ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲ್ದುಹೋಮಾ

Date:

ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝೆಡ್‌ಪಿಎಂ) ನಾಯಕ ಲಾಲ್ದುಹೋಮಾ ಶುಕ್ರವಾರ(ಡಿ.08) ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಹರಿಬಾಬು ಕಂಬಂಪಾಟಿ ಅವರು ಲಾಲ್ದುಹೋಮಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಲಾಲ್ದುಹೋಮಾ ಜೊತೆ ಹನ್ನೊಂದು ಮಂದಿ ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಿಜೋ ನ್ಯಾಷನಲ್ ಫ್ರಂಟ್ ನಾಯಕ ಮತ್ತು ನಿರ್ಗಮಿತ ಮುಖ್ಯಮಂತ್ರಿ ಝೋರಂತಂಗ ಅವರು ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸಿದ್ದರು.

ಶಾಸಕಾಂಗ ಪಕ್ಷದ ನಾಯಕ ಲಾಲಛಂದಮ ರಾಲ್ಟೆ ಸೇರಿದಂತೆ ಎಲ್ಲ ಎಂಎನ್‌ಎಫ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಕೂಡ ಉಪಸ್ಥಿತರಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಂಗಳವಾರ ಝೆಡ್‌ಪಿಎಂ ಶಾಸಕಾಂಗ ಪಕ್ಷದ ನಾಯಕರಾಗಿ ಲಾಲ್ದುಹೋಮಾ ಹಾಗೂ ಉಪನಾಯಕರಾಗಿ ಕೆ.ಸಪ್ದಂಗ ಅವರನ್ನು ಆಯ್ಕೆ ಮಾಡಲಾಯಿತು.

40 ಸದಸ್ಯರ ವಿಧಾನಸಭೆಯೊಂದಿಗೆ, ಮಿಜೋರಾಂ ಮುಖ್ಯಮಂತ್ರಿ ಸೇರಿದಂತೆ 12 ಮಂತ್ರಿಗಳನ್ನು ಹೊಂದಬಹುದು.

ನವೆಂಬರ್ 7 ರಂದು ಒಂದು ಹಂತದ ಚುನಾವಣೆ ನಡೆಸಿದ ಮಿಜೋರಾಂ ರಾಜ್ಯದಲ್ಲಿ ಮತ ಎಣಿಕೆಯು ಒಂದು ದಿನದ ವಿಳಂಬವಾಗಿ ನಡೆಯಿತು. ರಾಜ್ಯದಲ್ಲಿ ಶೇ.80.66ರಷ್ಟು ಮತದಾನವಾಗಿತ್ತು. ಝೋರಾಮ್ ಪೀಪಲ್ಸ್ ಮೂವ್ಮೆಂಟ್ 40 ಕ್ಷೇತ್ರಗಳಲ್ಲಿ 27 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ.

ಝೆಡ್‌ಪಿಎಂ ಅನ್ನು 2019 ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲಾಗಿದೆ ಮತ್ತು 2018 ರ ಚುನಾವಣೆಯಲ್ಲಿ 8 ರಿಂದ ಅದರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡು ಬರಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಮತ್ತೊಬ್ಬ ಯೋಗಿಗೆ ಸಿಎಂ ಪಟ್ಟ? ಯಾರೀತ ಬಾಬಾ ಬಾಲಕನಾಥ?

ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿದ್ದವ ಈಗ ನೂತನ ಸಿಎಂ       

ಝೆಡ್‌ಪಿಎಂ ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿಯಾಗಿರುವ ಲಾಲ್ದುಹೋಮಾ ಅವರ ರಾಜಕೀಯ ಜೀವನ ಒಂದು ಹೋರಾಟದ ಹಾದಿಯಾಗಿದೆ. ಐಪಿಎಸ್‌ ಅಧಿಕಾರಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭದ್ರತಾ ಅಧಿಕಾರಿ, ಕಾಂಗ್ರೆಸ್ ಸಂಸದ ಸೇರಿದಂತೆ ಇನ್ನು ಹಲವು ಬದುಕಿನ ದಾರಿಗಳು ಲಾಲ್ದುಹೋಮಾ ಅವರದ್ದಾಗಿದೆ.

74 ವರ್ಷದ ಲಾಲ್ಡುಹೋಮಾ ಅವರು ಎಪ್ಪತ್ತರ ದಶಕದಲ್ಲಿಯೇ ಐಪಿಎಸ್‌ ಅಧಿಕಾರಿಯಾಗಿ ಗೋವಾ ರಾಜ್ಯದ ಕೇಡರ್‌ ಆಗಿ ಸೇರ್ಪಡೆಗೊಂಡರು. ಅವರ ಸೇವೆ ಗುರುತಿಸಿದ ಅಂದಿನ ಕೇಂದ್ರ ಸರ್ಕಾರ ಅವರನ್ನು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಭದ್ರತಾ ಅಧಿಕಾರಿಯನ್ನಾಗಿ ನೇಮಿಸಿತ್ತು.

ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರಿಂದ ಐಪಿಎಸ್‌ ಹುದ್ದೆಗೆ ಎಂಬತ್ತರ ದಶಕದಲ್ಲಿಯೇ ರಾಜೀನಾಮೆ ನೀಡಿದರು. ಆನಂತರ 1984ರಲ್ಲಿ ಮಿಜೋರಾಂನಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಆದರೆ ಕೆಲವೇ ಸಮಯದಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆ ಎದುರಿಸಿದ ಮೊದಲ ಸಂಸದರಾಗಿ ಲಾಲ್ದುಹೋಮಾ ಅವರ ರಾಜಕೀಯ ಹಾದಿ ಮಹತ್ವದ ತಿರುವು ಪಡೆಯಿತು. ಪಕ್ಷಾಂತರ ನಿಷೇಧ ಕಾಯಿದೆ ಅಡಿ ಶಿಕ್ಷೆಗೆ ಗುರಿಯಾದ ದೇಶದ ಮೊದಲ ಸಂಸದರು ಇವರಾದರು. ಆದರೆ ಮಿಜೋರಾಂನಲ್ಲಿ ಶಾಂತಿ ಹೋರಾಟವನ್ನು ಮುಂದುವರೆಸಿದರು.

ಜೋರಾಮ್ನ್ಯಾಷನಲ್ಪಾರ್ಟಿ ಸ್ಥಾಪನೆ

1997ರಲ್ಲಿ ಜೋರಾಮ್‌ ನ್ಯಾಷನಲ್‌ ಪಾರ್ಟಿಯನ್ನು ಲಾಲ್ಡುಹೋಮಾ ಆರಂಭಿಸಿ ವಿಧಾನಸಭೆಗೆ ಆಯ್ಕೆಯಾದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಲಿಲ್ಲ. ಆನಂತರ ಇದನ್ನು ಜೋರಾಮ್‌ ಪೀಪಲ್ಸ್‌ ಮೂವ್ಮೆಂಟ್‌ ಎಂದು ಬದಲಿಸಿ 2018ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಎರಡನೇ ಬಾರಿಯೂ ತಾವೂ ಎರಡು ಕಡೆ ಗೆದ್ದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರು.

ಆದರೆ ಅವರ ಪಕ್ಷಕ್ಕೆ ಮಾನ್ಯತೆ ಇಲ್ಲದ್ದರಿಂದ ಪಕ್ಷೇತರ ಶಾಸಕರಾಗಿ ಲಾಲ್ಡುಹೋಮಾ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಲಾಯಿತು. ಇದು ಸರಿಯಲ್ಲವೆಂದು ಪಕ್ಷಾಂತರ ಕಾಯಿದೆಯಡಿ ರಾಜ್ಯ ಸರ್ಕಾರ ದೂರು ನೀಡಿತ್ತು. ಇದರಿಂದಾಗಿ ಎರಡನೇ ಬಾರಿಗೆ ಪಕ್ಷಾಂತರ ಕಾಯಿದೆಯಡಿ ಮತ್ತೆ ಸ್ಥಾನ ಕಳೆದುಕೊಂಡರು.

ನ್ಯಾಯಾಲಯದ ಮೊರೆ ಹೋಗಿ ಮರು ಚುನಾವಣೆ ಎದುರಿಸಿ ಗೆದ್ದು ಬಂದರು. ಇದಾದ ಬಳಿಕ ಎಂಎನ್‌ಎಫ್‌ ಆಡಳಿತದ ವಿರುದ್ದ ಸದನದ ಹೊರಗೆ ಹಾಗೂ ಸಾರ್ವಜನಿಕರೊಂದಿಗೆ ಹೋರಾಟ ಮಾಡಿಕೊಂಡು ಬಂದ ಲಾಲ್ಡುಹೋಮಾ ಈ ಬಾರಿ ಭಾರೀ ಅಂತರದೊಂದಿಗೆ ಜಯಗಳಿಸಿ ಮುಖ್ಯಮಂತ್ರಿಯಾಗಿ ನಾಲ್ಕು ದಶಕದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2019ರಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳ ಕತೆ ಏನಾಯಿತು?

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರ ಮುಖ ಹೊತ್ತ ಬಿಜೆಪಿ ಪ್ರಣಾಳಿಕೆ ಸಾಲು...

ಪಂಜಾಬ್‌| ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ರೈತರ ಪ್ರತಿಭಟನೆಯ ಬಿಸಿ

ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ನಿರಂತರವಾಗಿ ಮುಂದುವರೆದಿದ್ದು, ಲೋಕಸಭೆ ಚುನಾವಣೆಯ ಪ್ರಚಾರ ನಡೆಸುತ್ತಿರುವ...

ಸ್ನೇಹಿತೆ ಮೇಲೆ ಹಲ್ಲೆ, ಅತ್ಯಾಚಾರ; ಆರೋಪಿ ಬಂಧನ – ಮನೆಯ ಅಕ್ರಮ ಭಾಗ ನೆಲಸಮ

ತನ್ನ ಸ್ನೇಹಿತೆ ಮೇಲೆಯೇ ಹಲ್ಲೆಗೈದು ಅತ್ಯಾಚಾರ ಎದಗಿದ್ದ ಆರೋಪದ ಮೇಲೆ 20...

ಅನಾರೋಗ್ಯ ಹಿನ್ನೆಲೆ; ರಾಹುಲ್ ಗಾಂಧಿ ಕೇರಳ ಚುನಾವಣಾ ಪ್ರಚಾರ ರದ್ದು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 22...