ಆರ್‌ಪಿಎಫ್‌ ಕಾನ್‌ಸ್ಟೆಬಲ್‌ನಿಂದ ಹತ್ಯೆ : ಬೀದರ್‌ನ ಸೈಫುದ್ದೀನ್ ಕುಟುಂಬಕ್ಕೆ ₹10 ಲಕ್ಷ ಪರಿಹಾರ

Date:

  • ಪರಿಹಾರ ನೀಡಲು ಸಮ್ಮತಿ ಸೂಚಿಸಿದ ಸಿಎಂ: ಸಚಿವ ಈಶ್ವರ್ ಖಂಡ್ರೆ
  • ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯಲ್ಲಿ ನಾಲ್ವರ ಹತ್ಯೆ, ಒಬ್ಬರು ಬೀದರ್

ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲಲ್ಲಿ ಕಳೆದ ಸೋಮವಾರ ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಚೇತನ್ ಸಿಂಗ್‌ನಿಂದ ಕೊಲ್ಲಲ್ಪಟ್ಟ ಬೀದರ್ ತಾಲೂಕಿನ ಹಮಿಲಾಪುರ್ ಗ್ರಾಮದ ಸೈಯದ್ ಸೈಫುದ್ದೀನ್ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರ ₹10 ಲಕ್ಷ ಪರಿಹಾರ ನೀಡಲಿದೆ.

- Advertisement -

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅರಣ್ಯ ಮತ್ತು ಪರಿಸರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ‘ಚಲಿಸುತ್ತಿದ್ದ ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಆರ್‌ಪಿಎಫ್‌ ಪೇದೆ ಚೇತನ್ ಸಿಂಗ್ ಕ್ಷುಲ್ಲಕ ಕಾರಣಕ್ಕೆ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಬೀದರ್ ಜಿಲ್ಲೆಯ ಬೀದರ್ ಗಾದಗಿ ಬಳಿಯ ಹಮಿಲಾಪುರದ ಮುಗ್ದ ಪ್ರಯಾಣಿಕ ಸೈಯದ್ ಸೈಫುದ್ದೀನ್ ಕುಟುಂಬದವರಿಗೆ ₹10 ಲಕ್ಷ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿಸಿದ್ದಾರೆ. ಮೃತರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ. ಈ ನೋವಿನ ಸಂದರ್ಭದಲ್ಲಿ ನಾವು ಅವರ ಜೊತೆಗೆ ಇರುತ್ತೇವೆ.” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲಲ್ಲಿ ಕಳೆದ ಸೋಮವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಆರ್‌ಪಿಎಫ್ ಕಾನ್‌ಸ್ಟೆಬಲ್ ತನ್ನ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ, ನಾಲ್ವರನ್ನು ಕೊಂದಿದ್ದನು.

bidar victim
ಸೈಯದ್ ಸೈಫುದ್ದೀನ್

ಆರ್‌ಪಿಎಫ್ ಸಹೋದ್ಯೋಗಿಯಾಗಿದ್ದ ಎಎಸ್‌ಐ ಟಿಕಾ ರಾಮ್ ಮೀನಾ, ಅಬ್ದುಲ್ ಕದಿರ್, ಅಸ್ಗರ್ ಕೈ, ಸೈಯದ್ ಸೈಫುದ್ದೀನ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದನು.

ಇದನ್ನು ಓದಿದ್ದೀರಾ? ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲ್ ಹತ್ಯೆ: ‘ಗಡ್ಡ ನೋಡಿ ಗುಂಡಿಟ್ಟು ಸಾಯಿಸಲಾಗಿದೆ’ ಎಂದ ಸಹೋದರ

ಸೈಯದ್ ಸೈಫುದ್ದೀನ್ ಹೈದರಾಬಾದ್‌ನ ಮೊಬೈಲ್ ಸರ್ವಿಸ್ ಅಂಗಡಿ ಒಂದರಲ್ಲಿ ಕೆಲಸ ಮಾಡಿಕೊಂಡು, ಅಲ್ಲೇ ನೆಲೆಸಿದ್ದರು. ಅಂಗಡಿಯ ಮಾಲೀಕರ ಜೊತೆಗೆ ಅಜ್ಮೀರ್‌ಗೆ ತೆರಳಿ ವಾಪಸ್ ಮುಂಬೈಗೆ ಬರುವ ವೇಳೆ ಈ ದುರ್ಘಟನೆ ನಡೆದಿತ್ತು. ಇವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ: ಆರ್. ಶ್ರೀನಿವಾಸನ್

ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ...

ಅನರ್ಹತೆ ನೋಟಿಸ್: ಲೋಕಸಭಾ ಸ್ಪೀಕರ್ ಬಳಿ ಮತ್ತೆ 15 ದಿನ ಕಾಲಾವಕಾಶ ಕೋರಿದ ಟಿಎಂಸಿ ಬಂಡಾಯ ಸಂಸದರು

ಪಕ್ಷಾಂತರ ನಿರೋಧಕ ಕಾಯ್ದೆಯಡಿ ಎದುರಿಸುತ್ತಿರುವ ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ...

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...