ಮಣಿಪುರ ಹಿಂಸಾಚಾರ | ಮ್ಯಾನ್ಮಾರ್ ಮೂಲದ ಉಗ್ರ ಸಂಘಟನೆಗಳ ವಿರುದ್ಧ ಎನ್‌ಐಎಯಿಂದ ಹೊಸ ಎಫ್‌ಐಆರ್ ದಾಖಲು

Date:

ಮಣಿಪುರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಮ್ಯಾನ್ಮಾರ್ ಮೂಲದ ಜನಾಂಗೀಯ ಸಶಸ್ತ್ರ ಗುಂಪುಗಳು ಮತ್ತು ಭಾರತ ವಿರೋಧಿ ಶಕ್ತಿಗಳು ಶಸ್ತ್ರಾಸ್ತ್ರ ಹಾಗೂ ಆರ್ಥಿಕ ನೆರವು ನೀಡುತ್ತಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸದಾಗಿ ಎಫ್‌ಐಆರ್ ದಾಖಲಿಸಿದೆ.

- Advertisement -

ಕೇಂದ್ರ ಗೃಹ ಸಚಿವಾಲಯದ (MHA) ನಿರ್ದೇಶನದ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ನಿಷೇಧಿತ ಭಯೋತ್ಪಾದಕ ಮತ್ತು ಬಂಡುಕೋರ ಸಂಘಟನೆಗಳಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ), ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (PREPAK) ಮತ್ತು ಪ್ರಿಪಾಕ್-ಪ್ರೋಗ್ರೆಸಿವ್ (PREPAK-Pro) ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಮ್ಯಾನ್ಮಾರ್‌ನ ಸಶಸ್ತ್ರ ಗುಂಪುಗಳು ಕ್ರಿಮಿನಲ್ ಪಿತೂರಿ ನಡೆಸಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ | 12 ಗಂಟೆಗಳಲ್ಲಿ 9 ಸಾವು; ಶಾಂತಿ ಕಾಪಾಡಲು ಸಿಎಂ ಮನವಿ

ಈ ಸಂಘಟನೆಗಳು ರಹಸ್ಯ ಮಾರ್ಗಗಳ ಮೂಲಕ ಹಣ ಸಂಗ್ರಹಿಸಿ, ದೇಶದೊಳಗೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೂರೈಸುತ್ತಿವೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ.

ಮಣಿಪುರದ ವಿವಿಧ ಜನಾಂಗೀಯ ಸಮುದಾಯಗಳ ನಡುವೆ ದ್ವೇಷ ಮತ್ತು ವೈಷಮ್ಯವನ್ನು ಪ್ರಚೋದಿಸುವುದು, ಹಿಂಸಾಚಾರ ಹಾಗೂ ಸ್ಥಳಾಂತರಕ್ಕೆ ಕಾರಣವಾಗುವುದು ಮತ್ತು ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಅಮಾಯಕ ನಾಗರಿಕರನ್ನು ಗುರಿಯಾಗಿಸಿ ಹತ್ಯೆ ಮಾಡುವುದು ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಈ ಗುಂಪುಗಳು ಸಂಚು ರೂಪಿಸಿವೆ ಎಂದು ಎಫ್‌ಐಆರ್ ವಿವರಿಸಿದೆ.

ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಮತ್ತು ಆರು ಮಂದಿ ಉಕ್ರೇನ್ ಪ್ರಜೆಗಳು ಮ್ಯಾನ್ಮಾರ್‌ನ ಸಶಸ್ತ್ರ ಗುಂಪುಗಳಿಗೆ ತರಬೇತಿ ನೀಡಿದ್ದರೇ ಎಂಬ ಬಗ್ಗೆ ಎನ್‌ಐಎ ಈಗಾಗಲೇ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದೆ.

ಮೇ 2023 ರಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 306 ಮಂದಿ ಪ್ರಾಣ ಕಳೆದುಕೊಂಡಿದ್ದು, 49 ಜನರು ನಾಪತ್ತೆಯಾಗಿದ್ದಾರೆ ಹಾಗೂ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ಏಳು ವಿದೇಶಿ ಪ್ರಜೆಗಳ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್‌ಶೀಟ್‌ನಲ್ಲಿ ಯುಎಪಿಎ ಸೆಕ್ಷನ್‌ಗಳನ್ನು ಕೈಬಿಟ್ಟಿದ್ದರಿಂದ ಅವರಿಗೆ ಡೀಫಾಲ್ಟ್ ಜಾಮೀನು ಲಭಿಸಿತ್ತು. ಇದೀಗ ಗೃಹ ಸಚಿವಾಲಯದ ಸೂಚನೆಯಂತೆ ಗಡಿಯಾಚೆಗಿನ ಭಯೋತ್ಪಾದನಾ ನಂಟನ್ನು ಭೇದಿಸಲು ಎನ್‌ಐಎ ಹೊಸ ಪ್ರಕರಣ ದಾಖಲಿಸಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಿಲಿಮಿಟೇಷನ್ | ಸ್ಟಾಲಿನ್, ಪವಾರ್ ಮನವೊಲಿಕೆಗೆ ಖರ್ಗೆ, ಸೋನಿಯಾ ಕೊನೆಯ ಕ್ಷಣದ ಕಸರತ್ತು

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಿರುವ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್)...

ಹಿರಿಯ ಲೇಖಕಿ, ಬಂಡಾಯ ಸಾಹಿತ್ಯದ ಪ್ರಮುಖ ಧ್ವನಿ ಸ. ಉಷಾ ಇನ್ನಿಲ್ಲ

ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ, ಕವಯತ್ರಿ, ಪ್ರಾಧ್ಯಾಪಕಿ ಸ. ಉಷಾ...

ಬಾಗಲಕೋಟೆ | ಆನ್‌ಲೈನ್ ಗೇಮಿಂಗ್ ಆಮಿಷದ ವಂಚನೆಗೆ ಬ್ರೇಕ್: 495 ಲಿಂಕ್ ಪತ್ತೆ, ಬ್ಲಾಕ್‌ಗೆ ಪೊಲೀಸ್ ಕ್ರಮ

ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಹಾಗೂ ಕ್ಯಾಸಿನೋ ಆಟಗಳ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿರುವ...