ಬಿಜೆಪಿ ಭಕ್ತನ 22 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ ಮೋದಿ ಸರ್ಕಾರ; ವಿಜಯ್ ಮಲ್ಯ ಲೇವಡಿ

Date:

ಬಿಜೆಪಿ ಭಕ್ತ, ಮೋದಿ ಹಿಂಬಾಲಕ, ಜೀ ಮಾಧ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಬೃಹತ್ ಸಾಲ ಮನ್ನಾಕ್ಕೆ ‘ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ’ (National Company Law Tribunal – NCLT) ಸಮ್ಮತಿಸಿದೆ. ಸುಭಾಷ್ ಚಂದ್ರ ಅವರ ಸುಮಾರು 22,006 ಕೋಟಿ ರೂಪಾಯಿಗಳ ಒಟ್ಟು ಸಾಲದ ಪೈಕಿ ಕೇವಲ 6.5 ಕೋಟಿ ರೂಪಾಯಿಗಳನ್ನು ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು NCLT ಅನುಮತಿ ನೀಡಿದೆ. ಪರಿಣಾಮ, ಸಾಲ ನೀಡಿದ ಬ್ಯಾಂಕುಗಳಿಗೆ ಬರೋಬ್ಬರಿ 99.97% ರಷ್ಟು ಬೃಹತ್ ನಷ್ಟ ಉಂಟಾಗಿದೆ. ಎನ್‌ಸಿಎಲ್‌ಟಿಯ ಈ ನಿರ್ಧಾರವನ್ನು ಉಲ್ಲೇಖಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಭಾರತೀಯ ಸಾಲ ಮರುಪಾವತಿ ವ್ಯವಸ್ಥೆಯನ್ನು ಲೇವಡಿ ಮಾಡಿದ್ದಾರೆ. ‘ಇದೇ ಭಾರತೀಯ ನ್ಯಾಯ’ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನದ ಪರಿಹಾರ ಪ್ರಕ್ರಿಯೆಯಲ್ಲಿ ಸಾಲ ಮನ್ನಾಕ್ಕೆ ಸಾಲದಾತ ಬ್ಯಾಂಕುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. 22,006 ಕೋಟಿ ರೂಪಾಯಿ ಸಾಲಕ್ಕೆ ಪ್ರತಿಯಾಗಿ 6.25 ಕೋಟಿ ರೂಪಾಯಿ ಸಾಲ ಮರುಪಾವತಿ ಮತ್ತು 25 ಲಕ್ಷ ರೂಪಾಯಿ ಪ್ರಕ್ರಿಯೆ ವೆಚ್ಚವನ್ನು ಸಾಲಗಾರ ಸುಭಾಷ್ ಚಂದ್ರ ಅವರಿಂದ ಪಡೆಯುವುದು ಅತ್ಯಂತ ಅಲ್ಪ ಮೊತ್ತ ಎಂದು ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ಹಲವು ಬ್ಯಾಂಕುಗಳು ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು. ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ತನಗೆ ಬರಬೇಕಿದ್ದ 1,322 ಕೋಟಿ ರೂಪಾಯಿ ಸಾಲಕ್ಕೆ ಬದಲಾಗಿ ಕೇವಲ 38 ಲಕ್ಷ ರೂಪಾಯಿ ಅಂದರೆ 0.028%ರಷ್ಟು ಮೊತ್ತ ಮಾತ್ರ ಸಿಗಲಿದೆ. ಇದು ಸಂಸ್ಥೆಗೆ ಭಾರೀ ನಷ್ಟ ಉಂಟುಮಾಡಲಿದೆ ಎಂದು ವಾದಿಸಿತ್ತು. ಆದಾಗ್ಯೂ, ಆಕ್ಷೇಪಗಳನ್ನು NCLT ನ್ಯಾಯಾಂಗ ಸದಸ್ಯ ನೀಲೇಶ್ ಶರ್ಮಾ ಅವರು ತಳ್ಳಿಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಗಮನಾರ್ಹವಾಗಿ, ಈ ಸಾಲ ಮನ್ನಾ ಮತ್ತು ಪರಿಹಾರ ಪ್ರಕ್ರಿಯೆಯ ವಿರುದ್ಧ ಸಾಲದಾತ ಸಂಸ್ಥೆಗಳಲ್ಲಿ ಕೇವಲ 20%ಗಿಂತ ಕಡಿಮೆ ಹಣಕಾಸು ಸಂಸ್ಥೆಗಳು ಮಾತ್ರವೇ ಹಕ್ಕು ಚಲಾಯಿಸಿವೆ. ಉಳಿದ 80.81%ರಷ್ಟು ಸಂಸ್ಥೇಗಳು ಈ ಪ್ರಕ್ರಿಯೆಯ ಪರವಾಗಿವೆ ಎಂದು ನ್ಯಾಯಮಂಡಳಿ ತಿಳಿಸಿದೆ. ಸುಭಾಷ್ ಚಂದ್ರ ಅವರ ಪ್ರಸ್ತುತ ವೈಯಕ್ತಿಕ ಆಸ್ತಿಯ ಮೌಲ್ಯವು ಈ ಕೊಡುಗೆಗಿಂತ ತೀರ ಕಡಿಮೆಯಿದ್ದು, ದಿವಾಳಿ ಎಂದು ಘೋಷಿಸುವುದಕ್ಕಿಂತ ಈ ಯೋಜನೆಯನ್ನು ಒಪ್ಪಿಕೊಳ್ಳುವುದು ಸಾಲದಾತರಿಗೆ ಉತ್ತಮ ಆಯ್ಕೆ ಎಂದು ನ್ಯಾಯಮಂಡಳಿಯು ತನ್ನ 144 ಪುಟಗಳ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ವಿಜಯ್ ಮಲ್ಯ, “ಇದು ನಿಜವಾಗಿದ್ದರೆ ನನ್ನ ಸ್ನೇಹಿತ ಸುಭಾಷ್‌ಗೆ ಅಭಿನಂದನೆಗಳು. ಭಾರತದ ಬ್ಯಾಂಕುಗಳು ಮತ್ತು ಸರ್ಕಾರ ನನ್ನ 6,203 ಕೋಟಿ ರೂಪಾಯಿ ಸಾಲಕ್ಕೆ ಪ್ರತಿಯಾಗಿ 14,100 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿವೆ. ಆದರೆ, ಇತರ ಹಲವು ಸಾಲಗಾರರು ತೀರಾ ಅಲ್ಪ ಮೊತ್ತಕ್ಕೆ ಸಾಲ ಇತ್ಯರ್ಥಪಡಿಸಿಕೊಳ್ಳುತ್ತಿದ್ದಾರೆ. ಬಹುಶಃ ಇದೇ ‘ಭಾರತೀಯ ಸಾಲ ಪರಿಹಾರ ನ್ಯಾಯ’ ಇರಬೇಕು. ಇದರ ಬಗ್ಗೆ ಮಾಧ್ಯಮಗಳು ಯಾವುದೇ ಪ್ರಶ್ನೆ ಕೇಳುವುದಿಲ್ಲ,” ಎಂದು ಕಟುವಾಗಿ ಟೀಕಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...