ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸಲಿರುವ ‘ಮುರಸು’ ಚಂಡಮಾರುತ: ಏನಿದರ ಅರ್ಥ, ನಾಮಕರಣ ಹೇಗೆ?

Date:

ನೈರುತ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ‘ಮುರಸು’ (Murasu) ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಇದು ನವೆಂಬರ್ 3ರ ಮುಂಜಾನೆ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಈ ವೇಳೆ ಗಂಟೆಗೆ 80 ರಿಂದ 90 ಕಿ.ಮೀ. ಹಾಗೂ ಗರಿಷ್ಠ 100 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಮುನ್ಸೂಚನೆ ನೀಡಿದೆ.

- Advertisement -

ಇತ್ತೀಚೆಗಷ್ಟೇ ‘ಅರ್ನಬ್’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಭಾರಿ ಹಾನಿ ಉಂಟುಮಾಡಿದ್ದ ಬೆನ್ನಲ್ಲೇ, ಇದೀಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. “ಪ್ರಸ್ತುತ ಇದು ಚಂಡಮಾರುತವಾಗಿ ರೂಪುಗೊಳ್ಳಲಿದ್ದು, ನ.3ರ ಬೆಳಿಗ್ಗೆ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ. ಇದು ‘ತೀವ್ರ ಚಂಡಮಾರುತ’ವಾಗಿ (Severe cyclonic storm) ಬದಲಾಗುವ ಸಾಧ್ಯತೆಯೂ ಅಲ್ಪ ಪ್ರಮಾಣದಲ್ಲಿದೆ. ಆದರೆ ಸದ್ಯದ ನಮ್ಮ ಮುನ್ಸೂಚನೆ ಪ್ರಕಾರ ಇದು ಸಾಧಾರಣ ಚಂಡಮಾರುತವಾಗಿರಲಿದೆ,” ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

‘ಮುರಸು’ ಹೆಸರಿನ ಅರ್ಥವೇನು?
ಪ್ರಾದೇಶಿಕ ಚಂಡಮಾರುತಗಳ ನಾಮಕರಣ ಪದ್ಧತಿಯಡಿ ಭಾರತವು ಈ ಚಂಡಮಾರುತಕ್ಕೆ ‘ಮುರಸು’ ಎಂದು ಹೆಸರಿಟ್ಟಿದೆ. ‘ಮುರಸು’ ಎಂಬುದು ತಮಿಳು ಪದವಾಗಿದ್ದು, ಇದು ಸಾಂಪ್ರದಾಯಿಕ ತಾಳವಾದ್ಯವನ್ನು (ಡ್ರಮ್) ಸೂಚಿಸುತ್ತದೆ. ಇತಿಹಾಸದ ಪುಟಗಳನ್ನು ತಿರುವಿದರೆ, ಹಳ್ಳಿಗಳು ಮತ್ತು ಸಾಮ್ರಾಜ್ಯಗಳಾದ್ಯಂತ ಸಾರ್ವಜನಿಕ ಮಾಹಿತಿ ಮತ್ತು ಪ್ರಕಟಣೆಗಳನ್ನು ಸಾರಲು ಈ ವಾದ್ಯವು ಪ್ರಮುಖ ಸಾಮಾಜಿಕ ಪಾತ್ರವನ್ನು ವಹಿಸಿತ್ತು ಎಂಬುದು ತಿಳಿದುಬರುತ್ತದೆ.

Advertisements

ಚಂಡಮಾರುತಗಳಿಗೆ ನಾಮಕರಣ ಹೇಗೆ?
ಚಂಡಮಾರುತಗಳಿಗೆ ಮನಬಂದಂತೆ ಹೆಸರಿಡುವುದಿಲ್ಲ. ವಿಶ್ವ ಹವಾಮಾನ ಸಂಸ್ಥೆಯ (WMO) ಸಮನ್ವಯದೊಂದಿಗೆ ಅಂತರರಾಷ್ಟ್ರೀಯ ವ್ಯವಸ್ಥೆಯಡಿ ಹೆಸರುಗಳನ್ನು ಕಟ್ಟುನಿಟ್ಟಾಗಿ ಆಯ್ಕೆ ಮಾಡಲಾಗುತ್ತದೆ. ಚಂಡಮಾರುತಗಳ ಬಗ್ಗೆ ಜನರಿಗೆ ತ್ವರಿತವಾಗಿ ಮುನ್ನೆಚ್ಚರಿಕೆ ರವಾನಿಸಲು, ಜಾಗೃತಿ ಮೂಡಿಸಲು ಮತ್ತು ಗೊಂದಲಗಳನ್ನು ನಿವಾರಿಸಲು ಈ ನಾಮಕರಣ ಪದ್ಧತಿ ಸಹಕಾರಿಯಾಗಿದೆ.

ಬಂಗಾಳಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ರೂಪುಗೊಳ್ಳುವ ಚಂಡಮಾರುತಗಳಿಗೆ ನವದೆಹಲಿಯಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರವು (RSMC) ನಾಮಕರಣ ಮಾಡುತ್ತದೆ. ಇದಕ್ಕಾಗಿ ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್, ಯುಎಇ ಮತ್ತು ಯೆಮೆನ್ ಸೇರಿದಂತೆ 13 ಸದಸ್ಯ ರಾಷ್ಟ್ರಗಳ ಸಮಿತಿಯೊಂದು ಹೆಸರುಗಳನ್ನು ಒದಗಿಸುತ್ತದೆ. ಒಮ್ಮೆ ಬಳಸಿದ ಹೆಸರನ್ನು ಮರುಬಳಕೆ ಮಾಡುವಂತಿಲ್ಲ.

ಭಾರತ ಸೂಚಿಸಿರುವ ಹೆಸರುಗಳು
ಈ ಪಟ್ಟಿಗೆ ಭಾರತವು ಗತಿ, ತೇಜ್, ಮುರಸು, ಆಗ್, ವ್ಯೋಮ್, ಝರ್, ಪ್ರವಾಹೋ (Probaho), ನೀರ್, ಪ್ರಭಂಜನ್, ಘೂರ್ಣಿ, ಅಂಬುದ್, ಜಲಧಿ ಮತ್ತು ವೇಗ ಮುಂತಾದ ಹೆಸರುಗಳನ್ನು ಸೂಚಿಸಿದೆ.

ಇತ್ತೀಚಿನ ಚಂಡಮಾರುತಗಳು ಮತ್ತು ಅವುಗಳ ಅರ್ಥ

  • ಅರ್ನಬ್ (Arnab): 2026ರ ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ ಅಪ್ಪಳಿಸಿದ ಈ ಚಂಡಮಾರುತಕ್ಕೆ ಬಾಂಗ್ಲಾದೇಶ ಹೆಸರಿಟ್ಟಿತ್ತು. ಬಂಗಾಳಿ ಭಾಷೆಯಲ್ಲಿ ಇದರ ಅರ್ಥ ‘ಸಾಗರ’.
  • ಮೊಂಥಾ (Montha): 2025ರ ಅಕ್ಟೋಬರ್ 28-29ರಂದು ಆಂಧ್ರದ ಕಾಕಿನಾಡ ಮತ್ತು ನರಸಾಪುರ ಬಳಿ ಅಪ್ಪಳಿಸಿದ್ದ ಈ ಚಂಡಮಾರುತಕ್ಕೆ ಥಾಯ್ಲೆಂಡ್ ಹೆಸರಿಟ್ಟಿತ್ತು. ಥಾಯ್ ಭಾಷೆಯಲ್ಲಿ ಇದರ ಅರ್ಥ ‘ಸುವಾಸನೆಯುಕ್ತ ಸುಂದರ ಹೂವು’.
  • ಶಕ್ತಿ (Shakthi): 2025ರ ಅಕ್ಟೋಬರ್‌ನಲ್ಲಿ ಅರೇಬಿಯನ್ ಸಮುದ್ರದಲ್ಲಿ ಎದ್ದಿದ್ದ ತೀವ್ರ ಚಂಡಮಾರುತಕ್ಕೆ ಶ್ರೀಲಂಕಾ ಈ ಹೆಸರಿಟ್ಟಿತ್ತು. ಇಂಗ್ಲಿಷ್‌ನಲ್ಲಿ ‘h’ ಅಕ್ಷರವನ್ನು ಸೇರಿಸಿ ಬರೆಯುವ ಇದು ‘ಶಕ್ತಿ’ ಅಥವಾ ‘ಬಲ’ವನ್ನು ಸೂಚಿಸುತ್ತದೆ.
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ತೋಟಗಾರಿಕೆ ಇಲಾಖೆ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯೋತ್ಸವ...

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ: ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಹಸ್ತಾಂತರ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್ ಸೀಮಂತ್ ಸಿಂಗ್

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ...

ಮತಕಳವು ಸಾಮಾನ್ಯ ಕಳ್ಳತನವಲ್ಲ, ಇದು ದೇಶದ್ರೋಹ: ಗ್ಯಾನೇಶ್, ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

​"ಮತಕಳವು ಯಾವುದೇ ಅಂಗಡಿಯೊಂದರಲ್ಲಿ ನಡೆಯುವಂತಹ ಸಾಮಾನ್ಯ ಕಳ್ಳತನವಲ್ಲ. ಬದಲಾಗಿ, ಇದು ದೇಶದ...