ಸಲ್ವಾರ್ ಎಳೆಯುವುದು, ಎದೆ ಒತ್ತುವುದು ಅತ್ಯಾಚಾರ ಯತ್ನವಲ್ಲ: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಆಕ್ಷೇಪ

Date:

ಮಹಿಳೆಯ ಸಲ್ವಾರ್ ಎಳೆಯುವುದು, ಎದೆ ಒತ್ತುವುದು ಅತ್ಯಾಚಾರ ಪ್ರಯತ್ನವಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಸ್ವಯಂಪ್ರೇರಿತ ಪ್ರಕರಣ (ಸುವೋ ಮೊಟೊ) ದಾಖಲಿಸಿಕೊಂಡಿದೆ. ಈ ಮೂಲಕ ಲೈಂಗಿಕ ಅಪರಾಧ ಪ್ರಕರಣಗಳ ವಿಚಾರಣೆ, ತೀರ್ಪಿನ ಸಂದರ್ಭದಲ್ಲಿ ನ್ಯಾಯಾಲಯಗಳಿಗೆ ಇರಬೇಕಾದ ಸಂವೇದನಾಶೀಲತೆಯ ಅಗತ್ಯವನ್ನು ಸುಪ್ರೀಂ ಎತ್ತಿಹಿಡಿದಿದೆ.

- Advertisement -

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ನ್ಯಾಯಪೀಠವು ಈ ವಿಚಾರವನ್ನು ಕೈಗೆತ್ತಿಕೊಂಡಿತು. ಪಾಟ್ನಾ ಹೈಕೋರ್ಟ್‌ನ ಕೆಲವು ಅವಲೋಕನಗಳು ಆಕ್ಷೇಪಾರ್ಹ ಎಂದು ಸಿಜೆಐ ಸೂರ್ಯ ಕಾಂತ್ ಟಿಪ್ಪಣಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

“ಹೈಕೋರ್ಟ್‌ನ ತೀರ್ಪಿನಲ್ಲಿ ಕೆಲವು ಆಕ್ಷೇಪಾರ್ಹ ಅವಲೋಕನಗಳಿವೆ. ನಾವು ಆರೋಪಿಯನ್ನು ಕೇಳಿದ ನಂತರವೇ ಆ ತೀರ್ಪನ್ನು ರದ್ದುಪಡಿಸಬಹುದು. ಸ್ಥಳೀಯ ಪೊಲೀಸರ ಮೂಲಕ ಆರೋಪಿಗೆ ನೋಟಿಸ್ ತಲುಪಿಸುವುದನ್ನು ಖಚಿತಪಡಿಸಿ” ಎಂದು ಬಿಹಾರದ ಅಡ್ವೊಕೇಟ್ ಜನರಲ್ ಎಸ್.ಡಿ ಸಂಜಯ್ ಅವರಿಗೆ ಸುಪ್ರೀಂ ಕೋರ್ಟ್ ಪೀಠವು ಸೂಚಿಸಿದೆ.

ಪಾಟ್ನಾ ಹೈಕೋರ್ಟ್ ತೀರ್ಪು ಏನಿತ್ತು?

ಜುಲೈ 9, 2026ರಂದು ನ್ಯಾಯಮೂರ್ತಿ ಪೂರ್ಣೇಂದು ಸಿಂಗ್ ಅವರು 2008ರ ಬಿಹಾರದ ಬಂಕಾ ಜಿಲ್ಲೆಯ ಅಮರ್‌ಪುರ್‌ನ ಫೋಟೋ ಸ್ಟುಡಿಯೋ ಪ್ರಕರಣದಲ್ಲಿ ಆರೋಪಿ ಹಿಮಾಂಶು ಕುಮಾರ್ ಪಾಠಕ್ ಅವರ ಅತ್ಯಾಚಾರ ಪ್ರಯತ್ನದ ಶಿಕ್ಷೆಯನ್ನು ರದ್ದುಪಡಿಸಿದ್ದರು.

ಆರೋಪಿಯು ಮಹಿಳೆಯನ್ನು ಸ್ಟುಡಿಯೋದಲ್ಲಿ ಬಂಧಿಸಿ, ಬಾಗಿಲು ಮುಚ್ಚಿ, ಸಲ್ವಾರ್ ತೆಗೆಯಲು ಪ್ರಯತ್ನಿಸಿ, ಎದೆ ಒತ್ತಿದ್ದಾನೆ ಎಂಬ ಆರೋಪಗಳಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಪೆನಿಟ್ರೇಷನ್ ಅಥವಾ ಅತ್ಯಾಚಾರದ ಸ್ಪಷ್ಟ ಉದ್ದೇಶವನ್ನು ತೋರಿಸುವ ಯಾವುದೇ ಸ್ಪಷ್ಟ ಕ್ರಿಯೆ ಇಲ್ಲದಿದ್ದರೆ, ಐಪಿಸಿ 376,511 ಅಡಿಯಲ್ಲಿನ ಅತ್ಯಾಚಾರ ಪ್ರಯತ್ನ ಪ್ರಕರಣದ ವ್ಯಾಪ್ತಿಗೆ ಸೇರುವುದಿಲ್ಲ ಬದಲಿಗೆ ಐಪಿಸಿ ಸೆಕ್ಷನ್ 354ರ ಅನ್ವಯ ಮಹಿಳೆಯ ಮಾನಭಂಗದ ಪ್ರಯತ್ನವೆಂದು ದಾಖಲಾಗುತ್ತದೆ ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ರದ್ದುಗೊಳಿಸಿತ್ತು.

ಜುಲೈನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಇಂತಹದ್ದೇ ವಿವಾದಾತ್ಮಕ ತೀರ್ಪಿನ ಸಂದರ್ಭದಲ್ಲಿಯೂ ಕೂಡ ಸಿಜೆಐ ಪೀಠವು ಹೈಕೋರ್ಟ್‌ಗಳಲ್ಲಿ ಸಂಶೋಧನೆಯ ಕೊರತೆ ಇರುವುದನ್ನು ಮತ್ತು ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಂವೇದನಾಶೀಲತೆಯ ಅಗತ್ಯವನ್ನು ಒತ್ತಿ ಹೇಳಿತ್ತು.

ಸುಪ್ರೀಂ ಕೋರ್ಟ್ ಆರೋಪಿಗೆ ನೋಟಿಸ್ ಜಾರಿ ಮಾಡಿ, ಹೈಕೋರ್ಟ್‌ನ ಅವಲೋಕನಗಳನ್ನು ಪರಿಶೀಲಿಸಲಿದೆ. ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗದ ಸಂವೇದನಾಶೀಲತೆ ಕುರಿತು ಹಿಂದಿನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ನ್ಯಾಯಾಲಯಗಳಿಗೆ ಸುಪ್ರೀಂ ಸೂಚಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಡಿಜೆ, ಪಟಾಕಿಗೆ ಗುಡ್‌ ಬೈ: ರಸ್ತೆ, ಬಾವಿ, ಶಾಲೆ ಅಂದಗೊಳಿಸಿದ ಗಣೇಶ ಮಂಡಳಿ ಯುವಕರು!

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಎಂದಾಕ್ಷಣ ಡಿಜೆ ಸದ್ದು, ಪಟಾಕಿಗಳ...

ಚುನಾವಣಾ ಆಯುಕ್ತರ ನೇಮಕ ಕಾಯ್ದೆ: ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಸುಪ್ರೀಂ ಭಿನ್ನಮತದ ತೀರ್ಪು

ಚುನಾವಣಾ ಆಯುಕ್ತರ ನೇಮಕ ಕಾಯ್ದೆ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ...

ವಿಜಯಪುರ | ಬರ ಘೋಷಣೆ ಮಾಡದ್ದಕ್ಕೆ ಅಸಮಾಧಾನ: ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ...

ರಾಜ್ಯದ 30% ಕಾಫಿ ತೋಟಗಳು ಅರಣ್ಯ ಭೂಮಿ ಒತ್ತುವರಿ? – ಸರ್ಕಾರದ ನೂತನ ಸರ್ವೆ ಆದೇಶದಿಂದ ಬೆಳೆಗಾರರಲ್ಲಿ ಆತಂಕ!

ರಾಜ್ಯದಲ್ಲಿರುವ ಒಟ್ಟು ಕಾಫಿ ಎಸ್ಟೇಟ್‌ಗಳ ಪೈಕಿ ಸುಮಾರು ಶೇಕಡ 30ರಷ್ಟು ಭಾಗವು...