ಸರ್ಕಾರಿ ಬಂಗಲೆ ವಿವಾದ | ಮನೆ ಖಾಲಿ ಮಾಡಲ್ಲ, ಬೇಕಾದ್ರೆ ನನ್ನ ಬಲವಂತವಾಗಿ ಹೊರಹಾಕಲಿ: ರಾಬ್ರಿ ದೇವಿ

Date:

ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕಿ ರಾಬ್ರಿ ದೇವಿ ಅವರು ವಾಸಿಸುತ್ತಿರುವ ಸರ್ಕಾರಿ ಬಂಗಲೆಯ ಬಗ್ಗೆ ಬಿಹಾರದಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ರಾಬ್ರಿ ದೇವಿ ಅವರಿಗೆ ನೀಡುವ ಮನೆಯನ್ನು ಖಾಲಿ ಮಾಡುವಂತೆ ಹೇಳಲಾಗಿದ್ದು, ರಾಬ್ರಿ ದೇವಿ ಮನೆ ಖಾಲಿ ಮಾಡಲು ನಿರಾಕರಿಸಿದ್ದಾರೆ.

- Advertisement -

ಮೇ 27ರಂದು ಕಟ್ಟಡ ನಿರ್ಮಾಣ ಇಲಾಖೆಯು ಆದೇಶವನ್ನು ಹೊರಡಿಸಿದ್ದು, ಮುಖ್ಯಮಂತ್ರಿ ನಿವಾಸದ ಬಳಿ ಇರುವ 10, ಸರ್ಕ್ಯುಲರ್ ರಸ್ತೆ ಬಂಗಲೆಯನ್ನು ಡೈರಿ ಮತ್ತು ಮೀನುಗಾರಿಕೆ ಸಚಿವ ನಂದ ಕಿಶೋರ್ ರಾಮ್ ಅವರಿಗೆ ಹಂಚಿಕೆ ಮಾಡಿದೆ. ಈ ಆದೇಶವನ್ನು ಹೊರಡಿಸಿದಾಗ ರಾಬ್ರಿ ದೇವಿ ಬಿಹಾರದಲ್ಲಿ ಇರಲಿಲ್ಲ. ಅವರು ವಿಮಾನ ನಿಲ್ದಾಣಕ್ಕೆ ವಾಪಸ್ ಬರುತ್ತಿದ್ದಂತೆ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇದನ್ನು ಓದಿದ್ದೀರಾ? ಅಪರಾಧಗಳನ್ನು ನಿಯಂತ್ರಿಸಲಾಗದಿದ್ದರೆ, ನಿತೀಶ್ ಪುತ್ರ ನಿಶಾಂತ್‌ಗೆ ಜವಾಬ್ದಾರಿ ಹಸ್ತಾಂತರಿಸಲಿ: ಮಾಜಿ ಸಿಎಂ ರಾಬ್ರಿ ದೇವಿ

“ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾದ ಬಳಿಕ ತುಂಬಾ ಉತ್ಸುಕರಾಗಿದ್ದಾರೆಂದು ನನ್ನ ಗಮನಕ್ಕೂ ಬಂದಿದೆ. ಅವರ ಸರ್ಕಾರ ನನ್ನನ್ನು ಬಲವಂತವಾಗಿ ಹೊರಹಾಕಲಿ. ನಾನು ಮನೆಯನ್ನು ಖಾಲಿ ಮಾಡುವುದಿಲ್ಲ” ಎಂದು ರಾಬ್ರಿ ಹೇಳಿದ್ದಾರೆ.

ರಾಬ್ರಿ ದೇವಿ ಈ ನಿವಾಸದಲ್ಲಿ ಒಂದು ದಶಕಕ್ಕೂ ಅಧಿಕ ಕಾಲದಿಂದ ವಾಸಿಸುತ್ತಿದ್ದಾರೆ. ಈ ಹಿಂದಿನ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಬ್ರಿ ಬಿಹಾರದ ಮಾಜಿ ಸಿಎಂ ಆದ ಕಾರಣ ಈ ಬಂಗಲೆಯನ್ನು ಅವರಿಗೆ ಹಂಚಿಕೆ ಮಾಡಿತ್ತು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿರುವ ರಾಬ್ರಿ ದೇವಿ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಈ ಮನೆಯಿಂದ ಸ್ಥಳಾಂತರಗೊಳ್ಳುವಂತೆ ಕೇಳಲಾಗಿದೆ. ಆ ಸಂದರ್ಭದಲ್ಲಿ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿಯಾಗಿದ್ದರು.

ಆ ಸಮಯದಲ್ಲಿ ಕಟ್ಟಡ ನಿರ್ಮಾಣ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ, ಆಗ ಉಪಮುಖ್ಯಮಂತ್ರಿಯಾಗಿದ್ದ ವಿಜಯ್ ಕುಮಾರ್ ಸಿನ್ಹಾ ಅವರಿಗೆ 10, ಸರ್ಕ್ಯುಲರ್ ರಸ್ತೆಯನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ರಾಬ್ರಿ ದೇವಿ ಬಂಗಲೆಯನ್ನು ಬಿಟ್ಟುಕೊಡಲು ನಿರಾಕರಿಸಿದ್ದರಿಂದ, ಆ ಮನೆಗೆ ಸ್ಥಳಾಂತರಗೊಂಡಿರಲಿಲ್ಲ.

ಆದರೆ ಇತ್ತೀಚೆಗೆ ಕಟ್ಟಡ ನಿರ್ಮಾಣ ಸಚಿವರಾದ ಜೆಡಿಯು ಹಿರಿಯ ನಾಯಕಿ ಲೆಶಿ ಸಿಂಗ್ 39, ಹಾರ್ಡಿಂಜ್ ರಸ್ತೆಯಲ್ಲಿರುವ ಬಂಗಲೆಯನ್ನು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕಿ ರಾಬ್ರಿ ದೇವಿ ಅವರಿಗೆ ಹಂಚಿಕೆ ಮಾಡಲಾಗಿದೆ ಎಂಬ ಈ ಹಿಂದಿನ ಆದೇಶ ಇನ್ನೂ ಚಾಲ್ತಿಯಲ್ಲಿದೆ. ಆದ್ದರಿಂದ, ರಾಬ್ರಿ ದೇವಿ ಆ ಮನೆಗೆ ಸ್ಥಳಾಂತರಗೊಳ್ಳುವುದು ಉತ್ತಮ” ಎಂದು ಹೇಳಿದ್ದರು.

“ಅವರು ಹಿಂದಿನ ಆದೇಶವನ್ನು ಪಾಲಿಸಿದ್ದಾರೋ ಇಲ್ಲವೋ ಎಂಬುದು ನಮಗೆ ಬೇಕಾಗಿಲ್ಲ. ಆದರೆ ಈ ಬಂಗಲೆಗಳನ್ನು ಅದು ಸೂಕ್ತವೆಂದು ಭಾವಿಸುವ ಗಣ್ಯರಿಗೆ ಮಂಜೂರು ಮಾಡುವುದು ಸರ್ಕಾರದ ಹಕ್ಕು ಎಂಬುದು ಸತ್ಯ. ಯಾವುದೇ ರಾಜಕಾರಣಿ ನಿರ್ದಿಷ್ಟ ಬಂಗಲೆಯನ್ನು ಪಡೆಯುವುದು ತಮ್ಮ ಹಕ್ಕು ಎಂದು ವಾದಿಸುವುದು ಸರಿಯಲ್ಲ. ಮಾಜಿ ಸಿಎಂ ಆಗಿ ರಾಬ್ರಿ ದೇವಿ ಇದನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ವರ್ತಿಸುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದರು.

ಇದನ್ನು ಓದಿದ್ದೀರಾ? ಬಿಹಾರದಲ್ಲಿ ಲಾಲೂ-ನಿತೀಶ್‌ ಸಮಾಜವಾದಿ ಪರ್ವ ಮುಗಿಸಿದ ಬಿಜೆಪಿ; ಬಂಗಾಳವೇ ಮುಂದಿನ ಗುರಿ

ಆದರೆ ಅಧಿಕೃತ ಅಧಿಸೂಚನೆಯ ಹೊರತಾಗಿಯೂ ಬಂಗಲೆಯನ್ನು ಬಿಟ್ಟುಕೊಡಲು ರಾಬ್ರಿ ದೇವಿ ನಿರಾಕರಿಸಿದ್ದಾರೆ. ಈ ನಡುವೆ ರಾಬ್ರಿ ದೇವಿ ಅವರಿಗೆ ಯಾವುದೇ ತೆರವು ನೋಟಿಸ್ ನೀಡಲಾಗಿದೆಯೇ ಎಂಬುದರ ಕುರಿತು ಕಟ್ಟಡ ನಿರ್ಮಾಣ ಇಲಾಖೆ ಮಾಹಿತಿ ನೀಡಿಲ್ಲ.

ರಾಬ್ರಿ ದೇವಿ ಅವರು ತಮ್ಮ ಪತಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಈ ಬಂಗಲೆಯಲ್ಲಿ ದಶಕಗಳಿಂದ ವಾಸಿಸುತ್ತಿದ್ದಾರೆ. 1997ರಲ್ಲಿ ಅವರು ಮುಖ್ಯಮಂತ್ರಿಯಾದ ನಂತರದಿಂದ ಈ ಬಂಗಲೆಯಲ್ಲೇ ಇದ್ದಾರೆ. ಸದ್ಯ ಈ ಬಂಗಲೆ ಆವರಣವು ವಿಪಕ್ಷ ಕ್ಯಾಂಪ್ ಆಫೀಸ್ ಆಗಿ ಕಾರ್ಯನಿರ್ವಹಿಸುತ್ತಿದೆ. ಆರ್‌ಜೆಡಿಯ ಕಾರ್ಯಕಾರಿ ಅಧ್ಯಕ್ಷರಾಗಿರುವ ರಾಬ್ರಿ ದೇವಿ ಕಿರಿಯ ಮಗ ತೇಜಸ್ವಿ ಯಾದವ್ ಕೂಡಾ ಅಧಿಕ ಸಮಯವನ್ನು ಈ ಬಂಗಲೆಯಲ್ಲೇ ಕಳೆಯುತ್ತಿದ್ದಾರೆ. ಆದರೆ ವಿಧಾನಸಭೆಯ ವಿಪಕ್ಷ ನಾಯಕರಾಗಿರುವ ಕಾರಣ ಪೋಲೋ ರಸ್ತೆ 1ರಲ್ಲಿರುವ ಬಂಗಲೆ ಅವರಿಗೆ ನೀಡಲಾಗಿದೆ. ಬಹುತೇಕ ಆರ್‌ಜೆಡಿ ನಾಯಕರು ಸೇರಿಕೊಳ್ಳುವ ಕಾರಣಕ್ಕೆ ವಿಪಕ್ಷಕ್ಕೆ ತೊಂದರೆ ಕೊಡಲೇ ಈ ಬಂಗಲೆ ತೆರವಿಗೆ ಆದೇಶಿಸಲಾಗಿದೆ ಎಂಬ ಆರೋಪವಿದೆ.

ಬಂಗಲೆಯನ್ನು ಬಿಟ್ಟುಕೊಡಲು ಒತ್ತಡ ಹೆಚ್ಚುತ್ತಿರುವಂತೆ ಬಂಗಲೆ ಹೊರಗೆ ಪೊಲೀಸ್ ಸಿಬ್ಬಂದಿಯ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ. ಶನಿವಾರ ಮಧ್ಯಾಹ್ನ, ಪ್ರದೇಶದ ಉಸ್ತುವಾರಿ ಹೊಂದಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಅಣ್ಣು ಕುಮಾರಿ, ಮನೆಯೊಳಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಹೊರಬಂದ ಉಪ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿಲ್ಲ.

ಈ ನಡುವೆ ಆರ್‌ಜೆಡಿ ವಕ್ತಾರ ಚಿತ್ತರಂಜನ್ ಗಗನ್, ಆಡಳಿತಾರೂಢ ಎನ್‌ಡಿಎ “ವಿರೋಧ ಪಕ್ಷದವರನ್ನು ದ್ವೇಷಿಸುತ್ತಿದೆ” ಎಂದು ಆರೋಪಿಸಿದ್ದಾರೆ. “ನಮ್ಮ ನಾಯಕರು 20 ವರ್ಷಗಳಿಂದ ವಾಸಿಸುತ್ತಿರುವ ಮನೆಯನ್ನು ಖಾಲಿ ಮಾಡುವಂತೆ ಸರ್ಕಾರ ಏಕೆ ಹಠ ಮಾಡುತ್ತಿದೆ? ಈ ಸರ್ಕಾರ ನಿಯಮಗಳ ಬಗ್ಗೆ ಮಾತನಾಡಬಾರದು. ಆಡಳಿತ ಪಕ್ಷಕ್ಕೆ ಸರಿಹೊಂದಿದಾಗಲೆಲ್ಲಾ ಈ ನಿಯಮ ಬದಲಾಗುತ್ತದೆ” ಎಂದು ಗಗನ್ ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...