‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’: ಸಾಮಾಜಿಕ ಮೌಲ್ಯವಾಗದ ಲಿಬರಲ್‌ ಮುಖ

Date:

ಜಮೈಕದ ರೆಗ್ಗೀ ಘರಾಣದ ಗಾಯಕ, ರಾಸ್ಟಾಫರೈನ್‌ (ಕ್ಯಾಥೋಲಿಕ್‌ಗಿಂತ ಭಿನ್ನವಾದ ಧರ್ಮ ಮತ್ತು ಸಾಮಾಜಿಕ ಆಂದೋಲನ ಮಾರ್ಗದ ಮಿಸಳ್) ಮಾರ್ಲೈಯ ಹೆಸರನ್ನು ಒಳಗೊಂಡ ಕೆ.ಪಿ.ಲಕ್ಷ್ಮಣ್‌ ನಿರ್ದೇಶನದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ (Bob Marley from kodihalli) ನಾಟಕ ರಂಗಭೂಮಿಯ ಎಲ್ಲಾ ಸಿದ್ಧ ಮಾದರಿಯನ್ನು ತುಂಡರಿಸಿದೆ‌, ಎಲ್ಲ ಗಡಿಗಳನ್ನು ದಾಟಿ ತನ್ನದೇ ಹೊಸ ದಾರಿ ನಿರ್ಮಿಸಿದೆ. ರೆಗ್ಗೀ ಗಾಯಕ ಮಾರ್ಲೈಗೆ ನುಡಿನಮನದ ಭಾಗವಾಗಿ ಸ್ಕ್ರಿಪ್ಟ್‌ ರಚನೆಯಾದರೂ ಸಹ ಪ್ರಾರಂಭವಾಗಿ ಕೆಲವೇ ನಿಮಿಷಗಳಲ್ಲಿ ನಾಟಕ ಜಮೈಕಾದಿಂದ ಭಾರತಕ್ಕೆ ಸ್ಥಳಾಂತರವಾಗಿ ದಲಿತರ ಬದುಕಿನ ಶೋಷಣೆಯ ಕಥನದ ಹಲವು ಆಯಾಮಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ.

- Advertisement -

ಖಾಲಿ ಸ್ಟೇಜ್‌ ಮತ್ತು ಮಾರ್ಲೈನ ಜನಪ್ರಿಯ Get up, stand up Stand up for your right ಹಾಡಿನ ಮೂಲಕ ನಾಟಕ ಶುರುವಾಗುತ್ತದೆ. ನಂತರ, ಕೋಡಿಹಳ್ಳಿಯಿಂದ ನಗರಕ್ಕೆ ವಲಸೆ ಬಂದ ಗಾಯಕ, ಕರ್ನಾಟಕದ ಯಾವುದೋ ಮೂಲೆಯಿಂದ ನಗರಕ್ಕೆ ಬಂದ ಇಂಗ್ಲಿಷ್‌ ಶಿಕ್ಷಕಿ ಮತ್ತು ಕಲಾವಿದ ಈ ಮೂವರ ನಡುವಿನ ಒಂದು ಸಂಜೆ ಮತ್ತು ರಾತ್ರಿಯ ಬದುಕಿನ ಸುತ್ತ ಕತೆ ಬಿಚ್ಚಿಕೊಳ್ಳುತ್ತದೆ. ‘ದಲಿತರಾಗಿ ಹುಟ್ಟಿದ ಕಾರಣ…’ ಎನ್ನುವ ಸಾಮಾಜಿಕ ಹಿಂಸೆಯು ಮೂವರಿಗೂ ಮಾನಸಿಕವಾಗಿ ಬೆಂಬಿಡದೆ ದಾಳಿ ಮಾಡುತ್ತಲೇ ಇರುತ್ತದೆ. ಜಾತಿ ನರಕದ ಕೊಚ್ಚೆಯಾಗಿರುವ ಹಳ್ಳಿಯಿಂದ ಬಿಡುಗಡೆಗಾಗಿ ನಗರಕ್ಕೆ ಬಂದರೂ ಸಹ ಬೆಂಬಿಡದ ಜಾತಿ ತಾರತಮ್ಯದ ಅನುಭವ ಮೂವರ ನಡುವೆ ಸಾಮಾನ್ಯವಾಗಿದ್ದರೂ ಸಹ ಪ್ರತಿರೋಧ ಭಿನ್ನವಾಗುವ ಕಥನವೆ ಇಲ್ಲಿನ ಜೀವಾಳ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ

ಪ್ರಭುತ್ವ ಫ್ಯಾಸಿಸಂ ಮತ್ತು ಜಾತಿ ಅಸಮಾನತೆಯ ವ್ಯವಸ್ಥೆ ಫ್ಯಾಸಿಸಂ ಕುರಿತು ಮಾತನಾಡುವ ಇಡೀ ನಾಟಕವು ಬ್ರೆಕ್ಟ್‌ನ ಎಪಿಕ್‌ ರಂಗಭೂಮಿಯ ಪ್ರಯೋಗದಂತಿದೆ. ಇಲ್ಲಿನ ವಿನೋದ ದೃಶ್ಯಗಳಿಗೆ ದಕ್ಕಿದ ಸರ್ರಿಯಲಿಸಂನ ಸ್ಪರ್ಶದ ಕಾರಣ ರಂಗದ ಮೇಲೆ ಎಪಿಕ್‌ ಮಾದರಿ ಸಾಕಾರಗೊಂಡಿದೆ. ನಾಟಕದಲ್ಲಿ ವಿನೋದ ದೃಶ್ಯಗಳು ಭೌತಿಕವಾಗಿ ಪ್ರದರ್ಶನಗೊಂಡರೆ ತಾತ್ವಿಕವಾಗಿ ಅದು ವಿಷಾದದ ದನಿಯಾಗಿರುತ್ತದೆ. ಇಲ್ಲಿ ವಿಷಾದ ಮತ್ತು ಪ್ರತಿರೋಧ ಪರಸ್ಪರ ಡಿಕ್ಕಿ ಹೊಡೆಯುತ್ತಲೇ ಇಡೀ ನಾಟಕದ ಸ್ಥಾಯೀಭಾವವಾಗಿರುವುದು ಎಪಿಕ್‌ ಪ್ರಯೋಗದ ಗೆಲುವು. ಗ್ರಾಮ ಭಾರತದ ಫ್ಯೂಡಲ್-ಬ್ರಾಹ್ಮಣಶಾಹಿಯ ಜಾತಿ ದೌರ್ಜನ್ಯದ ಎಲ್ಲಾ ಸಂಕೋಲೆಗಳನ್ನು ಕತ್ತರಿಸಿಕೊಂಡು ನಗರದ ಕಾಸ್ಮೋಪಾಲಿಟನ್‌ ವಾತಾವರಣದಲ್ಲಿ ಸ್ವಾತಂತ್ರ್ಯ, ಸಮಾನತೆಯನ್ನು ಅನುಭವಿಸಬಹುದೇ? ತಲ್ಲಣಗೊಳಿಸುವ ಇಂತಹ ಪ್ರಶ್ನೆಗೆ ನಿರ್ದೇಶಕರು ನಾಟಕದ ಕೊನೆಗೆ ʼಶ್ರೇಷ್ಠ ಕನಿಷ್ಠ ಅನ್ನೋದು ಇರೋವರೆಗೂ ಸಂಘರ್ಷ, ಹೋರಾಟ ಇದ್ದೇ ಇರುತ್ತದೆʼ ಎನ್ನುವ ರಾಕ್‌ ಶೈಲಿಯ ಹಾಡಿನ ಮೂಲಕ (ಇದು ಆರಂಭದಲ್ಲಿ ಬರುವ ಮರ್ಲೈನ ಹಾಡಿನ ಕನ್ನಡ ರೂಪಾಂತರ) ಉತ್ತರಿಸಿದ್ದಾರೆ.

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ

ಆದರೆ, ಹಳ್ಳಿಯಲ್ಲಿ ಐಡೆಂಟಿಟಿ ಕಾರಣಕ್ಕೆ ಶೋಷಣೆಗೆ ಒಳಗಾಗುವ ದಲಿತರು ನಗರಕ್ಕೆ ವಲಸೆ ಬಂದರೂ ಸಹ ಮತ್ತೊಂದು ರೂಪದಲ್ಲಿ ಅದೇ ಗುರುತಿನ ಕಾರಣಕ್ಕೆ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ ಎನ್ನುವ ವಾಸ್ತವ ಕಥನವನ್ನು ಮುರಿಯಲು ಪ್ರಯತ್ನಿಸುವ ‘dalit assertion’ ಈ ನಾಟಕದ ಆತ್ಮ. ಪ್ರೇಕ್ಷಕರನ್ನು ಉದ್ದೇಶಿಸಿ ಗಾಯಕ ಹೇಳುವ ʼಪಾಪ ನೀವೇನು ಮಾಡುತ್ತೀರಿ, ಸುಮ್ಮನೆ ನೋಡುತ್ತೀರಿ ಅಷ್ಟೆʼ ಮಾತುಗಳು ಲಿಬರಲ್‌ ಮುಖ ಸಾಮಾಜಿಕ ಮೌಲ್ಯವಾಗಲಿಲ್ಲ ಎಂದು ಧ್ವನಿಸುತ್ತದೆ. ಇಲ್ಲಿ ಎನ್‌.ಕೆ. ಹನುಮಂತಯ್ಯನವರ ಕವಿತೆಯ ಸಾಲುಗಳು, ವೇಮುಲ ಬರೆದ ಪತ್ರದ ಸಾಲುಗಳು ನಾಟಕದ ಅಥೆಂಟಿಕ್‌ ಭಾಷೆಯಂತಿದೆ. ಹಿನ್ನಲೆಯಲ್ಲಿ ಬರುವ ಅಂಬೇಡ್ಕರ್‌ ಅವರ ʼವೇಟಿಂಗ್‌ ಫಾರ್‌ ವೀಸಾʼ ಬರಹದ ಸಾಲುಗಳು ನಾಟಕದ ಗಾಯಕ, ಶಿಕ್ಷಕಿ, ಕಲಾವಿದ ನಗರಕ್ಕೆ ಬಂದರೂ ಸಹ… ಎನ್ನುವ ಕಹಿ ಅನುಭವದ ಕನ್ನಡಿಯಂತಿದೆ.

ರಂಗಭೂಮಿ ಪ್ರಯೋಗದಲ್ಲಿ ಅನೇಕ ದಾರಿಗಳನ್ನು ತೆರೆದಿಡುವ Bob Marley from kodihalli ನಾಟಕ ಈ ಕಾಲದ ಅಗತ್ಯವಾಗಿತ್ತು. ಬಹು ಮುಖ್ಯ ಎಪಿಕ್‌ ಮಾದರಿಯಾಗಿದೆ.

ಸಮರ್ಥ ಅಭಿನಯ ನೀಡಿದ ಚಂದ್ರು, ಶ್ವೇತಾ, ಭರತ್‌ ಅವರಿಗೆ, ಮಹತ್ವದ ನಾಟಕ ಕೊಟ್ಟ ನಿರ್ದೇಶಕ ಲಕ್ಷ್ಮಣ್‌  ಅವರಿಗೆ ಶರಣು…

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿಓಂಕಾರನಾದವೆಂಬ ಸೆಳೆಕೋಲಂ...

ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.ಅಳುಪಿಲ್ಲದಿರ್ಪುದೆ ವ್ರತ....

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...