ಹೈದರಾಬಾದ್‌ | ಗಂಡು, ಹೆಣ್ಣಿನ ಜನನಾಂಗ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Date:

ಅಪರೂಪದ ಪ್ರಕರಣವೊಂದರಲ್ಲಿ ಹೆಣ್ಣು ಮತ್ತು ಗಂಡಿನ ಜನನಾಂಗ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೆಣ್ಣಿನ ಜನನಾಂಗವನ್ನು ತೆಗೆದು ಹಾಕಿರುವ ಘಟನೆ ಹೈದರಾಬಾದ್‌ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಹೊಟ್ಟೆ ನೋವಿನ ಕಾರಣದಿಂದ 40 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ಹೈದರಾಬಾದ್‌ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಈ ವ್ಯಕ್ತಿಗೆ ಮದುವೆಯಾಗಿ ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ.  

ಕಿಮ್ಸ್ ವೈದ್ಯರು ಅಲ್ಟ್ರಾಸೌಂಡ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಈ ವ್ಯಕ್ತಿಗೆ ನಡೆಸಿದಾಗ ಎರಡು ಜನನಾಂಗಗಳು ಇರುವುದು ಕಂಡುಬಂದಿದೆ. ನಂತರ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸ್ತ್ರೀ ಜನನಾಂಗವನ್ನು ತೆಗೆದು ಹಾಕಲಾಗಿದೆ. ವ್ಯಕ್ತಿಯಲ್ಲಿ ಶಿಶ್ನವು ಸಾಮಾನ್ಯವಾಗಿದ್ದರೂ, ವೃಷಣಗಳು ಹುಟ್ಟಿನಿಂದಲೇ ಹೊಟ್ಟೆಯಲ್ಲಿ ಉಳಿದುಕೊಂಡಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೊತೆಗೆ ಗರ್ಭಾಶಯ, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಸ್ತ್ರೀ ಜನನಾಂಗದ ಭಾಗ ಮಹಿಳೆಯರಿಗೆ ಇರುವ ಜಾಗದಲ್ಲೇ ಇದ್ದವು. ಆದರೆ, ಅವುಗಳು ಹೊಟ್ಟೆಯ ಒಳಭಾಗದಲ್ಲೇ ಇದ್ದವು. ಹೀಗಾಗಿ ಅದು ಈವರೆಗೂ ಗೊತ್ತಾಗಿರಲಿಲ್ಲ.

ಈ ಸುದ್ದಿ ಓದಿದ್ದೀರಾ? ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ: ಕೇಂದ್ರ ಶಿಕ್ಷಣ ಸಚಿವಾಲಯ

ಲ್ಯಾಪ್ರೋಸ್ಕೋಪಿಕ್ ವಿಧಾನ ಬಳಸಿ ವೃಷಣಗಳನ್ನು ಹೊರತೆಗೆದು, ಫಾಲೋಪಿಯನ್ ಟ್ಯೂಬ್, ಗರ್ಭಕೋಶ, ಹೆಣ್ಣಿನ ಜನನಾಂಗವನ್ನು ದೇಹದಿಂದಲೇ ತೆಗೆದುಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ, ಪುರುಷರು ಮತ್ತು ಮಹಿಳೆಯರು ವಿಭಿನ್ನ ಜನನಾಂಗಗಳನ್ನು ಹೊಂದಿರುತ್ತಾರೆ. ಗರ್ಭಾಶಯದಲ್ಲಿ ಭ್ರೂಣವು ರೂಪುಗೊಂಡಾಗ ಎರಡು ರೀತಿಯ ಅಂಗಗಳಿದ್ದರೂ, ನಂತರ ಹಾರ್ಮೋನುಗಳ ಪ್ರಭಾವದಿಂದ ಒಂದು ಮಾತ್ರ ಬೆಳವಣಿಗೆಯಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ಅಗತ್ಯವಿರುವ ಹಾರ್ಮೋನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗದಿದ್ದಾಗ ಪುರುಷ ಮತ್ತು ಸ್ತ್ರೀ ಅಂಗಗಳು ಏಕಕಾಲಕ್ಕೆ ಬೆಳವಣಿಗೆಯಾಗಲು ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 6,366 ಕೋಟಿ ರೂ. ನರೇಗಾ ಬಾಕಿ ಉಳಿಸಿಕೊಂಡಿರುವ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಪರ್ಸಿಸ್ಟೆಂಟ್ ಮುಲ್ಲೆರಿಯನ್ ಡಕ್ಟ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಹೀಗೆ ಬೆಳೆದ ಜನರಲ್ಲಿ ವೃಷಣಗಳು ಹೊಟ್ಟೆಯಲ್ಲಿ ಉಳಿಯುವುದರಿಂದ ವೀರ್ಯ ಕೋಶಗಳು ಉತ್ಪತ್ತಿಯಾಗುವುದಿಲ್ಲ. ವಿಶ್ವದಾದ್ಯಂತ ಕೇವಲ 300 ಪ್ರಕರಣಗಳು ಮಾತ್ರ ವರದಿಯಾಗಿವೆ. ಭಾರತದಲ್ಲಿ ಇದುವರೆಗೆ ಕೇವಲ 20 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಕಿಮ್ಸ್‌ ವೈದ್ಯರಾದ ಡಾ. ವೈ ಎಂ ಪ್ರಶಾಂತ್‌ ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಇಂಡಿಯಾ’ ಒಕ್ಕೂಟ ತೊರೆಯಲು ನಿರಾಕರಿಸಿದ್ದಕ್ಕೆ ಮಾಜಿ ಸಿಎಂ ಹೇಮಂತ್ ಸೊರೆನ್‌ಗೆ ಜೈಲು’

'ಇಂಡಿಯಾ' ಮೈತ್ರಿಕೂಟವನ್ನು ತೊರೆಯಲು ನಿರಾಕರಿಸಿದ್ದಕ್ಕೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಜೆಎಂಎಂ ನಾಯಕ...

ಮೋದಿಯವರ ದ್ವೇಷ ಭಾಷಣ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನ: ರಾಹುಲ್ ಗಾಂಧಿ

"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ...

ರಾಜಸ್ಥಾನ | ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿ!

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಸುದ್ದಿಗಳು ಬರುತ್ತಿರುವ ನಡುವೆಯೇ...

‘ನನ್ನ ಪತಿಯ ಹತ್ಯೆಗೆ ಸಂಚು’: ದೆಹಲಿ ಸಚಿವರ ನಂತರ ಕೇಜ್ರಿವಾಲ್ ಪತ್ನಿ ಆರೋಪ

ಎಎಪಿ ಸರ್ಕಾರದ ದೆಹಲಿ ಸಚಿವರು ಹಾಗೂ ನಾಯಕರ ನಂತರ ಈಗ ದೆಹಲಿ...