ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ತಲೆಗೆ ಹೊಡೆದು ಸುದ್ದಿಯಲ್ಲಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ಎಲ್ಲರಿಂದ ಟೀಕೆ ವ್ಯಕ್ತವಾದ ಹಿನ್ನೆಲೆ, ಪಾಟೇಕರ್ ಕ್ಷಮೆ ಕೇಳಿದ್ದಾರೆ.
ಏನಿದು ಘಟನೆ?
‘ದಿ ವ್ಯಾಕ್ಸಿನ್ ವಾರ್’ ನಂತರ ನಾನಾ ಪಾಟೇಕರ್ ತಮ್ಮ ಮುಂದಿನ ಚಿತ್ರ ‘ಜರ್ನಿ’ ಸಿನಿಮಾದ ಚಿತ್ರೀಕರಣ ವಾರಾಣಾಸಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ವೇಳೆ, ನಾನಾ ಪಾಟೇಕರ್ ಅಭಿಮಾನಿಯೊಬ್ಬರು ಅವರ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದಾರೆ. ಇದಕ್ಕೆ ಏಕಾಏಕಿ ಕೋಪಗೊಂಡ ನಾನಾ ಪಾಟೇಕರ್ ಅವರು ಸೆಲ್ಫಿ ಕೇಳಲು ಬಂದ ಹುಡುಗನ ತಲೆಗೆ ಹೊಡೆದಿದ್ದಾರೆ. ಸೆಟ್‌ನಲ್ಲಿದ್ದ ಮತ್ತೋರ್ವ ಸಿಬ್ಬಂದಿ ಹುಡುಗನ ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ.
10 ಸೆಕೆಂಡ್‌ಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ ಅವರು ಅಭಿಮಾನದಿಂದ ಬಂದು ಕೇಳಿದರೆ ನೀವು ಮಾಡಿದ ರೀತಿ ಮಾಡಿರುವುದು ಸರಿಯಿಲ್ಲ ಎಂದು ಹಲವು ಜನ ಹೇಳಿದ್ದಾರೆ. ಈ ವಿಡಿಯೋ ಕಂಡ ನೆಟ್ಟಿಗರು ನಟನ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
— Ghar Ke Kalesh (@gharkekalesh) November 15, 2023
ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದ ಚಿತ್ರದ ನಿರ್ದೇಶಕ
“ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 10 ಸೆಕೆಂಡ್‌ಗಳ ವಿಡಿಯೋ ಸಿನಿಮಾದ ಚಿತ್ರೀಕರಣ ಒಂದು ಶಾಟ್ ಅಷ್ಟೇ. ರಸ್ತೆ ಮಧ್ಯದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಹುಡುಗನ ತಲೆಯೊಂದಕ್ಕೆ ಹೊಡೆಯಬೇಕಾದ ಸೀನ್ ಇತ್ತು. ಈ ಚಿತ್ರೀಕರಣ ನಡೆಯುವ ವೇಳೆ, ಯಾರೋ ಒಬ್ಬರು ಇದನ್ನು ಮೊಬೈಲ್‌ನಲ್ಲಿ ಶೂಟ್ ಮಾಡಿ ವೈರಲ್ ಮಾಡಿದ್ದಾರೆ” ಎಂದು ಚಿತ್ರದ ನಿರ್ದೇಶಕ ಅನಿಲ್ ಶರ್ಮ ಅವರು ಸ್ಪಷ್ಟನೆ ನೀಡಿದ್ದರು.
ಕ್ಷಮೆ ಕೇಳಿದ ನಾನಾ ಪಾಟೇಕರ್
‘ಏ ಮುದಕ… ನೀನು ಟೋಪಿ ಮಾರುತ್ತೀಯಾ? ಎಂದು ಒಬ್ಬ ಹುಡುಗ ಬಂದು ನನ್ನನ್ನು ಕೇಳುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ, ನಾನು ಆ ಹುಡುಗನಿಗೆ ಹೊಡೆದು ಕಳಿಸಬೇಕಿತ್ತು. ಅದರ ರಿಹರ್ಸಲ್ ಮಾಡುತ್ತಿದ್ದೆವು. ಎರಡನೇ ಬಾರಿ ರಿಹರ್ಸಲ್ ಮಾಡುವಾಗ ಈ ಹುಡುಗ ಬಂದ. ಇವನು ನಮ್ಮ ತಂಡದವನೇ ಎಂದು ನಾನು ಭಾವಿಸಿದ್ದೆನು. ಆದರೆ, ಆತ ಬೇರೆ ಯಾರೋ ಆಗಿದ್ದನು ಎಂಬ ಬಗ್ಗೆ ನನಗೆ ತಡವಾಗಿ ತಿಳಿಯಿತು. ಕ್ಷಮೆ ಕೇಳಲು ಪ್ರಯತ್ನಿಸಿದೆ. ಆದರೆ, ಆತ ಭಯದಿಂದ ಓಡಿ ಹೋಗಿದ್ದನು” ಎಂದು ನಟ ನಾನಾ ಪಾಟೇಕರ್ ಹೇಳಿದ್ದಾರೆ.
View this post on Instagram
“ಇಲ್ಲಿಯವರೆಗೂ ನಾನು ಯಾರಿಗೂ ಫೋಟೋ ಕೊಡುವುದಿಲ್ಲ ಎಂದು ಹೇಳಿಲ್ಲ. ಅಚಾತುರ್ಯದಿಂದ ಈ ಘಟನೆ ನಡೆದಿದೆ. ಇನ್ನುಮುಂದೆ ಹೀಗೆ ನಡೆಯುವುದಿಲ್ಲ. ಈ ಬಾರಿ ನನ್ನನ್ನು ಕ್ಷಮಿಸಿ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಧ್ವಂಸಗೊಳಿಸಿದ ಆರು ಕಿಡಿಗೇಡಿಗಳ ಬಂಧನ
ಸದ್ಯ ಪಾಟೇಕರ್ ಅವರು ಕ್ಷಮೆ ಕೇಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೋಷಕ ಪಾತ್ರ ಸೇರಿದಂತೆ ಎಲ್ಲ ರೀತಿಯ ಪಾತ್ರಗಳ ಮೂಲಕ ನಾನಾ ಪಾಟೇಕರ್ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
2009 ರ ‘ಹಾರ್ನ್ ಓಕೆ ಪ್ಲೀಸ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ ತನುಶ್ರೀ ದತ್ತಾ ಅವರು ನಾನಾ ಪಾಟೇಕರ್ ವಿರುದ್ಧ ಆರೋಪಿಸಿದ್ದರು. ಈ ಪ್ರಕರಣ ದೇಶಾದ್ಯಂತ ‘ಮೀಟೂ’ ಹೋರಾಟದ ಆರಂಭಕ್ಕೆ ಕಾರಣವಾಗಿತ್ತು.