ಉಜ್ಬೆಕಿಸ್ತಾನ ಸಿರಪ್‌ ಪ್ರಕರಣ | ನೋಯ್ಡಾ ಔ‍ಷಧ ಘಟಕದ ಪರವಾನಗಿ ರದ್ದು

Date:

ಉಜ್ಬೇಕಿಸ್ತಾನದ ಸಿಪ್‌ನಿಂದ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ನೋಯ್ಡಾ ಮೂಲದ ಔಷಧೀಯ ಘಟಕ ಮಾರಿಯನ್‌ ಬಯೋಟೆಕ್‌ನ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ.

ಉಜ್ಬೇಕಿಸ್ತಾನದ 18 ಮಕ್ಕಳ ಸಾವಿಗೆ ಕಾರಣವಾದ ಸಿರಪ್‌ಗಳಲ್ಲಿ ಮಾರಿಯನ್‌ ಬಯೋಟೆಕ್‌ನ ಕೆಮ್ಮಿನ ಸಿರಪ್‌ ಡಾಕ್‌ 1 ಸಹ ಇದೆ ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಈ ಘಟನೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಕ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.

“ಮಕ್ಕಳ ಸಾವಿಗೆ ಸಂಬಂಧಿಸಿ ತನಿಖೆ ಕೈಗೊಂಡಾಗಿನಿಂದ ಜನವರಿಯಿಂದ ಮಾರಿಯನ್‌ ಬಯೋಟೆಕ್‌ನ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿತ್ತು. ಈಗ ಉತ್ತರ ಪ್ರದೇಶದ ಔಷಧ ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರ ಸಂಸ್ಥೆಯ ಪರವಾನಗಿ ರದ್ದುಗೊಳಿಸಿದೆ” ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ನೋಯ್ಡಾ ಪೊಲೀಸರು ಮಾರ್ಚ್‌ 3 ರಂದು ಮಾರಿಯನ್‌ ಬಯೋಟೆಕ್‌ನ ಮೂವರು ಉದ್ಯೋಗಿಗಳನ್ನು ಬಂಧಿಸಿದ್ದರು. ತನಿಖೆ ವೇಳೆ ಮಾರಿಯನ್‌ ಬಯೋಟೆಕ್‌ನ ಕೆಮ್ಮಿನ ಔಷಧಿಗಳು ಕಲಬೆರಕೆಯಿಂದ ಕೂಡಿದ್ದು ಗುಣಮಟ್ಟದ ಕೊರತೆಯಿದೆ ಎಂದು ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡ ಮಾರುತ | ಆಂಧ್ರದಲ್ಲಿ 40 ಲಕ್ಷ ಜನರಿಗೆ ತೊಂದರೆ, ಕನಿಷ್ಠ 17 ಮಂದಿ ಸಾವು

ಮಿಚಾಂಗ್‌ ಚಂಡಮಾರುತವು ಮಂಗಳವಾರ ಆಂಧ್ರಪ್ರದೇಶದ ಕರಾವಳಿ ದಾಟುತ್ತಿದ್ದಂತೆ ದುರ್ಬಲತೆ ಕಂಡುಬಂದಿದೆ. 770...

ಮಿಚಾಂಗ್ ಚಂಡಮಾರುತ: ₹5,060 ಕೋಟಿ ಪರಿಹಾರಕ್ಕೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಯ ನಡುವೆ ಮುಖ್ಯಮಂತ್ರಿ ಎಂ ಕೆ...

ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆಯ ಹೊಣೆ ಹೊತ್ತ ಗೋಲ್ಡಿ ಬ್ರಾರ್ ಗ್ಯಾಂಗ್; ರಾಜಸ್ಥಾನ ಬಂದ್‌ಗೆ ಕರೆ

ಬಲಪಂಥೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖ್‌ದೇವ್ ಸಿಂಗ್ ಗೊಗಮೆಡಿಯನ್ನು ಭೀಕರವಾಗಿ...

ತೆಲಂಗಾಣ: ಎಬಿವಿಪಿಯಿಂದ ಫೈರ್ ಬ್ರಾಂಡ್ ನಾಯಕನವರೆಗೆ; ರೇವಂತ್ ರೆಡ್ಡಿ ನಡೆದುಬಂದ ಹಾದಿ

ಮುಖ್ಯಮಂತ್ರಿ ಕೆಸಿಆರ್ ಸಭೆಗೆ ಅಡ್ಡಿಪಡಿಸಬಹುದು ಎನ್ನುವ ಕಾರಣಕ್ಕೆ 2018ರ ಡಿಸೆಂಬರ್ ನಾಲ್ಕರಂದು...