ಖರ್ಗೆ ‘ಈದ್’ ಹೇಳಿಕೆ; ‘ವೋಟ್ ಬ್ಯಾಂಕ್ ರಾಜಕಾರಣ’ ಎಂದ ಬಿಜೆಪಿ!

Date:

ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೀಪಾವಳಿ ಹಬ್ಬದ ಶುಭಾಶಯ ಕೋರುವಾಗ ‘ದೀಪಾವಳಿಯು ಸಂತೋಷದ ಈದ್‌ ’ ಎಂದು ಬಣ್ಣಿಸಿರುವುದು ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಈ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಮತಬ್ಯಾಂಕ್‌ ಹಾಗೂ ತುಷ್ಟೀಕರಣ ರಾಜಕಾರಣದ ಆರೋಪ ಹೊರಿಸಿದೆ.

- Advertisement -

ಖರ್ಗೆ ನೀಡಿದ್ದ ಶುಭಾಶಯ ಸಂದೇಶದಲ್ಲೇನಿತ್ತು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ...

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ? “ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ...

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು...

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ ಆಧಾರಿತ ಅಧ್ಯಯನ ಬರಹ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ...

ನವೆಂಬರ್ 7 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದರು. “ನಾನು ಪ್ರತಿಯೊಬ್ಬರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ. ಅನೇಕ ಜನರು ಇದನ್ನು ಸಂತೋಷದ ಈದ್ ಎಂದು ಆಚರಿಸುತ್ತಾರೆ,” ಎಂದು ಹೇಳಿದ್ದರು.

ಅಲ್ಲದೆ, “ಮನಸ್ತಾಪಗಳು ಅಥವಾ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು, ದೇಶವನ್ನು ರಕ್ಷಿಸಲು ಮತ್ತು ರಾಷ್ಟ್ರದ ಐಕ್ಯತೆಯನ್ನು ಬಲಪಡಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು” ಎಂದು ಅವರು ಮನವಿ ಮಾಡಿದ್ದರು.

ಖರ್ಗೆ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ಕಾಂಗ್ರೆಸ್ ಸನಾತನ ಧರ್ಮ ಮತ್ತು ಹಿಂದು ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಖರ್ಗೆ ಅವರ ಪದ ಬಳಕೆ ನಿರ್ದಿಷ್ಟ ಮತಬ್ಯಾಂಕ್ ಓಲೈಸುವ ಉದ್ದೇಶದಿಂದ ಕೂಡಿದೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಭಂಡಾರಿ, ಬಟ್ಲಾ ಹೌಸ್ ಎನ್‌ಕೌಂಟರ್ ವಿಚಾರದಲ್ಲಿ ಸೋನಿಯಾ ಗಾಂಧಿ ಅವರ ನಿಲುವು, ಬಾಬರಿ ಮಸೀದಿ ವಿವಾದ ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡದಿರುವುದನ್ನು ಪ್ರಸ್ತಾಪಿಸಿದ್ದಾರೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ‘ಡೆಂಗ್ಯೂ ಮತ್ತು ಮಲೇರಿಯಾ’ಗೆ ಹೋಲಿಸಿದಾಗಲೂ ಕಾಂಗ್ರೆಸ್ ಮೌನವಾಗಿತ್ತು ಎಂದು ಆರೋಪ ಮಾಡಿದ್ದಾರೆ. 

ಕಾಂಗ್ರೆಸ್ ನಾಯಕರು ಖರ್ಗೆ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದು, ಈದ್ ಎಂಬ ಪದ ಕೇವಲ ಒಂದು ಧರ್ಮಕ್ಕೆ ಸೀಮಿತವಾದದ್ದಲ್ಲ, ಬದಲಿಗೆ ಭಾಷಿಕವಾಗಿ ಅದು ‘ಸಂತೋಷ’, ‘ಉತ್ಸವ’ ಹಾಗೂ ‘ಸಂಭ್ರಮ’ ಎಂಬ ಅರ್ಥವನ್ನು ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಆರೋಪಗಳನ್ನು ತಿರಸ್ಕರಿಸಿದ ಕಾಂಗ್ರೆಸ್, ಬಿಜೆಪಿ ನಾಯಕರು ಪ್ರತಿಯೊಂದು ಸಾಂಸ್ಕೃತಿಕ ಅಥವಾ ಸೌಹಾರ್ದದ ಹೇಳಿಕೆಯಲ್ಲೂ ಧಾರ್ಮಿಕ ಧ್ರುವೀಕರಣ ಮತ್ತು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಾರೆ ಎಂದು ಪ್ರತ್ಯಾರೋಪ ಮಾಡಿದೆ.

ಬಿಜೆಪಿಯು ಉತ್ತರ ಪ್ರದೇಶ ಚುನಾವಣೆ ಮತ್ತು ದೇಶದ ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಗದಲ ಸೇತುವೆ ನಿರ್ಮಾಣಕ್ಕೆ ₹21 ಕೋಟಿ ಅನುದಾನಕ್ಕೆ ಶಾಸಕ ಬೆಲ್ದಾಳೆ ಆಗ್ರಹ

ಬೀದರ್: ಬೀದರ್-ಚಿಂಚೋಳಿ ಪ್ರಮುಖ ರಸ್ತೆಯ ಬಗದಲ ಗ್ರಾಮದ ಸಮೀಪ ಕಾರಂಜಾ ನದಿಯ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ ಇತಿಹಾಸವನ್ನೊಮ್ಮೆ ನೋಡಿಕೊಳ್ಳಲಿ!

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ...

‘ಸುರಕ್ಷಿತ, ತಾಯ್ನಾಡಿನತ್ತ ಪಯಣ’: ಯೆಮೆನ್‌ನಲ್ಲಿ ಸಿಲುಕಿದ್ದ 19 ಭಾರತೀಯ ನಾವಿಕರ ತೆರವು

ಕಳೆದ ಎರಡು ವಾರಗಳಿಂದ ಯೆಮೆನ್ ದೇಶದ ಹೊದೈದಾ ಮತ್ತು ಸನಾ ನಗರಗಳಲ್ಲಿ...

ಕಲಬುರಗಿ | ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ: ಬಾಲಕ ಸಾವು

ಸೇಡಂ: ದೀಪಾವಳಿ ಹಬ್ಬದ ಸಂಭ್ರಮ ಕ್ಷಣಾರ್ಧದಲ್ಲೇ ದುರಂತವಾಗಿ ಮಾರ್ಪಟ್ಟಿದ್ದು, ಪಟಾಕಿ ಎಂದು...