ಆರು ತಿಂಗಳಲ್ಲಿ 3000 ಪಿಎಂಎಲ್‌ಎ ಪ್ರಕರಣ: ಪ್ರಾಧಿಕಾರದ ಸಾಮರ್ಥ್ಯದ ಕುರಿತು ಸುಪ್ರೀಂ ಶಂಕೆ

Date:

ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದ ಆಸ್ತಿಗಳ ಪ್ರಕರಣಗಳನ್ನು ಪರಿಶೀಲಿಸುವ ವಿಚಾರಣಾ ಪ್ರಾಧಿಕಾರದ ರಚನೆ ಮತ್ತು ಕಾರ್ಯವೈಖರಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಶ್ನೆಗಳು ಎದುರಾಗಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 6 ತಿಂಗಳಲ್ಲಿ ಮೂರು ಸಾವಿರ ಪ್ರಕರಣಗಳನ್ನು ಇಡಿ ದಾಖಲಿಸಿದೆ. ಜಪ್ತಿ ಮಾಡಿದ ಆಸ್ತಿಗಳನ್ನು 180 ದಿನಗಳ ಒಳಗೆ ನಿರ್ಧರಿಸಬೇಕಾದ ಕಾನೂನು ನಿಬಂಧನೆಯನ್ನು ಪ್ರಶ್ನಿಸುತ್ತಾ, ಪೀಠವು ಏಕಸದಸ್ಯ ಪ್ರಾಧಿಕಾರದ ಕಾರ್ಯವೈಖರಿಯ ಕುರಿತು ಪ್ರಶ್ನಿಸಿದೆ.

- Advertisement -

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, “ಆರು ತಿಂಗಳಲ್ಲಿ (180 ದಿನ) ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ಒಬ್ಬರೇ ಸದಸ್ಯರು ನಿರ್ವಹಿಸಬೇಕಾದರೆ, ಅವರು ನಿಜವಾಗಿಯೂ ಬುದ್ಧಿಶಕ್ತಿ ಉಪಯೋಗಿಸಿ ನ್ಯಾಯಯುತವಾಗಿ ವಿಚಾರಣೆ ನಡೆಸಲು ಸಾಧ್ಯವೇ? ಅಥವಾ ಕಾರ್ಯಾಂಗ (ಇಡಿ) ತೆಗೆದುಕೊಂಡ ತೀರ್ಮಾನಕ್ಕೆ ಕೇವಲ ಕಣ್ಣುಮುಚ್ಚಿ ಅಂಕಿತ ಹಾಕುವ ಪ್ರಹಸನ ನಡೆಯುತ್ತಿದೆಯೇ?” ಎಂದು ತಿವಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಮುಂದುವರೆದು, “ಇದು ಜನರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಕೇವಲ 100 ಪ್ರಕರಣಗಳಿದ್ದರೂ ಸಹ, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ದೊಡ್ಡ ನಿರ್ಧಾರವನ್ನು ಕೇವಲ ಒಬ್ಬರೇ ಅಧಿಕಾರಿಗೆ ಏಕೆ ವಹಿಸಬೇಕು?” ಎಂದು ಪ್ರಶ್ನಿಸಿರುವ ಪೀಠವು, ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನ್ಯಾಯಾಂಗ ಸದಸ್ಯರು ಇರಬೇಕೇ ಬೇಡವೇ ಮತ್ತು ಕಾನೂನು ಹಿನ್ನೆಲೆ ಇಲ್ಲದ ಏಕ ಸದಸ್ಯ ಪೀಠವು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದೇ ಎಂಬುದನ್ನೂ ಕೋರ್ಟ್ ಪರಿಶೀಲಿಸುತ್ತಿದೆ.

ಇಡಿ ಪರ ವಾದ ಮಂಡಿಸಿದ ವಕೀಲರು, ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ವಿಶೇಷ ಸಂದರ್ಭಗಳಲ್ಲಿ ಏಕ ಸದಸ್ಯ ಅಥವಾ ಇಬ್ಬರು ಸದಸ್ಯರ ಪೀಠವನ್ನು ರಚಿಸಲು ಅವಕಾಶವಿದೆ ಎಂದು ಸಮರ್ಥಿಸಿಕೊಂಡರು. “ಪ್ರತಿಯೊಂದು ಪ್ರಕರಣದಲ್ಲೂ ಸಂಕೀರ್ಣ ಕಾನೂನು ಪ್ರಶ್ನೆಗಳು ಇರುವುದಿಲ್ಲ. ಹಾಗಾಗಿ ಒಬ್ಬರೇ ಸದಸ್ಯರು ನಿರ್ಧಾರ ಕೈಗೊಳ್ಳುವುದು ಕಾನೂನುಬಾಹಿರವಲ್ಲ” ಎಂದು ಅವರು ವಾದಿಸಿದರು. ವರ್ಷಕ್ಕೆ ಸುಮಾರು 400 ಪ್ರಕರಣಗಳು ಮಾತ್ರ ಇಂತಹ ಜಪ್ತಿ ಪ್ರಕ್ರಿಯೆಗೆ ಬರುತ್ತವೆ ಎಂದು ಇಡಿ ಕೋರ್ಟ್‌ಗೆ ತಿಳಿಸಿತು.

ಆದರೆ ಅರ್ಜಿದಾರರ ಪರ ವಕೀಲರು ಇಡಿ ವೆಬ್‌ಸೈಟ್‌ನಲ್ಲಿರುವ ದತ್ತಾಂಶಗಳನ್ನು ಉಲ್ಲೇಖಿಸಿ, ಸಾವಿರಾರು ಪ್ರಕರಣಗಳು ಬಾಕಿ ಉಳಿದಿರುವುದನ್ನು ಕೋರ್ಟ್ ಗಮನಕ್ಕೆ ತಂದರು. ಇದು ಪ್ರಾಧಿಕಾರದ ಮೇಲಿನ ಹೊರೆ ಮತ್ತು ನ್ಯಾಯಯುತ ವಿಚಾರಣೆಯ ಸಾಧ್ಯತೆಯ ಬಗ್ಗೆ ಸಂದೇಹ ಹುಟ್ಟುಹಾಕಿದೆ.

ಪೀಠವು ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ವಿಚಾರಣಾ ಪ್ರಾಧಿಕಾರದ ಕಾರ್ಯವೈಖರಿ ಮತ್ತು ನ್ಯಾಯಾಂಗ ಸದಸ್ಯರ ಅಗತ್ಯತೆಯ ಕುರಿತಾದ ಪ್ರಮುಖ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿದೆ. ಅದೇ ಸಮಯದಲ್ಲಿ, ಸದ್ಯ ಪ್ರಾಧಿಕಾರದ ಮುಂದೆ ಬಾಕಿ ಪ್ರಕರಣಗಳ ನಿಖರ ವಿವರಗಳನ್ನು ಅಫಿಡವಿಟ್ ಮೂಲಕ ಸಲ್ಲಿಸುವಂತೆ ಇಡಿಗೆ ಸೂಚನೆ ನೀಡಿದೆ.

ಆಸ್ತಿ ಹಕ್ಕುಗಳು ಮತ್ತು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ಪ್ರಕರಣದ ತೀರ್ಪು, ಪಿಎಂಎಲ್‌ಎ ಅಡಿಯಲ್ಲಿನ ಜಪ್ತಿ ಪ್ರಕ್ರಿಯೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ರಾಜ್ಯದ ಹಲವೆಡೆ ಒಣಹವೆ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಇಂದು ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ...

ಒರಾಕಲ್‌ಗೆ ಎಐ ಹೊಡೆತ: ಕೆಲಸ‌ ಕಳೆದುಕೊಂಡ ಸಾವಿರಾರು ಉದ್ಯೋಗಿಗಳು

ಜಾಗತಿಕ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ದೈತ್ಯ 'ಒರಾಕಲ್' ಸಂಸ್ಥೆಯು ತನ್ನ ಜಾಗತಿಕ...

ಔರಾದ್‌ | ಸಾಲದ ಹೊರೆ : ಬಾವಿಗೆ ಹಾರಿ ರೈತ ಆತ್ಮಹತ್ಯೆ

ಸಾಲದ ಹೊರೆಯಿಂದ ರೈತರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಔರಾದ್...