ಜಿಎಸ್‌ಟಿ ದಸ್ತಗಿರಿ ಅಧಿಕಾರ ಹಿಂಪಡೆಯುವ ಪ್ರಸ್ತಾಪ: ಆಡಂಬರದ ಜಾರಿಯೂ ಇಂದಿನ ಭ್ರಮನಿರಸನವೂ….

Date:

2017ರ ಜೂನ್ 30ರ ಮಧ್ಯರಾತ್ರಿ ಭಾರತದ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆಯಾಗಿತ್ತು. ‘ಒಂದು ದೇಶ – ಒಂದು ತೆರಿಗೆ’ ಎಂಬ ಮಹತ್ವಾಕಾಂಕ್ಷೆ ನಮ್ಮದೆಂದು ಅಬ್ಬರದ ಮಾತುಗಳನ್ನಾಡಿದ್ದ ಮೋದಿ ಸರ್ಕಾರ, ಜಿಎಸ್‌ಟಿ ವ್ಯವಸ್ಥೆಯನ್ನು ಆರಂಭಿಸಿತು. ದೇಶಾದ್ಯಂತ ದೊಡ್ಡ ಮಟ್ಟದ ಭ್ರಮೆ ಮತ್ತು ಸಡಗರವನ್ನು ಸೃಷ್ಟಿಸಲಾಗಿತ್ತು. ಜಿಎಸ್‌ಟಿ ವ್ಯವಸ್ಥೆಯು ಆರ್ಥಿಕ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂಬ ಹುಸಿ ಭರವಸೆ ಹುಟ್ಟುಹಾಕಲಾಗಿತ್ತು. ಜೊತೆಗೆ, ಹಲವು ರಾಜ್ಯಗಳ ವಿರೋಧದ ನಡೆಯುವೆಯೂ ಜಿಎಸ್‌ಟಿ ಆಡಳಿತದಲ್ಲಿ ತೆರಿಗೆ ಅಧಿಕಾರಿಗಳಿಗೆ ‘ಬಂಧನ ಮತ್ತು ದಸ್ತಗಿರಿ’ ಮಾಡುವ ಅಧಿಕಾರವನ್ನೂ ನೀಡಲಾಗಿತ್ತು. ಆದರೆ, ಜಿಎಸ್‌ಟಿ ಜಾರಿಯಾಗಿ ಒಂಬತ್ತು ವರ್ಷಗಳು ಕಳೆಯುತ್ತಿರುವ ಈ ಹಂತದಲ್ಲಿ, ಅಧಿಕಾರಿಗಳ ಕೈಲಿದ್ದ ದಸ್ತಗಿರಿ ಅಧಿಕಾರವನ್ನೇ ಸಂಪೂರ್ಣವಾಗಿ ಹಿಂಪಡೆಯಲು ಸರ್ಕಾರ ಮುಂದಾಗಿದೆ. ಇದು ಆಡಳಿತ ವ್ಯವಸ್ಥೆಯಲ್ಲಿದ್ದ ಲೋಪ ಮತ್ತು ಅಂದು ಸೃಷ್ಟಿಸಲಾಗಿದ್ದ ಭ್ರಮೆ ಕಳಚಿಬಿದ್ದಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

- Advertisement -

ಅಂದಹಾಗೆ, ಇದೇ (ಅಕ್ಟೋಬರ್) 7ರಂದು 57ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಧಿಕಾರಿಗಳಿಗಿರುವ ‘ಬಂಧನ ಮತ್ತು ದಸ್ತಗಿರಿ’ ಅಧಿಕಾರನ್ನು ಹಿಂಪಡೆಯುವ ಪ್ರಸ್ತಾಪ ಇಟ್ಟು, ಚರ್ಚೆ ನಡೆಸಿ, ನಿರ್ಣಯ ಕೈಗೊಂಡು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತರಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಜಿಎಸ್‌ಟಿ ಕಾಯ್ದೆಯ ನಿಯಮ 69ರ ಅಡಿಯಲ್ಲಿ ಕಮಿಷನರ್‌ಗಳಿಗೆ ‘ನಂಬಲು ತಕ್ಕುದಾದ ಆಧಾರಗಳು’ ಇದ್ದರೆ ಉದ್ಯಮಿಗಳು ಮತ್ತು ವ್ಯಾಪಾರಿಗಳನ್ನು ನೇರವಾಗಿ ಬಂಧಿಸುವ ಅಧಿಕಾರ ನೀಡಲಾಗಿತ್ತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೆರಿಗೆ ವಸೂಲಾತಿಯಂತಹ ಸಿವಿಲ್ ಮತ್ತು ಆರ್ಥಿಕ ವಿಚಾರಗಳಿಗೆ ಪೋಲೀಸ್ ಮಾದರಿಯ ದಸ್ತಗಿರಿ ಅಧಿಕಾರ ನೀಡುವುದು ‘ಉದ್ಯಮಸ್ನೇಹಿ ವಾತಾವರಣ’ಕ್ಕೆ ಮಾರಕ ಎಂಬ ಕಳವಳ ಆರಂಭದಲ್ಲೇ ವ್ಯಕ್ತವಾಗಿತ್ತು. 2016ರಲ್ಲೇ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಜಿಎಸ್‌ಟಿ ವ್ಯವಸ್ಥೆಯು ವ್ಯಾಟ್ (VAT) ಮಾದರಿಯಲ್ಲೇ ಇರಬೇಕೆ ಹೊರತು, ತೆರಿಗೆ ಅಧಿಕಾರಿಗಳಿಗೆ ನೇರ ಬಂಧನ ಅಧಿಕಾರ ನೀಡಬಾರದು ಎಂದು ವಿರೋಧಿಸಿದ್ದವು. ಆದರೆ, ಈ ಎಲ್ಲ ಸಲಹೆ/ಕಳವಳಗಳನ್ನು ಅಂದು ಮೋದಿ ಸರ್ಕಾರ ಗಂಭೀರವಾಗಿ ಪರಿಗಣಿಸದೆ, ನಿರ್ಲಕ್ಷಿಸಿ ದಸ್ತಗಿರಿ ಅಧಿಕಾರವನ್ನೂ ಒಳಗೊಂಡ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

ಇದರ ಪರಿಣಾಮವಾಗಿ, ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್, ವಿಮೆ ಹಾಗೂ ಸೇವಾ ವಲಯದ ಪ್ರಮುಖ ಉದ್ಯಮಿಗಳು ಮತ್ತು ಉನ್ನತ ಅಧಿಕಾರಿಗಳನ್ನು ಜಿಎಸ್‌ಟಿ ಕಾಯ್ದೆಯಡಿ ಬಂಧಿಸಲಾಯಿತು. ಇದು ತೆರಿಗೆ ಅಧಿಕಾರಿಗಳ ‘ಮಿತಿಮೀರಿದ ಅಧಿಕಾರ ಚಲಾಯಿಸುವಿಕೆ’ ಮತ್ತು ಉದ್ಯಮಿಗಳಿಗೆ ಕಿರುಕುಳ ನೀಡುವ ಅಸ್ತ್ರವಾಗಿ ದುರ್ಬಳಕೆಯಾಗುತ್ತಿದೆ ಎಂಬ ಆಕ್ರೋಶಕ್ಕೆ ಕಾರಣವಾಯಿತು.

ಅಷ್ಟಕ್ಕೂ, ಇಷ್ಟೆಲ್ಲಾ ಕಠಿಣ ಬಂಧನ ನಿಯಮಗಳಿದ್ದರೂ ಜಿಎಸ್‌ಟಿ ವ್ಯವಸ್ಥೆಯಲ್ಲಾಗಲಿ ಅಥವಾ ತೆರಿಗೆ ವಂಚನೆಗಾಗಗಲಿ ದೊಡ್ಡ ಮಟ್ಟದ ಕಡಿವಾಣವೇನೂ ಬಿದ್ದಿಲ್ಲ. 2021-22 ರಿಂದ 2024-25 ರವರೆಗಿನ ಅವಧಿಯಲ್ಲೇ ಸುಮಾರು 72,393 ಜಿಎಸ್‌ಟಿ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಕೇಂದ್ರ ವಿಭಾಗದಿಂದಲೇ 887 ಜನರನ್ನು ಬಂಧಿಸಲಾಗಿದೆ. ನಕಲಿ ಬಿಲ್ ಸೃಷ್ಟಿ, ಬೆನಾಮಿ ಖಾತೆಗಳ ಮೂಲಕ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯುವುದು ಹಾಗೂ ತೆರಿಗೆ ಪಾವತಿಸದೆ ವಂಚಿಸುವ ಜಾಲಗಳು ಮುಕ್ತವಾಗಿ ನಡೆಯುತ್ತಲೇ ಬಂದಿವೆ. ಅಂದರೆ, ಜಿಎಸ್‌ಟಿ ನಿಯಮ 69 – ಸಾಮಾನ್ಯ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಸಿತೇ ಹೊರತು, ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಲಿಲ್ಲ. ಬದಲಗಿ, ಜನರ ಮೇಲಿನ ಪರೋಕ್ಷ ತೆರಿಗೆಯ ಹೊರೆ ಹೆಚ್ಚಾಯಿತು. ವ್ಯಾಪಾರ-ವಹಿವಾಟು ನಡೆಸುವ ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಕಾನೂನಿನ ಸಂಕೋಲೆಗಳು ಬಿಗಿಯಾದವು.

ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಈಗ ಸರ್ಕಾರವು ಜಿಎಸ್‌ಟಿ ಅಪರಾಧಗಳನ್ನು ‘ಅಪರಾಧಮುಕ್ತಗೊಳಿಸುವ’ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಮತ್ತು ನೇರ ಬಂಧನ ಅಧಿಕಾರವನ್ನು ಹಿಂಪಡೆಯುತ್ತಿರುವುದು ಹಳೆಯ ‘ವ್ಯಾಟ್’ ವ್ಯವಸ್ಥೆಯ ತರ್ಕಕ್ಕೆ ಮರಳುತ್ತಿರುವ ಸೂಚನೆಯಂತಿದೆ. ಇನ್ನುಮುಂದೆ, ತೆರಿಗೆ ವಂಚನೆಗೆ ದಂಡ ಮತ್ತು ಬಡ್ಡಿ ವಸೂಲಾತಿ ಕ್ರಮಗಳು ಮಾತ್ರವೇ ಜಿಎಸ್‌ಟಿ ವ್ಯಾಪ್ತಿಯಲ್ಲಿ ನಡೆಯಲಿವೆ. ಗಂಭೀರ ಸ್ವರೂಪದ ಉದ್ದೇಶಪೂರ್ವಕ ಅಕ್ರಮ ಎಸಗುವವರ ವಿರುದ್ಧ ‘ಭಾರತೀಯ ನ್ಯಾಯ ಸಂಹಿತೆ’ಯ (BNS) ಅಡಿಯಲ್ಲಿ ಸಾಮಾನ್ಯ ಅಪರಾಧ ಕಾನೂನಿನಂತೆ ದೂರು ದಾಖಲಿಸಿ ಬಂಧಿಸಬೇಕಾಗುತ್ತದೆ. ಸಿಬಿಡಿಟಿ ಈಗಾಗಲೇ ನೇರ ತೆರಿಗೆ ಬಾಕಿದಾರರ ಬಂಧನ ನಿಯಮಗಳನ್ನು ರದ್ದುಗೊಳಿಸಿರುವ ಬೆನ್ನಲ್ಲೇ, ಪರೋಕ್ಷ ತೆರಿಗೆಯಲ್ಲೂ ಈ ಬದಲಾವಣೆ ತರಲಾಗುತ್ತಿದೆ.

ಸದ್ಯ, ಈ ದಸ್ತಗಿರಿ ಅಧಿಕಾರ ವಾಪಸಾತಿ ಪ್ರಸ್ತಾಪವೇ, 2017ರಲ್ಲಿ ಅರ್ಧರಾತ್ರಿಯ ಸಂಭ್ರಮಾಚರಣೆ ಮತ್ತು ಆರ್ಭಟದಿಂದ ಜಾರಿಗೆ ತರಲಾಗಿದ್ದ ಕಠಿಣ ಜಿಎಸ್‌ಟಿ ನಿಯಮಗಳು ಪ್ರಾಯೋಗಿಕವಾಗಿ ವಿಫಲವಾಗಿವೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಕಟ್ಟುನಿಟ್ಟಿನ ನಿಯಮಗಳ ಹೆಸರಿನಲ್ಲಿ ಉದ್ಯಮ ರಂಗದಲ್ಲಿ ಆತಂಕ ಮೂಡಿಸಿ, ವ್ಯಾಪಾರಸ್ಥರನ್ನು ಸತಾಯಿಸಿದ ಈಗ ಒಂಬತ್ತು ವರ್ಷಗಳ ನಂತರ ‘ತೆರಿಗೆದಾರ ಸ್ನೇಹಿ ವಾತಾವರಣ’ದ ನೆಪದಲ್ಲಿ ಅಧಿಕಾರ ಹಿಂಪಡೆಯುತ್ತಿರುವುದು, ಜಿಎಸ್‌ಟಿ ಆರಂಭಿಕ ಸ್ವರೂಪದ ಮೇಲಿದ್ದ ಭ್ರಮನಿರಸನವನ್ನು ಎತ್ತಿ ತೋರುತ್ತದೆ.

ಮಾಹಿತಿ ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಬೀದರ್‌ | ಪಿಸ್ತೂಲ್‌ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು: ಮುಖ್ಯ ಆರೋಪಿ ಸೇರಿ ನಾಲ್ವರ ಬಂಧನ

ಅಕ್ರಮವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಧೆಕೋರರನ್ನು...