ವಿಧಾನಸಭೆ ಚುನಾವಣೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿರುದ್ಧ ತಮಿಳುನಾಡು ಕಾಂಗ್ರೆಸ್ ಮೇ 8ರಂದು ಪ್ರತಿಭಟನೆ ನಡೆಸಿದೆ.
ಕಾಂಗ್ರೆಸ್ ಮಧುರೈನ ಝಾನ್ಸಿ ರಾಣಿ ಪಾರ್ಕ್ ಬಳಿ ಇದೇ ರೀತಿಯ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ನೀಡಿದೆ. ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ವಿಜಯ್ ಅವರಿಗೆ ಸರ್ಕಾರ ರಚಿಸಲು ಷರತ್ತುಬದ್ಧ ಬೆಂಬಲವನ್ನು ನೀಡಿದೆ.
ಇದನ್ನು ಓದಿದ್ದೀರಾ? ಡಿಎಂಕೆ, ಎಐಎಡಿಎಂಕೆ ಸರ್ಕಾರ ರಚಿಸಲು ಮುಂದಾದರೆ ಸಾಮೂಹಿಕ ರಾಜೀನಾಮೆ ವದಂತಿ: ಟಿವಿಕೆ ಸ್ಪಷ್ಟನೆ
ಇನ್ನು ಕಾಂಗ್ರೆಸ್ ಮಾತ್ರವಲ್ಲದೆ ಟಿವಿಕೆ ಬೆಂಬಲಿಗರೂ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈನ ಲೋಕ ಭವನದ ಹೊರಗೆ ಟಿವಿಕೆ ಬೆಂಬಲಿಗರು ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಈ ವೇಳೆ ಗದ್ದಲ ಭುಗಿಲೆದ್ದಿದೆ. ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಬೇರೆಡೆ ಕಳುಹಿಸಿದ್ದಾರೆ.
117 ಶಾಸಕರ ಬೆಂಬಲವಿದ್ದರೆ ಮಾತ್ರ ವಿಜಯ್‌ಗೆ ಸರ್ಕಾರ ರಚಿಸಲು ಆಹ್ವಾನ ನೀಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಆದರೆ ವಿಜಯ್ ಮೈತ್ರಿಕೂಟದಲ್ಲಿ 113 ಶಾಸಕರು (ಟಿವಿಕೆಯ 108 ಮತ್ತು ಕಾಂಗ್ರೆಸ್‌ನ 5) ಇದ್ದು, ಇನ್ನೂ ನಾಲ್ಕು ಸ್ಥಾನಗಳ ಕೊರತೆಯಿದೆ. ಆರು ಸದಸ್ಯ ಬಲ ಹೊಂದಿರುವ ಎಡಪಕ್ಷಗಳು, ಇತರೆ ಪಕ್ಷಗಳು ಟಿವಿಕೆಗೆ ಬೆಂಬಲ ನೀಡಿದರೆ ವಿಜಯ್ ಸರ್ಕಾರ ರಚಿಸಲು ಸಾಧ್ಯವಾಗಲಿದೆ. ಇಂದು ಮೂರು ಗಂಟೆಗೆ ಈ ಪಕ್ಷಗಳು ಸಭೆ ನಡೆಸಿ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.




