‘ಮುಖ ಉಳಿಸಿಕೊಳ್ಳಲು ಮಣಿಪುರಕ್ಕೆ ಮೋದಿ ಭೇಟಿ’: ವಿಪಕ್ಷಗಳ ಭಾರೀ ಟೀಕಾಪ್ರಹಾರ

Date:

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಶುರುವಾಗಿ ಎರಡು ವರ್ಷಗಳು ತುಂಬಿದ ಬಳಿಕ ಮಣಿಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. “ಇದೊಂದು ಪ್ರಹಸನ. ಎರಡು ವರ್ಷಗಳ ಕಾಲ ಮಣಿಪುರ ರಾಜ್ಯವನ್ನು ಮೋದಿ ನಿರ್ಲಕ್ಷಿಸಿದರು” ಎಂದು ಟೀಕಿಸಿವೆ.

- Advertisement -

“ಪ್ರಧಾನಿಯವರು ಮೂರು ಗಂಟೆ ಕಾಲ ಮಣಿಪುರದಲ್ಲಿ ಹಮ್ಮಿಕೊಂಡ ಪ್ರವಾಸವು ರಾಜ್ಯದ ಜನತೆಗೆ ಮಾಡಿರುವ ಗಂಭೀರ ಅವಮಾನ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ರಾಜಧಾನಿಯಲ್ಲಿ ಖಾಕಿ-ಕರಿ ಕೋಟ್ ಸಮರ; ಒಳಗಿನ ಹುಳುಕನ್ನು ಬೀದಿಗೆ...

ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ ಆರಂಭವಾದ ಈ ಜಗಳ, ಪೊಲೀಸ್ ಠಾಣೆಯೊಳಗೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಮತ್ತು ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಈ ಹೊತ್ತಿನಲ್ಲಿ ಈ...

‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, “ಮಣಿಪುರದಲ್ಲಿ ನಿಮ್ಮ 3 ಗಂಟೆಗಳ ವಿಶ್ರಾಂತಿಯು ಕರುಣೆಯನ್ನು ಹೊಂದಿಲ್ಲ. ಅದೊಂದು ಪ್ರಹಸನ, ಗಾಯಗೊಂಡ ಜನರಿಗೆ ಮಾಡುವ ಗಂಭೀರ ಅವಮಾನ. ನಿರಾಶ್ರಿತರ ಶಿಬಿರಗಳಲ್ಲಿನ ಜನರ ಕೂಗನ್ನು ಕೇಳಿಸಿಕೊಳ್ಳದೆ, ಹೇಡಿತನದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಇಂಫಾಲ ಮತ್ತು ಚೂರಾಚಾಂದ್ಪುರದಲ್ಲಿ ರೋಡ್‌ಶೋ ನಡೆಸಿದಿರಿ” ಎಂದಿದ್ದಾರೆ.

ಇದನ್ನೂ ಓದಿರಿ: ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ವಿರುದ್ಧದ ಪ್ರಕರಣ ರದ್ದತಿಗೆ ಸುಪ್ರೀಂ ನಕಾರ

“2023ರಿಂದ ಈವರೆಗೆ 300 ಜೀವಗಳು ಬಲಿಯಾಗಿವೆ, 67,000 ಜನರು ಸ್ಥಳಾಂತರವಾಗಿದ್ದಾರೆ. 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೋದಿ ಮಣಿಪುರಕ್ಕೆ ಭೇಟಿ ನೀಡಿಲಿಲ್ಲ. ಆದರೆ 46 ವಿದೇಶಿ ಪ್ರವಾಸಗಳನ್ನು ಮಾಡಿದರು. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಮೂಲಭೂತ ಸಾಂವಿಧಾನಿಕ ಜವಾಬ್ದಾರಿಗಳನ್ನು ತ್ಯಜಿಸಿ ರಾಷ್ಟ್ರಪತಿ ಆಳ್ವಿಕೆಯ ಹಿಂದೆ ಅಡಗಿ ಕೂತಿದೆ” ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿ, “ಭೇಟಿ ನೀಡಲು ಯೋಗ್ಯವಾದ ಸಮಯ ಬಂದಿದೆ ಎಂದು ಎರಡು ವರ್ಷಗಳ ನಂತರ ಮೋದಿ ನಿರ್ಧರಿಸಿದ್ದಾರೆ. ನನಗೆ ಸಂತೋಷವಾಗಿದೆ. ಅವರು ಬಹಳ ಹಿಂದೆಯೇ ಭೇಟಿ ನೀಡಬೇಕಿತ್ತು. ಮಣಿಪುರದ ದಳ್ಳುರಿ ಇಷ್ಟು ದಿನ ಮುಂದುವರಿಯಲು ಬಿಟ್ಟಿದ್ದು ದುರದೃಷ್ಟಕರ” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿ, “ತಡವಾಗಿಯಾದರೂ ಮುಖ ಉಳಿಸಿಕೊಳ್ಳುವ ಪ್ರಹಸನ ನಡೆದಿದೆ” ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ತಡವಾಗಿಯಾದರೂ ಅವರು ಭೇಟಿ ನೀಡುತ್ತಿರುವುದು ಒಳ್ಳೆಯ ವಿಷಯ.  ಶಾಂತಿ ಮರುಸ್ಥಾಪಿಸಿ, ಎರಡು ಸಮುದಾಯಗಳು ಸಹಜ ಜೀವನಕ್ಕೆ ಹಿಂತಿರುಗಬಹುದೆಂದು ಭಾವಿಸಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿರಿ: ಮೋದಿ ಮಣಿಪುರ ಭೇಟಿಗಿಂತ ವೋಟ್ ಚೋರಿ ಮುಖ್ಯ ಸಮಸ್ಯೆ: ರಾಹುಲ್ ಗಾಂಧಿ

ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪ್ರತಿಕ್ರಿಯಿಸಿ, “ಪ್ರಧಾನಿಯವರು ಮಣಿಪುರಕ್ಕೆ ಎಲ್ಲಾ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಲಿ ಎಂದು ವಿರೋಧ ಪಕ್ಷಗಳು ಹೇಳುತ್ತಲೇ ಬಂದಿವೆ. ಆಗ ಮಾತ್ರ ರಾಜ್ಯವನ್ನು ಶಾಂತಿ ಮತ್ತು ನೆಮ್ಮದಿಗೆ ಮರಳಿ ತರಬಹುದು. ಮೋದಿ ಭೇಟಿ ತುಂಬಾ ತಡವಾಗಿದೆ. ಆದಾಗ್ಯೂ, ನಾವು ಈ ನಡೆಯನ್ನು ಬೆಂಬಲಿಸುತ್ತೇವೆ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಚುನಾವಣೆಯ ಪ್ರಧಾನ: ಡಿಎಂಕೆ

2027ರಲ್ಲಿ ಎದುರಾಗುವ ಚುನಾವಣೆ ಮುಖ್ಯವಾಗಿದೆ ಹೊರತು, ಜನರ ಮೇಲೆ ಕರುಣೆ ಏನಿಲ್ಲ ಎಂದು ಡಿಎಂಕೆ ಸಂಸದ ಕನ್ನಿಮೋಳಿ ವಾಗ್ದಾಳಿ ನಡೆಸಿದ್ದಾರೆ.

“ಎರಡು ವರ್ಷಗಳಿಗೂ ಹೆಚ್ಚು ಕಾಲ ಮಣಿಪುರ ಉರಿಯುತ್ತಿದೆ. ಭಾರತದ ಪ್ರಧಾನಿ ಅಂತಿಮವಾಗಿ ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇಲ್ಲಿ ಕರುಣೆ ಏನಿಲ್ಲ, 2027ರ ಚುನಾವಣಾ ಸಿದ್ಧತೆಗಳು ಮಣಿಪುರವನ್ನು ನೆನಪಿಸುವಲ್ಲಿ ಯಶಸ್ವಿಯಾಗಿವೆ” ಎಂದು ವ್ಯಂಗ್ಯವಾಡಿದ್ದಾರೆ.

ಇಂಫಾಲದಲ್ಲಿ ಪ್ರತಿಭಟನೆ

ಇಂಫಾಲ ಕಾಂಗ್ರೆಸ್ ಯುವ ಘಟಕ ಮತ್ತು ಮಣಿಪುರ ಪೀಪಲ್ಸ್ ಪಾರ್ಟಿಯ ಕಾರ್ಯಕರ್ತರು ಪ್ರಧಾನಿ ಭೇಟಿ ನೀಡಿದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.  “ಇದು ರಾಜಕೀಯ ತಂತ್ರ” ಎಂದು ಆಕ್ರೋಶ ಹೊರಹಾಕಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಗೂ, ನಿನ್ನ ನೋವು ಅಳಿಸಲಾಗದು’: ಅತ್ಯಾಚಾರಿಗೆ ಆಜೀವ ಶಿಕ್ಷೆ ನೀಡಿ ಸಂತ್ರಸ್ತೆಗೆ ಪತ್ರ ಬರೆದ ನ್ಯಾಯಾಧೀಶರು

ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಮತ್ತು ಚಾರಿತ್ರಿಕ ತೀರ್ಪೊಂದಕ್ಕೆ ರಾಜಸ್ಥಾನದ...

ಮಧ್ಯಪ್ರದೇಶ ಡಬಲ್ ಎಂಜಿನ್ ಸರ್ಕಾರದ ಮಾದರಿ: ರಸ್ತೆಯೇ ಇಲ್ಲದೆ ಸೇತುವೆ ಮಾತ್ರ ಕಟ್ಟಿದ ಸೋಜಿಗ!

ಡಬಲ್ ಎಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿ ವೇಗವಾಗಿ ಸಾಗುತ್ತದೆ ಎಂಬುದು ಬಿಜೆಪಿ ನಾಯಕರು...

ಚೆನ್ನೈನಲ್ಲಿ ಟಾಸ್ಮಾಕ್ ಮುಷ್ಕರ | ಮಳೆಯನ್ನೂ ಲೆಕ್ಕಿಸದೆ ಮದ್ಯ ಖರೀದಿಗೆ ಮುಗಿಬಿದ್ದ ಜನ

ಚಂಡಮಾರುತದಿಂದ ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮದ್ಯ...

ಗುವಾಹಟಿ ಹೋಟೆಲ್ ಶೂಟೌಟ್ ಪ್ರಕರಣ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಆರೋಪಿ ಹತ್ಯೆ!

ಗುವಾಹಟಿ ಹೋಟೆಲ್‌ನಲ್ಲಿ ನಡೆದ ಐವರ ಸರಣಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ...