ಕರೂರು ಕಾಲ್ತುಳಿತ ದುರಂತ ಸಂತ್ರಸ್ತರ ಸ್ಮರಣಾರ್ಥ ಸ್ಮಾರಕ ನಿರ್ಮಾಣ: ತಮಿಳುನಾಡು ಸಿಎಂ ವಿಜಯ್

Date:

ಕರೂರು ಕಾಲ್ತುಳಿತ ದುರಂತದ ಸಂತ್ರಸ್ತರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡಲಾಗುದು. ರಾಜಕೀಯದಿಂದಾಗಿ ಮುಂದೆಂದೂ ಇಂತಹ ಘಟನೆಗಳು ನಡೆಯಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ ವಿಜಯ್ ಜೋಸೆಫ್ ಹೇಳಿದ್ದಾರೆ.

- Advertisement -

2025ರ ಸೆಪ್ಟೆಂಬರ್‌ನಲ್ಲಿ ವಿಜಯ್ ಬಹಿರಂಗ ಸಭೆ ವೇಳೆ ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿದ್ದು 41 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಕುಟುಂಬ ಸದಸ್ಯರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಶುಕ್ರವಾರ ಷರತ್ತುಬದ್ಧ ಅನುಮತಿ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೇತೃತ್ವದ ರಾಜ್ಯ ಸರ್ಕಾರವು ಕರೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಕೋರ್ಟ್ ಹಸಿರು ನಿಶಾನೆ ತೋರಿದ್ದು, ವಿಜಯ್ ಕರೂರಿನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಇನ್ನು ಆದೇಶ ಪತ್ರವು ತಾತ್ಕಾಲಿಕವಾಗಿರಲಿದ್ದು, ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕರೂರು ದುರಂತ: ತಮಿಳುನಾಡು ಸಿಎಂ ವಿಜಯ್, ಇತರರ ಹೇಳಿಕೆ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಡಿಎಂಕೆ

ದುರಂತದ ನಂತರ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಸಿಎಂ ವಿಜಯ್, “ರ‍್ಯಾಲಿ ನಡೆದ ದಿನದಂದು ಪೊಲೀಸರು ತಮ್ಮನ್ನು ದಿಕ್ಕು ತಪ್ಪಿಸಿದ್ದರು. ಕಾರ್ಯಕ್ರಮವನ್ನು ಮುಂದುವರಿಸುವ ವಿಚಾರದಲ್ಲಿ ನಾವು ಪೊಲೀಸರನ್ನು ನಂಬಿದೆವು. ಈ ಕಾಲ್ತುಳಿತವು ನನ್ನ ಜೀವನದ ಅತ್ಯಂತ ನೋವಿನ ಕ್ಷಣ. ಇದು ನನ್ನನ್ನು ಇಂದಿಗೂ ಕಾಡುತ್ತಿದೆ” ಎಂದು ಹೇಳಿದರು.

ಇನ್ನು “ಒಬ್ಬ ವ್ಯಕ್ತಿ ಎಷ್ಟೇ ಯಶಸ್ಸನ್ನು ಕಂಡರೂ, ಜೀವನದಲ್ಲಿ ಇಂತಹ ಘಟನೆಗಳು ಎದುರಾಗುತ್ತವೆ. ನಾನು ಕರೂರು ಪ್ರವೇಶಿಸಿದಾಗ ಅವರು (ಪೊಲೀಸರು) ನನ್ನನ್ನು ತಡೆಯಬಹುದಿತ್ತಲ್ಲವೇ” ಎಂದು ಜನರನ್ನು ಪ್ರಶ್ನಿಸಿದರು. ಹಾಗೆಯೇ, “ಸಭೆಯನ್ನು ರದ್ದುಗೊಳಿಸುವ ಸಂಪೂರ್ಣ ಹಕ್ಕು ಅವರಿಗಿತ್ತು. ಆದರೆ ಅವರು ರದ್ದುಗೊಳಿಸಲಿಲ್ಲ, ಬದಲಿಗೆ ಅವರೇ ನನ್ನನ್ನು ಮುನ್ನಡೆಸಿಕೊಂಡು ಹೋದರು” ಎಂದು ದೂರಿದರು.

“ಇದಕ್ಕೆ ನಿಜವಾಗಿಯೂ ಯಾರು ಜವಾಬ್ದಾರರು… ಇದನ್ನು ಸಂಚು ರೂಪಿಸಿ ಮಾಡಿದ್ದು ಯಾರು” ಎಂದು ಪ್ರಶ್ನಿಸಿದ ವಿಜಯ್ ಪೊಲೀಸರ ಮೇಲಿನ ಟೀಕೆಯನ್ನು ಅಂದು ಅಧಿಕಾರದಲ್ಲಿದ್ದ ಡಿಎಂಕೆ ಕಡೆಗೆ ತಿರುವಿದರು. ಕಾಲ್ತುಳಿತದ ತಕ್ಷಣದ ನಂತರ ತಾವು ಮೌನವಾಗಿದ್ದರ ಕುರಿತು ಕೇಳಿಬಂದ ಟೀಕೆಗಳಿಗೂ ತಿರುಗೇಟು ನೀಡಿದರು.

“ನಾನು ಮನೆಯಲ್ಲಿ ತೀವ್ರ ನೋವು ಮತ್ತು ನಿರಾಶೆಯಿಂದ ನಲುಗುತ್ತಿದ್ದಾಗ, ನೀವು ನನ್ನನ್ನು ನೋಡಿ ಅಪಹಾಸ್ಯ ಮಾಡಿದಿರಿ. ನಾನು ‘ಅಡಗಿಕೊಂಡಿದ್ದೇನೆ’ ಎಂದು ಹೇಳಿದಿರಿ. ನಮ್ಮ ರಾಜಕೀಯ ವಿರೋಧಿಗಳು ಮತ್ತು ಪೊಲೀಸರು ಸೇರಿ ಈ ಕಾಲ್ತುಳಿತವನ್ನು ಪ್ರೇರೇಪಿಸಲು ‘ಸಂಚು’ ರೂಪಿಸಿದ್ದರು” ಎಂದು ದೂರಿದರು.

“ಪೊಲೀಸರು ಅಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಿದ್ದರೇ? ಅವರು ನಾಚಿಕೆಯಿಲ್ಲದೆ ನನ್ನನ್ನು ದೂಷಿಸಿದರು. ಎಂ.ಕೆ. ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಇದರ ಬಗ್ಗೆ ರಾಜಕೀಯ ಮಾಡಿದರು. ಪಕ್ಷದ ಯಶಸ್ವಿ ಚುನಾವಣಾ ಪ್ರಚಾರವನ್ನು ಹಳಿ ತಪ್ಪಿಸುವ ಪ್ರಯತ್ನವಾಗಿ ಈ ದುರಂತವನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗಿದೆ ಎಂದು ಟಿವಿಕೆ ವಾದವನ್ನು ಪುನರುಚ್ಚರಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...