ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳ ತಾಲ್ಲೂಕಿನ ಎಂಟು ಕಾರ್ಖಾನೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತೀರ್ಮಾನಿಸಿದೆ.
ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಧಾರದ ಪ್ರತಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಬಂದ್ ಮಾಡಲು ನಿರ್ಧರಿಸಿರುವ ಕಾರ್ಖಾನೆಗಳಲ್ಲಿ ಬಾಬಾ ಅಖಿಲಾ ಸಾಯಿಜ್ಯೋತಿ ಇಂಡಸ್ಟ್ರೀಸ್, ಭದ್ರಶ್ರೀ ಸ್ಟೀಲ್ ಅಂಡ್ ಪವರ್ ಲಿಮಿಟೆಡ್, ಧ್ರುವದೇಶ ಮೆಟಾ ಸ್ಟೀಲ್, ಐಎಲ್‌ಸಿ ಐರನ್ ಅಂಡ್ ಸ್ಟೀಲ್ಸ್, ಪಿಬಿಎಸ್ ಸ್ಟೀಲ್ಸ್ (ಬಾಲಸುಬ್ಬಶೆಟ್ಟಿ ಅಂಡ್ ಸನ್ಸ್), ಎಸ್‌ಕೆ ಸ್ಟೀಲ್ಸ್ ಟೆಕ್ ಹಾಗೂ ತನುಷ್ ಇಸ್ಪಾತ್‌ನ ಒಂದು ಮತ್ತು ಎರಡನೇ ಘಟಕಗಳು ಸೇರಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, “ಮಾಲಿನ್ಯ ನಿಯಂತ್ರಣ ಮಂಡಳಿಯ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಮಂಡಳಿಯ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ. ಅಧಿಕೃತ ಆದೇಶ ನಮಗೆ ತಲುಪಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಖಾಸಗಿ ಆಸ್ಪತ್ರೆ ದರಪಟ್ಟಿ, ಔಷಧ ಬೆಲೆ- ಆಡಿದ್ದನ್ನು ಮಾಡಿ ತೋರಿಸಲಿ





