ಸಾವರ್ಕರ್ ಕುರಿತ ಉಲ್ಲೇಖ: ಸೋನಿಯಾ ಗಾಂಧಿ ಆತ್ಮಕಥೆ ಹರಿದು ಶಿವಸೇನೆ ಪ್ರತಿಭಟನೆ

Date:

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯಲ್ಲಿ ಹಿಂದುತ್ವವಾದಿ ವಿ.ಡಿ. ಸಾವರ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಬುಧವಾರ ಪ್ರತಿಭಟನೆ ನಡೆಸಿತು. ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರು ಪುಸ್ತಕದ ಪುಟಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದಲ್ಲಿ ಕೃತಿಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

- Advertisement -

ನವೆಂಬರ್ 10ರಂದು ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿದ ಈ ಕೃತಿಯ 201 ಮತ್ತು 443ನೇ ಪುಟಗಳಲ್ಲಿನ ಅಂಶಗಳು ವಿವಾದಕ್ಕೆ ಕಾರಣವಾಗಿವೆ. ಬ್ರಿಟಿಷ್ ಆಳ್ವಿಕೆಯಲ್ಲಿ ಕಾಂಗ್ರೆಸ್ ಹೋರಾಟಗಾರರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ಸಾವರ್ಕರ್ ಅವರಂತಹ ಆರ್‌ಎಸ್‌ಎಸ್ ಚಿಂತಕರು ಕ್ಷಮಾಪಣಾ ಪತ್ರ ಬರೆಯುತ್ತಿದ್ದರು ಹಾಗೂ ಸಂಘಟನೆಯ ಸದಸ್ಯರು ಬ್ರಿಟಿಷರಿಗೆ ಮಾಹಿತಿದಾರರಾಗಿದ್ದರು ಎಂದು 201ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ. 443ನೇ ಪುಟದಲ್ಲಿ ಹಿಂದುತ್ವ ಸಿದ್ಧಾಂತವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಬರೆಯಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಜಾಗತಿಕ ಪಯಣ: ಸಣ್ಣ ಊರಿನ ಕನಸುಗಳಿಗೆ...

"ಧೋನಿ ಬರುವ ಮುನ್ನ ರಾಂಚಿಯ ಪೋಷಕರು ತಮ್ನ ಮಕ್ಕಳು ವೈದ್ಯರು, ಎಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದರು. ಅವರು ಬಂದ ಮೇಲೆ ಎಲ್ಲರೂ ಧೋನಿಯಾಗಲು, ವಿಕೆಟ್‌ಕೀಪರ್ ಆಗಲು ಬಯಸಿದರು" ಎನ್ನುತ್ತಾರೆ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ....

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವಸೇನೆ ನಾಯಕರಾದ ಸಂಜಯ್ ನಿರುಪಮ್, ಶೈನಾ ಎನ್.ಸಿ. ಮತ್ತು ಆನಂದ್ ದುಬೆ ತೀವ್ರ ಕಿಡಿಕಾರಿದರು. ಇದು ಪ್ರೀತಿಯ ಪಯಣವಲ್ಲ, ದ್ವೇಷದ ಪಯಣ ಎಂದು ಟೀಕಿಸಿದ ನಿರುಪಮ್, ವಿವಾದಾತ್ಮಕ ಪುಟಗಳನ್ನು ಪ್ರಕಾಶಕರು ಕೂಡಲೇ ತೆಗೆದುಹಾಕಬೇಕು, ತಿದ್ದುಪಡಿಯಾಗುವವರೆಗೆ ಮಹಾರಾಷ್ಟ್ರದಲ್ಲಿ ಕೃತಿಯ ಪ್ರಸರಣ ತಡೆಯಬೇಕು ಹಾಗೂ ಈ ಕುರಿತು ಆನ್‌ಲೈನ್ ವೇದಿಕೆಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಮೂರು ಬೇಡಿಕೆಗಳನ್ನು ಮುಂದಿಟ್ಟರು.

ಪಕ್ಷದ ವಕ್ತಾರೆ ಶೈನಾ ಎನ್.ಸಿ. ಮಾತನಾಡಿ, ಭಾರತೀಯ ಪೌರತ್ವ ಪಡೆಯಲು 15 ವರ್ಷ ತೆಗೆದುಕೊಂಡ ಸೋನಿಯಾ ಗಾಂಧಿ, ದೇಶಕ್ಕಾಗಿ 50 ವರ್ಷ ಶ್ರಮಿಸಿ 11 ವರ್ಷ ಸೆಲ್ಯುಲಾರ್ ಜೈಲಿನಲ್ಲಿದ್ದ ಸಾವರ್ಕರ್ ಅವರನ್ನು ಪ್ರಶ್ನಿಸುವ ನೈತಿಕತೆ ಹೊಂದಿಲ್ಲ ಎಂದರು. ಇತಿಹಾಸ ತಿರುಚುವುದನ್ನು ಸಹಿಸಲಾಗದು ಎಂದ ಅವರು, ಪ್ರತಿಭಟನೆ ವೇಳೆ ಬಾಳಾ ಠಾಕ್ರೆ ಅವರ ಭಾವಚಿತ್ರವಿದ್ದ ಹಾಳೆಯನ್ನೂ ಹರಿದ ಪ್ರಸಂಗ ನಡೆಯಿತು.

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಕೂಡ ಕೃತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಆತ್ಮಕಥೆಯೋ ಅಥವಾ ವೈಯಕ್ತಿಕ ಹತಾಶೆಯ ಬರಹವೋ ಎಂದು ಪ್ರಶ್ನಿಸಿದ್ದಾರೆ. ಪುಸ್ತಕದ ಪ್ರತಿ ಪುಟದಲ್ಲೂ ವಿವಾದವಿದೆ ಎಂದ ಅವರು, ಅಂಡಮಾನ್ ಸೆಲ್ಯುಲಾರ್ ಜೈಲಿನ ಶಿಕ್ಷೆ ಮತ್ತು ನಂತರದ ನಿರ್ಬಂಧಿತ ಬದುಕಿನ ಮೂಲಕ ಸಾವರ್ಕರ್ ದೇಶಕ್ಕಾಗಿ ಅಪಾರ ತ್ಯಾಗ ಮಾಡಿದ್ದಾರೆ ಎಂದರು.

ಇದೇ ವೇಳೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧವೂ ಶಿಂದೆ ಬಣ ವಾಗ್ದಾಳಿ ನಡೆಸಿದೆ. ಸಾವರ್ಕರ್ ಮತ್ತು ಮರಾಠಿ ಅಸ್ಮಿತೆಗೆ ಧಕ್ಕೆಯಾಗಿದ್ದರೂ ಉದ್ಧವ್ ಅವರು ಸೋನಿಯಾ ಅವರ ಪುಸ್ತಕ ಸ್ವೀಕರಿಸಿದ್ದಾರೆ ಎಂದು ನಿರುಪಮ್ ದೂರಿದರು. 2004ರಲ್ಲಿ ಮಣಿಶಂಕರ್ ಅಯ್ಯರ್ ವಿರುದ್ಧ ಬಾಳಾ ಠಾಕ್ರೆ ನಡೆಸಿದ ಮಾದರಿಯಲ್ಲಿ ಉದ್ಧವ್ ಈಗ ಪ್ರತಿಭಟಿಸುವರೇ ಎಂದು ಸವಾಲು ಹಾಕಿದರು. ಇತ್ತ, ಇದು ವೈಯಕ್ತಿಕ ಅನುಭವದ ಕೃತಿಯಾಗಿದ್ದು, ಅನಗತ್ಯ ರಾಜಕೀಯ ಬಣ್ಣ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಟೀಕೆಗಳನ್ನು ತಳ್ಳಿಹಾಕಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2024ರ ಚುನಾವಣೆ: 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಚಲಾವಣೆಯಾದ ಮತಗಳ ದಾಖಲೆಯೇ ಆಯೋಗದ ಬಳಿಯಿಲ್ಲ!

ಕಳೆದ 10 ವರ್ಷಗಳಿಂದ ಚುನಾವಣಾ ಆಯೋಗದ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು...

ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವದಂತಿ; ಡಾ. ಜಿ ಪರಮೇಶ್ವರ್ ಸ್ಪಷ್ಟನೆ!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ, ಕಂದಾಯ ಸಚಿವ ಡಾ....

ಗೃಹಲಕ್ಷ್ಮಿ | ಹಳ್ಳಿ ಮಹಿಳೆಯರ ಬದುಕು ಬದಲಿಸುತ್ತಿದೆ ‘ಗ್ರಾಮೀಣ ಮೈಕ್ರೋ-ಉದ್ಯಮ’!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಜೀವನದಲ್ಲಿ...