಳ್ಳೂರು ಆಂಧ್ರಪ್ರದೇಶದ ಕದಿರಿ ಕಡೆಗೆ ಸಂಪರ್ಕಿಸುವ ರಸ್ತೆಯಲ್ಲಿ ಕೆರೆ ಇದ್ದು, ಕೆರೆ ಕಟ್ಟೆ ಇಕ್ಕೆಲಗಳಲ್ಲೂ ತ್ಯಾಜ್ಯದ ರಾಶಿ ರಾರಾಜಿಸುತ್ತಿದೆ.

ರಾತ್ರಿ ವೇಳೆ ಪಟ್ಟಣದ ಸಾರ್ವಜನಿಕರು, ನಾಗರಿಕರು, ಹೋಟೆಲ್, ಕೋಳಿ, ಕುರಿ ಮಾಂಸದಂಗಡಿ ತ್ಯಾಜ್ಯ, ಬೀದಿಬದಿ ಅಂಗಡಿ ಹಾಗೂ ಸಲೂನ್‍ ಕಸ ಮತ್ತು ಹಳೆ ಮನೆ ಕಟ್ಟಡದ ಅವಶೇಷಗಳನ್ನು ಕೆರೆ ಒಡಲಿಗೆ ತುಂಬಿಸುತ್ತಿದ್ದಾರೆ. ಜೊತೆಗೆ ಸತ್ತ ನಾಯಿ, ಹಸು ಮೃತದೇಹವನ್ನು ಕೆರೆಗೆ ಹಾಕುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ. ಹಾಗಾಗಿ ರಸ್ತೆಯಲ್ಲಿ ಓಡಾಡುವವರು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ಕೆರೆಗೆ ತ್ಯಾಜ್ಯ ಸುರಿದು ಕೆರೆ ಮುಚ್ಚುವ ಹಂತದಲ್ಲಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಹೊರವಲಯದ ರೆಡ್ಡಿಕೆರೆ ಮತ್ತು ಕಟ್ಟೆ ಮೇಲೆ ಕಸ, ಕಟ್ಟಡ ಅವಶೇಷಗಳು ಹಾಕಿದರೆ ಕಾನೂನು ಕ್ರಮ‌ ತೆಗೆದುಕೊಳ್ಳಲಾಗುವುದು. ಕಟ್ಟಡಗಳ ಅವಶೇಷಗಳನ್ನು ಕೆರೆಗೆ ಹಾಕಿದವರ ಬಗ್ಗೆ ಪರಿಶೀಲಿಸಲಾಗುವುದು. ಕೆರೆ, ಕುಂಟೆ, ಕಾಲುವೆಗಳಲ್ಲಿ ಸಾರ್ವಜನಿಕರು ತ್ಯಾಜ್ಯ ಹಾಕಬಾರದು.


ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ

ಈ ಹಿಂದೆ ರೆಡ್ಡಿಕೆರೆ ಬಳಿ ಕೊರೆಸಿದ್ದ ಕೊಳವೆಬಾವಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ, ಇದೀಗ ಕೆರೆ ತ್ಯಾಜ್ಯದಿಂದ ಕೂಡಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಸ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ |ಕುಡಿಯುವ ನೀರಿಗಾಗಿ ನವಿಲುತೀರ್ಥ ಜಲಾಶಯದಿಂದ 10 ದಿನ ನೀರು ಬಿಡುಗಡೆ

ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ನವಿಲುತೀರ್ಥ ಜಲಾಶಯದಿಂದ ನವೆಂಬರ್ 16ರಿಂದ...

ರಾಯಚೂರು | ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ

ಲಿಂಗಸೂಗೂರು ತಾಲ್ಲೂಕು ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ...

ರಾಯಚೂರು | ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ರೈತರ ನೀರಿನ ಹೋರಾಟಕ್ಕೆ ಮುಕ್ತಿ ಇಲ್ಲ: ವೀರಭದ್ರಸ್ವಾಮಿ

ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆಯುತ್ತಾ ಬಂದರೂ ಬೆಳೆಗಳನ್ನು ಉಳಿಸಿಕೊಳ್ಳಲು...