ಕರ್ನಾಟಕದ ಆನೆ, ಕೇರಳದ ಆನೆ ಅಂತ ಯಾವುದೂ ಇಲ್ಲ: ಸಚಿವ ಈಶ್ವರ್‌ ಖಂಡ್ರೆ

Date:

ಕೇರಳದ ವಯನಾಡಿನ ಮನಂತವಾಡಿಯಲ್ಲಿ ರೇಡಿಯೋ ಕಾಲರ್ಡ್ ಆನೆಯೊಂದು ಭೀತಿಯನ್ನು ಹರಡಿದ ಒಂದು ವಾರದ ಬಳಿಕ ಅಂತಹ ಮತ್ತೊಂದು ಆನೆ ಅದೇ ಪ್ರದೇಶಕ್ಕೆ ನುಸುಳಿರುವ ಘಟನೆ ನಡೆದಿದೆ.

ಹಾಸನ ಅರಣ್ಯ ವಿಭಾಗದ ಬೇಲೂರಿನಲ್ಲಿ ನಿಯಮಿತವಾಗಿ ಬೆಳೆಗಳಿಗೆ ದಾಳಿ ಮಾಡುತ್ತಿದ್ದ ಬೇಲೂರಿನ ಮಕಾನ ಎಂಬ ಆನೆಯನ್ನು ರಾಜ್ಯದ ಅರಣ್ಯ ಇಲಾಖೆ ಸೆರೆಹಿಡಿದು, ರೇಡಿಯೋ ಕಾಲರ್ ಮಾಡಿ ಕಾಡಿಗೆ ಬಿಟ್ಟಿತ್ತು ಎಂದು ವರದಿಯಾಗಿದೆ.

ಕರ್ನಾಟಕ ಅರಣ್ಯ ಪ್ರದೇಶದಿಂದ ಬಂದ ಆನೆ ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪಡಮಾಲಾದಲ್ಲಿ ನಿವಾಸಿಗಳ ಗುಂಪಿನ ಮೇಲೆ ದಾಳಿ ನಡೆಸಿ ಪನಾಚಿಯಿಲ್ ಅಜೀಶ್(47) ಎಂಬ ವ್ಯಕ್ತಿಯನ್ನು ತುಳಿದು ಕೊಂದಿದೆ. ಇದು ಗುಡ್ಡಗಾಡು ಜಿಲ್ಲೆಯಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಎರಡು ದಿನಗಳ ಹಿಂದೆ ಕರ್ನಾಟಕದ ಅರಣ್ಯಾಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿದ್ದ ಕಾಡು ಆನೆ ವಯನಾಡ್ ಪ್ರವೇಶಿಸಿರುವುದನ್ನು ಕೇರಳ ಅರಣ್ಯ ಇಲಾಖೆ ಖಚಿತಪಡಿಸಿರುವುದು ತಿಳಿದುಬಂದಿದೆ. ಕೇರಳ ಅರಣ್ಯ ಇಲಾಖೆ ಆನೆ ಇರುವುದನ್ನು ದೃಢಪಡಿಸಿದ್ದರೆ, ಸ್ಥಳೀಯರ ಮೇಲೆ ದಾಳಿ ಮಾಡದಂತೆ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರದಂತೆ ತಡೆಯಲು ಏಕೆ ಕ್ರಮಕೈಗೊಂಡಿಲ್ಲ” ಎಂದು ಸ್ಥಳೀಯರು ಅರಣ್ಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಆನೆ ಅವರತ್ತ ಧಾವಿಸುತ್ತಿದ್ದಂತೆ, ಸ್ಥಳೀಯರು ಸುರಕ್ಷಿತವಾಗಿ ಓಡಲು ಪ್ರಯತ್ನಿಸಿದ್ದಾರೆ. ಅಜೀಶ್ ಮನೆಯ ಕಾಂಪೌಂಡ್ ಗೋಡೆಯ ಗೇಟ್ ಮೇಲೆ ಹಾರಿದನು. ಆದರೆ ಆನೆ ಅವನನ್ನು ಬೆನ್ನಟ್ಟಿ, ಗೇಟ್ ಒಡೆದು ಕಾಂಪೌಂಡ್ ಒಳಗೆ ನುಗ್ಗಿತು. ನಂತರ ಅದು ಅಜೀಶ್‌ನನ್ನು ತುಳಿದು ತೆಗೆದು ಎಸೆಯಿತು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಆನೆಯು ಅಜೀಶ್‌ ಮೇಲೆ ದಾಳಿ ಮಾಡಿರುವ ಘಟನೆಯು ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಬೃಹತ್ ಪ್ರತಿಭಟನೆಗೆ ಮುಂದಾದರೆ, ಕೇರಳ ಅಧಿಕಾರಿಗಳು “ಕರ್ನಾಟಕವು ಕಾಡು ಪ್ರಾಣಿಗಳನ್ನು ತಮ್ಮ ಭೂಪ್ರದೇಶಕ್ಕೆ ಬಿಡುತ್ತಿದೆ” ಎಂದು ಆರೋಪಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, “ಈ ಆರೋಪಗಳು ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾದವು. ವಯನಾಡ್ ಘಟನೆ ದುರದೃಷ್ಟಕರ ಘಟನೆ ಇದನ್ನು ನಾನೂ ಕೂಡ ತೀವ್ರವಾಗಿ ವಿಷಾದಿಸುತ್ತೇನೆ. ಆದರೆ ಅದೇ ಸಮಯದಲ್ಲಿ, ನಾವು ಪ್ರಾಣಿಗಳನ್ನು ರಾಜ್ಯ ಅಥವಾ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ‘ಕರ್ನಾಟಕ’ದ ಆನೆ, ಕೇರಳದ ಆನೆ ಅಂತ ಯಾವುದೂ ಇಲ್ಲ” ಎಂದು ಹೇಳಿದ್ದಾರೆ.

“ಶತಮಾನಗಳಿಂದ ಆನೆಗಳು ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಇತರ ನೆರೆಯ ರಾಜ್ಯಗಳ ಮೂಲಕ ಸಾಮಾನ್ಯವಾಗಿ ‘ಆನೆ ಕಾರಿಡಾರ್’ ಮೂಲಕ ಸಂಚರಿಸುತ್ತಿವೆ. ರಾಜ್ಯ ಗಡಿಗಳ ಆಧಾರದ ಮೇಲೆ ಪ್ರಾಣಿಗಳನ್ನು ವರ್ಗೀಕರಿಸುವುದು ನ್ಯಾಯಸಮ್ಮತವಲ್ಲ” ಎಂದು ಈಶ್ವರ್‌ ಖಂಡ್ರೆ ಅವರು ಸ್ಪಷ್ಟಪಡಿಸಿದ್ದಾರೆ.

“ಕರ್ನಾಟಕವು ಉದ್ದೇಶಪೂರ್ವಕವಾಗಿ ಸ್ಥಳಾಂತರಗೊಂಡ ಪ್ರಾಣಿಗಳನ್ನು ಕೇರಳಕ್ಕೆ ಬಿಡುಗಡೆ ಮಾಡುತ್ತಿದೆ ಎಂಬ ಆರೋಪವು ಸಂಪೂರ್ಣವಾಗಿ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿದೆ” ಇತ್ತೀಚೆಗೆ, ರೇಡಿಯೋ ಕಾಲರ್ ಅಳವಡಿಸಿದ ಕರ್ನಾಟಕದ ತಣ್ಣೀರ್ ಕೊಂಬನ್ ಎಂಬ ಆನೆ ಮನಂತವಾಡಿಗೆ ಪ್ರವೇಶಿಸಿ 16 ಗಂಟೆಗಳಿಗೂ ಹೆಚ್ಚು ಕಾಲ ಭೀತಿಯನ್ನು ಸೃಷ್ಟಿಸಿತ್ತು. ಇದನ್ನು ಶಾಂತಗೊಳಿಸಿ ಫೆಬ್ರವರಿ 2ರಂದು ಸೆರೆಹಿಡಿಯಲಾಯಿತು. ಆದರೆ, ಕರ್ನಾಟಕಕ್ಕೆ ಸ್ಥಳಾಂತರಿಸಿದ ನಂತರ, ಆ ಆನೆ ಮೃತಪಟ್ಟಿದೆ”ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಶಾಲೆಯಲ್ಲಿ ವಿದ್ಯುತ್ ಅವಘಡ; ಓರ್ವ ಸಾವು – 18 ಮಂದಿ ಗಾಯ

“ನವೆಂಬರ್ 30, 2023 ರಂದು ಬೇಲೂರು ಬಳಿ ದಂತಗಳಿಲ್ಲದ 30 ವರ್ಷದ ಮಕಾನ ಎಂಬ ಗಂಡು ಆನೆಯನ್ನು ರಕ್ಷಿಸಿ ರೇಡಿಯೋ ಕಾಲರ್ ಹಾಕಲಾಗಿದೆ. ಬಂಡೀಪುರ ಮತ್ತು ಮುದುಮಲೈ ರಾಷ್ಟ್ರೀಯ ಉದ್ಯಾನಗಳಿಗೆ ಹೊಂದಿಕೊಂಡಿರುವ ಚಾಮರಾಜನಗರದ ಬಿಆರ್‌ಟಿ ಹುಲಿ ಮೀಸಲು ಪ್ರದೇಶಕ್ಕೆ ಆನೆಯನ್ನು ಸ್ಥಳಾಂತರಿಸಲಾಯಿತು” ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ತನ್ನದೇ ಛಾಪು ಮೂಡಿಸಿದೆ: ಮಂಜುನಾಥ ಸುಣಗಾರ

ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ...

ವಿಜಯಪುರ | ಮೋದಿ ದುರಾಡಳಿತ ಕೊನೆಗಾಣಿಸಬೇಕು: ಅಪ್ಪಾಸಾಹೇಬ ಯರನಾಳ

ಮೋದಿ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳ್ಳುವ ಸಮಯ ಬಂದಿದೆ, ಮೋದಿ ಈ...

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...