ಕೇರಳದಲ್ಲಿ ಮತ್ತೆ ಭೂಕುಸಿತ; 9 ಮಂದಿ ಸಾವು, ಹಲವರು ನಾಪತ್ತೆ

Date:

ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಐದು ಮಂದಿ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.

ನಿಲಂಬೂರ್-ಅಮರಂಬಲಂ ಪ್ರದೇಶದ ಕೊಟ್ಟಪುಳ ನದಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಪ್ರವಾಹದಲ್ಲಿ ಸಾವನ್ನಪ್ಪಿದ ಐದು ಮಂದಿಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಸ್ಥಳೀಯ ಮಹಿಳೆ ಸಜಿತಾ ಕಾಣೆಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯಿಂದ ಹುಡುಕಾಟ ಮುಂದುವರಿದಿದೆ.

ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ತಮಿಳುನಾಡಿನ ಕಾರ್ಮಿಕ ಮಹಿಳೆ ಸೇರಿದಂತೆ ಇಬ್ಬರು ಭೂಕುಸಿತಕ್ಕೆ ಬಲಿಯಾಗಿದ್ದಾರೆ.

- Advertisement -

ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪರಿಸ್ಥಿತಿಯನ್ನು ಗಂಟೆಗೊಮ್ಮೆ ಮೌಲ್ಯಮಾಪನ ಮಾಡುವಂತೆ ಸೂಚಿಸಿದ್ದಾರೆ. ಮಲಪ್ಪುರಂಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇಡುಕ್ಕಿ, ಕೊಟ್ಟಾಯಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಪಶ್ಚಿಮ ಘಟ್ಟಗಳ ಕಡಿದಾದ ಬೆಟ್ಟಗಳು, ಸಡಿಲ ಮಣ್ಣು ಮತ್ತು ಭೂವೈಜ್ಞಾನಿಕ ರಚನೆಯಿಂದಾಗಿ ಕೇರಳದ ಈ ಪ್ರದೇಶಗಳು ಭೂಕುಸಿತಕ್ಕೆ ಹೆಚ್ಚು ಒಳಗಾಗುತ್ತಿವೆ. ತೀವ್ರ ಮಳೆಯಿಂದ ಮಣ್ಣು ಮತ್ತು ಕಲ್ಲಿನ ನಡುವಿನ ಬಂಧ ದುರ್ಬಲವಾಗುವುದು ಸರಣಿ ಭೂಕುಸಿತಕ್ಕೆ ಇರುವ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಹಿಂದಿನ ಮಳೆ ಮತ್ತು ಇದೀಗ ಬಂದ ಭಾರೀ ಮಳೆಯಿಂದಾಗಿ ಬೆಟ್ಟಗಳು ಅಸ್ಥಿರಗೊಂಡಿವೆ. ಮಲಪ್ಪುರಂನ ಕಾಡು ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಹಠಾತ್ ಪ್ರವಾಹ ಉಂಟಾಗಿದೆ.

ಮುನ್ನೆಚ್ಚರಿಕೆಗಾಗಿ ನದಿ, ಕಾಡು ಮತ್ತು ಅಪಾಯಕಾರಿ ಪ್ರದೇಶಗಳಿಂದ ದೂರವಿರುವಂತೆ ಸಾರ್ವಜನಿಕರಲ್ಲಿ ಕೇರಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಕರೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಾರಂ-7 ದುರುಪಯೋಗ, ಮತಗಳ್ಳತನದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ...

ಶ್ವೇತಭವನ ಗೆಲ್ಲಲು 2028ರ ತನಕ ಕಾಯಬೇಕು ಡೆಮಾಕ್ರಟ್ಸ್!

ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಭರ್ಜರಿ ಗೆಲುವು ಸಾಧಿಸಿದ್ದಾರೆ....

3 ತಿಂಗಳ ಬಳಿಕ ಐಟಿ ವಿಭಾಗದ ಮೇಲುಸ್ತುವಾರಿ ಹಿಂಪಡೆದ ಚು. ಆಯೋಗ!

ಕೇಂದ್ರ ಚುನಾವಣಾ ಆಯೋಗದಲ್ಲಿ (ECI) ಕಾರ್ಯ ಹಂಚಿಕೆ ಆದೇಶಕ್ಕೆ ಸಂಬಂಧಿಸಿದಂತೆ ಮುಖ್ಯ...

‘ಚಾಯ್ ಪೇ ಚರ್ಚಾ’ – ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಆಹ್ವಾನ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಪ್ರಮುಖ ಹಿರಿಯ...