NSA ಅಡಿ ಬೇಕಾಬಿಟ್ಟಿ ಬಂಧನಕ್ಕೆ ಸುಪ್ರೀಂ ಲಗಾಮು: ಸ್ವತಂತ್ರ ಸಾಕ್ಷ್ಯಾಧಾರವಿಲ್ಲದೆ ಕೇವಲ ತಪ್ಪೊಪ್ಪಿಗೆಯಡಿ ಬಂಧಿಸುವಂತಿಲ್ಲ

Date:

ಕೇವಲ ಪೊಲೀಸ್ ಕಸ್ಟಡಿಯಲ್ಲಿ ಪಡೆದ ಬಲವಂತದ ತಪ್ಪೊಪ್ಪಿಗೆಯ ಆಧಾರದ ಮೇಲೆ ಆರೋಪಿಯೊಬ್ಬನ ವಿರುದ್ಧ ಕಠಿಣವಾದ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (NSA) ಅಡಿ ನಿರಂಕುಶ ಬಂಧನ (Preventive Detention) ಹೇರಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಭಾರೀ ದಂಡ ವಿಧಿಸಿ, ತೀವ್ರ ತರಾಟೆಗೆ ತೆಗೆದುಕೊಂಡಿದೆ.

- Advertisement -

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ದ್ವಿಸದಸ್ಯ ಪೀಠವು, 2024ರ ಸಂಭಾಲ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಮುಲ್ಲಾ ಅಫ್ರೋಜ್ ಎಂಬಾತನ ಮೇಲಿದ್ದ ಎನ್‌ಎಸ್‌ಎ ಬಂಧನ ಆದೇಶವನ್ನು ರದ್ದುಗೊಳಿಸಿದೆ. ಜೂನ್ 8, 2026ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಬದಿಗೊತ್ತಿರುವ ಸುಪ್ರೀಂ ಕೋರ್ಟ್, ಸರಿಯಾದ ಕಾನೂನು ಪ್ರಕ್ರಿಯೆ ಅನುಸರಿಸದ ಉತ್ತರ ಪ್ರದೇಶ ಸರ್ಕಾರಕ್ಕೆ 10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

2024ರ ನವೆಂಬರ್‌ನಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಸಂಭಾಲ್‌ನ ಜಾಮಾ ಮಸೀದಿಯ ಸಮೀಕ್ಷೆ ನಡೆಸಲು ತೆರಳಿದ್ದ ತಂಡದ ಮೇಲೆ ದಾಳಿ ನಡೆದು, ಭಾರಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಭೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಮತ್ತು ಅದರ ರೂವಾರಿ ಎಂಬ ಆರೋಪದ ಮೇಲೆ ಮುಲ್ಲಾ ಅಫ್ರೋಜ್‌ನನ್ನು ಜನವರಿ 17, 2025 ರಂದು ಪೊಲೀಸರು ಬಂಧಿಸಿದ್ದರು. ಆತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ (ಜೈಲಿನಲ್ಲಿ) ಇರುವಾಗಲೇ, ಅಕ್ಟೋಬರ್ 13, 2025 ರಂದು ಆತನ ಮೇಲೆ ಜಿಲ್ಲಾಡಳಿತವು ಕಠಿಣವಾದ ಎನ್‌ಎಸ್‌ಎ ಕಾಯ್ದೆಯನ್ನು ಜಾರಿಗೊಳಿಸಿತ್ತು.

‘ಎನ್‌ಕೌಂಟರ್ ಬೆದರಿಕೆ ಹಾಕಿ ತಪ್ಪೊಪ್ಪಿಗೆ ಪಡೆಯಲಾಗಿತ್ತು’
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅಫ್ರೋಜ್, ತನ್ನ ವಿರುದ್ಧದ ಎನ್‌ಎಸ್‌ಎ ಬಂಧನವನ್ನು ಬಲವಾಗಿ ಪ್ರಶ್ನಿಸಿದ್ದನು. “ಪೊಲೀಸರು ಕಸ್ಟಡಿಯಲ್ಲಿದ್ದಾಗ ನನಗೆ ತೀವ್ರ ಚಿತ್ರಹಿಂಸೆ ನೀಡಿದ್ದರು ಮತ್ತು ಎನ್‌ಕೌಂಟರ್ ಮಾಡುವ ಬೆದರಿಕೆ ಹಾಕಿದ್ದರು. ಪ್ರಾಣಭಯದಿಂದ ನಾನು ಅವರು ಹೇಳಿದಂತೆ ತಪ್ಪೊಪ್ಪಿಗೆ (Confession) ನೀಡಿದ್ದೆ. ಕಾನೂನಿನ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿ ಪಡೆದ ಇಂತಹ ತಪ್ಪೊಪ್ಪಿಗೆಗೆ ಯಾವುದೇ ಮಾನ್ಯತೆಯಿಲ್ಲ. ಕೇವಲ ಈ ನ್ಯಾಯಾಲಯದ ಹೊರಗಿನ (Extra-judicial) ಹೇಳಿಕೆಯ ಆಧಾರದ ಮೇಲೆಯೇ ನನ್ನ ಮೇಲೆ ಎನ್‌ಎಸ್‌ಎ ಹೇರಲಾಗಿದೆ” ಎಂದು ಆತ ವಾದಿಸಿದ್ದನು. ಆತನ ಈ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು.

ಸರ್ಕಾರದ ಪರ ವಕೀಲರು (ಪ್ರಾಸಿಕ್ಯೂಷನ್) ಘಟನೆಯ ತೀವ್ರತೆಯನ್ನು ನ್ಯಾಯಾಲಯದ ಮುಂದಿಟ್ಟಿದ್ದರು. “ಅಫ್ರೋಜ್‌ನ ಪ್ರಚೋದನೆಯಿಂದಲೇ ಗುಂಪು ಹಿಂಸಾಚಾರಕ್ಕೆ ತಿರುಗಿತ್ತು. ಗಲಭೆಯ ತೀವ್ರತೆಗೆ ಇಡೀ ಸಂಭಾಲ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಭೀತಿಗೊಳಗಾದ ಅಂಗಡಿಯವರು ತಮ್ಮ ಷಟರ್‌ಗಳನ್ನು ಎಳೆದುಕೊಂಡಿದ್ದರು. ಸಾರ್ವಜನಿಕರು ಪ್ರಾಣಭಯದಿಂದ ತಮ್ಮ ಮನೆಗಳ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಅಡಗಿಕೊಳ್ಳಲು ಜಾಗ ಹುಡುಕುತ್ತಿದ್ದರು. ಮಾರುಕಟ್ಟೆಯಲ್ಲಿದ್ದ ಗ್ರಾಹಕರು ಜೀವಭಯದಿಂದ ಓಡಿಹೋಗಿದ್ದರು ಅಥವಾ ಅಂಗಡಿಗಳೊಳಗೆ ಅಡಗಿಕೊಂಡಿದ್ದರು,” ಎಂದು ವಿವರಿಸಿದ್ದರು.

ಹೈಕೋರ್ಟ್ ಈ ಹಿಂದೆ ಬಂಧನವನ್ನು ಎತ್ತಿಹಿಡಿದಿದ್ದೇಕೆ?
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಎನ್‌ಎಸ್‌ಎ ಬಂಧನವನ್ನು ಎತ್ತಿಹಿಡಿದಿತ್ತು. ಸಂಭಾಲ್ ಜಿಲ್ಲಾಧಿಕಾರಿಗಳು ಎನ್‌ಎಸ್‌ಎ ಹೇರುವಾಗ ತಮ್ಮ ಅಧಿಕಾರ ಮತ್ತು ವಿವೇಚನೆಯನ್ನು (Subjective satisfaction) ಸರಿಯಾಗಿಯೇ ಬಳಸಿದ್ದಾರೆ, ಇದು ಆತುರದ ನಿರ್ಧಾರವಾಗಿರಲಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಜೊತೆಗೆ, ಆರೋಪಿಗೆ ಆತನ ಬಂಧನಕ್ಕೆ ಆಧಾರವಾದ 22 ದಾಖಲೆಗಳನ್ನು ಒದಗಿಸಲಾಗಿರುವುದರಿಂದ ಮಾಹಿತಿ ನೀಡದೆ ಬಂಧಿಸಲಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದಿತ್ತು.

ಗಲಭೆಕೋರರ ದಾಳಿಯಿಂದ ಅನೇಕ ಪೊಲೀಸರು ಗಾಯಗೊಂಡಿದ್ದರು ಹಾಗೂ ಭಾರಿ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ಹೈಕೋರ್ಟ್ ಉಲ್ಲೇಖಿಸಿತ್ತು. ಅಫ್ರೋಜ್‌ನ ಕೃತ್ಯವು ಸಮಾಜದ ನೆಮ್ಮದಿಯನ್ನು ಕದಡಿತ್ತು ಮತ್ತು ಜನಜೀವನದ ಸಹಜ ಗತಿಗೆ (Even tempo of life) ಪೆಟ್ಟು ನೀಡಿತ್ತು, ಇದು ಕೇವಲ ಸ್ಥಳೀಯ ‘ಕಾನೂನು ಮತ್ತು ಸುವ್ಯವಸ್ಥೆ’ಯ (Law and order) ಸಮಸ್ಯೆಯಾಗಿರಲಿಲ್ಲ, ಬದಲಾಗಿ ಒಟ್ಟಾರೆ ‘ಸಾರ್ವಜನಿಕ ಸುವ್ಯವಸ್ಥೆ’ಗೆ (Public order) ಧಕ್ಕೆ ತಂದ ಕೃತ್ಯವಾಗಿತ್ತು ಮತ್ತು ಆತ ಬಿಡುಗಡೆಯಾದರೆ ಮತ್ತೆ ಸಾರ್ವಜನಿಕ ಸುವ್ಯವಸ್ಥೆ ಹದಗೆಡುವ ಅಪಾಯವಿತ್ತು ಎಂಬ ಕಾರಣಗಳನ್ನು ನೀಡಿ ಹೈಕೋರ್ಟ್ ಬಂಧನವನ್ನು ಸಮರ್ಥಿಸಿಕೊಂಡಿತ್ತು.

ಸುಪ್ರೀಂ ಕೋರ್ಟ್‌ನ ಸ್ಪಷ್ಟ ಸಂದೇಶ
ಹೈಕೋರ್ಟ್‌ನ ಈ ಮೇಲಿನ ಎಲ್ಲಾ ವಾದಗಳನ್ನು ಬದಿಗೊತ್ತಿರುವ ಸುಪ್ರೀಂ ಕೋರ್ಟ್, ಕೇವಲ ಪೊಲೀಸ್ ಕಸ್ಟಡಿಯಲ್ಲಿ ಪಡೆಯಲಾದ ‘ಬಲವಂತದ ತಪ್ಪೊಪ್ಪಿಗೆ’ಯನ್ನು ಆಧರಿಸಿ, ಇತರ ಯಾವುದೇ ಪ್ರಬಲ ಸ್ವತಂತ್ರ ಸಾಕ್ಷ್ಯಾಧಾರಗಳಿಲ್ಲದೆ ರಾಜ್ಯ ಸರ್ಕಾರಗಳು ಬೇಕಾಬಿಟ್ಟಿಯಾಗಿ ಎನ್‌ಎಸ್‌ಎಯಂತಹ ಕಠಿಣ ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂಬ ಕಟ್ಟುನಿಟ್ಟಿನ ಹಾಗೂ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಅಲ್ಲಮ ಜಗತ್ತಿನ ಶ್ರೇಷ್ಠ ಅನುಭಾವಿ

ಅಲ್ಲಮಪ್ರಭು ಅವರು ಜಗತ್ತಿನ ಶ್ರೇಷ್ಠ ಅನುಭಾವಿಗಳಾಗಿದ್ದು, ಅವರ ಚಿಂತನೆ ಹಾಗೂ ವಚನಗಳ...

ರಾಯಚೂರು | ಕಾಲೇಜಿನಲ್ಲಿ ಶೌಚಾಲಯವಿದೆ, ನೀರಿಲ್ಲ: 400 ಮಂದಿ ವಿದ್ಯಾರ್ಥಿನಿಯರ ಪರದಾಟ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಸಾಲದು; ಅವರು ಸುರಕ್ಷಿತ, ಗೌರವಯುತ ಹಾಗೂ ಸ್ವಚ್ಛ...

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...