ಭಾರತದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು?

Date:

ಭಾರತೀಯ ರೂಪಾಯಿಯ ಮೌಲ್ಯದ ಗ್ರಾಫ್ ಅತ್ಯಂತ ತೀವ್ರವಾಗಿ ಕೆಳಮುಖವಾಗಿ ಸಾಗುತ್ತಿದೆ. ಕಳೆದ ವರ್ಷ ಸುಮಾರು 85 ರ ಆಸುಪಾಸಿನಲ್ಲಿದ್ದ ರೂಪಾಯಿ-ಡಾಲರ್ ವಿನಿಮಯ ದರವು, ಈ ವರ್ಷದ ಮೇ ತಿಂಗಳಲ್ಲಿ ಭಾರಿ ಕುಸಿತ ಕಂಡು 96ರ ಗಡಿಯನ್ನು ದಾಟಿದೆ. ಸಾಮಾನ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಅಥವಾ ಇನ್ನಾವುದೇ ವಸ್ತುವಿನ ಬೆಲೆಯು ಅದರ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಹೇಗೆ ನಿರ್ಧಾರವಾಗುತ್ತದೆಯೋ, ಅದೇ ರೀತಿ ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿಯ ವಿನಿಮಯ ದರವೂ ಕೂಡ ಡಾಲರ್‌ಗೆ ಇರುವ ಬೇಡಿಕೆ ಮತ್ತು ಪೂರೈಕೆಯ ನಿಯಮದಡಿಯಲ್ಲೇ ನಿರ್ಧಾರವಾಗುತ್ತದೆ. ಭಾರತದಿಂದ ಹೊರಹೋಗುವ ಮತ್ತು ದೇಶದೊಳಗೆ ಹರಿದುಬರುವ ವಿದೇಶಿ ಹಣದ ಸಮತೋಲನವೇ ಈ ಏರಿಳಿತಕ್ಕೆ ಮುಖ್ಯ ಕಾರಣ.

- Advertisement -

ದೇಶದ ಆಮದು ಮತ್ತು ರಫ್ತು ಪ್ರಕ್ರಿಯೆಯು ರೂಪಾಯಿಯ ಮೌಲ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ರಫ್ತು ಹೆಚ್ಚಾದಂತೆ ರೂಪಾಯಿಗೆ ಬೇಡಿಕೆ ಹೆಚ್ಚುತ್ತದೆ ಮತ್ತು ಆಮದು ಹೆಚ್ಚಾದಾಗ ರೂಪಾಯಿಯ ಬೇಡಿಕೆ ಕುಸಿಯುತ್ತದೆ. ಭಾರತದ ಕಂಪನಿಗಳು ವಿದೇಶಗಳಿಗೆ ವಸ್ತುಗಳನ್ನು ರಫ್ತು ಮಾಡಿದಾಗ, ಅವರಿಗೆ ಸಿಗುವ ಡಾಲರ್ ಅಥವಾ ಯೂರೋಗಳನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಬೇಕಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ರೂಪಾಯಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ, ಭಾರತವು ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಮತ್ತು ಇತರ ವಸ್ತುಗಳನ್ನು ಆಮದು ಮಾಡಿಕೊಂಡಾಗ, ಅದಕ್ಕೆ ಪ್ರತಿಯಾಗಿ ಡಾಲರ್‌ನಲ್ಲಿ ಪಾವತಿ ಮಾಡಬೇಕಾಗುತ್ತದೆ. ಆಗ, ರೂಪಾಯಿ ಮೌಲ್ಯ ಕುಗ್ಗುತ್ತದೆ. ಅಂತೆಯೇ, ನಮ್ಮ ವಿದೇಶಿ ಪ್ರವಾಸದಲ್ಲಿಯೂ ರೂಪಾಯಿಯನ್ನು ಅನ್ಯ ರಾಷ್ಟ್ರಗಳ ಕರೆನ್ಸಿಗೆ ವಿನಿಮಯ ಮಾಡಿಕೊಂಡಾಗಲೂ ರೂಪಾಯಿ ಮೌಲ್ಯ ಕುಸಿಯುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಇದರರ್ಥ ಡಾಲರ್ ಅನ್ನು ರೂಪಾಯಿಗೆ ಪರಿವರ್ತಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೂಪಾಯಿಯನ್ನು ಡಾಲರ್‌ಗೆ ಪರಿವರ್ತಿಸಲಾಗುತ್ತದೆ. ಇದು ರೂಪಾಯಿಯ ಬೇಡಿಕೆ ಮತ್ತು ಮೌಲ್ಯ ಎರಡರ ಕುಸಿತಕ್ಕೂ ಕಾರಣವಾಗಿ, ಒಂದು ಡಾಲರ್ ಖರೀದಿಸಲು ಹೆಚ್ಚಿನ ರೂಪಾಯಿಗಳನ್ನು ನೀಡಬೇಕಾದ ಪರಿಸ್ಥಿತಿ ತಂದೊಡ್ಡುತ್ತದೆ.

ಸದ್ಯಕ್ಕೆ, ಭಾರತವು ನಿರಂತರವಾಗಿ ಕಚ್ಚಾ ತೈಲ ಆಮದಿನ ಮೇಲೆ ಅವಲಂಬಿತವಾಗಿರುವುದರಿಂದ ದೇಶದಲ್ಲಿ ಸರಕು ವ್ಯಾಪಾರದ ಕೊರತೆ ಹೆಚ್ಚಾಗುತ್ತಲೇ ಇರುತ್ತದೆ. ಇದನ್ನು ತಂತ್ರಾಂಶ ರಫ್ತು ಮತ್ತು ವಿದೇಶಗಳಲ್ಲಿ ದುಡಿಯುವ ಭಾರತೀಯ ಕಾರ್ಮಿಕರು ತಾಯ್ನಾಡಿಗೆ ಕಳುಹಿಸುವ ಹಣದಿಂದ ಒಂದಿಷ್ಟು ಸರಿದೂಗಿಸಲಾಗುತ್ತದೆಯಾದರೂ, ಒಟ್ಟಾರೆ ಚಾಲ್ತಿ ಖಾತೆ ಕೊರತೆಯಲ್ಲಿಯೇ ಉಳಿಯುತ್ತದೆ.

ಈ ಚಾಲ್ತಿ ಖಾತೆಯ ಕೊರತೆಯನ್ನು ವಿದೇಶಿ ಹೂಡಿಕೆಗಳು ಮತ್ತು ಸಾಲಗಳನ್ನೊಳಗೊಂಡ ಬಂಡವಾಳ ಖಾತೆಯ (Capital Account) ಮೂಲಕ ಭರ್ತಿ ಮಾಡಲಾಗುತ್ತದೆ. ಆದರೆ, ಈ ಹೂಡಿಕೆಗಳಲ್ಲಿ ಎರಡು ವಿಧಗಳಿದ್ದು, ಅವುಗಳಲ್ಲಿ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆ (FPI) ಅತ್ಯಂತ ಅಸ್ಥಿರವಾದುದು. ಷೇರು ಮಾರುಕಟ್ಟೆ ಅಥವಾ ಬಾಂಡ್‌ಗಳಲ್ಲಿ ಹೂಡುವ ಈ ಹಣವು ಜಾಗತಿಕ ಮಾರುಕಟ್ಟೆಯಲ್ಲಿ ಸಣ್ಣ ಆಪತ್ತು ಎದುರಾದರೂ ಅಥವಾ ಅಮೆರಿಕದಂತಹ ದೇಶಗಳಲ್ಲಿ ಬಡ್ಡಿದರ ಹೆಚ್ಚಾದರೂ ತಕ್ಷಣವೇ ಭಾರತದಿಂದ ಹೊರನಡೆಯುತ್ತದೆ. ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಹೆಚ್ಚಿನ ಬಡ್ಡಿದರಗಳ ಕಾರಣದಿಂದಾಗಿ ವಿದೇಶಿ ಹೂಡಿಕೆದಾರರು ಭಾರತದಲ್ಲಿದ್ದ ತಮ್ಮ ಹೂಡಿಕೆಯನ್ನು ಹಿಂಪಡೆದು ಸುರಕ್ಷಿತ ನೆಲೆಗಳಿಗೆ ಕೊಂಡೊಯ್ಯುತ್ತಿದ್ದಾರೆ.

ಈ ರೀತಿ ಬಂಡವಾಳದ ಹೊರಹರಿವು ತೀವ್ರಗೊಂಡಾಗ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಮಾರಿ ಡಾಲರ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿ, ರೂಪಾಯಿ ತೀವ್ರವಾಗಿ ಅಪಮೌಲ್ಯಗೊಳ್ಳುತ್ತದೆ. ಇತಿಹಾಸವನ್ನು ಗಮನಿಸಿದರೆ 2013, 2018, 2020 ಮತ್ತು ಇತ್ತೀಚೆಗೆ 2024 ರಿಂದ 2025ರ ಅವಧಿಯಲ್ಲಿ ನಡೆದ ರೂಪಾಯಿಯ ತೀವ್ರ ಕುಸಿತಕ್ಕೆ ಈ ವಿದೇಶಿ ಬಂಡವಾಳದ ಹೊರಹರಿವೇ ಪ್ರಮುಖ ಕಾರಣವಾಗಿದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ರೂಪಾಯಿಯ ಮೌಲ್ಯ ಕುಸಿತವು ಭಾರತೀಯ ಆರ್ಥಿಕತೆಯ ಮೇಲೆ ಭಾರೀ ಪ್ರಮಾಣದಲ್ಲಿ ವೆಚ್ಚದ ಹೊರೆಯನ್ನು ಹೇರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲವನ್ನು 100 ಡಾಲರ್‌ಗೆ ಖರೀದಿಸಲು, ವಿನಿಮಯ ದರ 85 ರೂಪಾಯಿ ಇದ್ದಿದ್ದರೆ ಭಾರತೀಯ ಕಂಪನಿಗಳು ಕೇವಲ 8,500 ರೂಪಾಯಿ ಪಾವತಿಸಬೇಕಿತ್ತು, ಆದರೆ, ಈಗ ವಿನಿಮಯ ದರ ಕುಸಿದಿರುವುದರಿಂದ ಅದೇ ಒಂದು ಬ್ಯಾರೆಲ್‌ಗೆ 9,600 ರೂಪಾಯಿಗಳನ್ನು ನೀಡಬೇಕಾಗಿದೆ.

ಆದರೆ, ಮತ್ತೊಂದೆಡೆ ಕುಸಿದ ರೂಪಾಯಿ ಮೌಲ್ಯವು ರಫ್ತುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಹೇಗೆಂದರೆ, ಭಾರತದಲ್ಲಿ 1,200 ರೂಪಾಯಿ ವೆಚ್ಚದ ಒಂದು ಶರ್ಟ್ ಅನ್ನು ಈಗ ಅಮೆರಿಕದ ಮಾರುಕಟ್ಟೆಯಲ್ಲಿ 12.5 ಡಾಲರ್‌ಗೆ ಮಾರಾಟ ಮಾಡಬಹುದು; ಅದೇ ವಿನಿಮಯ ದರ 80 ರೂಪಾಯಿ ಇದ್ದಿದ್ದರೆ ಅದರ ಬೆಲೆ 15 ಡಾಲರ್ ಆಗಿರುತ್ತಿತ್ತು. ಆದರೆ, ಭಾರತೀಯ ಉತ್ಪಾದನಾ ವಲಯವನ್ನು ಬಾಧಿಸುತ್ತಿರುವ ವ್ಯಾಪಕ ಪೂರೈಕೆ ಮತ್ತು ಬೇಡಿಕೆಯ ಮಿತಿಗಳನ್ನು ಗಮನಿಸಿದರೆ, ಕೇವಲ ರೂಪಾಯಿ ಅಪಮೌಲ್ಯೀಕರಣವೊಂದೇ ರಫ್ತು ಹೆಚ್ಚಿಸಲು ಹೆಚ್ಚಿನ ಸಹಾಯ ಮಾಡಲಾರದು.

ಈ ಇಡೀ ಪ್ರಕ್ರಿಯೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವಿನಿಮಯ ದರವು ತೀರಾ ಕೆಳಮಟ್ಟಕ್ಕೆ ಕುಸಿಯುವುದನ್ನು ತಡೆಯಲು ಆರ್‌ಬಿಐ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತದೆ. ವಿದೇಶಿ ಹೂಡಿಕೆದಾರರು ತಮ್ಮ ರೂಪಾಯಿ ಆಸ್ತಿಗಳನ್ನು ಮಾರಿ ಡಾಲರ್ ಪಡೆದು ಅವಸರದಿಂದ ಹೊರನಡೆಯುವಾಗ, ಆರ್‌ಬಿಐ ತನ್ನ ಮೀಸಲು ನಿಧಿಯಿಂದ ಡಾಲರ್‌ಗಳನ್ನು (ಟ್ರೆಜರಿ ಬಾಂಡ್‌) ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ರೂಪಾಯಿಗೆ ಬೆಂಬಲವಾಗಿ ನಿಲ್ಲುತ್ತದೆ. ಇದು ಮಾರುಕಟ್ಟೆಯಲ್ಲಿ ರೂಪಾಯಿಯ ಬೇಡಿಕೆಯನ್ನು ಹೆಚ್ಚಿಸಿ ಅದರ ಮೌಲ್ಯದ ಕುಸಿತದ ವೇಗವನ್ನು ತಗ್ಗಿಸುತ್ತದೆ. ಇಂತಹ ಕೆಲಸವನ್ನು ಆರ್‌ಬಿಐ 2024ರ ಅಕ್ಟೋಬರ್ ಮತ್ತು 2025ರ ಜನವರಿ ಹಾಗೂ 2025ರ ಆಗಸ್ಟ್ – ಡಿಸೆಂಬರ್ ಅವಧಿಯಲ್ಲಿ ಮಾಡಿದೆ.

ಪ್ರಸ್ತುತ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ಸಾಕಷ್ಟು ದೊಡ್ಡದಾಗಿದ್ದು, 2026ರ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 691.11 ಶತಕೋಟಿ ಅಮೆರಿಕನ್ ಡಾಲರ್‌ನಷ್ಟಿತ್ತು. ಇದು ದೇಶದ ಮುಂದಿನ 10.8 ತಿಂಗಳ ಆಮದು ವೆಚ್ಚವನ್ನು ಭರಿಸಲು ಸಾಕಾಗುತ್ತದೆ. ಇದು ಮುಂಬರುವ ಸಟ್ಟಾ ವ್ಯಾಪಾರದ ಹೊಡೆತದಿಂದ ರೂಪಾಯಿಯನ್ನು ರಕ್ಷಿಸಲು ಆರ್‌ಬಿಐ ಬಳಸಬಹುದಾದ ಅತ್ಯಂತ ಪ್ರಬಲವಾದ ಗುರಾಣಿ.

ಆದಾಗ್ಯೂ, ಪ್ರಸ್ತುತ ನಡೆಯುತ್ತಿರುವ ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ತೈಲ ಬೆಲೆಗಳು ಇನ್ನಷ್ಟು ಹೆಚ್ಚಾಗಬಹುದಾದ ಭೀತಿಯು ದೇಶಕ್ಕೆ ಕಠಿಣ ಸವಾಲುಗಳನ್ನು ಒಡ್ಡುತ್ತಿವೆ. ಭಾರತವು ಒಂದು ಬ್ಯಾರೆಲ್ ತೈಲಕ್ಕೆ ಹೆಚ್ಚಿನ ಡಾಲರ್ ಮತ್ತು ಪ್ರತಿ ಡಾಲರ್‌ಗೆ ಹೆಚ್ಚಿನ ರೂಪಾಯಿಗಳನ್ನು ಪಾವತಿಸಬೇಕಾದ ಅಪಾಯಕ್ಕೆ ಸಿಲುಕಬಹುದು. ಈ ನಿಟ್ಟಿನಲ್ಲಿ, ದೇಶವು ಸಟ್ಟಾ ಹೂಡಿಕೆಯ ಬಂಡವಾಳದ ಹೊರಹರಿವನ್ನು ನಿಯಂತ್ರಿಸಲು ಮತ್ತು ತೈಲ ಆಮದಿನ ಮೇಲಿನ ತನ್ನ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಮಾಹಿತಿ ಮೂಲ: ದಿ ಹಿಂದು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...