ಗುವಾಹಟಿ ಹೋಟೆಲ್ ಶೂಟೌಟ್ ಪ್ರಕರಣ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಆರೋಪಿ ಹತ್ಯೆ!

Date:

ಗುವಾಹಟಿ ಹೋಟೆಲ್‌ನಲ್ಲಿ ನಡೆದ ಐವರ ಸರಣಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಘನಕಾಂತ ಗೋಗೋಯ್ (34), ಬುಧವಾರ (ನವೆಂಬರ್ 4) ಬೆಳಗಿನ ಜಾವ ಸಿವಸಾಗರ್‌ನ ಫುಲ್‌ಪಾನಿಚಿಗಾ ಬಳಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಗುವಾಹಟಿಯಿಂದ ಸಿವಸಾಗರ್‌ಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಅಕ್ಟೋಬರ್ 26ರಂದು ಗುವಾಹಟಿ  ಹೋಟೆಲ್‌ನಲ್ಲಿ ನಡೆದ ಗೋಲಿಬಾರ್‌ನಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿ ಘನಕಾಂತ ಗೋಗೋಯ್‌ನನ್ನು ಬಂಧಿಸಿ ಏಳು ದಿನಗಳ ಪೊಲೀಸ್ ವಶಕ್ಕೆ ಪಡೆದಿದ್ದರು. ನವೆಂಬರ್ 3ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ, 2024ರ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಸಾಗರ್ ಪೊಲೀಸರು ಗುವಾಹಟಿ ನ್ಯಾಯಾಲಯದಿಂದ ಪ್ರೊಡಕ್ಷನ್ ವಾರಂಟ್ ಪಡೆದು ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಸಹ್ಯಾದ್ರಿ ಕಾಲೇಜಿನ ಹಳೆಯ ಕೀರ್ತಿಗೆ ಮಸಿ!...

ಒಂದು ಕಾಲದಲ್ಲಿ ಶಿವಮೊಗ್ಗದ ಶೈಕ್ಷಣಿಕ ವಲಯದಲ್ಲಿ ಸಹ್ಯಾದ್ರಿ ಕಾಲೇಜಿನ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಈ ಪ್ರದೇಶ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ...

ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ...

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ʼಈ ದಿನʼ ಸುದ್ದಿ ವಿಶ್ಲೇಷಣೆ | ಇಂದಿರಾ ಅವರನ್ನು...

ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಬೆಳಕಿನ ಅಧ್ಯಾಯ ದೆಹಲಿಯಲ್ಲಿ...

ಬುಧವಾರ ಬೆಳಗಿನ ಜಾವ ಸುಮಾರು 3.10ರ ಸುಮಾರಿಗೆ ಗೌರಿಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಫುಲ್‌ಪಾನಿಚಿಗಾ ತಲುಪಿದಾಗ, ಆರೋಪಿ ಶೌಚಾಲಯಕ್ಕೆ ಹೋಗಬೇಕೆಂದು ವಾಹನ ನಿಲ್ಲಿಸಲು ಕೋರಿದ್ದ. ವಾಹನದಿಂದ ಇಳಿಯುತ್ತಿದ್ದಂತೆ ಜೊತೆಯಲ್ಲಿದ್ದ ಸಿಬ್ಬಂದಿ ಮೇಲೆ ದಾಳಿ ನಡೆಸಿ, ಓಡಿಹೋಗಲು ಯತ್ನಿಸಿದ್ದಾನೆ.

ಸಿವಸಾಗರ್ ಜಂಟಿ ಪೊಲೀಸ್ ವರಿಷ್ಠಾಧಿಕಾರಿ ಪಪೋರಿ ಚೇತಿಯಾ ನೀಡಿರುವ ಮಾಹಿತಿ ಪ್ರಕಾರ, “ಘನಕಾಂತ ಅಧಿಕಾರಿಯೊಬ್ಬರ ಸರ್ವಿಸ್ ರಿವಾಲ್ವರ್ ಕಸಿದುಕೊಳ್ಳಲು ಯತ್ನಿಸಿದ. ಈ ತಳ್ಳಾಟದ ವೇಳೆ ರಿವಾಲ್ವರ್‌ನಿಂದ ಮೂರು ಸುತ್ತು ಗುಂಡುಗಳು ಹಾರಿದ್ದು, ನಮ್ಮ ಅಧಿಕಾರಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಆರೋಪಿ ತಪ್ಪಿಸಿಕೊಂಡು ಓಡುವುದನ್ನು ತಡೆಯಲು ಮತ್ತು ಆತನ ಕ್ರಿಮಿನಲ್ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಬ್ಬ ಸಿಬ್ಬಂದಿ ತನ್ನ ಆಯುಧದಿಂದ ಗುಂಡು ಹಾರಿಸಬೇಕಾಯಿತು” ಎಂದಿದ್ದಾರೆ.

ಅಕ್ಟೋಬರ್ 26ರಂದು ನಡೆದ ಹೋಟೆಲ್ ಶೂಟೌಟ್‌ನಲ್ಲಿ ಭೂದೇವ್ ಭರಾಲಿ (65), ಹೆಲೆನಾ ಭರಾಲಿ (58), ದೇವರ್ಷಿ ಕಶ್ಯಪ್ (39), ರಿನಿಕಾ ಕಶ್ಯಪ್ (30) ಮತ್ತು ನಾರಾಯಣ್ ದಾಸ್ (48) ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬರು ತೀವ್ರ ಗಾಯಗೊಂಡಿದ್ದರು.

ಘಟನೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಹೋಟೆಲ್‌ನ ಗುತ್ತಿಗೆ, ನವೀಕರಣ ವೆಚ್ಚ ಹಾಗೂ ಹಣಕಾಸಿನ ವಹಿವಾಟಿನಲ್ಲಿದ್ದ ವೈಮನಸ್ಸೇ ಈ ಭೀಕರ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಿದೆ. ಗೋಗೋಯ್ 2025ರ ಸೆಪ್ಟೆಂಬರ್‌ನಲ್ಲಿ ತಿಂಗಳಿಗೆ ₹1.8 ಲಕ್ಷ ಬಾಡಿಗೆಗೆ ಈ ಹೋಟೆಲ್ ಅನ್ನು 5 ವರ್ಷಗಳ ಗುತ್ತಿಗೆಗೆ ಪಡೆದುಕೊಂಡಿದ್ದ. ಇದಲ್ಲದೆ, ಕೃತ್ಯಕ್ಕೆ ಬಳಸಲಾದ 32-ಬೋರ್ ಪಿಸ್ತೂಲ್ ಅನ್ನು ಆತ 2024ರ ಅಕ್ಟೋಬರ್‌ನಲ್ಲಿ ನಾಗಾಲ್ಯಾಂಡ್‌ನ ಡಿಮಾಪುರ್‌ನಿಂದ ಸುಮಾರು ₹3 ಲಕ್ಷ ನೀಡಿ 40 ರೌಂಡ್ ಗುಂಡುಗಳ ಸಮೇತ ಖರೀದಿಸಿದ್ದ ಎಂಬ ಮಾಹಿತಿಯನ್ನೂ ಎಸ್‌ಐಟಿ ಕಲೆಹಾಕಿದೆ.

ವಿಶೇಷವೆಂದರೆ, ಪೊಲೀಸರ ವಶದಲ್ಲಿರುವಾಗ ಗೋಗೋಯ್‌ನ ಜೀವಕ್ಕೆ ಅಪಾಯವಿದೆ ಎಂದು ಆತನ ವಕೀಲರು ಇತ್ತೀಚೆಗಷ್ಟೇ ನ್ಯಾಯಾಲಯದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ಆರೋಪಿಗೆ ನಿಯಮಿತ ವೈದ್ಯಕೀಯ ತಪಾಸಣೆ ಒದಗಿಸಬೇಕು ಹಾಗೂ ಕಸ್ಟಡಿ ಕಿರುಕುಳವಾಗದಂತೆ ನೋಡಿಕೊಳ್ಳಬೇಕೆಂದು ಗುವಾಹಟಿ  ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು.

ಮೇ 2021ರಲ್ಲಿ ಹಿಮಂತ ಬಿಸ್ವ ಶರ್ಮಾ ಆಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಎನ್‌ಕೌಂಟರ್ ಘಟನೆಗಳು ಹೆಚ್ಚುತ್ತಿವೆ. ಜನವರಿ 2024ರ ವೇಳೆಗೆ ರಾಜ್ಯದಲ್ಲಿ 210 ಪೊಲೀಸ್ ಎನ್‌ಕೌಂಟರ್‌ಗಳು ನಡೆದಿದ್ದು, 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೇ 2021 ಮತ್ತು ಜನವರಿ 2024ರ ನಡುವೆ ಪೊಲೀಸ್ ಫೈರಿಂಗ್ ಘಟನೆಗಳು 20 ಪಟ್ಟು ಹೆಚ್ಚಾಗಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಆದರೆ, ಆರೋಪಿಗಳು ಕಸ್ಟಡಿಯಿಂದ ಓಡಿ ಹೋಗಲು ಯತ್ನಿಸಿದಾಗ ಅಥವಾ ಪೊಲೀಸರ ಆಯುಧಗಳನ್ನು ಕಸಿಯಲು ಯತ್ನಿಸಿದಾಗ ಸ್ವ-ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂಬುದು ಪೊಲೀಸರ ಸಮರ್ಥನೆಯಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ಗಾಗಿ ಪ್ರತಿಭಟನೆ; 150ಕ್ಕೂ ಹೆಚ್ಚು ಜನರ ಬಂಧನ! 

ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆರವುಗೊಳಿಸುವ ಸರ್ಕಾರದ ನಿರ್ಧಾರವನ್ನು...

ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ: ಛಲವಾದಿ ನಾರಾಯಣಸ್ವಾಮಿ ಪ್ರಚೋದನಕಾರಿ ಹೇಳಿಕೆ

ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಅವರನ್ನು ಬಿಜೆಪಿ ಕಾರ್ಯಕರ್ತರು ತುಂಡು ತುಂಡಾಗಿ...

ಬೀದರ್‌ | ಕಬ್ಬಿನ ದರ ನಿಗದಿ, ಬರಪೀಡಿತ ರೈತರಿಗೆ ₹50 ಸಾವಿರ ಪರಿಹಾರಕ್ಕೆ ʼಆಪ್‌ʼ ಆಗ್ರಹ

ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು, ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ...

ಬೀದರ್‌ | ಅಂಬೇಡ್ಕರ್ ಭವನಕ್ಕೆ ನಿವೇಶನ ಮಂಜೂರು ಮಾಡಿ

ಬೀದರ್ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ...