ಸಿಜೆಪಿ ಪ್ರತಿಭಟನಾ ಸ್ಥಳದಲ್ಲಿ ಕಲ್ಲು ತುಂಬಿದ್ದ ಲಾರಿ ತಂದು ನಿಲ್ಲಿಸಿಕೊಂಡಿದ್ದ ದೆಹಲಿ ಪೊಲೀಸರು

Date:

ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಸಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಳಿ ನಿಗೂಢವಾಗಿ ಕಾಣಿಸಿಕೊಂಡಿದ್ದ ‘ಕಲ್ಲು ತುಂಬಿದ ಲಾರಿ’ಯ ಅಸಲಿಯತ್ತನ್ನು ‘ನ್ಯೂಸ್‌ಲಾಂಡ್ರಿ’ ಜಾಲತಾಣದ ತನಿಖಾ ವರದಿ ಬಯಲಿಗೆಳೆದಿದೆ. ಪೊಲೀಸರ ವಶದಲ್ಲಿದ್ದ ಲಾರಿಯೇ ಪ್ರತಿಭಟನಾ ಸ್ಥಳದಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದು, ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

- Advertisement -

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ತೀವ್ರ ಭದ್ರತೆಯ ನಡುವೆಯೂ ಕಲ್ಲುಗಳಿಂದ ತುಂಬಿದ್ದ ಡಂಪರ್ ಲಾರಿಯೊಂದು ಪ್ರತಿಭಟನಾ ಸ್ಥಳದ ಬಳಿ ಬಂದು ನಿಂತಿತ್ತು. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿ, ಹಿಂಸಾಚಾರ ಸೃಷ್ಟಿಸುವ ಹಾಗೂ ಅವರ ಮೇಲೆಯೇ ಗೂಬೆ ಕೂರಿಸುವ ವ್ಯವಸ್ಥಿತ ಸಂಚು ಇದಾಗಿದೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿತ್ತು. ಈ ಲಾರಿಯ ನೋಂದಣಿ ಸಂಖ್ಯೆ ಆಧರಿಸಿ ‘ನ್ಯೂಸ್‌ಲಾಂಡ್ರಿ’ ತನಿಖೆ ನಡೆಸಿದಾಗ ಅಚ್ಚರಿಯ ಸತ್ಯ ಹೊರಬಿದ್ದಿದೆ. ಈ ಲಾರಿಯನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯ ಪೊಲೀಸರು ಪ್ರತಿಭಟನೆಗೆ ನಾಲ್ಕು ದಿನ ಮುನ್ನವೇ, ಅಂದರೆ ಜುಲೈ 16ರಂದು ಅಪಘಾತವೊಂದರ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದರು. ಠಾಣೆಯ ‘ಮಾಲ್ಖಾನಾ’ ಸುಪರ್ದಿಯಲ್ಲಿದ್ದ ಈ ವಾಹನ ಜುಲೈ 20ರಂದು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದು ಹೇಗೆ ಎಂಬುದು ತನಿಖೆಯಿಂದ ಎದ್ದಿರುವ ಪ್ರಮುಖ ಪ್ರಶ್ನೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಜುಲೈ 16ರ ಬೆಳಗಿನ ಜಾವ 4.15ರ ಸುಮಾರಿಗೆ ಫಿರೋಜ್ ಷಾ ರಸ್ತೆಯಲ್ಲಿ ಈ ಅತಿವೇಗದ ಲಾರಿ, ಮಾರುತಿ ಈಕೋ ಕಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ ಏಳು ಜನ ಗಾಯಗೊಂಡಿದ್ದರು. ಆ ಬಳಿಕ ಲಾರಿಯನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಯಲ್ಲೇ ಇರಿಸಲಾಗಿತ್ತು. ವಾಹನದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆ ಹಾಗೂ ಕಲ್ಲುಗಳಿದ್ದವು. ಆದರೆ ಇದನ್ನು ತಾವು ಎರಡು ತಿಂಗಳ ಹಿಂದೆಯೇ ಮಾರಾಟ ಮಾಡಿದ್ದೆವು ಎಂದು ಲಾರಿಯ ಹಿಂದಿನ ಮಾಲೀಕ ಕೇಶವ್ ಕುಮಾರ್ ಸಾಹ್ನಿ ಸ್ಪಷ್ಟಪಡಿಸಿದ್ದಾರೆ.

ಈ ನಿಗೂಢ ಲಾರಿಯ ಬಗ್ಗೆ ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯ ಪೊಲೀಸರೇ ತಲಾ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಪ್ರಕರಣದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾರೆ. ಠಾಣೆಯ ಅನಾಮಧೇಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಲಾರಿಯ ವಿಡಿಯೋ ವೈರಲ್ ಆದ ಬಳಿಕವಷ್ಟೇ ಅದನ್ನು ಬೇರೆಡೆಗೆ ಕೊಂಡೊಯ್ದು ಕಲ್ಲುಗಳನ್ನು ಖಾಲಿ ಮಾಡಲಾಯಿತು ಎಂದಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿರುವ ತನಿಖಾಧಿಕಾರಿ, ಠಾಣೆಯಲ್ಲಿ ಜಾಗವಿಲ್ಲದ ಕಾರಣಕ್ಕೆ ಲಾರಿಯನ್ನು ಬೇರೆಡೆ ನಿಲ್ಲಿಸಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಇವರಿಬ್ಬರ ಹೇಳಿಕೆಗಳಿಗಿಂತ ಠಾಣಾಧಿಕಾರಿಯ ಮಾತುಗಳು ಸಂಪೂರ್ಣ ಭಿನ್ನವಾಗಿವೆ. ಜುಲೈ 19ರಂದೇ ಲಾರಿಯನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿತ್ತು ಮತ್ತು ಸದ್ಯ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಹಳೆಯವು ಎಂದು ಅವರು ಹೇಳಿದ್ದಾರೆ. ಠಾಣಾಧಿಕಾರಿ ಹೇಳಿದಂತೆ ಜುಲೈ 19ರಂದೇ ಲಾರಿಯಲ್ಲಿದ್ದ ಕಲ್ಲುಗಳನ್ನು ಖಾಲಿ ಮಾಡಿದ್ದರೆ, ಮರುದಿನ (ಜುಲೈ 20ರಂದು) ಪ್ರತಿಭಟನಾ ಸ್ಥಳದಲ್ಲಿ ಕಲ್ಲುಗಳಿಂದಲೇ ತುಂಬಿದ್ದ ಲಾರಿ ಪ್ರತ್ಯಕ್ಷವಾಗಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆ ಕಲ್ಲುಗಳು ಎಲ್ಲಿಂದ ಬಂದವು ಎಂಬ ಈ ಗೊಂದಲಮಯ ಪ್ರಶ್ನೆಗೆ ಸದ್ಯ ಪೊಲೀಸರ ಬಳಿ ಯಾವುದೇ ಸ್ಪಷ್ಟ ಉತ್ತರವಿಲ್ಲ. ಇದಲ್ಲದೆ ಇದೇ ಲಾರಿ ನವದೆಹಲಿಯ ಯುವ ಕಾಂಗ್ರೆಸ್ ಕಚೇರಿಯ ಎದುರು ನಾಲ್ಕು ದಿನ ಅನಾಥವಾಗಿ ನಿಂತಿತ್ತು ಎಂಬ ಅಂಶವೂ ವರದಿಯಲ್ಲಿದೆ.

ಮತ್ತೊಂದೆಡೆ, ಜುಲೈ 16ರಂದು ಇದೇ ಲಾರಿಗೆ ಡಿಕ್ಕಿಯಾಗಿ ಜಖಂಗೊಂಡಿದ್ದ ‘ಮಾರುತಿ ಈಕೋ’ ಕಾರನ್ನೂ ಕೂಡ ಪ್ರತಿಭಟನಾ ಸ್ಥಳದಲ್ಲಿ ತಂದು ನಿಲ್ಲಿಸಲಾಗಿತ್ತು. ಪ್ರತಿಭಟನಾಕಾರರೇ ಠಾಣೆಯ ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಲು ಪೊಲೀಸರು ಈ ಅಪಘಾತದ ಕಾರನ್ನು ಬಳಸಿಕೊಳ್ಳಲು ಯತ್ನಿಸಿದ್ದರು ಎಂಬ ಅಂಶವೂ ವರದಿಯಲ್ಲಿ ಬಹಿರಂಗವಾಗಿದೆ. ಆದರೆ, ಎಫ್‌ಐಆರ್ ದಾಖಲೆಗಳು ಇದು ಅಪಘಾತದ ಕಾರು ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಪೊಲೀಸರ ಮುಖವಾಡ ಕಳಚಿದೆ.

ಈ ಕುರಿತು ಸಮಗ್ರ ವರದಿ ಪ್ರಕಟವಾಗಿ ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು, ಜುಲೈ 29ರಂದು ‘ಎಕ್ಸ್’ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ದೃಷ್ಟಿಯಿಂದ ಲಾರಿಯನ್ನು ಸುರಕ್ಷಿತವಾಗಿ ಅಲ್ಲಿ ನಿಲ್ಲಿಸಲಾಗಿತ್ತು, ಪ್ರತಿಭಟನಾಕಾರರ ವಿರುದ್ಧ ಸಂಚು ರೂಪಿಸಲಾಗಿದೆ ಎಂಬ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ...

ಕೊಪ್ಪಳ | ಪರಿಸರ ನಿಯಮ ಉಲ್ಲಂಘನೆ: 8 ಕಾರ್ಖಾನೆಗಳ ಬಂದ್‌ಗೆ ನಿರ್ಧಾರ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳ...

ಔರಾದ್‌ | ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಆಗ್ರಹ

ರಾಜ್ಯ ಸರ್ಕಾರದ ಆದೇಶದಂತೆ ಔರಾದ್ ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ಅಂಗಡಿ...