ಕೇಂಬ್ರಿಡ್ಜ್ ವಿವಿಯಲ್ಲಿ ರಾಹುಲ್ ಉಪನ್ಯಾಸ: ನ್ಯಾಯ ಯಾತ್ರೆಗೆ 5 ದಿನ ಬಿಡುವು

Date:

ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿವಿಯಲ್ಲಿ ಎರಡು ವಿಶೇಷ ಉಪನ್ಯಾಸ ಹಾಗೂ ನವದೆಹಲಿಯ ಮುಖ್ಯ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಫೆ.26ರಿಂದ ಮಾರ್ಚ್‌ 1ರವರೆಗೂ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಬಿಡುವು ತೆಗೆದುಕೊಳ್ಳಲಿದ್ದಾರೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ರಾಹುಲ್ ಗಾಂಧಿ ಅವರು ತಮ್ಮ ದೀರ್ಘಕಾಲದ ಬದ್ಧತೆಗಳನ್ನು ಪರಿಪೂರ್ಣಗೊಳಿಸುವ ಫೆ.27 ಹಾಗೂ ಫೆ.28ರಂದು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿವಿಯಲ್ಲಿ ಉಪನ್ಯಾಸ ನೀಡುವುದು ಹಾಗೂ ನವದೆಹಲಿಯಲ್ಲಿ ಇತರ ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಫೆ.26ರಿಂದ ಮಾ.01ರ ವರೆಗೂ ಭಾರತ್ ಜೋಡೋ ನ್ಯಾಯಯಾತ್ರೆಯಲ್ಲಿ ಬಿಡುವು ತೆಗೆದುಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಫೆ.24ರಂದು ಉತ್ತರ ಪ್ರದೇಶದ ಮೊರಾದಾಬಾದ್, ಸಂಬಾಲ್, ಅಲಿಘಡ, ಹತ್ರಾಸ್, ಆಗ್ರಾ ಜಿಲ್ಲೆಗಳು ಹಾಗೂ ರಾಜಸ್ಥಾನದ ಧೋಲ್‌ಪುರ್‌ವರೆಗೂ ನ್ಯಾಯ ಯಾತ್ರೆ ಸಾಗಲಿದೆ. ನಂತರ ಮಾ.2ರಂದು ರಾಜಸ್ಥಾನದ ಧೋಲ್‌ಪುರದ ಮೂಲಕ ಜೋಡೋ ಯಾತ್ರೆ ಆರಂಭವಾಗಲಿದೆ.

ಮಾ.2ರಂದು ಮಧ್ಯಪ್ರದೇಶದ ಮೊರೆನಾ, ಗ್ವಾಲಿಯರ್, ಶಿವಪುರಿ,ಗುಣ,ಶಾಜಾಪುರ್ ಹಾಗೂ ಉಜ್ಜೈನ್ನತ್ತ ಯಾತ್ರೆ ಸಾಗಲಿದೆ.ರಾಹುಲ್ ಅವರು ಮಾ.5 ರಂದು ಉಜ್ಜೈನ್‌ನ ಮಹಾಕಾಳೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಇದೇ ದೇಗುಲಕ್ಕೆ ರಾಹುಲ್ ಗಾಂಧಿ 2022ರ ನ.29ರಂದು ಭೇಟಿ ನೀಡಿದ್ದರು.

ಪೂರ್ವದಿಂದ ಪಶ್ಚಿಮಕ್ಕೆ ಸಾಗುವ ಭಾರತ್ ಜೋಡೋ ನ್ಯಾಯ ಯಾತ್ರೆಯು 15 ರಾಜ್ಯಗಳ ಮೂಲಕ 6,700 ಕಿ.ಮೀ ವರೆಗೂ ತೆರಳಲಿದೆ. ಸಾಮಾನ್ಯ ಜನತೆಗೆ ನ್ಯಾಯ ದೊರಕಿಸುವ ಸಂದೇಶ ಸಾರುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...

ಧ್ವನಿ ಬದಲಾಯಿಸುವ ಆ್ಯಪ್ ಬಳಸಿ 7 ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

30 ವರ್ಷದ ವ್ಯಕ್ತಿಯೊಬ್ಬ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಳಸಿ, ಶಿಕ್ಷಕಿಯಾಗಿ...

ಮೊದಲ ಬಾರಿಗೆ ಮತ ಚಲಾಯಿಸಿದ ಹಣಕಾಸು ಆಯೋಗದ ಮುಖ್ಯಸ್ಥ ಅರವಿಂದ್ ಪನಗಾರಿಯಾ

ಹದಿನಾರನೇ ಹಣಕಾಸು ಆಯೋಗದ ಅಧ್ಯಕ್ಷ, 71 ವರ್ಷ ವಯಸ್ಸಿನ ಅರವಿಂದ್ ಪನಗಾರಿಯಾ...

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...