ಜೀವ ಸಂಪತ್ತಿಗೆ ಸಂಚಕಾರ ತಂದಿದೆ ಜೀವ ವೈವಿಧ್ಯ ತಿದ್ದುಪಡಿ ಮಸೂದೆ

Date:

ತಿದ್ದುಪಡಿಗಳು ಭಾರತದಲ್ಲಿ ನೋಂದಾಯಿಸಲಾದ ವಿದೇಶಿಯರ ಕಂಪನಿಗಳನ್ನು ಭಾರತೀಯ ಕಂಪನಿಗಳಾಗಿ ಪರಿಗಣಿಸುತ್ತವೆ. ಅವುಗಳಿಗೆ ಜೈವಿಕ ಸಂಪನ್ಮೂಲಗಳು ಮತ್ತು ಸಂಪದ್ಭರಿತ ಪ್ರವೇಶವನ್ನು ನೀಡುತ್ತವೆ. ಮಾತ್ರವಲ್ಲ, ದೇಶದ ಸಂಪತ್ತನ್ನು ಕಾನೂನಾತ್ಮಕವಾಗಿಯೇ ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಡುತ್ತವೆ.

ಕಳೆದ ವಾರವಷ್ಟೇ ಮುಗಿದ ಸಂಸತ್‌ ಅಧಿವೇಶನದಲ್ಲಿ ವಿವಾದಾತ್ಮಕ ಜೀವ ವೈವಿಧ್ಯ (ತಿದ್ದುಪಡಿ) ಮಸೂದೆ-2021 ಅನ್ನು ಸಂಸತ್‌ನ ಉಭಯ ಸದನಗಳು ಅಂಗೀಕರಿಸಿವೆ. ಅಂಗೀಕೃತ ಮಸೂದೆಯು ಭಾರತೀಯ ಔಷಧ ವ್ಯವಸ್ಥೆಗಳ ವಾಣಿಜ್ಯೀಕರಣ, ಔಷಧೀಯ ಸಸ್ಯಗಳ ಕೃಷಿ ವಲಯದಲ್ಲಿ ವಿದೇಶಿ ಹೂಡಿಕೆಯನ್ನು ಸೆಳೆಯಲು ಉತ್ತೇಜಿಸುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಮಸೂದೆಯು ಜೈವಿಕ ಸಂಪನ್ಮೂಲಗಳ ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಪರಿಸರ ತಜ್ಞರು ಮತ್ತು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜೀವ ವೈವಿಧ್ಯ (ತಿದ್ದುಪಡಿ) ಮಸೂದೆಯನ್ನು ಮೊದಲ ಬಾರಿಗೆ 2021ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, ವಿಪಕ್ಷಗಳ ತೀವ್ರ ವಿರೋಧದಿಂದಾಗಿ ಮಸೂದೆಯನ್ನು 21 ಸದಸ್ಯರ ಜಂಟಿ ಸಂಸದೀಯ ಸಮಿತಿಯ ಮೇಲ್ವಿಚಾರಣೆಗೆ ನೀಡಲಾಗಿತ್ತು. ಇದೀಗ, ಸದನದಲ್ಲಿ ಮತ್ತೆ ಮಸೂದೆಯನ್ನು ಮಂಡಿಸಿದ ಕೇಂದ್ರ ಸರ್ಕಾರ ಉಭಯ ಸದನಗಳಲ್ಲಿ ಅಂಗೀಕರಿಸಿದೆ.

ಪ್ಯಾರಿಸ್ ಹವಾಮಾನ ಒಪ್ಪಂದ-2015ರ ಅಡಿಯಲ್ಲಿ ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ತಗ್ಗಿಸಲು ತಿದ್ದುಪಡಿಗಳನ್ನು ಉದ್ದೇಶಿಸಲಾಗಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. “ಹೊಸ ತಿದ್ದುಪಡಿಯು ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸುತ್ತದೆ. ಹವಾಮಾನ ಬದಲಾವಣೆ, ಮರುಭೂಮಿ ಮತ್ತು ಜೈವಿಕ ಸಂಪನ್ಮೂಲಗಳ ನಷ್ಟ– ತ್ರಿವಳಿ ಬಿಕ್ಕಟ್ಟನ್ನು ತಗ್ಗಿಸುವಾಗ ಸಂಶೋಧನೆ ಮತ್ತು ಸಹಕಾರವನ್ನು ಬೆಂಬಲಿಸುತ್ತದೆ” ಎಂದು ಅವರು ಸಂಸತ್‌ನಲ್ಲಿ ಭರವಸೆಯ ಮಾತುಗಳನ್ನಾಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ತಿದ್ದುಪಡಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಸೂದೆಯ ಅಂಶಗಳು ಜೈವಿಕ ಸಂಪನ್ಮೂಲಗಳ ಅತಿರೇಕದ ಬಳಕೆ ಮತ್ತು ವಿನಾಶಕ್ಕೆ ಕಾರಣವಾಗಬಹುದು, ಕಡಲ್ಗಳ್ಳತನವನ್ನು ಉತ್ತೇಜಿಸಬಹುದು ಮತ್ತು ಅರಣ್ಯವಾಸಿಗಳು ಹಾಗೂ ಕೃಷಿಕರು ಹೊಂದಿರುವ ಹಕ್ಕುಗಳನ್ನು ದುರ್ಬಲಗೊಳಿಸಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಜೀವ ವೈವಿಧ್ಯ ಕಾಯ್ದೆ ಹಿನ್ನೆಲೆ

ಭಾರತವು 1990ರ ದಶಕದ ಆರಂಭದಲ್ಲಿ ಜೈವಿಕ ಕಡಲ್ಗಳ್ಳತನದ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿತ್ತು. ಕಡಲ್ಗಳ್ಳತನವನ್ನು ತಡೆಯುವುದು ಸವಾಲಾಗಿ ಪರಿಣಮಿಸಿತ್ತು. ಅದೇ ಸಮಯದಲ್ಲಿ ವೈಜ್ಞಾನಿಕ ವಸಾಹತುಶಾಹಿ ವ್ಯವಸ್ಥೆಯೂ ಜಾರಿಗೆ ಬಂದಿತ್ತು. ಭಾರತೀಯ ಉತ್ಪನ್ನಗಳಾದ ಬೇವು, ಅರಿಶಿನ, ಹುಣಸೆಹಣ್ಣು, ಬಾಸ್ಮತಿ ಮತ್ತು ಡಾರ್ಜಿಲಿಂಗ್ ಚಹಾದಂತಹ ಬೆಳೆಗಳು ವಾಣಿಜ್ಯ ಶೋಷಣೆಗೆ ಗುರಿಯಾಗಿದ್ದವು. ಭಾರತ ಮಾತ್ರವಲ್ಲದೆ, ಅನೇಕ ಹಿಂದುಳಿದ ದೇಶಗಳು ದೊಡ್ಡ ಸಂಸ್ಥೆಗಳಿಂದ ಇದೇ ರೀತಿಯ ದಾಳಿಗೆ ಒಳಗಾಗಿದ್ದವು.

ಜೂನ್ 1992ರಲ್ಲಿ, ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಪರಿಸರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ‘ಜೀವ ವೈವಿಧ್ಯತೆ’ಯ ಸಮಾವೇಶ (ಸಿಬಿಡಿ) ನಡೆಯಿತು. ಸಮಾವೇಶದಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳಿಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಹಿ ಹಾಕಿದವು. ಸಮಾವೇಶವು ತಮ್ಮ ಸಾಂಪ್ರದಾಯಿಕ ಜ್ಞಾನ, ಅಭ್ಯಾಸಗಳು ಮತ್ತು ನಾವೀನ್ಯತೆಗಳ ಮೂಲಕ ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯಲ್ಲಿ ಸ್ಥಳೀಯ ಜನರ ಪ್ರಮುಖ ಕೊಡುಗೆಯನ್ನು ಗುರುತಿಸಿತ್ತು. ಅಂತಹ ಜನರೊಂದಿಗೆ ತಮ್ಮ ಜ್ಞಾನ, ನಾವೀನ್ಯ ಯೋಜನೆಗಳ ಬಳಕೆಯಿಂದ ದೊರೆಯುವ ಲಾಭದ ಸಮಾನ ಹಂಚಿಕೆಗೂ ಸಹ ಒಪ್ಪಿಕೊಳ್ಳಲಾಗಿತ್ತು.

1993ರ ಡೆಸೆಂಬರ್ 29ರಂದು ಸಮಾವೇಶದ ನಿರ್ಣಯಗಳು ಜಾರಿಗೆ ಬಂದವು. ಭಾರತವು 1994ರಲ್ಲಿ ಅದರ ಭಾಗವಾಯಿತು ಮತ್ತು ಸಹಿ ಹಾಕಿತು. ಈಗ, 175 ರಾಷ್ಟ್ರಗಳು ಜೈವಿಕ ಸಂಪನ್ಮೂಲಗಳ ರಕ್ಷಣೆಯ ಸಂಬಂಧಿಸಿದ ಸಮಾವೇಶದ ಭಾಗವಾಗಿವೆ.

ಅದರ ನಂತರ, ಸಸ್ಯ ಸಂಪತ್ತಿನ ಆವಾಸಸ್ಥಾನಗಳು, ಜಾನಪದ ಸಸ್ಯ ಪ್ರಭೇದಗಳು ಮತ್ತು ತಳಿಗಳು ಹಾಗೂ ಪ್ರಾಣಿಗಳ ತಳಿಗಳು, ಸೂಕ್ಷ್ಮ ಜೀವಿಗಳು ಮತ್ತು ಅವುಗಳ ಪ್ರದೇಶಕ್ಕೆ ಸಂಬಂಧಿಸಿದ ಜೀವ ವೈವಿಧ್ಯತೆಯ ವಿವಿಧ ಅಂಶಗಳನ್ನು ರಕ್ಷಿಸಲು ಭಾರತವು ಜೀವ ವೈವಿಧ್ಯ ಕಾಯಿದೆ-2002ಅನ್ನು ಜಾರಿಗೊಳಿಸಿತು.

ಈ ವರದಿ ಓದಿದ್ದೀರಾ?: ಬಡವರ ವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿ, ಧ್ವಜವನ್ನು ಎತ್ತರಕ್ಕೆ ಹಾರಿಸಿದರೆ ಏನು ಪ್ರಯೋಜನ?

ಕಾಯಿದೆಯ ಅಡಿಯಲ್ಲಿ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವನ್ನು ರಚಿಸಲಾಸಿತು. ಪ್ರಾಧಿಕಾರವು ಕಾನೂನು ದಾಖಲೆಯನ್ನು ತಯಾರಿಸಲು 2.77 ಲಕ್ಷ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು (ಬಿಎಂಸಿಇಎಸ್) ರಚಿಸಿತು. ಅದರ ಅಡಿಯಲ್ಲಿ ಪೀಪಲ್ಸ್ ಬಯೋಡೈವರ್ಸಿಟಿ ರಿಜಿಸ್ಟರ್ (ಪಿಆರ್‌ಬಿ) ರಚಿಸಿ, ಸ್ಥಳೀಯ ಜೈವಿಕ ಸಂಪನ್ಮೂಲಗಳ ಸಮಗ್ರ ಜವಾಬ್ದಾರಿ ನೀಡಲಾಯಿತು.

ಹೊಸ ತಿದ್ದುಪಡಿಗಳೇನು?

2002ರ ಕಾಯಿದೆಯು ಭಾರತದ ಜೈವಿಕ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಆದರೆ ನಂತರ, ಈ ವಲಯಕ್ಕೆ ವಿದೇಶಿ ಹೂಡಿಕೆ ಮತ್ತು ನಾವೀನ್ಯತೆಯನ್ನು ತರುವ ಅಗತ್ಯವಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾವಿಸಿತ್ತು. ಇದೀಗ, ಕಾಯ್ದೆಗೆ ತಿದ್ದುಪಡಿಗಳನ್ನು ತಂದು ಮಸೂದೆಯನ್ನೂ ಅಂಗೀಕರಿಸಿದೆ. ತಿದ್ದುಪಡಿ ಮಸೂದೆಯು ಹೆಚ್ಚಾಗಿ ಫಾರ್ಮಾ ಉದ್ಯಮ ಮತ್ತು ಜೈವಿಕ ಸಂಪನ್ಮೂಲಗಳನ್ನು ಬಳಸುವ ಸಾಂಪ್ರದಾಯಿಕ ಔಷಧ ತಯಾರಿಕರಿಗೆ ನೆರವು ನೀಡುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

ಆದರೆ, ಸರ್ಕಾರದ ಮಾತುಗಳನ್ನು ತಜ್ಞರು ಅಲ್ಲಗಳೆದಿದ್ದಾರೆ. ಈ ತಿದ್ದುಪಡಿಗಳು ವಿಭಿನ್ನ ವಿಭಾಗಗಳಲ್ಲಿ ಅಸ್ಪಷ್ಟತೆಗಳನ್ನು ಹೊಂದಿವೆ. ಕಠಿಣ ಶಿಕ್ಷೆಗಳನ್ನು ಕೇವಲ ದಂಡಕ್ಕೆ ಸೀಮಿತಗೊಳಿಸಿ ಬದಲಾಯಿಸಿವೆ. ಅಪರಾಧಗಳನ್ನು ಅಪರಾಧವಲ್ಲ ಎಂಬಂತಾಗಿಸಿದೆ. ಹಿಂದೆ, ಅಪರಾಧಗಳಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತಿತ್ತು. ಈಗ ಅದನ್ನು ದಂಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು, ದಂಡವು 1 ಲಕ್ಷದಿಂದ ರೂ 50 ಲಕ್ಷ ರೂ.ವರೆಗೆ ಇರುತ್ತದೆ. ಉಲ್ಲಂಘನೆಯನ್ನು ಮುಂದುವರೆಸಿದರೆ, 1 ಕೋಟಿ ವರೆಗೆ ಹೆಚ್ಚುವರಿ ದಂಡವನ್ನು ವಿಧಿಸಬಹುದಷ್ಟೇ.

ತಿದ್ದುಪಡಿಗಳು ಭಾರತದಲ್ಲಿ ನೋಂದಾಯಿಸಲಾದ ವಿದೇಶಿಯರ ಕಂಪನಿಗಳನ್ನು ಭಾರತೀಯ ಕಂಪನಿಗಳಾಗಿ ಪರಿಗಣಿಸುತ್ತವೆ. ಅವುಗಳಿಗೆ ಜೈವಿಕ ಸಂಪನ್ಮೂಲಗಳು ಮತ್ತು ಸಂಪದ್ಭರಿತ ಪ್ರವೇಶವನ್ನು ನೀಡುತ್ತವೆ. ವಿದೇಶಿ ನಿಯಂತ್ರಿತ ಕಂಪನಿಗಳು ಭಾರತದ ಸಂಪತ್ತನ್ನು ಕಾನೂನಾತ್ಮಕವಾಗಿಯೇ ಕೊಳ್ಳೆ ಹೊಡೆಯಲು ಅವಕಾಶ ನೀಡುತ್ತವೆ. ಅಲ್ಲದೆ, ಅವರು ಸ್ಥಳೀಯ ಹಂಚಿಕೆದಾರರನ್ನು ದುರ್ಬಲಗೊಳಿಸುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ: ಮುಖ್ಯ ಚುನಾವಣಾ ಆಯುಕ್ತ

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್...

ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ

ಉತ್ತರ ಪ್ರದೇಶ ಶಹಜಹಾನ್‌ಪುರದಲ್ಲಿ ಬಸ್‌ ಹಾಗೂ ಟ್ರಕ್ ನಡುವೆ  ಸಂಭವಿಸಿದ ಭೀಕರ...

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...

ಧ್ವನಿ ಬದಲಾಯಿಸುವ ಆ್ಯಪ್ ಬಳಸಿ 7 ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

30 ವರ್ಷದ ವ್ಯಕ್ತಿಯೊಬ್ಬ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಳಸಿ, ಶಿಕ್ಷಕಿಯಾಗಿ...