ನೂತನ ಸಂಸತ್ ಭವನ | ಪ್ರಧಾನಿ ಮೋದಿಯಿಂದ ಮೇ 28ಕ್ಕೆ ಲೋಕಾರ್ಪಣೆ

Date:

  • 2020ರ ಡಿಸೆಂಬರ್‌ನಲ್ಲಿ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದ ಮೋದಿ
  • ಸುಮಾರು ₹970 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನ

ನೂತನ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಲೋಕಸಭೆ ಕಾರ್ಯಾಲಯ ತಿಳಿಸಿದೆ.

- Advertisement -

ಪ್ರಧಾನಿ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನ ಕಟ್ಟಡ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಬಳಿಕ, ಸಂಸತ್ ಭವನ ಉದ್ಘಾಟನೆ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಸಂಸತ್ ಭವನದ ಕಾಮಗಾರಿ ಪೂರ್ಣಗೊಂಡಿದೆ. ಈ ನೂತನ ಕಟ್ಟಡ ಸ್ವಾವಲಂಬಿ ಭಾರತದ ಪ್ರತೀಕವಾಗಿದೆ ಎಂದು ಲೋಕಸಭೆ ಕಾರ್ಯಾಲಯ ತಿಳಿಸಿದೆ.

ಸಂಸತ್ ಭವನವು 65 ಸಾವಿರ ಚದರ ಮೀಟರ್‌ಗಳಷ್ಟು ವಿಸ್ತಾರವಾಗಿದೆ. 2020ರ ಡಿಸೆಂಬರ್‌ನಲ್ಲಿ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದರು. 2021ರ ಜನವರಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು.

ಜುಲೈನಲ್ಲಿ ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನ ನೂತನ ಕಟ್ಟಡದಲ್ಲಿ ನಡೆಯುವ ಸಾಧ್ಯತೆಯಿಲ್ಲ. ಆದರೆ, ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ, ಜಿ20 ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳ ಸಭೆಯು ಈ ವರ್ಷದ ಕೊನೆಯಲ್ಲಿ ಹೊಸ ಕಟ್ಟಡದಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ.

ಸುಮಾರು ₹970 ಕೋಟಿ ವೆಚ್ಚದಲ್ಲಿ ಈ ಸಂಸತ್ ಭವನ ನಿರ್ಮಿಸಲಾಗಿದೆ. ನಾಲ್ಕು ಅಂತಸ್ತಿನ ಸಂಸತ್ ಕಟ್ಟಡದಲ್ಲಿ 1,224 ಸಂಸದರು ಕುಳಿತುಕೊಳ್ಳಬಹುದಾಗಿದೆ. ಹೊಸ ಸಂಸತ್ತಿನ ಕಟ್ಟಡವು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಇವುಗಳಿಗೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ.

ಈ ಕಟ್ಟಡವು ಸಂಸದರು, ಗಣ್ಯರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ಹೊಂದಿರುತ್ತದೆ. ಈ ಕಟ್ಟಡದಲ್ಲಿ ಸಂವಿಧಾನ ಭವನವೂ ಇದ್ದು, ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಆ ಸಭಾಂಗಣದಲ್ಲಿ ಇಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಕಾನೂನು ಸಚಿವರಾಗಿ ಕಿರಣ್‌ ರಿಜಿಜು ಬದಲಿಗೆ ಅರ್ಜುನ್ ರಾಮ್ ಮೇಘವಾಲ್ ನೇಮಕ

ನೂತನ ಸಂಸತ್‌ ಭವನ ಕಟ್ಟಡವು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೋಣೆಗಳನ್ನು ಹೊಂದಿದೆ. ಹೊಸ ಸಂಸತ್ ಕಟ್ಟಡವು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಸ್ ಚಂದ್ರ ಬೋಸ್ ಮತ್ತು ದೇಶದ ಇತರ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹೊಂದಿರುತ್ತದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿನಲ್ಲಿ ಕೆಪಿಎಸ್‌ಸಿ ಪರೀಕ್ಷೆ: ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ರಾಜ್ಯದಲ್ಲಿ 319 ಗಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳಿಗೆ ಭಾನುವಾರ (ನವೆಂಬರ್ 15) ನಡೆಯಲಿರುವ...

ನ್ಯಾಯಾಧೀಶರ ಪುತ್ರನ ಕಾರು ಅಪಘಾತ: ಬಾಲಕನ ಜಾಮೀನು ರದ್ದು ಕೋರಿ ಕೇರಳ ಹೈಕೋರ್ಟ್‌ಗೆ ಸಂತ್ರಸ್ತ ಕುಟುಂಬ ಅರ್ಜಿ

ಕೊಚ್ಚಿಯ ಚೇರಾನಲ್ಲೂರ್‌ನಲ್ಲಿ ನಡೆದ ಮರ್ಸಿಡಿಸ್ ಬೆಂಝ್ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ...

ಉತ್ತರ ಪ್ರದೇಶ ಚುನಾವಣೆ 2027: ಓವೈಸಿ-ಆಜಾದ್ ಮೈತ್ರಿ, ‘ಸಾಮಾಜಿಕ ಪರಿವರ್ತನಾ ಮೋರ್ಚಾ’ ಘೋಷಣೆ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ...

ಕೆಪಿಸಿಸಿಯಲ್ಲಿ ಗುಂಪುಗಾರಿಕೆಗೆ ಬ್ರೇಕ್; ಸಂದರ್ಶನ ನಡೆಸಿ 112 ಕಾರ್ಯದರ್ಶಿಗಳ ನೇಮಕ: ಬಿ ಕೆ ಹರಿಪ್ರಸಾದ್

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನೆಯನ್ನು ಪುನರ್‌ರಚಿಸಿ, ಬಲಪಡಿಸಲು ಹೊಸ ರೀತಿಯ...