ಛತ್ತೀಸ್‌ಗಢದಲ್ಲಿ ವಿಕೃತಿ: ಅಂಗಾಂಗ ಮಾರಾಟ ಮಾಡಲು ಸೋದರಳಿಯನ್ನೇ ಕೊಂದ ದುರುಳ

Date:

ತ್ವರಿತವಾಗಿ ಹಣ ಗಳಿಸುವ ಧಾವಂತಕ್ಕೆ ಬಿದ್ದಿದ್ದ ಯುವಕನೊಬ್ಬ, ಅಂಗಾಂಗಳನ್ನು ಮಾರಿ, ಸಂಪಾದನೆ ಮಾಡಲು ತನ್ನ ಸೋದರಳಿಯ 4 ವರ್ಷದ ಬಾಲಕನನ್ನು ಬರ್ಬಲವಾಗಿ ಕೊಲೆ ಮಾಡಿರುವ ಅಮಾನುಷ, ಆಘಾತಕಾರಿ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಜಶ್‌ಪುರ ಜಿಲ್ಲೆಯ ಸನ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಲೋಧೇನಾಪಥ್ ಮಹುವಾ ಗ್ರಾಮದಲ್ಲಿ ಘಟನೆ ನಡೆದಿದೆ. ಆರೋಪಿ ವಾಸುದೇವ್ ಅಲಿಯಾಸ್ ತಂಗ್ನು (27) ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ‘ಕುಳಿತಲ್ಲೇ ಸುಲಭವಾಗಿ ಹಣ ಗಳಿಸುವುದು ಹೇಗೆ?’ ಎಂಬ ಹಾದಿ ಹುಡುಕುತ್ತಿದ್ದ. ಈ ವೇಳೆ, ಆತ ಸಣ್ಣ ಮಕ್ಕಳ ದೇಹದ ಅಂಗಾಂಗಗಳನ್ನು ತೆಗೆದು ಆನ್‌ಲೈನ್‌ನಲ್ಲಿ ಮಾರಿ ಭಾರೀ ಹಣ ಸಂಪಾದಿಸಬಹುದು ಎಂಬ ವಿಕೃತ ದಾರಿಯನ್ನು ಕಂಡುಕೊಂಡಿದ್ದಾನೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ...

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ? “ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ...

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು...

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ ಆಧಾರಿತ ಅಧ್ಯಯನ ಬರಹ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ...

ವಲಸೆ ಕಾರ್ಮಿಕ ರಾಮ್‌ಜೀತ್ ರಾಮ್ (36) ಎಂಬವರು ತಮ್ಮ ಕುಟುಂಬದೊಂದಿಗೆ ಕೂಲಿ ಕೆಲಸಕ್ಕಾಗಿ ಒಂದು ವರ್ಷದ ಹಿಂದಷ್ಟೇ ಕುಟುಂಬ ಸಮೇತ ಆಮತ್‌ಚುವಾ ನದಿ ಅಣೆಕಟ್ಟಿನ ಬಳಿಯ ಮಹುವಾ ಗ್ರಾಮಕ್ಕೆ ವಲಸೆ ಬಂದಿದ್ದರು. ಗ್ರಾಮದಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಕುಟುಂಬ ವಾಸಿಸುತ್ತಿತ್ತು. ಆದರೆ, ನವೆಂಬರ್‌ 5ರಂದು ರಾಮ್‌ಜೀತ್ ಅವರ ಮಗು ಕಾಣೆಯಾಗಿತ್ತು. ಮಗುವಿಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲ ಹುಡುಕಾಟ ನಡೆಸಿದ ನಂತರ, ರಾಮ್‌ಜೀತ್ ಅವರು ನವೆಂಬರ್ 7 ರಂದು ಸನ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಾದ ನಂತರ ಕುಟುಂಬಸ್ಥರು ಮತ್ತು ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ಮುಂದುವರಿಸಿದ್ದರು.ನವೆಂಬರ್ 8ರ ಶನಿವಾರ, ಮೆಕ್ಕೆಜೋಳದ ಹೊಲದ ಬಳಿಯ ನೀರು ತುಂಬಿದ್ದ ಹಳ್ಳದಲ್ಲಿ ಕಂಬಳಿಯಿಂದ ಸುತ್ತಿ, ಚೀಲದಲ್ಲಿ ತುಂಬಿಸಿ ಅರ್ಧ ಮಣ್ಣಿನಿಂದ ಮುಚ್ಚಲಾಗಿದ್ದ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.

ತಕ್ಷಣವೇ ತನಿಖೆ ಚುರುಕುಗೊಳಿಸಿದ ಜಶ್‌ಪುರ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (SSP) ಲಾಲ್ ಉಮೇದ್ ಸಿಂಗ್ ನೇತೃತ್ವದ ಪೊಲೀಸ್ ತಂಡವು, ಮಗುವಿನ ತಂದೆಯ ಸೋದರಸಂಬಂಧಿಯಾಗಿದ್ದ (ಅತ್ತೆಯ ಮಗ) ವಾಸುದೇವ್ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ, ಆರೋಪಿ ವಾಸುದೇವ್ ತಾನು ಎಸಗಿದ ಅಮಾನುಷ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ತಾನು ಮಾಡುತ್ತಿದ್ದ ದಿನಗೂಲಿ ಕೆಲಸದಿಂದ ಬರುವ ಆದಾಯ ತನಗೆ ತೃಪ್ತಿ ನೀಡುತ್ತಿರಲಿಲ್ಲ. ಶೀಘ್ರವಾಗಿ ಹೆಚ್ಚು ಹಣ ಗಳಿಸುವ ಆಸೆ ತನಗಿತ್ತು ಎಂದು ಹೇಳಿಕೊಂಡಿದ್ದಾನೆ. ಈ ಕಾರಣಕ್ಕಾಗಿ ತಾನು ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಹಣ ಗಳಿಸುವ ದಾರಿಗಳನ್ನು ಹುಡುಕುತ್ತಿದ್ದೆ. ಈ ವೇಳೆ ಸಣ್ಣ ಮಕ್ಕಳ ದೇಹದ ಅಂಗಾಂಗಗಳನ್ನು ಕತ್ತರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು ಎಂಬ ದಾರಿ ತನ್ನ ತಲೆಗೆ ಹೊಳೆದಿತ್ತು ಎಂದು ಒಪ್ಪಿಕೊಂಡಿದ್ದಾನೆ.

ಈ ಲೇಖನ ಓದಿದ್ದೀರಾ?: ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?

ತನ್ನ ವಿಕೃತ ಯೋಜನೆಯನ್ನು ಜಾರಿಗೊಳಿಸಲು ನವೆಂಬರ್ 5ರಂದು ಮಗುವಿನ ಮನೆಗೆ ತೆರಳಿದ ಆರೋಪಿ, ಆಟ ಆಡಿಸುವ ನೆಪದಲ್ಲಿ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ವಿವಿಧ ಸ್ಥಳಗಳಿಗೆ ಸುತ್ತಾಡಿಸಿ, ಮಗುವಿಗೆ ಮದ್ಯವನ್ನೂ ಕುಡಿಸಿದ್ದಾನೆ. ಮಗು ಸಂಪೂರ್ಣವಾಗಿ ಅಮಲೇರಿ ಗಾಢ ನಿದ್ರೆಗೆ ಜಾರಿದ ನಂತರ, ಆರೋಪಿ ವಾಸುದೇವ್ ಚಾಕುವಿನಿಂದ ಆ ಮಗುವಿನ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದಾನೆ.

ಹತ್ಯೆಯ ನಂತರ ಮಗುವಿನ ದೇಹವನ್ನು ಕತ್ತರಿಸಿ, ಅದರ ಶ್ವಾಸಕೋಶ, ಎರಡು ಕಿಡ್ನಿಗಳು ಹಾಗೂ ಎರಡು ಕಣ್ಣುಗಳನ್ನು ಅತ್ಯಂತ ಭೀಕರವಾಗಿ ಹೊರತೆಗೆದಿದ್ದಾನೆ. ಈ ಕತ್ತರಿಸಿದ ಅಂಗಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಶೇಖರಿಸಿಟ್ಟಿದ್ದನು. ದೇಹದ ಉಳಿದ ಭಾಗವನ್ನು ಕಂಬಳಿಯಲ್ಲಿ ಸುತ್ತಿ ಚೀಲದಲ್ಲಿ ತುಂಬಿ, ಹೊಲದ ತಗ್ಗಿನಲ್ಲಿ ಹೂತು ಪರಾರಿಯಾಗಿದ್ದನು.

ಆರೋಪಿ ನೀಡಿದ ಸ್ವಯಂಪ್ರೇರಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೃತ್ಯಕ್ಕೆ ಬಳಸಿದ ಚಾಕು ಮತ್ತು ಅಂಗಾಂಗಗಳನ್ನು ವಶಕ್ಕೆ ಪಡೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಡುವ ದುಷ್ಟ ಮಾಹಿತಿಯಿಂದ ಪ್ರೇರಿತನಾಗಿ ಸ್ವಂತ ರಕ್ತಸಂಬಂಧಿಯ ಮಗುವನ್ನೇ ಅಂಗಾಂಗ ಮಾರಾಟಕ್ಕೆ ಬಲಿ ತೆಗೆದುಕೊಂಡ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಈ ಬಗ್ಗೆಯೂ ತನಿಖೆ ಚುರುಕುಗೊಳಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ ಇತಿಹಾಸವನ್ನೊಮ್ಮೆ ನೋಡಿಕೊಳ್ಳಲಿ!

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ...

‘ಸುರಕ್ಷಿತ, ತಾಯ್ನಾಡಿನತ್ತ ಪಯಣ’: ಯೆಮೆನ್‌ನಲ್ಲಿ ಸಿಲುಕಿದ್ದ 19 ಭಾರತೀಯ ನಾವಿಕರ ತೆರವು

ಕಳೆದ ಎರಡು ವಾರಗಳಿಂದ ಯೆಮೆನ್ ದೇಶದ ಹೊದೈದಾ ಮತ್ತು ಸನಾ ನಗರಗಳಲ್ಲಿ...

ಕಲಬುರಗಿ | ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ: ಬಾಲಕ ಸಾವು

ಸೇಡಂ: ದೀಪಾವಳಿ ಹಬ್ಬದ ಸಂಭ್ರಮ ಕ್ಷಣಾರ್ಧದಲ್ಲೇ ದುರಂತವಾಗಿ ಮಾರ್ಪಟ್ಟಿದ್ದು, ಪಟಾಕಿ ಎಂದು...

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು ಐತಿಹಾಸಿಕ ತಪ್ಪು ನಿರ್ಧಾರ!

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ...