ಉಡುಪಿ | ರಂಗಭೂಮಿ ಯಾವತ್ತಿಗೂ ಪ್ರತಿರೋಧದ ಪ್ರಭಾವಶಾಲಿ ಮಾಧ್ಯಮ: ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ

Date:

ಸಾಮಾಜಿಕ ವ್ಯವಸ್ಥೆಯ ಅಸಮಾನತೆಯ ವಿರುದ್ಧದ ಬಂಡಾಯದ ಧ್ವನಿಯಾಗಿ ನಾಟಕ ರಂಗ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಆಳುವ ಸರ್ಕಾರದಾರಿತಪ್ಪಿದಾಗ ಪ್ರತಿಭಟನೆಯ ಸ್ವರೂಪವಾಗಿ ರಂಗಭೂಮಿ ಬೀದಿಗೆ ಇಳಿದಿದೆ. ಸರಕಾರದ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಬೀದಿ ನಾಟಕಗಳು ಇಂದು ಸರಕಾರದ ಸವಲತ್ತು ಪಡೆದು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರಕಾರದ ಜಾಹಿರಾತಿಗೆ ಬಳಕೆಯಾಗುತ್ತಿರುವುದು ವಿಷಾದನೀಯ ಎಂದು ಸುರತ್ಕಲ್ನ ಗೋವಿಂದ ದಾಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ ಹೇಳಿದ್ದಾರೆ.

- Advertisement -

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಆಯೋಜನೆಯಲ್ಲಿ ಸಮುದಾಯ ಕುಂದಾಪುರದ ಸಹಭಾಗಿತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಕುಂದಾಪುರದ ಹಂಚು ಕಾರ್ಮಿಕರ ಸಭಾಭವನದಲ್ಲಿ ನಡೆದ ವ “ಚಾರಗೋಷ್ಠಿ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ‘ಕನ್ನಡ ರಂಗಭೂಮಿ ವರ್ತಮಾನದ ತಲ್ಲಣಗಳು” ಎಂಬ ವಿಷಯದಲ್ಲಿ ಮಾತನಾಡುತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಕನ್ನಡ ರಂಗಭೂಮಿಯ ಮೇಲೆ ನೀನಾಸಂ ಮತ್ತು ಸಮುದಾಯದ ಜಾಥಾಗಳು ಬೀದಿನಾಟಕಗಳು ಮತ್ತು ಜಾಗತೀಕರಣದ ಪ್ರಭಾವ ಬಹಳ ದಟ್ಟವಾಗಿದೆ. ಜಾಗತೀಕರಣ ನಮ್ಮ ಸ್ವಾಭಿಮಾನದ ಮೇಲೆ ಸವಾರಿ ಮಾಡಿದರೆ ಸಮುದಾಯದ ಜಾಥಾದಿಂದ ಪ್ರಭಾವಿತವಾದ ಕಾರ್ಮಿಕ ರಂಗಚಳವಳಿ ಬಹುತೇಕ ನಿಂತು ಹೋಗಿದೆ. ವರ್ತಮಾನದ ತಲ್ಲಣಗಳಿಗೆ ರಂಗಚಳವಳಿ ಮೂಲಕ ಮುಖಾಮುಖಿಯಾಗುವ ಕೆಲಸವನ್ನು ಕಾರ್ಮಿಕ ಸಂಘಟನೆಗಳು ಮತ್ತೆ ಕೈಗೆತ್ತಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು ಮುಂದುವರೆದು ಮಾತನಾಡಿದ ಅವರು ಮಾಧವ ತಿಂಗಳಾಯರು ಜನಮರ್ಲ್’ ಎಂಬ ತುಳುವಿನ ಮೊದಲ ಸಾಮಾಜಿಕ ನಾಟಕ ಬರೆದು ಆ ಕಾಲದಲ್ಲಿದ್ದ ಸಾಮಾಜಿಕ ಪಿಡುಗುಗಳ ವಿರುದ್ಧ ಮತ್ತು ‘ಜಾಗೃತಿ’ ನಾಟಕದ ಮೂಲಕ ಕಾರ್ಮಿಕರ ಶೋಷಣೆಯ ವಿರುದ್ಧ ಧ್ವನಿಯೆತ್ತಿದ್ದರು. ನಿರಂಜನರು ‘ನಾವೂ ಮನುಷ್ಯರು’ ನಾಟಕದ ಮೂಲಕ ಜನತಾ ರಂಗಚಳುವಳಿಗೆ ಧುಮುಕಿದ್ದರು ಹೀಗ ಕನ್ನಡ ರಂಗಭೂಮಿ ವರ್ತಮಾನದ ತಲ್ಲಣಗಳಿಗೆ ಪ್ರತಿಭೂಮಿಯಾಗಿ ಕೆಲಸಮಾಡಬೇಕಿದೆ ಎಂದು ಅವರು ಹೇಳಿದರು.

1010233788

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಭಿಲಾಷಾ ಎಸ್ ಅವರು ಮಾತನಾಡಿ ರಂಗಭೂಮಿ ಎನ್ನುವುದು ಆನಂದ ಮತ್ತು ಅರಿವನ್ನು ವಿಸ್ತರಿಸುತ್ತಾ ನಮ್ಮನ್ನು ಔನತ್ಯಕ್ಕೇರಿಸುತ್ತದೆ ಕಲಾತ್ಮಕತೆ ನಾಟಕದ ಬಹಳ ಮುಖ್ಯ ಆಯಾಮ, ಕಲಾತ್ಮಕತೆ ಇಲ್ಲದ ನಾಟಕ ಪ್ರದರ್ಶನದಲ್ಲಿ ಸೋಲುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನೋರ್ವ ಮುಖ್ಯ ಅತಿಥಿ ಸತ್ಯನಾ ಕೊಡೇರಿಯವರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಭಾಗದಲ್ಲಿ ರಂಗಭೂಮಿ ಇನ್ನಷ್ಟು ವಿಸ್ತಾರಗೊಳ್ಳಬೇಕಾದ ಅಗತ್ಯವಿದೆ, ಆ ನೆಲೆಯಲ್ಲಿ ಮಕ್ಕಳ ರಂಗಭೂಮಿಯನ್ನು ಕಟ್ಟುವ ಕೆಲಸವಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಟಮಾತನಾಡಿ ಕಾರ್ಪೊರೇಟ್ ರಂಗಸಂಸ್ಕೃತಿಯ ಕತ್ತಿಯಲುಗಿನ ಮೇಲೆ ಕನ್ನಡ ರಂಗಭೂಮಿ ಇರುವುದು ಇವತ್ತು ನಿಚ್ಚಳವಾಗಿ ಕಾಣುತ್ತಿದೆ. ನಾವು ಪಡೆಯುವ ದುಡ್ಡಿನ ಮೂಲ ಯಾವ ಬಗೆಯದು ಎಂಬುದು ತಿಳಿಯದೆ ಹವ್ಯಾಸಿ ರಂಗತಂಡಗಳು ಪರದನಕ್ಕೆ ಕೈ ಚಾಚುತ್ತಿವೆ. ಹೊಸನಾಟಕ ರಚನೆ, ಹೊಸ ರಂಗಮಂದಿರಕ್ಕೊಂದು ನೆಲೆ ಸೂರು, ಹಸರಂಗಮಂದಿರದ ನಿರ್ಮಾಣಮುಂತಾದ ಹವ್ಯಾಸಿಗಳ ಈಡೇರದ ದಶಕಗಳ ಕನಸುಗಳೇ ಬಂಡವಾಳಶಾಹಿಗೆ ಆಹಾರವಾಗುತ್ತಿದೆ. ಇಪ್ಪತ್ತು ಮೂವತ್ತು ವರುಷಗಳನ್ನು ಯಾವುದೇ ರಾಜಾಶ್ರಯವಿಲ್ಲದೆ ತನ್ನ ಸುತ್ತಲಿನ ಜನಸಮುದಾಯದಲ್ಲಿನ ಚಿಲ್ಲರೆ ದೇಣಿಗೆಗಳನ್ನೇ ರಂಗಾಶ್ರಯವಾಗಿರಿಸಿ ಗುರುತರ ಹೆಜ್ಜೆಗಳ ಮೂಲಕ ಗುರುತಿಸಿಕೊಂಡ ರಂಗ ತಂಡಗಳೇ ಬೊಗಸೆಯೊಡ್ಡಿ ಕೆಂಪು ಹಾಸು ಹಾಸಿ ಬಂಡವಾಳಶಾಹಿಯನ್ನು ಬರಮಾಡಿಕೊಳ್ಳುತ್ತಿವೆ. ಬಹಳ ಅಪಾಯಕಾರಿಯಾಗಿ ಈಗ ಗೋಚರಿಸದ ಈ ನಡೆ, ಒಂದು ಹವ್ಯಾಸಿ ರಂಗತಂಡದ ಅಸ್ಮಿತೆಯ ಮೇಲಾಗುವ ಆಕ್ರಮಣ ಮತ್ತು ಸ್ವಾಯತ್ತತೆಯ ಶಿಥಿಲೀಕರಣದ ಪ್ರಯತ್ನ ಎಂದು ಅವರು ಅಭಿಪ್ರಾಯಪಟ್ಟರು.

ಸಮುದಾಯ ಕುಂದಾಪುರದ ಚಿನ್ನಾಗಂಗೇರ ಅವರು ವಿಶ್ವ ರಂಗಭೂಮಿ ದಿನದ ಸಂದೇಶ ವಾಚನ ಮಾಡಿದರು. ಸಮುದಾಯದ ಅಧ್ಯಕ್ಷ ಡಾ. ಸದಾನಂದ ಬೈಂದೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ರವಿ ವಿ ಎಂ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಶೆಟ್ಟಿ ವಂದಿಸಿದರು. ಸಭಾಕಾರ್ಯಕ್ರಮದ ನಂತರದಲ್ಲಿ ಸದಾನಂದ ಬೈಂದೂರು ನಿರ್ದೇಶನದ ಇದೊಂದು ಯುದ್ಧ ಮುಗಿದ ಮೇಲೆ’ ಎಂಬ ಯುದ್ಧ ವಿರೋಧಿ ನಾಟಕ ಪ್ರಸ್ತುತಿಗೊಂಡಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...

ಉಡುಪಿ | ಜನರ ಬಳಿಗೇ ಅಧಿಕಾರಿಗಳು ತೆರಳಿ ಸಮಸ್ಯೆ ಪರಿಹರಿಸಬೇಕು: ಗುರುರಾಜ್ ಶೆಟ್ಟಿ ಗಂಟಿಹೊಳೆ

ಪ್ರಜಾಸೇವಾ ಆಂದೋಲನ ಸಭೆಯು ಜನಪರ ಕಾಳಜಿಯ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ...