ಉತ್ತರಾಖಂಡ | ಪುರೋಲ ‘ಮಹಾಪಂಚಾಯತ್’; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

Date:

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲ ಪಟ್ಟಣದಲ್ಲಿ ಜೂನ್ 15 ರಂದು ನಡೆಸಲು ಉದ್ದೇಶಿಸಿರುವ ‘ಮಹಾಪಂಚಾಯತ್’ಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌, ಬುಧವಾರ ನಿರಾಕರಿಸಿದೆ.  

- Advertisement -

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ರಜಾಕಾಲದ ಪೀಠವು, ಅರ್ಜಿಯ ವಿಚಾರಣೆಗೆ ನಿರಾಕರಿಸಿದೆ. ಅದಾಗಿಯೂ, ಈ ವಿಚಾರದಲ್ಲಿ ಅರ್ಜಿದಾರರು ಉತ್ತರಾಖಂಡ ಹೈಕೋರ್ಟ್ ಅಥವಾ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪೀಠ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

18 ವರ್ಷಗಳಲ್ಲೇ ಗರಿಷ್ಠ ಏರಿಕೆ ಕಂಡ ಸಾಂಬಾರ್ ಈರುಳ್ಳಿ;‌...

ಕರ್ನಾಟಕದ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಮನೆಯ ಪ್ರಮುಖ ಪದಾರ್ಥವಾದ ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ಬೆಲೆ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ಚಿಲ್ಲರೆ...

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ಮಹಾಪಂಚಾಯತ್’ಗಿಂತ ಮೊದಲು ಪುರೋಲ ಪಟ್ಟಣವನ್ನು ತೊರೆಯುವಂತೆ ನಿರ್ದಿಷ್ಟ ಸಮುದಾಯಕ್ಕೆ ಕೆಲವು ಗುಂಪುಗಳು ಬೆದರಿಕೆ ಹಾಕಿವೆ. ಈ ಹಿನ್ನಲೆಯಲ್ಲಿ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕುʼ ಎಂದು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ʼಕಾನೂನು ಸುವ್ಯವಸ್ಥೆ ಕಾಪಾಡುವುದು ಆಡಳಿತಯಂತ್ರದ ಜವಾಬ್ದಾರಿಯಾಗಿದೆ. ನೀವು ಹೈಕೋರ್ಟ್‌ಗೆ ಹೋಗುವ ಬದಲು ಇಲ್ಲಿಗೆ ಏಕೆ ಬಂದಿದ್ದೀರಿ? ಹೈಕೋರ್ಟ್ ಮೇಲೆ ಯಾಕೆ ಅಪನಂಬಿಕೆ ಇಟ್ಟಿದ್ದೀರಿ? ಹೈಕೋರ್ಟ್ ಸೂಕ್ತವಾದ ಆದೇಶಗಳನ್ನು ನೀಡುತ್ತದೆ. ಹೈಕೋರ್ಟ್ ಮತ್ತು ಜಿಲ್ಲಾಡಳಿತದ ಮೇಲೆ ವಿಶ್ವಾಸವಿಡಿʼ ಎಂದು ಸಲಹೆ ನೀಡಿದೆ.

ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಲವು ತೋರದ ಕಾರಣ ಅರ್ಜಿದಾರರು ಅರ್ಜಿಯನ್ನು ಹಿಂಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಉತ್ತರಾಖಂಡ | ಪುರೋಲ ಪಟ್ಟಣ ತೊರೆಯುತ್ತಿರುವ ಮುಸ್ಲಿಮ್‌ ವರ್ತಕರು

‘ಮಹಾಪಂಚಾಯತ್’ಗೆ ಅನುಮತಿ ನಿರಾಕರಣೆ

ಪುರೋಲ ಪಟ್ಟಣದಲ್ಲಿ ಜೂನ್ 15 ರಂದು ನಡೆಸಲು ಉದ್ದೇಶಿಸಿರುವ ‘ಮಹಾಪಂಚಾಯತ್’ಗೆ ಉತ್ತರಕಾಶಿ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದೆ.

 ‘ಲವ್-ಜಿಹಾದ್’ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೂನ್ 15 ರಂದು ಪುರೋಲಾದಲ್ಲಿ ನಡೆಸಲು ಉದ್ದೇಶಿಸಲಾದ ‘ಮಹಾಪಂಚಾಯತ್’ಗೆ ಅನುಮತಿ ನಿರಾಕರಿಸಿತು. ಕೋಮು ಉದ್ವಿಗ್ನತೆಯು ಇನ್ನೂ ಶಮನವಾಗದ ಹಿನ್ನಲೆಯಲ್ಲಿ ಪುರೋಲ ಪಟ್ಟಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 144  ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿರುವ ಪುರೋಲ ಪಟ್ಟಣವನ್ನು ತೊರೆಯುವಂತೆ ಮುಸ್ಲಿಮ್‌ ವರ್ತಕರಿಗೆ ಬಲಪಂಥೀಯ ಸಂಘಟನೆಗಳು ಬೆದರಿಕೆ ಒಡ್ಡಿವೆ.

ಪುರೋಲ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿರುವ ಮುಸ್ಲಿಮ್‌ ವರ್ತಕರ ಅಂಗಡಿಗಳು ಮತ್ತು ಮನೆಗಳ ಮೇಲೆ ಬಲಪಂಥೀಯ ಸಂಘಟನೆಗಳ ಸದಸ್ಯರು ದಾಳಿ ಮಾಡಿ ಧ್ವಂಸಗೊಳಿಸಿದ್ದರು. ಬಳಿಕ ‘ಜೂನ್‌ 15ರ  ಮಹಪಂಚಾಯತ್‌ʼಗೆ ಮುನ್ನ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಲು ಸಿದ್ಧರಾಗಿʼ ಎಂದು ಬರೆಯಲಾಗಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್ ಠಾಣೆಯಲ್ಲಿ ‘ಗಣಪತಿ ಹೋಮ’; ಭುಗಿಲೆದ್ದ ರಾಜಕೀಯ ವಿವಾದ

ಪೊಲೀಸ್ ಠಾಣೆಯ ಒಳಗೇ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ...

ST ಪಟ್ಟಿಗೆ ಕಾಡುಗೊಲ್ಲ ಸಮುದಾಯ: CMDR ಮೂಲಕ ಹೊಸ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಂಪುಟ ಅಸ್ತು!

ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ...

RSS ಸಂಸ್ಥೆಗಳು ಆಯೋಜಿಸಿದ್ದ ಪರೀಕ್ಷೆಗೆ ಕೇರಳ ಹೈಕೋರ್ಟ್ ಸಮ್ಮತಿ; ಆದರೆ, ಫಲಿತಾಂಶ ಪ್ರಕಟಣೆಗೆ ತಡೆ

ಆರ್‌ಎಸ್‌ಎಸ್‌ ಸಂಯೋಜಿತ ಸಂಸ್ಥೆಗಳು ಆಯೋಜಿಸಿರುವ ಶಾಲಾ ಮಟ್ಟದ ವಿದ್ಯಾರ್ಥಿವೇತನ ಮಾದರಿಯ ಪರೀಕ್ಷೆಯು...

FICCI ಸಮಾವೇಶದ ಕಿಚ್ಚು: ತೆರಿಗೆ ರಿಯಾಯಿತಿ, ಉದ್ಯೋಗ ಸೃಷ್ಟಿ ಕುರಿತು ಮೋದಿ–ರಾಹುಲ್ ವಾಕ್ಸಮರ!

ಕಾರ್ಪೊರೇಟ್ ತೆರಿಗೆ ಕಡಿತದ ಲಾಭವನ್ನು ಉದ್ಯೋಗಿಗಳಿಗೆ ವರ್ಗಾಯಿಸದ ಉದ್ಯಮಗಳ ವಿರುದ್ಧ ಪ್ರಧಾನಿ...