ಬಂಗಾಳ ಚುನಾವಣೆ | ರಾಜಬಂಶಿ, ಮತುವಾಗಳ ಬೆಂಬಲಕ್ಕಾಗಿ TMC ಮತ್ತು BJP ಸೆಣೆಸಾಟವೇಕೆ?

Date:

ಪಶ್ಚಿಮ ಬಂಗಾಳದಲ್ಲಿ 2019ರ ಲೋಕಸಭಾ ಚುನಾವಣೆ ನಂತರ ಬಿಜೆಪಿ ಗಮನಾರ್ಹವಾಗಿ ಬೆಳೆಯುತ್ತಿದೆ. ಆ ಚುನಾವಣೆಯಲ್ಲಿ ಬಂಗಾಳದಲ್ಲಿ ತನ್ನ ಸ್ಥಾನಗಳನ್ನು 2ರಿಂದ 18ಕ್ಕೆ ಹೆಚ್ಚಿಸಿಕೊಂಡ ಬಿಜೆಪಿ, 2021ರ ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಈ ಬೆಳೆವಣಿಗೆಗೆ ಕಾರಣವಾದದ್ದು, ರಾಜ್ಯದ ಉತ್ತರ ಮತ್ತು ಪೂರ್ವ ಗಡಿ ಭಾಗಗಳಲ್ಲಿ ಹರಡಿರುವ ರಾಜಬಂಶಿ ಮತ್ತು ಮತುವಾ ಸಮುದಾಯಗಳ ಬೆಂಬಲ.

- Advertisement -

2019ರಲ್ಲಿ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಟಿಎಂಸಿಗೆ ದೊಡ್ಡ ಆಘಾತವನ್ನೂ, ಭವಿಷ್ಯದ ಸವಾಲನ್ನೂ ಮುಂದಿಟ್ಟಿತು. ಕೂಡಲೇ, ಮಮತಾ ಅವರು ಉತ್ತರ ಬಂಗಾಳ ಭಾಗದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದರು. ಈ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳು ಮತ್ತು ಪಕ್ಷದ ಸಾಂಘಿಕ ಬಲವನ್ನು ಹೆಚ್ಚಿಸಿದರು. ಈ ಪ್ರಯತ್ನಗಳ ಪರಿಣಾಮ, 2021ರ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಆದರೂ, ಬಿಜೆಪಿ 77 ಸ್ಥಾನಗಳನ್ನು ಗೆದ್ದಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

2024ರ ಲೋಕಸಭಾ ಚುನಾವಣೆಯಲ್ಲಿ, ಬಂಗಾಳದಲ್ಲಿ ಬಿಜೆಪಿಯ ಸ್ಥಾನಗಳು 18 ರಿಂದ 12ಕ್ಕೆ ಇಳಿದವು. ಆದರೂ, ರಾಜಬಂಶಿ ಸಮುದಾಯವು ಪ್ರಬಲವಾಗಿರುವ ಉತ್ತರ ಬಂಗಾಳ ಮತ್ತು ಮತುವಾ ಸಮುದಾಯದ ಪ್ರಾಬಲ್ಯವಿರುವ ಪೂರ್ವ ಬಂಗಾಳದಲ್ಲಿ ಬಿಜೆಪಿ ತನ್ನ ಬೆಂಬಲವನ್ನು ಉಳಿಸಿಕೊಂಡಿತು.

ರಾಜಬಂಶಿ ಸಮುದಾಯವು ದಶಕಗಳಿಂದ ಪ್ರತ್ಯೇಕ ‘ಕಾಮತಾಪುರ’ ರಾಜ್ಯಕ್ಕಾಗಿ ಒತ್ತಾಯಿಸುತ್ತಿದೆ. ಜೊತೆಗೆ, ತಮ್ಮ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಲು ಅಗ್ರಹಿಸುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಇವುಗಳನ್ನು ಈಡೇರಿಸಬಲ್ಲದು ಎಂಬ ಭರವಸೆ ಈ ಸಮುದಾಯದಲ್ಲಿದೆ. ಆದರೆ, ಈ ಸಮಸ್ಯೆಗಳ ಪರಿಹಾರ ಅಷ್ಟು ಸುಲಭವೂ ಅಲ್ಲ, ಬಿಜೆಪಿ ಅದನ್ನು ಮಾಡುವುದೂ ಇಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

ಈ ನಡುವೆ ಮಮತಾ ಬ್ಯಾನರ್ಜಿ ಅವರು ರಾಜಬಂಶಿ ಸಮುದಾಯವನ್ನು ಬಿಜೆಪಿಯಿಂದ ದೂರ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಉತ್ತರ ಬಂಗಾಳದ ಒಟ್ಟು 54 ವಿಧಾನಸಭಾ ಸ್ಥಾನಗಳ ಪೈಕಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈ ಸಮುದಾಯದ ಪ್ರಭಾವವಿದೆ. ಬಂಗಾಳದಲ್ಲಿ ಬಿಜೆಪಿ ಬೇರು ಬಿಡುವುದಕ್ಕೂ ಮೊದಲು ಈ ಪ್ರದೇಶವು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳ ಭದ್ರಕೋಟೆಯಾಗಿತ್ತು. ಆಗಲೂ ಟಿಎಂಸಿ ಇಲ್ಲಿ ಅತಿ ದುರ್ಬಲವಾಗಿತ್ತು.

ಈ ಸಮುದಾಯದ ಪ್ರಭಾವಿಗಳಾಗಿರುವ ಬಿಜೆಪಿಯ ರಾಜ್ಯಸಭಾ ಸಂಸದ ಮತ್ತು ಕೂಚ್ ಬೆಹಾರ್‌ನ ಅನಂತ ಮಹಾರಾಜ್ (ನಾಗೇಂದ್ರ ರಾಯ್) ಅವರಿಗೆ ಮಮತಾ ಸರ್ಕಾರವು ’ಬಂಗಭೂಷಣ’ ಪ್ರಶಸ್ತಿ ನೀಡಿದೆ. ಇದು ಕೂಡ, ಸಮುದಾಯವನ್ನು ಸೆಳೆಯುವ ತಂತ್ರವೆಂದು ವಿಶ್ಲೇಷಕರು ಪರಿಗಣಿಸಿದ್ದಾರೆ. ವಿಶ್ವ ಮಾತೃಭಾಷಾ ದಿನದಂದು ರಾಜಬಂಶಿ ಭಾಷೆಯನ್ನು ಮುಂಚೂಣಿಗೆ ತರುವುದು ತಮ್ಮ ಉದ್ದೇಶವೆಂದು ಸರ್ಕಾರ ಹೇಳಿಕೊಂಡಿದೆ.

ಈ ಲೇಖನ ಓದಿದ್ದೀರಾ?: ಅಫ್ಘಾನ್-ಪಾಕ್ ಸಂಘರ್ಷ | ತಾನೇ ಹುಟ್ಟುಹಾಕಿದ ತಾಲಿಬಾನ್‌ ಜೊತೆ ಪಾಕ್ ಘರ್ಷಣೆ ಏಕೆ?

ಇನ್ನು, ಮತುವಾ ಸಮುದಾಯದ ಪ್ರಭಾವವಿರುವ ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಮಮತಾ ಈಗಾಗಲೇ ತಮ್ಮ ದಾಳ ಉರುಳಿಸಿದ್ದಾರೆ. ಮತುವಾ ಸಮುದಾಯದ ಆಧ್ಯಾತ್ಮಿಕ ನಾಯಕ ಹರಿಚಂದ್ ಠಾಕೂರ್ ಅವರ ಕುಟುಂಬದ ಸದಸ್ಯೆಯಾದ ‘ಮಮತಾ ಠಾಕೂರ್’ ಅವರಿಗೆ ಟಿಎಂಸಿಯಿಂದ ರಾಜ್ಯಸಭಾ ಟಿಕೆಟ್ ನೀಡಿದ್ದು, ಅವರು ಮತುವಾ ಸಮುದಾಯದ ಮತಗಳನ್ನು ವಿಭಜಿಸಿದ್ದಾರೆ. ಇದು ಬಿಜೆಪಿಯ ಶಾಂತನು ಠಾಕೂರ್ ಅವರಿಗೆ ನೀಡಿದ ಪ್ರತ್ಯುತ್ತರವೂ ಆಗಿದೆ. ಅಲ್ಲದೆ, ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಬಾಂಗ್ಲಾದಿಂದ ವಲಸೆ ಬಂದಿದ್ದ ಈ ಸಮುದಾಯದಲ್ಲಿ ಸಿಎಎ ಮತ್ತು ಎನ್‌ಆರ್‌ಸಿಗಳಂತಹ ಪೌರತ್ವ ಪ್ರಕ್ರಿಯೆಯ ಆತಂಕಗಳೂ ಇವೆ. ಈ ಆತಂಕವು ಮಮತಾ ಅವರಿಗೆ ಸಮುದಾಯವನ್ನು ಸೆಳೆಯಲು ನೆರವಾಗುತ್ತಿದೆ. ಮಮತಾ ಅವರು, “ಯಾರೂ ಪೌರತ್ವ ಕಳೆದುಕೊಳ್ಳದಂತೆ ನಾನು ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ. ಈ ಸಮುದಾಯವು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯನ್ನು ಹೋಗಲಾಡಿಸಲು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ ಏನಿದು ಕಾಶ್ಮೀರದ ‘ಕುನನ್ – ಪೋಶ್ಪೋರ ಕಗ್ಗತ್ತಲ ರಾತ್ರಿ’? ಎಬಿವಿಪಿ ತಗಾದೆ ಯಾಕೆ?

2019 ಮತ್ತು 2024ರ ನಡುವೆ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಅಲಿಪುರ್ದುವಾರ್‌ನ ಬುಡಕಟ್ಟು ಸಮುದಾಯದ ಪ್ರಕಾಶ್ ಚಿಕ್ ಬರಿಕ್ ಅವರಿಗೆ 2023 ರಲ್ಲಿ ರಾಜ್ಯಸಭಾ ಸದಸ್ಯತ್ವ ನೀಡಿದ್ದಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿಯೂ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಅವರು ಬಿಜೆಪಿಯ ಎದುರು ಸೋತರು.

ಈ ಎಲ್ಲಾ ಕ್ರಮಗಳು ಬಿಜೆಪಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಟಿಎಂಸಿ ಹಿಡಿತವನ್ನು ಕ್ರಮೇಣ ಸುಧಾರಿಸಿವೆ. ಈ ಪ್ರಯತ್ನಗಳು ಚುನಾವಣಾ ಫಲಿತಾಂಶವಾಗಿ ಬದಲಾಗುತ್ತವೆಯೇ ಎಂಬುದು ಮತದಾನದಲ್ಲಿ ಗೊತ್ತಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...