ಪಂಜಾಬ್‌ನ 25 ವರ್ಷದ ನರ್ಸ್ ಒಬ್ಬರನ್ನು ಟ್ರಕ್ ಚಾಲಕನೋರ್ವ ಅಪಹರಣ ಮಾಡಿ ಹಲವು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಪದೇ ಪದೇ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಆರೋಪಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಮತಾಂತರವಾಗುವಂತೆ ಒತ್ತಡ ಹೇರಿದ್ದಾನೆ. ನಿರಾಕರಿಸಿದಾಗ ಕೊಲೆ ಮಾಡುವುದಾಗಿ, ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಅಪರಾಧಿ ರಾಮ್ ರಹೀಮ್‌ಗೆ 50 ದಿನ ಪೆರೋಲ್
ಮಹಿಳೆ ಶನಿವಾರ ರಾತ್ರಿ ಹೇಗೋ ತಪ್ಪಿಸಿಕೊಂಡು ಫಿರೋಜ್‌ಪುರ್ ಝಿರ್ಕಾ ನಗರ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ ಪೊಲೀಸ್ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸ್‌ಎಚ್‌ಒ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಇಬ್ಬರು ಒಂದು ವರ್ಷದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಗಿದ್ದಾಗಿ ಹೇಳಲಾಗಿದೆ. ಬಳಿಕ ಇಬ್ಬರು ಭೇಟಿಯಾಗಿದ್ದು ಈ ವೇಳೆ ಅತ್ಯಾಚಾರ ನಡೆಸಿದ್ದಾನೆ, ವಿಡಿಯೋಗಳನ್ನು ಮಾಡಿ ಬೆದರಿಸಲು ಆರಂಭಿಸಿದ್ದಾನೆ. ಬ್ಲ್ಯಾಕ್‌ಮೇಲ್ ಮಾಡಿ ಈವರೆಗೆ 1.5 ಲಕ್ಷ ರೂಪಾಯಿ ದೋಚಿದ್ದಾನೆ ಎಂದು ಯುವತಿ ದೂರಿದ್ದಾರೆ.




