ದಾವಣಗೆರೆ | ‘ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕದ ಬಿಡುಗಡೆ

Date:

ದಾವಣಗೆರೆಯು ರಾಜ್ಯದ ರಾಜಧಾನಿ ಆಗಲು ಅರ್ಹತೆ ಹೊಂದಿದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಂಚಿತಗೊಂಡಿದೆ. ಅದಾಗ್ಯೂ, ಸಾಹಿತ್ಯ, ರಂಗ ಚಟುವಟಿಕೆ, ವಿದ್ಯಾಕೇಂದ್ರವೂ ಆಗಿರುವ ದಾವಣಗೆರೆಯನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿಸಲು ಪ್ರಯತ್ನಿಸಿಬೇಕಿದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ.ಪಿ ಬಸವರಾಜು ಹೇಳಿದರು.

ದಾವಣಗೆರೆಯ ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಹೊಸ ಕಥಾ ಸಂಕಲನ ‘ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬಿ.ಟಿ.ಜಾಹ್ನವಿ ಅವರ ಹೊಸ ಕಥಾಸಂಕಲನ ‘ಒಬ್ರು ಸುದ್ಯಾಕೆ ಒಬ್ರು ಗದ್ಯಾಕೆ’ ಪುಸ್ತಕದ -ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಧ್ಯ ಕರ್ನಾಟಕದ ಕೇಂದ್ರಬಿಂದು ಆಗಿರುವ ದಾವಣಗೆರೆ ಅಂದು ವಾಣಿಜ್ಯ ಕೇಂದ್ರವಾಗಿತ್ತು. ಈಗ ವಿದ್ಯಾಕೇಂದ್ರವಾಗಿದೆ. ಇಲ್ಲಿ ಅಚ್ಚ ಕನ್ನಡ ಮಾತನಾಡುತ್ತಾರೆ. ತೆಲುಗು, ತಮಿಳು ಮಲಯಾಳಂ, ಮರಾಠಾ ಯಾವ ಭಾಷೆಯ ಪ್ರಭಾವ ಇಲ್ಲದೇ ಕೇವಲ ಕನ್ನಡವನ್ನು ಮಾತನಾಡುವ ಜನರು ಇಲ್ಲಿದ್ದಾರೆ. ರಾಜಕೀಯ ಒತ್ತಡ ತರುವ ರಾಜಕೀಯ ಶಕ್ತಿ ಕೊರತೆ ಇರುವುದರಿಂದಲೇ ದಾವಣಗೆರೆಗೆ ರಾಜಧಾನಿ ಸ್ಥಾನಮಾನ ಸಿಗಲಿಲ್ಲ. ಆದರೆ, ಸಾಂಸ್ಕೃತಿಕ ರಾಜಧಾನಿ ಆಗಿಯಾದರೂ ಮಾಡಬೇಕಿತ್ತು ಎಂದು ಅಭಿಪ್ರಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಲ್ಲಾ ಕಡೆ ಪುಸ್ತಕ ಬಿಡುಗಡೆಯಾಗುತ್ತಿವೆ. ಕೆಲವರು ಪುಸ್ತಕ ಬಿಡುಗಡೆ ಆಗುತ್ತವೆ ಆದರೆ ಓದುವವರಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳು ಬಂದಿರುವುದರಿಂದ ಓದುಗರ ಸ್ವರೂಪ ಬದಲಾಗಿದೆ. ತೇಜಸ್ವಿ, ಕುವೆಂಪು ಅವರ ಪುಸ್ತಕಗಳು ಅಗಾಧವಾಗಿ ಖರ್ಚಾಗುತ್ತವೆ. ಹೊಸ ತಲೆಮಾರು ಓದುತ್ತಾರೆ. ಏಕೆಂದರೆ ಅವರಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಅದೇ ರೀತಿಯ ಪುಸ್ತಕಗಳನ್ನು ಎಲ್ಲಾ ವರ್ಗದ ಜನರು ಬಯಸುತ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.

ಬರೆಯುವವರ ಸಂಖ್ಯೆ ಈಗ ಹೆಚ್ಚಾಗದೆ. ಏಕೆಂದರೆ ದಮನಿತ, ಅಲಕ್ಷಿತ, ಅಳಿವಿನ ಅಂಚಿನಲ್ಲಿರುವ ಸಮುದಾಯ `ಗಳಿಗೂ ಕೂಡ ಶಿಕ್ಷಣ ಸಿಕ್ಕಿರುವುದರಿಂದ ಬರೆಯುವವರು ಅಧಿಕವಾಗಿದ್ದಾರೆ. ಸಾಹಿತ್ಯದಲ್ಲಿ ಸವಾಲಾಗಿರುವುದು ಕಾವ್ಯ. ಆದರೆ ಅದೇ ಎಲದಲರಿಗೂ ಸುಲಭವಾಗಿದೆ. ಸಂಕೀರ್ಣ ಅನುಭವಗಳನ್ನು ಕಟ್ಟಿಕೊಡುವುದೇನಿದ್ದರೂ ಕಥೆ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಕುರಿತು ಲೇಖಕರು ಮತ್ತು ತುಮಕೂರಿನ ಪ್ರಾಧ್ಯಾಪಕರಾದ ಡಾ. ರವಿಕುಮಾರ ನೀಹ ಅವರು ಮಾತನಾಡಿ ಪುಸ್ತಕದಲ್ಲಿರುವ ಕಥೆಗಳು ಮನುಷ್ಯನ ಅಂತ ಕರಣವನ್ನು ತೆರೆದಿಡುತ್ತವೆ. ಕಳ್ಳು ಬಳ್ಳಿಯಂತಹ ಕಥೆಯಲ್ಲಿ ಒಂದೇ ಜಾತಿಯ ಜಮೀನ್ದಾರಿಕೆಯ ಮನುಷ್ಯ ತನ್ನದೇ ಜಾತಿಯವನನ್ನು ಜೀತಕೊಳಪಡಿಸುವುದನ್ನು ಲೇಖಕಿ ಸೂಕ್ಷ್ಮವಾಗಿ ವಿವರಿಸುತ್ತಾ ಅಂತರಂಗದಲ್ಲಿ ವಿರೋಧಿಸುತ್ತಾರೆ ಎಂದರು.

ಕತೆಗಾರ್ತಿ ಬಿ. ಟಿ.ಜಾಹ್ನವಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ನನ್ನ ಮೊದಲ ಪುಸ್ತಕ 1987ರಲ್ಲಿ ಪ್ರಕಟಗೊಂಡಿತು ನನ್ನಲ್ಲಿ ಬರೆಯುವ ಉರುಪು ಮೂಡಿಸಿದವರು ಲಂಕೇಶ್ ಎಂದರು.ಈ ಮೊದಲೆಲ್ಲ ನನ್ನ ಪುಸ್ತಕಗಳು ಮೊದಲೆಲ್ಲಾ ಪ್ರಕಟಗೊಂಡರೂ ಪ್ರಕಾಶನದಲ್ಲೇ ಉಳಿದು ಬಿಟ್ಟವು.

ಪ್ರಕಾಶನ ಮತ್ತು ಪುಸ್ತಕ ರಾಜಕಾರಣದಲ್ಲಿ ಬೇಸತ್ತು ಬರೆಯುದನ್ನೇ ನಿಲ್ಲಿಸಿದೆ. ಆದರೆ ಪ್ರಕಾಶಕರು ಹಿರಿಯರು ಸಾಹಿತಿಗಳ ಹಿತೈಷಿಗಳ ಹಾರೈಕೆಯಿಂದ ಮತ್ತೆ ಬರೆಯುತ್ತಿದ್ದೇನೆ ಈ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಿರುವುದು ಸಂತೋಷ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ ಎಂ ಬಿ ರಾಮಚಂದ್ರಪ್ಪ ಅವರು ಮಾತನಾಡಿ ಇಂದಿನ ಯುವ ಪೀಳಿಗೆಗೆ ಜಾಹ್ನವಿ ಅಂತ ಕಥೆಗಾರ್ತಿಯರ ಕಥೆಗಳು ಅವಶ್ಯಕವಿದ್ದು ಸೂಕ್ಷ್ಮ ಸಂವೇದನೆಗಳ ಮೂಲಕ ಅವರನ್ನು ತಲುಪಲು ಸಾಧ್ಯವಾಗುತ್ತಿವೆ. ಕನ್ನಡ  ಸಂಸ್ಕೃತಿಕ ಲೋಕದ ಯಾವ ಕತೆಗಾರರು ಮುಟ್ಟಲಾಗದ ಒಳ ಜಗತ್ತೊಂದನ್ನು ಅವರು ಯಾವ ಸಿದ್ಧಾಂತಕ್ಕೂ ಒಳಗಾಗದೆ ಬಹುಜನರ ಸಾಮಾಜಿಕ ಮೌಲ್ಯ ಮತ್ತು ನ್ಯಾಯ  ತಿಳಿಸುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಕೊನೆಯಲ್ಲಿ ನೀನಾಸಂ ನ ವಾಣಿ, ವಿದ್ಯಾ ಅವರು ಪ್ರಸ್ತುತ ಪಡಿಸಿದ ಬಿ.ಟಿ.ಜಾಹ್ನವಿ ಅವರ “ದೂಪ್ದಳ್ಳಿ ಸೆಕ್ಸಿ ದುರುಗ” ರಂಗ ಪ್ರಸ್ತುತಿ ಎಲ್ಲರ ಮೆಚ್ಚುಗೆ ಗಳಿಸಿತು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ, ಪ್ರೊ.ಎ.ಬಿ ರಾಮಚಂದ್ರಪ್ಪ, ಸಾಹಿತಿಗಳಾದ ಸೌಮ್ಯ ಕೋಡೂರು, ಕೌದಿ ಪ್ರಕಾಶನದ ಡಾ. ಮಮತ, ಹಾಗೂ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕುಂದು ಕೊರತೆ : ಮೂಲ ಸೌಕರ್ಯ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ಕೊಡಿ

ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ....

ದಾವಣಗೆರೆ | ಭದ್ರಾ ಜಲಾಶಯದ ಸುರಕ್ಷತೆಗೆ ಒತ್ತಾಯ; ಜು.24ರಂದು ಬೃಹತ್ ಪ್ರತಿಭಟನೆ

ಭದ್ರಾ ಜಲಾಶಯದ ಸುರಕ್ಷತೆಗೆ ಆದ್ಯತೆ, ಸೋರಿಕೆ ತಡೆಗಟ್ಟಲು ಹಾಗೂ ಡ್ಯಾಂ ನೀರು...

ಕರ್ತವ್ಯ ಸಂಬಂಧಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ; ಪೊಲೀಸರಿಗೆ ಆಯುಕ್ತರ ಎಚ್ಚರಿಕೆ

ಪೊಲೀಸ್‌ ಸಿಬ್ಬಂದಿಗಳು ಸಮವಸ್ತ್ರದಲ್ಲಿರುವ ತಮ್ಮ ಫೋಟೋ, ವಿಡಿಯೋ, ರೀಲ್ಸ್‌ ಸೇರಿದಂತೆ ಕರ್ತವ್ಯಕ್ಕೆ...

ಮಡಿಕೇರಿ | ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು: ಧರ್ಮಜ ಉತ್ತಪ್ಪ

ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಗತಿ ಸಂಬಂಧಿಸಿದಂತೆ ಜಿಲ್ಲಾ ಅನುಷ್ಠಾನ ಸಮಿತಿ...