ನಾವು ದುಡಿದದ್ದೆಲ್ಲವನ್ನೂ ತಾಯಿ ಗಂಗೆ ಕಸಿದೊಯ್ಯುತ್ತಾಳೆ- ಬಿಹಾರದ ನೆರೆಪೀಡಿತರ ಅಳಲು

Date:

​ಇತ್ತೀಚಿನ ಭೀಕರ ಪ್ರವಾಹದಿಂದಾಗಿ ಮನೆಮಠ ಕಳೆದುಕೊಂಡಿರುವ ನೂರಾರು ಜನರಿಗೆ ಬಿಹಾರದ ಭಾಗಲ್ಪುರ ಜಿಲ್ಲೆಯ ಎರಡು ಪರಿಹಾರ ಕೇಂದ್ರಗಳೇ ಸದ್ಯ ತಾತ್ಕಾಲಿಕ ಆಶ್ರಯ ತಾಣಗಳಾಗಿವೆ. ದಿನೇ ದಿನೇ ಏರುತ್ತಿರುವ ನೀರಿನ ಮಟ್ಟದಿಂದಾಗಿ ಮುಳುಗಡೆಯಾಗಿರುವ ಮನೆಗಳು ತಗ್ಗಿದ ಮೇಲಾದರೂ ವಾಸಕ್ಕೆ ಯೋಗ್ಯವಾಗಿರುತ್ತವೆಯೇ ಎಂಬ ಆತಂಕ ಸಂತ್ರಸ್ತರನ್ನು ಕಾಡುತ್ತಿದೆ.

- Advertisement -

​ತಿಲ್ಕಾ ಮಾಂಝಿ ಭಾಗಲ್ಪುರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ‘ತಿಲ್ಹಾ ಕೋಠಿ’ಯ ಕಪ್ಪು ಪ್ಲಾಸ್ಟಿಕ್ ಡೇರೆಯ ಹೊರಗೆ ಮಲಗಿರುವ 25 ವರ್ಷದ ರಾಜ್‌ ಕಿಶೋರ್, ಹೈದರಾಬಾದ್‌ನಿಂದ ಧಾವಿಸಿ ಬಂದಿದ್ದಾರೆ. ಒಂದು ತಿಂಗಳ ಹಿಂದೆ ಮನೆಗೆ ನೀರು ನುಗ್ಗಿದಾಗ ಉಳಿಸಿಕೊಂಡ ಏಕೈಕ ವಸ್ತು ಈ ಮಂಚ. ‘ದಾಖಲೆಗಳು, ನಗದು, ಒಡವೆಗಳು ಹಾಗೂ ಡ್ರಮ್‌ಗಳಲ್ಲಿ ತುಂಬಿಟ್ಟಿದ್ದ ಧಾನ್ಯಗಳು ಸೇರಿದಂತೆ ಎಲ್ಲವೂ ಜಲಸಮಾಧಿಯಾಗಿವೆ’ ಎಂದು ಅವರು ಕಣ್ಣೀರು ಹಾಕುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಮುಂದುವರಿದ ಬಿಸಿಲ ಬೇಗೆ: ಮಳೆ ನಿರೀಕ್ಷೆಯಲ್ಲಿ...

ಮಳೆಗಾಲ ಮುಗಿಯುವ ಹಂತದಲ್ಲಿದ್ದರೂ ಬಾಗಲಕೋಟೆ ಜಿಲ್ಲೆಯಲ್ಲಿ ವಾತಾವರಣ ಮಾತ್ರ ಬೇಸಿಗೆಯ ಸ್ವರೂಪ ಪಡೆದುಕೊಂಡಿದೆ. ಮಳೆಗಾಗಿ ಎದುರು ನೋಡುತ್ತಿರುವ ರೈತರಿಗೆ ಬಿಸಿಲು ಮತ್ತಷ್ಟು ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ...

‘SIR ಪ್ರಕ್ರಿಯೆ ಕುರಿತು ನಮಗೆ ಏನನ್ನೂ ತಿಳಿಸದೇ ತೀರ್ಮಾನ’:...

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ಗಂಭೀರ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision - SIR /...

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

​ಕಿಶೋರ್ ಅವರಂತೆ, ಊರಿನ ಹೊರಗೆ ದುಡಿಯುತ್ತಿದ್ದ ನೂರಾರು ವಲಸೆ ಕಾರ್ಮಿಕರು ಕೆಲಸ ಬಿಟ್ಟು ಓಡಿಬಂದಿದ್ದಾರೆ. ಲುಧಿಯಾನದಿಂದ ರೈಲಿನಲ್ಲಿ ನಾಲ್ಕು ದಿನ ಪ್ರಯಾಣಿಸಿ ಬಂದಿರುವ ಸುಮನ್ ಕುಮಾರ್ ಹಾಗೂ ಹೈದರಾಬಾದ್‌ನಿಂದ ಬಂದಿರುವ ಕರಣ್ ಕುಮಾರ್ ಅವರದ್ದೂ ಇದೇ ಕಥೆ. ಸರ್ವಸ್ವವನ್ನೂ ಕಳೆದುಕೊಂಡಿರುವ ಹತಾಶೆಯಿಂದಾಗಿ ಸಣ್ಣಪುಟ್ಟ ವಿಚಾರಗಳಿಗೂ ಸಂತ್ರಸ್ತರ ನಡುವೆ ಜಗಳಗಳು ನಡೆಯುತ್ತಿರುವುದು ಶಿಬಿರಗಳಲ್ಲಿ ಸಾಮಾನ್ಯವಾಗಿದೆ.

​ಕ್ಯಾಂಪಸ್‌ನ ರವೀಂದ್ರ ಭವನದಲ್ಲಿ ಸುಮಾರು 250 ಕುಟುಂಬಗಳಿಗೆ ದಿನಕ್ಕೆರಡು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಟಿ.ಎನ್.ಬಿ ಕಾಲೇಜು ಮೈದಾನದ ಪರಿಹಾರ ಕೇಂದ್ರದಲ್ಲಿ 650ಕ್ಕೂ ಹೆಚ್ಚು ಜನರು 400ಕ್ಕೂ ಅಧಿಕ ಜಾನುವಾರುಗಳೊಂದಿಗೆ ಆಶ್ರಯ ಪಡೆದಿದ್ದಾರೆ. ಪ್ರವಾಹದಲ್ಲಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸದ್ಯ ಈ ಜಾನುವಾರುಗಳೇ ಮುಂದಿನ ಬದುಕಿನ ಆಶಾಕಿರಣವಾಗಿವೆ.

flood relief camps

​ಹಿರಿಯರು ತಮ್ಮ ಭವಿಷ್ಯದ ಚಿಂತೆಯಲ್ಲಿದ್ದರೆ, ಜಿಲ್ಲಾಡಳಿತವು ಶಿಬಿರದಲ್ಲಿರುವ ಮಕ್ಕಳಿಗಾಗಿ ಕಲೆ ಹಾಗೂ ಸಂಸ್ಕೃತಿಯ ಮೂಲಕ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತಿದೆ. ಭಾಗಲ್ಪುರ ವಿಭಾಗದ ಸಾಂಪ್ರದಾಯಿಕ ಕಲೆಯಾದ ‘ಮಂಜೂಷಾ’ವನ್ನು ಮಕ್ಕಳಿಗೆ ಕಲಿಸಲಾಗುತ್ತಿದ್ದು, ಕಥೆ ಹೇಳುವ ಹಾಗೂ ಚಲನಚಿತ್ರ ಪ್ರದರ್ಶನದ ಮೂಲಕ ಕಲಾ ಚಿಕಿತ್ಸೆ (ಆರ್ಟ್ ಥೆರಪಿ) ನೀಡಲಾಗುತ್ತಿದೆ ಎಂದು ಕಲೆ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಅಂಕಿತ್ ರಂಜನ್ ತಿಳಿಸಿದ್ದಾರೆ.

​ನೀರು ಇಳಿದ ಬಳಿಕ ಮನೆಗಳನ್ನು ಸ್ವಚ್ಛಗೊಳಿಸಿ, ಮಣ್ಣು ತೆಗೆದು ವಾಸಯೋಗ್ಯವನ್ನಾಗಿಸಲು ನವೆಂಬರ್‌ನಲ್ಲಿ ಬರುವ ‘ಛತ್’ ಹಬ್ಬದವರೆಗೂ ಕಾಯಬೇಕಾಗಬಹುದು ಎಂಬುದು ಟಿ.ಎನ್.ಬಿ ಕ್ಯಾಂಪಸ್‌ನಲ್ಲಿರುವ ಉಷಾ ದೇವಿ ಅವರ ಅಳಲು. ಪರಿಹಾರ ಕೇಂದ್ರಗಳು ಮುಚ್ಚಿದ ಬಳಿಕ ನಮ್ಮ ಬದುಕು ಮತ್ತು ಆದಾಯದ ಮೂಲವೇನು ಎಂಬ ಪ್ರಶ್ನೆ ಮಹಿಳೆಯರನ್ನು ತೀವ್ರವಾಗಿ ಕಾಡುತ್ತಿದೆ.

​‘ನಾವು ಪ್ರತಿವರ್ಷ ದುಡಿಯುವುದನ್ನೆಲ್ಲಾ ಗಂಗಾ ನದಿ ಕೊಚ್ಚಿಕೊಂಡು ಹೋಗುತ್ತದೆ. ಕೃಷಿ ಹಾಗೂ ಮನೆ ಬಳಕೆಗಾಗಿ ಸ್ವಸಹಾಯ ಸಂಘಗಳಿಂದ ಪಡೆದಿದ್ದ 80 ಸಾವಿರ ರೂಪಾಯಿ ಸಾಲ ಈಗ ನನ್ನ ಮುಂದಿರುವ ದೊಡ್ಡ ಆತಂಕ. ಸರ್ಕಾರ ನಮ್ಮನ್ನು ನದಿ ನೀರು ಬಾರದ ಎತ್ತರದ ಪ್ರದೇಶಗಳಿಗೆ ಶಾಶ್ವತವಾಗಿ ಸ್ಥಳಾಂತರಿಸಬೇಕು’ ಎಂಬುದು ಸಂತ್ರಸ್ತ ಸೂರ್ಯ ನಾರಾಯಣ ಮಂಡಲ್ ಅವರ ಆಗ್ರಹವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನುಕಂಪದ ಆಧಾರದ ಉದ್ಯೋಗ ಪಡೆದ ಸೊಸೆ ಅತ್ತೆ-ಮಾವರನ್ನು ಕೈಬಿಡುವಂತಿಲ್ಲ: ರಾಜಸ್ಥಾನ ಹೈಕೋರ್ಟ್

ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ...

ಬೀದರ್‌ | ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 48,678 ಪ್ರಕರಣಗಳ ಇತ್ಯರ್ಥ, ಒಂದಾದ ಐದು ಜೋಡಿ

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.19ರಂದು ನಡೆದ...

ಅಕ್ಟೋಬರ್ 16 ರಾಜ್ಯಸಭಾ ಚುನಾವಣೆ: ಎನ್‌ಡಿಎ ಬಲ 155ಕ್ಕೆ ಏರುವ ಸಾಧ್ಯತೆ

ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ 11 ನಿಯಮಿತ ಸ್ಥಾನಗಳು ಮತ್ತು ಪಶ್ಚಿಮ...

ಕಮಲನಗರ ತಾಲೂಕು ʼಬರʼ ಘೋಷಣೆ : ಸ್ವಾಗತಾರ್ಹ

ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಕಮಲನಗರ...