2ನೇ ಏಕದಿನ: ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ಜಯ

Date:

ಮಳೆಯಿಂದಾಗಿ ಅಡಚಣೆ ಎದುರಾದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ‘ಡಕ್ವರ್ತ್ ಲೂಯಿಸ್’ (ಡಿಎಲ್ಎಸ್) ನಿಯಮದನ್ವಯ 4 ರನ್‌ಗಳ ರೋಚಕ ಜಯ ಸಾಧಿಸಿದೆ. ಯುವ ವೇಗಿ ಗುರ್ನೂರ್ ಬ್ರಾರ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ಪ್ರವಾಸಿ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಹೆನ್ರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶುಭಮನ್ ಗಿಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

- Advertisement -

ಉತ್ತಮ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ಬ್ಯಾಟರ್‌ಗಳು ತೀವ್ರ ಪರದಾಟ ನಡೆಸಿದರು. ಪರಿಣಾಮವಾಗಿ, ಆತಿಥೇಯ ತಂಡ ಕೇವಲ 41 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನ ಕಂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಮೋದಿ ಸರ್ಕಾರದಿಂದ...

ಸಾಮಾಜಿಕ ಚಿಂತಕರು, ಹೋರಾಟಗಾರರು ಈ ಸಮಸ್ಯೆಯ ನೈತಿಕ ಮತ್ತು ಪ್ರಾಯೋಗಿಕ ಬಿಕ್ಕಟ್ಟನ್ನು ಅತ್ಯಂತ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಒಂದು ಸಾಂವಿಧಾನಿಕ ಹಕ್ಕು; ಅದೇ ರೀತಿ ಕಲ್ಯಾಣ ಯೋಜನೆಗಳು ಹಸಿವಿನಿಂದ ಬಳಲುವ...

ಈ ದಿನ ಕವಿತೆ | ಚರಿತ್ರೆ- ಚೀನಾದ ಕವಿ...

18 ನೇ ಶತಮಾನದಲ್ಲಿದ್ದ ಚೀನಾದ ಮಹತ್ವದ ಕವಿಗಳಲ್ಲಿ ಒಬ್ಬರಾದ ಜ಼ಾವ್ ಯಿ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಅತಿಥಿಯೊಬ್ಬ ದಿಢೀರನೆ ಮನೆಯ ಬಾಗಿಲು ಬಡಿದ.ಬಂದವನೇ...

ಯಾದಗಿರಿ | ವೆಂಕಟಪ್ಪ ನಾಯಕನ ನಾಡು ಸುರಪುರದಲ್ಲಿ ಅಸ್ಪೃಶ್ಯತೆ...

ಯಾದಗಿರಿಯ ಸೂಗೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ, ಬಳೆ ಅಂಗಡಿ, ಹೊಲಿಗೆ ಶಾಪ್‌, ಹೋಟೆಲ್‌ಗಳಲ್ಲಿ ನಿರ್ಬಂಧ ಹಾಕಲಾಗುತ್ತಿದೆ; ದೇವಸ್ಥಾನ ಪ್ರವೇಶಕ್ಕೂ ಅವಕಾಶವಿಲ್ಲವೆಂಬ ಆರೋಪ - ಸ್ವಾತಂತ್ರ್ಯ ಸಿಕ್ಕರೂ ಜಾತಿ ತಾರತಮ್ಯದ ಸಂಕೋಲೆಯಿಂದ ದಲಿತರಿಗಿಲ್ಲ ಬಿಡುಗಡೆ. ಬ್ರಿಟಿಷ್...

ಕಿವೀಸ್ ಪರ ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ (104 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 55 ರನ್) ಏಕಾಂಗಿ ಹೋರಾಟ ನಡೆಸಿದರು. ಅವರಿಗೆ ಜೊತೆ ನೀಡಿದ ಮಿಚೆಲ್ ಸ್ಯಾಂಟ್ನರ್ 38 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟರ್‌ಗಳು ಎರಡಂಕಿಯ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಆರಂಭಿಕರಾದ ವಿಲ್ ಯಂಗ್ (6) ಮತ್ತು ಟಿಮ್ ಸೈಫರ್ಟ್ (0) ಬೇಗನೆ ಪೆವಿಲಿಯನ್ ಸೇರಿದರು.
ಭಾರತದ ಪರ ಕರಾರುವಾಕ್ ದಾಳಿ ಸಂಘಟಿಸಿದ ಗುರ್ನೂರ್ ಬ್ರಾರ್ 10 ಓವರ್‌ಗಳಲ್ಲಿ 2 ಮೇಡನ್ ಸಹಿತ ಕೇವಲ 30 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಆಕಿಬ್ ನಬಿ (31 ಕ್ಕೆ 2), ಅಂಶುಲ್ ಕಾಂಬೋಜ್ (25 ಕ್ಕೆ 2) ಹಾಗೂ ಅಕ್ಷರ್ ಪಟೇಲ್ (28 ಕ್ಕೆ 2) ತಲಾ 2 ವಿಕೆಟ್ ಪಡೆದು ಕಿವೀಸ್ ಕುಸಿತಕ್ಕೆ ಕಾರಣರಾದರು.

Advertisements

ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತಕ್ಕೂ ಕಿವೀಸ್ ಬೌಲರ್‌ಗಳು ಕಠಿಣ ಸವಾಲೊಡ್ಡಿದರು. ನಾಯಕ ಶುಭಮನ್ ಗಿಲ್ (0) ಮತ್ತು ವಿರಾಟ್ ಕೊಹ್ಲಿ (7) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆರಂಭಿಕ ರೋಹಿತ್ ಶರ್ಮಾ 28 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ (46 ಎಸೆತಗಳಲ್ಲಿ 30 ರನ್) ಹಾಗೂ ಕೆ.ಎಲ್. ರಾಹುಲ್ (ಅಜೇಯ 26 ರನ್) ಎಚ್ಚರಿಕೆಯ ಆಟವಾಡಿ ತಂಡಕ್ಕೆ ಆಸರೆಯಾದರು.

ಭಾರತ 26 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದ್ದಾಗ ಎರಡನೇ ಬಾರಿ ಮಳೆ ಸುರಿದಿದ್ದರಿಂದ ಆಟವನ್ನು ಸ್ಥಗಿತಗೊಳಿಸಲಾಯಿತು. ಈ ವೇಳೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಭಾರತ ಕೇವಲ 4 ರನ್‌ಗಳಿಂದ ಮುಂದಿದ್ದ ಕಾರಣ ಜಯಶಾಲಿ ಎಂದು ಘೋಷಿಸಲಾಯಿತು. ಕಿವೀಸ್ ಪರ ಕೈಲ್ ಜೇಮಿಸನ್ 35 ರನ್‌ ನೀಡಿ 3 ವಿಕೆಟ್ ಪಡೆದರೆ, ಜಾಕಬ್ ಡಫಿ ಕೂಡ 35 ರನ್‌ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಅಮೋಘ ಬೌಲಿಂಗ್ ಪ್ರದರ್ಶಿಸಿದ ಭಾರತದ ಗುರ್ನೂರ್ ಬ್ರಾರ್ ‘ಪಂದ್ಯ ಪುರುಷೋತ್ತಮ’ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

  • ನ್ಯೂಜಿಲೆಂಡ್: 41 ಓವರ್‌ಗಳಲ್ಲಿ 134ಕ್ಕೆ ಆಲೌಟ್. (ಡೇರಿಲ್ ಮಿಚೆಲ್ 55, ಮಿಚೆಲ್ ಸ್ಯಾಂಟ್ನರ್ 31; ಗುರ್ನೂರ್ ಬ್ರಾರ್ 30ಕ್ಕೆ 4, ಅಂಶುಲ್ ಕಾಂಬೋಜ್ 25ಕ್ಕೆ 2, ಆಕಿಬ್ ನಬಿ 31ಕ್ಕೆ 2, ಅಕ್ಷರ್ ಪಟೇಲ್ 28ಕ್ಕೆ 2).
  • ಭಾರತ: 26 ಓವರ್‌ಗಳಲ್ಲಿ 7 ವಿಕೆಟ್‌ಗೆ 113 ರನ್. (ಶ್ರೇಯಸ್ ಅಯ್ಯರ್ 30, ಕೆ.ಎಲ್. ರಾಹುಲ್ ಅಜೇಯ 26, ರೋಹಿತ್ ಶರ್ಮಾ 23; ಕೈಲ್ ಜೇಮಿಸನ್ 35ಕ್ಕೆ 3, ಜಾಕಬ್ ಡಫಿ 35ಕ್ಕೆ 3).
  • ಫಲಿತಾಂಶ: ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತಕ್ಕೆ 4 ರನ್‌ಗಳ ಜಯ.
  • ಪಂದ್ಯ ಶ್ರೇಷ್ಠ: ಗುರ್ನೂರ್ ಬ್ರಾರ್.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಣಜಿ ಟ್ರೋಫಿ ವಿವಾದ: ಕೋರ್ಟ್ ಆದೇಶದ ನಂತರ ಪೂರ್ಣ ತಂಡವೇ ಬದಲು; ಮೈದಾನದಲ್ಲಿ ಆಟಗಾರರ ಕಣ್ಣೀರು

ಮೇಘಾಲಯ ಕ್ರಿಕೆಟ್ ಸಂಸ್ಥೆಯ (MCA) ಆಂತರಿಕ ಕಚ್ಚಾಟವೀಗ ರಾಜ್ಯ ರಣಜಿ ಟ್ರೋಫಿ...

ಈ ದಿನ ಸಂಪಾದಕೀಯ | ಟ್ರಂಪ್‌ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!

ದ್ವೇಷ, ಜನಾಂಗೀಯ ಧ್ರುವೀಕರಣ, ಆಕ್ರಮಣಕಾರಿ ರಾಷ್ಟ್ರೀಯತೆ, ಯುದ್ಧೋನ್ಮಾದ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳ...

ಶಿರಸಿ | ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡುವ ಪ್ರಸ್ತಾಪಕ್ಕೆ ಭೀಮಗರ್ಜನೆ ಸಂಘಟನೆ ವಿರೋಧ!

ದಕ್ಷಿಣ ಕನ್ನಡದ ಮೊಗೇರ ಮತ್ತು ಉತ್ತರ ಕನ್ನಡದ ಮೀನುಗಾರ ಮೊಗೇರ ಸಮುದಾಯಗಳು...

ಪಬ್ಲಿಕ್ ಕಾರುಗಳಿಂದ ಪೆಟ್ರೋಲ್ ಕಳವು: E20 ಈಗ 420 ಎಂದು ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಕೇಂದ್ರ ಸರ್ಕಾರದ E20 ಪೆಟ್ರೋಲ್ ವಿತರಣೆ ಯೋಜನೆಯ ವಿರುದ್ಧ ಲೋಕಸಭೆಯ ವಿರೋಧ...