ಕುಗ್ಗುತ್ತಿರುವ ಸಂಸತ್ ಕಲಾಪ: ಮೋದಿ ಸರ್ಕಾರದ ಅವಧಿಯಲ್ಲಿ ಕಡಿಮೆಯಾದ ಸದನದ ದಿನಗಳು

Date:

ಮುಂದಿನ ಸಂಸತ್ ಅಧಿವೇಶನವನ್ನು ಯಾವಾಗ ಕರೆಯಬೇಕು ಎಂಬ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುಟ್ಟು ಕಾಯ್ದುಕೊಂಡಿರುವ ಬೆನ್ನಲ್ಲೇ, ಮಹತ್ವದ ಮಾಹಿತಿ ಹೊರಬಿದ್ದಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಗೆ ಹೋಲಿಸಿದರೆ, 2014ರಿಂದ 2024ರ ನಡುವಿನ ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪ ನಡೆದ ಅವಧಿ ಕಡಿಮೆಯಾಗಿದೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ.

- Advertisement -

​ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ (2004–2014) ಲೋಕಸಭೆಯು ಒಟ್ಟು 691 ದಿನಗಳಲ್ಲಿ 3,076:12 ಗಂಟೆಗಳ ಕಾಲ ಕಲಾಪ ನಡೆಸಿತ್ತು. ಇದಕ್ಕೆ ಹೋಲಿಸಿದರೆ, 2014–2024ರ ಎನ್‌ಡಿಎ ಅವಧಿಯಲ್ಲಿ ಲೋಕಸಭೆಯು 605 ದಿನಗಳಲ್ಲಿ 2,961:02 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ.
​ಇನ್ನು ರಾಜ್ಯಸಭೆಯಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. ಯುಪಿಎ ಆಡಳಿತಾವಧಿಯಲ್ಲಿ ರಾಜ್ಯಸಭೆಯು 2,630:57 ಗಂಟೆಗಳ ಕಾಲ ಕಲಾಪಕ್ಕೆ ಸಾಕ್ಷಿಯಾಗಿದ್ದರೆ, 2014ರಿಂದ 2024ರ ಅವಧಿಯಲ್ಲಿ 610 ದಿನಗಳಲ್ಲಿ 2,264:79 ಗಂಟೆಗಳ ಕಾಲ ಮಾತ್ರ ಕಲಾಪ ನಡೆದಿದೆ. 2024ರಲ್ಲಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ, ಲೋಕಸಭೆಯು 154 ದಿನಗಳಲ್ಲಿ 670:50 ಗಂಟೆ ಹಾಗೂ ರಾಜ್ಯಸಭೆಯು 151 ದಿನಗಳಲ್ಲಿ 650:31 ಗಂಟೆಗಳ ಕಾಲ ಕಲಾಪ ನಡೆಸಿರುವುದು ದತ್ತಾಂಶಗಳಿಂದ ಸ್ಪಷ್ಟವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಡಾ. ವರ್ಗೀಸ್...

ಕುರಿಯನ್ ಅವರು ಕೇವಲ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿಯಲ್ಲ. ರೈತರಿಗೆ ಆರ್ಥಿಕ ಸ್ವಾವಲಂಬನೆ, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಜನರಿಗೆ ಬದುಕಿನ ಭದ್ರತೆ ಹಾಗೂ ದೇಶಕ್ಕೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ದೊರಕಿಸಿಕೊಟ್ಟ ದೂರದೃಷ್ಟಿಯ ನಾಯಕರು. ಭಾರತದ...

ಪಂಜಾಬ್ ಚುನಾವಣೆ | 6 ವರ್ಷಗಳ ಬಳಿಕ ಮತ್ತೆ...

2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ  ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

2010ರ ಮುಂಗಾರು ಅಧಿವೇಶನವು ಯುಪಿಎ ಸರ್ಕಾರದ ಪಾಲಿಗೆ ಸಂಪೂರ್ಣ ವ್ಯರ್ಥವಾಗಿತ್ತು. 2ಜಿ ಹಗರಣವನ್ನು ಪ್ರಸ್ತಾಪಿಸಿ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗಿನ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ, 23 ದಿನಗಳ ಕಲಾಪದಲ್ಲಿ ಲೋಕಸಭೆ ಕೇವಲ 7:35 ಗಂಟೆ ಮತ್ತು ರಾಜ್ಯಸಭೆ 2:47 ಗಂಟೆ ಮಾತ್ರ ಕಾರ್ಯನಿರ್ವಹಿಸಿತ್ತು.
​2010ರಲ್ಲಿ ನಡೆದಂತಹ ಸಂಪೂರ್ಣ ವ್ಯರ್ಥ ಅಧಿವೇಶನದ ಸ್ಥಿತಿಯನ್ನು ಮೋದಿ ಸರ್ಕಾರ ಎದುರಿಸದಿದ್ದರೂ, ಕೋವಿಡ್–19 ಸಾಂಕ್ರಾಮಿಕ ರೋಗವು ಅದರ ದಾಖಲೆಯ ಮೇಲೆ ಪರಿಣಾಮ ಬೀರಿತು. 2020ರಲ್ಲಿ ಚಳಿಗಾಲದ ಅಧಿವೇಶನವೇ ನಡೆಯಲಿಲ್ಲ. ಬಜೆಟ್ ಅಧಿವೇಶನದ ಬಳಿಕ 2020ರ ಸೆಪ್ಟೆಂಬರ್‌ನಲ್ಲಿ 10 ದಿನಗಳ ಅಧಿವೇಶನವನ್ನು ಮಾತ್ರ ನಡೆಸಲಾಗಿತ್ತು. ಪೂರ್ಣ ಪ್ರಮಾಣದ ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳು ನಡೆದಿದ್ದರೆ ಸಂಸತ್ತಿನ ಕಲಾಪಕ್ಕೆ ಕನಿಷ್ಠ 30 ಕೆಲಸದ ದಿನಗಳು ಸೇರ್ಪಡೆಯಾಗುತ್ತಿದ್ದವು. ಆದರೆ, ಆ ದಿನಗಳನ್ನು ಸೇರಿಸಿದ್ದರೂ ಯುಪಿಎ ಸರ್ಕಾರದ ಹತ್ತು ವರ್ಷಗಳ ದಾಖಲೆಯನ್ನು ಮೀರಿಸಲು ಸಾಧ್ಯವಾಗುತ್ತಿರಲಿಲ್ಲ.

ಲೋಕಸಭೆಯು 2004–09ರ ಅವಧಿಯಲ್ಲಿ 334 ದಿನ, 2009–14ರಲ್ಲಿ 357 ದಿನ, 2014–19ರಲ್ಲಿ 331 ದಿನ, 2019–24ರಲ್ಲಿ 274 ದಿನ ಹಾಗೂ 2024ರ ಬಳಿಕ 154 ದಿನ ಕಲಾಪ ನಡೆಸಿದೆ. ಇದೇ ಅವಧಿಗಳಲ್ಲಿ ರಾಜ್ಯಸಭೆಯು ಕ್ರಮವಾಗಿ 329, 356, 329, 281 ಮತ್ತು 151 ದಿನಗಳ ಕಾಲ ಕಾರ್ಯನಿರ್ವಹಿಸಿದೆ. ​ಇದಕ್ಕೂ ಮುನ್ನ 2008ರಲ್ಲೂ ಪ್ರತ್ಯೇಕ ಚಳಿಗಾಲದ ಅಧಿವೇಶನ ನಡೆದಿರಲಿಲ್ಲ. ಆ ವರ್ಷ ಜುಲೈ 21ರಂದು ಆರಂಭವಾದ ಅಧಿವೇಶನವನ್ನು ಡಿಸೆಂಬರ್ 23ರಂದು ಮಾತ್ರ ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿತ್ತು. ಆದಾಗ್ಯೂ, ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ನಡೆಯುವ ಡಿಸೆಂಬರ್ ತಿಂಗಳಿನಲ್ಲಿಯೂ ಸದನದ ಕಲಾಪಗಳನ್ನು ನಡೆಸಲಾಗಿತ್ತು.

​100 ಗಂಟೆ ದಾಟದ ಕಲಾಪಗಳು
​ಅಧಿವೇಶನಗಳಲ್ಲಿ 100 ಗಂಟೆಗಳಿಗೂ ಹೆಚ್ಚು ಕಾಲ ಕಲಾಪ ನಡೆಯುವುದು ಇತ್ತೀಚೆಗೆ ಅಪರೂಪವಾಗುತ್ತಿದೆ ಎಂಬುದು ಸಂಸತ್ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಮೊದಲ ಯುಪಿಎ ಸರ್ಕಾರದ 15 ಅಧಿವೇಶನಗಳ ಪೈಕಿ 8 ಅಧಿವೇಶನಗಳಲ್ಲಿ ಹಾಗೂ ಯುಪಿಎ–2ರ ಅವಧಿಯಲ್ಲಿ 7 ಅಧಿವೇಶನಗಳಲ್ಲಿ ಕಲಾಪ 100 ಗಂಟೆ ದಾಟಿತ್ತು. ಮೋದಿ ಅವರ ಮೊದಲ ಅವಧಿಯಲ್ಲೂ 15 ಅಧಿವೇಶನಗಳ ಪೈಕಿ 8ರಲ್ಲಿ 100 ಗಂಟೆಗೂ ಹೆಚ್ಚು ಕಾಲ ಕಲಾಪ ನಡೆದಿತ್ತು. ಆದರೆ, 2019–24ರ ನಡುವೆ ನಡೆದ 15 ಅಧಿವೇಶನಗಳ ಪೈಕಿ 6 ಅಧಿವೇಶನಗಳಲ್ಲಿ ಮಾತ್ರ 100 ಗಂಟೆ ದಾಟಿದ್ದರೆ, 2024ರ ಬಳಿಕ ನಡೆದ 8 ಅಧಿವೇಶನಗಳಲ್ಲಿ ಕೇವಲ 3ರಲ್ಲಿ ಮಾತ್ರ ಈ ಮೈಲುಗಲ್ಲು ತಲುಪಲು ಸಾಧ್ಯವಾಗಿದೆ.

ಈ ವರ್ಷ ಇದುವರೆಗೆ ಸಂಸತ್ತು 50 ದಿನಗಳ ಕಾಲ ಮಾತ್ರ ಕಲಾಪ ನಡೆಸಿದ್ದು, ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಯಾವಾಗ ಕರೆಯಲಾಗುವುದು ಎಂಬ ಬಗ್ಗೆ ಸರ್ಕಾರ ಮೌನ ವಹಿಸಿದೆ. ​ಸಂಸತ್ ಅಧಿವೇಶನವನ್ನು ಮರುಆಹ್ವಾನಿಸುವಲ್ಲಿ ಸರ್ಕಾರ ಮಾಡುತ್ತಿರುವ ವಿಳಂಬದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಮುಂಗಾರು ಅಧಿವೇಶನವನ್ನು ಸರ್ಕಾರ ಇದುವರೆಗೂ ಅಧಿಕೃತವಾಗಿ ಮುಕ್ತಾಯಗೊಳಿಸಿಲ್ಲ.
​ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸಿಪಿಐ(ಎಂ) ರಾಜ್ಯಸಭಾ ನಾಯಕ ಜಾನ್ ಬ್ರಿಟ್ಟಾಸ್, “ಸಂಸತ್ತು ಸರ್ಕಾರದ ಖಾಸಗಿ ಆಸ್ತಿಯಲ್ಲ. ಅದರ ಕಾರ್ಯನಿರ್ವಹಣೆಯು ಕಣ್ಣಾಮುಚ್ಚಾಲೆ ಆಟವಾಗಬಾರದು. ಪ್ರಜಾಪ್ರಭುತ್ವವು ಕನಿಷ್ಠಪಕ್ಷ ಪಾರದರ್ಶಕತೆಯನ್ನು ಬಯಸುತ್ತದೆ… ಈ ಸರ್ಕಾರದಿಂದಲೂ ಅದನ್ನೇ ನಿರೀಕ್ಷಿಸಲಾಗುತ್ತದೆ” ಎಂದು ಟೀಕಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಡಿ.3ರಂದು ಕನೇರಿ ಸ್ವಾಮೀಜಿ ವಿರುದ್ಧ ಬೃಹತ್ ಪ್ರತಿಭಟನೆ

ವಚನ ಸಾಹಿತ್ಯವನ್ನು ತಿರುಚಿ ವ್ಯಾಖ್ಯಾನಿಸುವುದು, ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಹೇಳಿಕೆ...

ಕೊಪ್ಪಳ | ಗರ್ಭಿಣಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಅನಾರೋಗ್ಯದಿಂದ ನಿಧನ

ಕುಷ್ಟಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ...

ಬಸವ ಮಂಟಪ ಕೃತಿಗೆ ತೀವ್ರ ಖಂಡನೆ: ‘ಅನುಭವ ಮಂಟಪ ಅಭಿಯಾನ’, ವೈಚಾರಿಕ ಗ್ರಂಥಗಳ ಮೂಲಕ ಉತ್ತರ ನೀಡಲು ನಿರ್ಣಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಗಳಿಗೆ ಅಪಮಾನ ಮಾಡುವಂತಹ ವಿವಾದಾತ್ಮಕ ಕೃತಿಯ...

ಬಸವಣ್ಣನವರ ಅವಹೇಳನ : ರವಿ ಹಂಜ್‌, ವಿಶ್ವೇಶ್ವರ ಭಟ್‌ಗೆ ಜಾಮೀನು

ʼಬಸವ ಮಂಟಪʼ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್‌ ಮತ್ತು...