- ನಾನು ಅಂದು ಇದ್ದಿದ್ದರೆ ಮಂತಾಂಧನ ವಿರುದ್ಧ ಕತ್ತಿ ಎತ್ತುತ್ತಿದ್ದೆ
- ಸತ್ಯ ಗೊತ್ತಿದ್ದರೂ, ಹೇಳಲಾರದೆ ಹೇಡಿಯಂತೆ ಬದುಕುತ್ತಿರಲಿಲ್ಲ
ಕಾಂಗ್ರೆಸ್ ನವರು ನನ್ನನ್ನು ಉರಿಗೌಡ ಎಂದು ಕರೆದಿರುವುದು ಖುಷಿ ಹಾಗೂ ಸಂತಸ ತಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ ಟಿ ರವಿ “ನಾನು ಟಿಪ್ಪುವಿನ ಕಾಲದಲ್ಲಿ ಇದ್ದಿದ್ದರೆ, ನಾನೇ ಉರಿಗೌಡ, ನಂಜೇಗೌಡ ತರ ನಿಲ್ಲುತ್ತಿದ್ದೆ. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದವನು ಎನಿಸಿಕೊಳ್ಳುತ್ತಿದ್ದೆ, ಹೇಡಿ ಆಗುತ್ತಿರಲಿಲ್ಲ” ಎಂದು ಸಿ ಟಿ ರವಿ ತಮ್ಮ ವಿರುದ್ಧದ ಟೀಕೆಯನ್ನು ಒಪ್ಪಿಕೊಂಡಿದ್ದಾರೆ.
ತಮ್ಮನ್ನು ಉರಿಗೌಡನೆಂದು ಟೀಕಿಸಿರುವ ಕಾಂಗ್ರೆಸ್ ಟ್ವಿಟ್‌ಗೆ ತಿರುಗೇಟು ನೀಡಿರುವ ರವಿ, ಹೌದು, ನಾವು ಅವರೇ. ನಮಗೆ ಅದು ಖುಷಿ ಮತ್ತು ಹೆಮ್ಮೆಇದೆ. ಗುಲಾಮಿ ಮಾನಸೀಕತೆಯಲ್ಲಿ ಬದುಕುವ ಜನರಿಗಿಂತ ಹಾಗೇ ಕರೆಸಿಕೊಳ್ಳುವುದು ಒಳ್ಳೆಯದು. ಇಂದು ಟಿಪ್ಪು ಇದ್ದಿದ್ದರೆ ಆಂಜನೇಯ ದೇವಸ್ಥಾನವನ್ನ ಮಸೀದಿ ಮಾಡಿರುತ್ತಿದ್ದರು. ಕೆಲವರು ಸತ್ಯ ಗೊತ್ತಿದ್ದರೂ ಹೇಡಿಗಳಂತೆ ಬದುಕಿರುತ್ತಿದ್ದರು ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರವಿ, ವೋಟಿನ ಆಸೆಗೆ ನಾವು ಸುಳ್ಳನ್ನು ಒಪ್ಪಿಕೊಳ್ಳಲು ತಯಾರಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡಿದ್ದೇವೆ. ಆದರೆ ಕೆಲವರು ಕಪಾಲೇಶ್ವರ ಬೆಟ್ಟವನ್ನು ಮತಾಂತರ ಮಾಡಲು ಹೊರಟಿದ್ದಾರೆ. ಇದೇ ನಮ್ಮ ದುರ್ದೈವ ಎಂದ ರವಿ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರನ್ನು ಕುಟುಕಿದರು.