AI ಕಲಿಕೆ ಪ್ರತ್ಯೇಕ ವಿಷಯವಾಗದೆ; ತೃತೀಯ ಭಾಷೆಗೆ ಪರ್ಯಾಯವಾಗಿ ಬೇಕೆ! ತಜ್ಞರು ಹೇಳುವುದೇನು?

Date:

NSQF ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ವೃತ್ತಿಪರ AI ವಿಷಯವನ್ನು ಆಯ್ಕೆ ಮಾಡಿಕೊಂಡರೆ, ಅವರು ತೃತೀಯ ಭಾಷೆಯನ್ನು ಕಲಿಯುವುದರಿಂದ ವಿನಾಯಿತಿ ಪಡೆಯಬಹುದು. ಈ ನಿರ್ಧಾರವು 21ನೇ ಶತಮಾನದ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದ್ದರೂ, ಭಾಷಾ ಹಿತರಕ್ಷಣಾ ವೇದಿಕೆಗಳು ಮತ್ತು ಶಿಕ್ಷಣ ತಜ್ಞರಿಂದ ತೀವ್ರ ವಿರೋಧಕ್ಕೆ ಒಳಗಾಗಿದೆ.

- Advertisement -

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರಾಜ್ಯದ 1,942 ಸರ್ಕಾರಿ ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ವಿಷಯವನ್ನು ಕೌಶಲ ಅಥವಾ ವೃತ್ತಿಪರ ವಿಷಯವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದು ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ ಫ್ರೇಮ್‌ವರ್ಕ್ (NSQF) ಅಡಿಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ (SSK) ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ವ್ಯವಸ್ಥೆಯನ್ನೇ ಅಲುಗಾಡಿಸಿದ ಮೋದಿ ಸರ್ಕಾರದ 10 ವಿವಾದಗಳು

ಪ್ರಜಾಪ್ರಭುತ್ವದ ಜೀವಾಳವಾದ ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆಗೆ ಇಂದು ಗ್ರಹಣ ಬಡಿದಿದೆಯೇ? ಏಕಾಏಕಿ 13.8 ಕೋಟಿ ಹೆಸರುಗಳನ್ನು ಅಳಿಸಿಹಾಕಿದ 'SIR' (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಮಹಾವಿವಾದ ಮತ್ತು ಆಯೋಗದೊಳಗಿನ ಭಿನ್ನಮತವು ಈ ಅನುಮಾನವನ್ನು...

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್‌; ಸ್ವಾಗತಕ್ಕೆ ಖುದ್ದು...

ಬರೋಬ್ಬರಿ 11 ವರ್ಷಗಳ ಬಳಿಕ ಅಮೆರಿಕಕ್ಕೆ ಕಾಲಿಟ್ಟಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಖುದ್ದು ತೆರಳಿ ಸ್ವಾಗತಿಸಿದ ಟ್ರಂಪ್‌, ಶ್ವೇತಭವನದಲ್ಲಿ ಅದ್ದೂರಿ ಸರ್ಕಾರಿ ಔತಣ ಆಯೋಜಿಸಿದ್ದಾರೆ. AI, ಅತ್ಯಾಧುನಿಕ ಚಿಪ್‌ಗಳು, ರೇರ್‌...

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

ಈ ಶಾಲೆಗಳಲ್ಲಿ 1,180 ಹೊಸದಾಗಿ ಅನುಮೋದಿತ ಪ್ರೌಢಶಾಲೆಗಳು, 381 NSQF ಶಾಲೆಗಳು ಮತ್ತು 81 ಏಕ-ವಲಯ ಶಾಲೆಗಳು ಸೇರಿವೆ. 81 ಏಕ-ವಲಯ ಶಾಲೆಗಳಲ್ಲಿ ಹಿಂದಿನ ವೃತ್ತಿಪರ ವಿಷಯಗಳಾದ (ಸೌಂದರ್ಯ-ಕ್ಷೇಮ, ಚಿಲ್ಲರೆ ವ್ಯಾಪಾರ, ಉಡುಪು ಇತ್ಯಾದಿ) ಬದಲಿಗೆ AI ವಿಷಯ ಅಳವಡಿಸಿಕೊಳ್ಳಲಾಗುತ್ತದೆ. NSQF ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ವೃತ್ತಿಪರ ವಿಷಯವನ್ನು ಆಯ್ಕೆ ಮಾಡಿದರೆ ತೃತೀಯ ಭಾಷೆಯಿಂದ ವಿನಾಯಿತಿ ಪಡೆಯಬಹುದು. ಮಾಸಿಕ 20.000 ಗೌರವ ವೇತನದೊಂದಿಗೆ ಪ್ರತಿ ಶಾಲೆಗೆ ಒಬ್ಬ AI ಅತಿಥಿ ಶಿಕ್ಷಕರನ್ನು ನೇಮಿಸಲು ಸೂಚಿಸಲಾಗಿದೆ.

ಸರ್ಕಾರದ ಉದ್ದೇಶ: 21ನೇ ಶತಮಾನದ ಕೌಶಲ್ಯಗಳಾದ ಸಮಸ್ಯೆ-ಪರಿಹಾರ, ವಿಮರ್ಶಾತ್ಮಕ ಚಿಂತನೆ, ತಾಂತ್ರಿಕ ಜ್ಞಾನ ಮತ್ತು ಉದ್ಯೋಗ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು. ಇದು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭವಿಷ್ಯ ಕೇಂದ್ರಿತ ಕೌಶಲ ಶಿಕ್ಷಣದ ಗುರಿಯನ್ನು ರೂಪಿಸಲಿದೆ ಎನ್ನಲಾಗುತ್ತಿದೆ.

ವಿರೋಧ ಮತ್ತು ಕಳವಳಗಳು

ಈ ಕ್ರಮವನ್ನು ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ ಮತ್ತು ಹಿಂದಿ ಶಿಕ್ಷಕರ ಸಂಘಗಳು ವಿರೋಧಿಸಿವೆ. ಮೂರನೇ ಭಾಷೆಗೆ ಪರ್ಯಾಯವಾಗಿ ಮಾಡುವುದು ಶಿಕ್ಷಣ ಅಥವಾ ಕರ್ನಾಟಕದ ಬಹುಭಾಷಾ ಸಂಪ್ರದಾಯದ ದೃಷ್ಟಿಕೋನದಿಂದ ಸೂಕ್ತವಲ್ಲ. “ಭಾಷೆ ಮತ್ತು ತಂತ್ರಜ್ಞಾನ ಎರಡೂ ವಿದ್ಯಾರ್ಥಿಗಳಿಗೆ ಅತ್ಯಗತ್ಯ” ಎಂದು ಅವರು ಹೇಳಿದ್ದು, AI ಅನ್ನು ಪ್ರತ್ಯೇಕ ಕೌಶಲ್ಯ-ಆಧಾರಿತ ಅಥವಾ ಐಚ್ಛಿಕ ವಿಷಯವಾಗಿ ಪರಿಚಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಜ್ಞರ ಅಭಿಪ್ರಾಯವೇನು?

AI ಪಠ್ಯವಾಗಿ ಶಾಲಾ ಶಿಕ್ಷಣದ ಭಾಗವಾಗುವುದನ್ನು ಶಿಕ್ಷಣ ತಜ್ಞರು ವಿರೋಧಿಸಿದ್ದಾರೆ. ಮಕ್ಕಳ ಗ್ರಹಿಸುವ, ಆಲೋಚಿಸುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಕಸಿದುಕೊಳ್ಳುತ್ತದೆ ಮುಂದೊಂದು ದಿನ ಮನುಷ್ಯನ ಆಲೋಚನಾ ಸಾಮರ್ಥ್ಯವನ್ನೇ ಕಸಿದುಕೊಳ್ಳುವ ಹಂತಕ್ಕೆ ಈ ತಂತ್ರಜ್ಞಾನವು ವ್ಯಾಪಿಸಿದರೆ ದುರಂತ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಈ ದಿನ.ಕಾಮ್‌ ಜೊತೆಗೆ ತಮ್ಮ ನಿಲುವು ಹಂಚಿಕೊಂಡ ಶಿಕ್ಷಣ ತಜ್ಞ ಡಾ ನಿರಂಜನಾರಾಧ್ಯ ವಿ ಪಿ, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ ಕರ್ನಾಟಕ ಸರ್ಕಾರ ಮತ್ತದೇ ಮಾದರಿಗೆ ಮಾರುಹೋಗುವುದು ಸರಿಯಲ್ಲ. ವೃತ್ತಿಪರ ಅಥವಾ ಕೌಶಲ್ಯಾಧರಿತ ಕಲಿಕೆ ಎಂಬುದೇ ವರ್ಣಾಶ್ರಮ ಪದ್ಧತಿಯ ನಕಲಿದ್ದಂತೆ. ಶಾಲಾ ಮಟ್ಟದಲ್ಲಿ ಮಕ್ಕಳು ಏನು ಕಲಿಯಬೇಕು ಎಂಬುದನ್ನು ವ್ಯವಸ್ಥೆಯೇ ಅವರ ಮೇಲೆ ಹೇರುವ ಬದಲಿಗೆ, ನಿರ್ದಿಷ್ಠ ವಯಸ್ಸಿಗೆ ಬಂದ ಮೇಲೆ ತಮ್ಮ ಆಯ್ಕೆಯನ್ನು ತಾವೇ ಕಂಡುಕೊಳ್ಳುವ ಸ್ವಾತಂತ್ರ್ಯ ಕಲ್ಪಿಸುವುದು ಅವಶ್ಯ” ಎಂದಿದ್ದಾರೆ.

ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ ಪ್ರೊ ಕೆ ಇ ರಾಧಾಕೃಷ್ಣ ಮಾತನಾಡಿ, “ಬಹುತ್ವದ ದೇಶದಲ್ಲಿ ಪ್ರತಿ ಮಗುವಿಗೂ ತನ್ನ ಭಾಷೆಯನ್ನು ಪಠ್ಯ ವಿಷಯವಾಗಿ ಕಲಿಯುವ ಕನಿಷ್ಠ ಸ್ವಾತಂತ್ರ್ಯವಿದೆ ಹಾಗಾಗಿ ಭಾಷೆಯ ಬದಲು ಕೃತಕ ಬುದ್ಧಿಮತ್ತೆ ಪರಿಚಯಿಸುವ ಯೋಚನೆ ಒಪ್ಪಿತವಲ್ಲ. ಅದರಲ್ಲೂ ಮಕ್ಕಳು ಎಳೆಯದರಲ್ಲೇ ಕೃತಕ ಬುದ್ಧಿಮತ್ತೆಗೆ ಅವಲಂಬಿತರಾದರೆ ಯೋಚಿಸುವ ಸಾಮರ್ಥ್ಯದಿಂದ ದೂರಾಗುತ್ತಾರೆ. ಬೌದ್ಧಿಕ ಸಾಮರ್ಥ್ಯ ಕುಗ್ಗುವುದರಿಂದ ಮಿದುಳು ಅನ್ವೇಶಿಸುವ, ಪರಿಶೀಲನೆಗೆ ಒಳಪಡಿಸುವ ಕೌಶಲವನ್ನು, ಸೃಜನಿಕೆಯನ್ನು ಕಳೆದುಕೊಂಡು ತಂತ್ರಜ್ಞಾನದ ಪಾಶಕ್ಕೆ ಸಿಲುಕುತ್ತದೆ ಇದರಿಂದ ಅಪಾಯಗಳೇ ಹೆಚ್ಚು” ಎಂದು ಅಭಿಪ್ರಾಯಿಸಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಶಿಕ್ಷಣವು ಭವಿಷ್ಯದ ತಾಂತ್ರಿಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅಗತ್ಯವೆಂದು, ಮಕ್ಕಳ ಮೆದುಳು ಆಲೋಚನೆ, ವಿಶ್ಲೇಷಣೆ, ಗ್ರಹಿಕೆಯ ಹಂತಕ್ಕೆ ವಿಕಸಿತಗೊಳ್ಳುವ ಮೊದಲು ಅವರ ಅರಿವಿನ ವ್ಯಾಪ್ತಿ ಕುಗ್ಗಿಸಬಾರದು. ತಂತ್ರಜ್ಞಾನವು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು, ಅವರ ಸ್ವತಂತ್ರ ಚಿಂತನೆಯನ್ನು ನಿಯಂತ್ರಿಸುವಂತಾಗಬಾರದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಡದಿ ಭೂಸ್ವಾಧೀನ ರದ್ದುಪಡಿಸಲು ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ

ಕರ್ನಾಟಕದ ಬಿಡದಿಯಲ್ಲಿ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಬಿಡದಿ ಟೌನ್‌ಶಿಪ್ ಯೋಜನೆಗಾಗಿ...

ಏಕಪಕ್ಷೀಯ ನಿರ್ಧಾರ; ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಬಿ ಕೆ ಹರಿಪ್ರಸಾದ್ ಆಗ್ರಹ: ನಾಳೆ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಗ್ಯಾನೇಶ್ ಕುಮಾರ್ ಕಳೆದ 10 ತಿಂಗಳಲ್ಲಿ...

ಬರ | ಮಳೆಯ ಕೊರತೆಯಷ್ಟೇ ಅಲ್ಲ, ಬದುಕಿನ ಮೇಲಿನ ಬರೆ

ಶತ ಶತಮಾನಗಳಿಂದಲೂ ಮಾನವ ಬದುಕನ್ನು ಕಾಡುತ್ತಿರುವ ಪ್ರಕೃತಿಯ ಕಠಿಣ ಸವಾಲುಗಳಲ್ಲಿ ...

ಕೂಡಲೇ ಸೌಜನ್ಯ ಎಸ್‌ಐಟಿ ಪುನರಚಿಸಿ: ರಾಜ್ಯ ಸರ್ಕಾರಕ್ಕೆ ‘ಕೊಂದವರು ಯಾರು?’ ಆಂದೋಲನ ಬಹಿರಂಗ ಪತ್ರ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಈಗ ರಚನೆಯಾಗಿರುವ...