ಕಾವಡ್ ಯಾತ್ರಿಕರ ಹಿಂಸಾಚಾರ ಖಂಡಿಸಿ ಹೇಳಿಕೆ: ಮುಸ್ಲಿಂ ಧರ್ಮಗುರು ವಿರುದ್ಧ ಎಫ್‌ಐಆರ್; ನೆಟ್ಟಿಗರು ಆಕ್ರೋಶ

Date:

ಉತ್ತರ ಪ್ರದೇಶದಲ್ಲಿ ಕೆಲವು ಕಾವಡ್ ಯಾತ್ರಿಕರು ಹಿಂಸಾಚಾರ ನಡೆಸಿರುವುದು, ಪೊಲೀಸರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿದ ಕಾರಣಕ್ಕೆ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಸಜ್ಜಿದ್ ರಶೀದಿ ವಿರುದ್ಧ ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೆಯೇ ಈ ಹೇಳಿಕೆ ಅಪಮಾನಕರವಾದುದ್ದು ಎಂದು ಹೇಳಿಕೊಂಡಿದ್ದಾರೆ.

- Advertisement -

ಇತ್ತೀಚೆಗೆ ಮೀರತ್‌ನಲ್ಲಿ ಕಾವಡ್ ಯಾತ್ರಿಕರ ಗುಂಪೊಂದು ಪೊಲೀಸರ ಮೇಲೆಯೇ ಹಲ್ಲೆ ನಡೆಸಿತ್ತು. ಮತ್ತೊಂದೆಡೆ, ಆಗಸ್ಟ್ 3ರಂದು ಲಕ್ನೋದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್‌ಗೆ ಬೈಕ್ ಡಿಕ್ಕಿ ಹೊಡೆಯಿತು ಸಣ್ಣ ಅಪಘಾತದ ನೆಪದಲ್ಲಿ, ಕಾವಡ್ ಯಾತ್ರಿಕರ ಗುಂಪೊಂದು ವ್ಯಾನ್ ಮೇಲೆ ದಾಳಿ ನಡೆಸಿ ಹಿಂಭಾಗದ ಗ್ಲಾಸ್ ಹಾಗೂ ಸೈಡ್ ಮಿರರ್‌ಗಳನ್ನು ಪುಡಿಪುಡಿ ಮಾಡಿ ಪರಾರಿಯಾಗಿತ್ತು. ಇದರಿಂದಾಗಿ ಹಲವು ಮಕ್ಕಳಿಗೆ ಗಾಯವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಇದನ್ನೂ ಓದಿ: ದಿಲ್ಲಿ ಮಾತು | ಕೇಸರಿ ಪುಂಡರ ಕಾಂವಡಯಾತ್ರೆ

ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ (IANS) ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಜ್ಜಿದ್ ರಶೀದಿ, ಕಾವಡಿಗರು ಎಂದು ಹೇಳಿಕೊಳ್ಳುವ ಕೆಲವರ ಈ ನಡೆ-ನುಡಿಗಳನ್ನು ತೀವ್ರವಾಗಿ ಪ್ರಶ್ನಿಸಿದ್ದರು. “ರಸ್ತೆಯಲ್ಲಿ ಕುಳಿತು ಮದ್ಯ ಮತ್ತು ಮಾದಕ ದ್ರವ್ಯ ಸೇವಿಸುವವರನ್ನು ಶಿವಭಕ್ತರು ಎಂದು ಕರೆಯಲು ಸಾಧ್ಯವೇ? ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸುವವರು ಹಾಗೂ ಶಾಲಾ ವ್ಯಾನ್ ಗ್ಲಾಸ್ ಒಡೆದು ಮಕ್ಕಳಿಗೆ ಗಾಯ ಉಂಟುಮಾಡುವವರು ನಿಜಕ್ಕೂ ಶಿವಭಕ್ತರೇ” ಎಂದು ಪ್ರಶ್ನೆ ಎತ್ತಿದ್ದರು.

ಈ ಹಿಂಸಾಚಾರಗಳನ್ನು ಉಲ್ಲೇಖಿಸಿ ಮಾತನಾಡಿದ್ದ ರಶೀದಿ, ತಾವು ವಾರ್ಷಿಕ ಕಾವಡ ಯಾತ್ರೆಯಲ್ಲಿ ಭಾಗವಹಿಸುವ ಎಲ್ಲ ಭಕ್ತರ ಬಗ್ಗೆ ಈ ಮಾತು ಹೇಳಿಲ್ಲ ಎಂದು ನಂತರ ಸ್ಪಷ್ಟಪಡಿಸಿದ್ದರು.

ಆದರೆ ರಶೀದಿ ಅವರ ಈ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ‘ಹಿಂದೂ ಸಂಘರ್ಷ ಸಮಿತಿ’ಯ ಮುಖ್ಯಸ್ಥ ನರೇಂದ್ರ ಪನ್ವಾರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಿತ ಕೃತ್ಯಗಳಿಗೆ ಸಂಬಂಧಿಸಿದ ‘ಭಾರತೀಯ ನ್ಯಾಯ ಸಂಹಿತೆ’ಯ (BNS) ವಿವಿಧ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಬಗ್ಗೆ ಸದ್ಯ ತೀವ್ರ ಚರ್ಚೆ ನಡೆಯುತ್ತಿದೆ. ಬಿಜೆಪಿಗರು, ಬಲಪಂಥೀಯರು ಕಾವಡ್ ಯಾತ್ರೆಯ ನೆಪದಲ್ಲಿ ಹಿಂಸಾಚಾರ ಮಾಡಿದವರ ಪರವಾಗಿ ವಾದಿಸುತ್ತಿದ್ದಾರೆ. ಇನ್ನೊಂದೆಡೆ ಧಾರ್ಮಿಕ ನೆಪದಲ್ಲಿ ಹಿಂಸಾಚಾರ ಎಷ್ಟು ಸರಿ ಎಂಬ ಪ್ರಶ್ನೆಯನ್ನೂ ಹಲವು ನೆಟ್ಟಿಗರು ಎತ್ತುತ್ತಿದ್ದಾರೆ.

ಇದನ್ನೂ ಓದಿ: ಕಾವಡ್ ಯಾತ್ರೆ ಮಾರ್ಗದಲ್ಲಿ ಮಸೀದಿ, ಮಝಾರ್ ಕಾಣದಂತೆ ಪರದೆ; ವ್ಯಾಪಕ ಆಕ್ರೋಶ

ಕೆಲವು ನೆಟ್ಟಿಗರು, “ರಶೀದಿ ಕಾವಡ್ ಯಾತ್ರಿಕರನ್ನಾಗಲಿ, ಹಿಂದೂ ಧರ್ಮವನ್ನಾಗಲಿ ಅಥವಾ ಸಂಪೂರ್ಣ ಭಕ್ತ ಸಮೂಹವನ್ನಾಗಲಿ ನಿಂದಿಸಿಲ್ಲ. ಅವರು ಸ್ಪಷ್ಟವಾಗಿ ಎಲ್ಲ ಕಾವಡಿಗರ ಬಗ್ಗೆ ನಾನು ಮಾತನಾಡುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ, ಶಾಲಾ ವ್ಯಾನ್ ಮೇಲೆ ದಾಳಿ ನಡೆಸುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಶೆ ಮಾಡಿ ಗಲಾಟೆ ಮಾಡುವ ಕೆಲವೇ ಕೆಲವು ‘ಉಪದ್ರವಿಗಳ’ ನಡವಳಿಕೆಯನ್ನು ಮಾತ್ರವೇ ಅವರು ಪ್ರಶ್ನಿಸಿದ್ದಾರೆ” ಎಂದು ಹೇಳುವ ಮೂಲಕ ರಶೀದಿ ಬೆಂಬಲಕ್ಕೆ ನಿಂತಿದ್ದಾರೆ.

ಮೀರತ್‌ನಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿರುವುದು ಮತ್ತು ಲಕ್ನೋದಲ್ಲಿ ಸಣ್ಣ ಅಪಘಾತದ ನೆಪದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ವ್ಯಾನ್ ಜಖಂಗೊಳಿಸಿರುವುದು ವಿಡಿಯೋ ಸಾಕ್ಷ್ಯಗಳ ಮೂಲಕ ಸಾರ್ವಜನಿಕವಾಗಿ ಸಾಬೀತಾಗಿದೆ. ಯಾವುದೇ ಧಾರ್ಮಿಕ ಮೆರವಣಿಗೆ ಅಥವಾ ಯಾತ್ರೆಯ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಅಥವಾ ಪೋಲಿಸರ ಮೇಲೆಯೇ ದಾಳಿ ಮಾಡುವುದನ್ನು ಖಂಡಿಸುವುದು ಪ್ರಜಾಸತ್ತಾತ್ಮಕ ಹಕ್ಕು. ಇದನ್ನು ‘ಧಾರ್ಮಿಕ ಭಾವನೆಗೆ ಧಕ್ಕೆ’ ಎಂದು ವ್ಯಾಖ್ಯಾನಿಸುವುದು ಸೂಕ್ತವಲ್ಲ ಎಂದು ನೆಟ್ಟಿಗರು ಪ್ರತಿಪಾದಿಸಿದ್ದಾರೆ.

ಹಿಂಸಾಚಾರ ನಡೆಸಿದ ಮತ್ತು ಶಾಲಾ ವ್ಯಾನ್ ಒಡೆದ ನೈಜ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಆ ಹಿಂಸಾಚಾರವನ್ನು ಪ್ರಶ್ನಿಸಿದವರ ಮೇಲೆಯೇ BNS ಅಡಿಯಲ್ಲಿ ಧಾರ್ಮಿಕ ಭಾವನೆ ಕೆರಳಿಸಿದ ಪ್ರಕರಣ (FIR) ದಾಖಲಿಸಿರುವುದು ವಾಕ್ ಸ್ವಾತಂತ್ರ್ಯವನ್ನು ಹತೋಟಿ ಮಾಡುವ ಪ್ರಯತ್ನ ಎಂದು ಅನೇಕ ನೆಟ್ಟಿಗರು ಆಕ್ಷೇಪಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗ್ರಾಮೀಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದ್ರೆ ಈ ನಂಬರ್‌ಗೆ ಕರೆ ಮಾಡಿ

ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು...

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ ಹಾಕಿದ ಮಾಧ್ಯಮಗಳು

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ...

ಕಲಬುರಗಿಯಲ್ಲಿ ಸೆ.27ರಂದು ಬಸವಾದಿ ಶರಣರ ಹಿಂದೂ ಸಮಾವೇಶ : ಕನೇರಿ ಸ್ವಾಮೀಜಿಗೆ ಅನುಮತಿ ಬೇಡ

ಕಲಬುರಗಿಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ...