ಬಿಹಾರ ಕ್ಷೇತ್ರ ಹಂಚಿಕೆಯಲ್ಲಿ ಅಸಮಾಧಾನ: ಕೇಂದ್ರ ಸಚಿವ ರಾಜೀನಾಮೆ

Date:

ಬಿಹಾರ ಲೋಕಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಕೇಂದ್ರ ಸಚಿವ ಹಾಗೂ ಆರ್‌ಎಲ್‌ಜೆಪಿ ಅಧ್ಯಕ್ಷ ಪಶುಪತಿ ಪಾರಸ್ ರಾಜೀನಾಮೆ ನೀಡಿದ್ದಾರೆ.

ನಿನ್ನೆ(ಮಾ.19) ಬಿಹಾರ ಲೋಕಸಭಾ ಸ್ಥಾನಗಳಿಗೆ ಎನ್‌ಡಿಎ ಒಕ್ಕೂಟ ಕ್ಷೇತ್ರ ಹಂಚಿಕೆ ಪ್ರಕಟಿಸಿತ್ತು. ಹಂಚಿಕೆಯ ಪ್ರಕಾರ ಬಿಜೆಪಿ 17, ಜೆಡಿಯು 16, ಚಿರಾಗ್‌ ಪಾಸ್ವಾನ್‌ ಬಣದ ಎಲ್‌ಜೆಪಿ 5 ಹಾಗೂ ಎನ್‌ಡಿಎ ಇತರ ಮಿತ್ರ ಪಕ್ಷಗಳಾದ ಹೆಚ್‌ಎಎಂ ಹಾಗೂ ಆರ್‌ಎಲ್‌ಪಿ ಪಕ್ಷಗಳಿಗೆ ತಲಾ ಒಂದು ಕ್ಷೇತ್ರವನ್ನು ನೀಡಲಾಗಿತ್ತು.

ರಾಜೀನಾಮೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಶುಪತಿ, “ಕ್ಷೇತ್ರ ಹಂಚಿಕೆಯಲ್ಲಿ ನಮ್ಮ ಪಕ್ಷಕ್ಕೆ ಅನ್ಯಾಯವಾದ ಕಾರಣ ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶುಪತಿ ಬಣದ ಎಲ್‌ಜೆಪಿ ಬಣಕ್ಕೆ ಒಂದೂ ಸ್ಥಾನವನ್ನು ನೀಡಿಲ್ಲ. ಆದಾಗ್ಯೂ ಬಿಹಾರ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

ತಮ್ಮ ಬಣಕ್ಕೆ ಸರಿಯಾಗಿ ಕ್ಷೇತ್ರ ಹಂಚಿಕೆ ನೀಡಲಿಲ್ಲದಿದ್ದರೆ ತಾವು ಎನ್‌ಡಿಎ ಬಣದಿಂದ ಹೊರಹೋಗುವುದಾಗಿ ಪಾರಸ್ ಅವರು ಈ ಮೊದಲು ತಿಳಿಸಿದ್ದರು. ಪ್ರಸ್ತುತ ಸೀಟು ಹಂಚಿಕೆಯಲ್ಲಿ ಆರ್‌ಎಲ್‌ಜೆಪಿ ಪಕ್ಷವನ್ನು ಕಡೆಗಣಿಸಲಾಗಿದೆ. ಪಾರಸ್ ಪ್ರತಿನಿಧಿಸುವ ಹಾಜಿಪುರ ಕ್ಷೇತ್ರವನ್ನು ಕೂಡ ನೀಡಲಾಗಿಲ್ಲ. ಕ್ಷೇತ್ರ ಹಂಚಿಕೆಯಲ್ಲಿ ಹಾಜಿಪುರ ಕ್ಷೇತ್ರವನ್ನು ಚಿರಾಗ್‌ ಪಾಸ್ವಾನ್‌ ಬಣಕ್ಕೆ ನೀಡಿರುವುದು ಪಶುಪತಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಮ್‌ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕ ಜನ ಶಕ್ತಿ ಪಕ್ಷವು ಪಾಸ್ವಾನ್‌ ಮೃತಪಟ್ಟ 2020ರ ನಂತರ ಎರಡು ಬಣಗಳಾಗಿ ಇಬ್ಬಾಗವಾಯಿತು. ಪಾಸ್ವಾನ್‌ ಸಹೋದರ ಆರ್‌ಎಲ್‌ಜೆಪಿ ಪಕ್ಷವನ್ನು ಮುನ್ನಡೆಸಿದರೆ, ಪಾಸ್ವಾನ್ ಪುತ್ರ ಎಲ್‌ಜೆಪಿ(ಆರ್‌ವಿ) ಬಣದ ಅಧ್ಯಕ್ಷರಾಗಿದ್ದಾರೆ. ಎರಡೂ ಪಕ್ಷಗಳು ಎನ್‌ಡಿಎ ಮಿತ್ರ ಪಕ್ಷಗಳಾಗಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಅವಿಭಜಿತ ಎಲ್‌ಜೆಪಿ ಪಕ್ಷ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ ಹಾಗೂ ಎಲ್‌ಜೆಪಿ ಎಲ್ಲ ಪಕ್ಷಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಯು 16 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಎಪಿ ಜೊತೆ ಮೈತ್ರಿಗೆ ವಿರೋಧ : ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

ಆಮ್‌ ಆದ್ಮಿ ಪಕ್ಷದೊಂದಿಗಿನ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ...

ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ...

ಉದ್ಧವ್‌, ಶರದ್ ಪರವಾಗಿ ಅನುಕಂಪದ ಅಲೆಯಿದೆ ಎಂದ ಅಜಿತ್ ಪವಾರ್ ಬಣದ ನಾಯಕ!

"ರಾಜ್ಯದಲ್ಲಿ (ಮಹಾರಾಷ್ಟ್ರ) ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಪರವಾಗಿ ಅನುಕಂಪದ...

ಹಾಸನ ಪೆನ್‌ಡ್ರೈವ್‌ | ಪ್ರಜ್ವಲ್ ರೇವಣ್ಣ ದೇಶಬಿಟ್ಟು ಓಡಿ ಹೋಗಲು ಮೋದಿ ಸಹಾಯ ಮಾಡಿದರಾ?; ರಾಷ್ಟ್ರಮಟ್ಟದಲ್ಲಿ ಆಕ್ರೋಶ

ಹಾಸನ ಪೆನ್‌ಡ್ರೈವ್‌ ಪ್ರಕರಣವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ...