ಪಿಸ್ತೂಲ್ ಹಿಡಿದು ರೈತರಿಗೆ ಬೆದರಿಸಿದ ಆರೋಪದ ಮೇಲೆ ವಿವಾದಾತ್ಮಕ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಪಿಸ್ತೂಲ್ ಹಿಡಿದು ಬೆದರಿಸಿದ ಹಳೆಯ ವಿಡಿಯೋ ಅಧಾರದ ಮೇಲೆ ಬಂಧನವಾಗಿದೆ.
ವಿಡಿಯೋ ವೈರಲ್ ಆದ ನಂತರ ಮನೋರಮಾ ಅವರು ನಾಪತ್ತೆಯಾಗಿದ್ದರು. ಆರೋಪಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ವಿಡಿಯೋ ವೈರಲ್ ಆದ ನಂತರ ರೈತರೊಬ್ಬರು ಮನೋರಮಾ ಖೇಡ್ಕರ್ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು.
ವೈರಲ್ ಆದ ವಿಡಿಯೋದಲ್ಲಿ ಪೂಜಾ ಖೇಡ್ಕರ್ ತಾಯಿ ಮನೋರಮಾ ಹಾಗೂ ಆಕೆಯ ಪತಿ ದಿಲೀಪ್ ಖಾಂಡೇಕರ್ ಅವರು ಭೂ ವ್ಯಜ್ಯದ ಹಿನ್ನೆಲೆಯಲ್ಲಿ ಪುಣೆಯ ಮುಲ್ಷಿ ತೆಷಿಲ್ ಪಟ್ಟಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ರೈತರಿಗೆ ಬೆದರಿಕೆಯೊಡ್ಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಯೋಜನೆಗಳಿಗೆ ಮೀಸಲು ನಿಧಿ ಬಳಕೆಯನ್ನು ತಕ್ಷಣ ತಡೆಯಬೇಕು
ದಿಲೀಪ್ ಖೇಡ್ಕರ್ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು,ಮುಲ್ಷಿ ತೆಷಿಲ್‌ನಲ್ಲಿ 25 ಎಕರೆ ಭೂಮಿ ಖರೀದಿಸಿದ್ದರು. ವಿಡಿಯೋ ವೈರಲ್ ಆದ ನಂತರ ದಿಲೀಪ್ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. ಮೂಲಗಳ ಪ್ರಕಾರ 2022ರಲ್ಲಿ ಬೆದರಿಸಿದ ವಿಡಿಯೋ ಎನ್ನಲಾಗಿದೆ.
2023ರ ಸಾಲಿನ ಮಹಾರಾಷ್ಟ್ರ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್ ಅವರು ತಮ್ಮ ಪ್ರೊಬೇಷನ್ ಅವಧಿಯಲ್ಲಿ ಲಂಚ ಸೇರಿದಂತೆ ಮತ್ತಿತ್ತರ ಬೇಡಿಕೆಗಳಿಗಾಗಿ ದೂರು ಬಂದ ಹಿನ್ನೆಲೆಯಲ್ಲಿ ಪುಣೆಯಿಂದ ವಾಸೀಮ್ ಪಟ್ಟಣಕ್ಕೆ ವರ್ಗಾವಣೆಗೊಳಿಸಲಾಗಿತ್ತು.
ಇದಲ್ಲದೆ ಪ್ರಮಾಣಪತ್ರವನ್ನು ತಿರುಚಿದ ಆರೋಪ ಕೂಡ ಈ ಅಧಿಕಾರಿಯ ಮೇಲಿದೆ. ಕೇಂದ್ರ ಸರ್ಕಾರ ಆಕೆಯ ನಡತೆ ಹಾಗೂ ಆಯ್ಕೆ ಪ್ರಕ್ರಿಯೆಯ ಬಗ್ಗೆ ಏಕ ಸದಸ್ಯ ಸಮಿತಿಯನ್ನು ರಚಿಸಿದೆ.