ಚುನಾವಣಾ ಬಾಂಡ್ | ತನಿಖಾ ಸಂಸ್ಥೆಗಳ ದಾಳಿ ಬಳಿಕ ದೇಣಿಗೆ ನೀಡಿದ ಔಷಧ-ಆರೋಗ್ಯ ಸಂಸ್ಥೆಗಳಿವು

Date:

ಎಸ್‌ಬಿಐ ಒದಗಿಸಿದ ಮತ್ತು ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಬಾಂಡ್‌ಗಳ ವಿವರಗಳಲ್ಲಿ ಸಾಕಷ್ಟು ವಿಚಾರಗಳು ಬಯಲಾಗುತ್ತಿವೆ. ಆರೋಗ್ಯ ಮತ್ತು ಔಷಧೀಯ ವಲಯದಿಂದಲೂ ನೂರಾರು ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂಬುದು ಗಮನಾರ್ಹ. ಅದರಲ್ಲೂ ಕೆಲವು ಔಷಧ ಮತ್ತು ಆರೋಗ್ಯ ಸಂಸ್ಥೆಗಳು ತಮ್ಮ ವಿರುದ್ಧ ತನಿಖಾ ಸಂಸ್ಥೆಗಳು ದಾಳಿ ನಡೆದ ಬಳಿಕ, ಬಾಂಡ್‌ಗಳನ್ನು ಖರೀದಿಸಿವೆ ಮತ್ತು ರಾಜಕೀಯ ಪಕ್ಷಗಳಿಗೆ ನೀಡಿವೆ.

ಆರೋಗ್ಯ ವಲಯದಲ್ಲಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಪಟ್ಟಿಯಲ್ಲಿ ‘ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯು ಮೊದಲ ಸ್ಥಾನದಲ್ಲಿದೆ. ಈ ಸಂಸ್ಥೆ, ತಲಾ 1 ಕೋಟಿ ರೂ. ಮೌಲ್ಯದ 162 ಬಾಂಡ್‌ಗಳನ್ನು ಖರೀದಿಸಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ತಲಾ 1 ಕೋಟಿ ರೂ.ಗಳ 80 ಬಾಂಡ್‌ಗಳನ್ನು ಖರೀದಿಸಿ, ಪಕ್ಷಗಳಿಗೆ ನೀಡಿದೆ.

ಇತರ ಗಮನಾರ್ಹ ಕಂಪನಿಗಳು ಸಿಪ್ಲಾ, ಸನ್ ಅಂಡ್‌ ಭಾರತ್ ಬಯೋಟೆಕ್ ಸೇರಿವೆ. ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಅಂತಹ 15 ಕಂಪನಿಗಳ ಕ್ಯುರೇಟೆಡ್ ಪಟ್ಟಿ ಇಲ್ಲಿದೆ. ಇವುಗಳಲ್ಲಿ ಹಲವಾರು ಕಂಪನಿಗಳು ತನಿಖಾ ಸಂಸ್ಥೆಗಳಿಂದ ದಾಳಿಗಳು ಮತ್ತು ತನಿಖೆಗಳನ್ನು ಎದುರಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್
162 ಬಾಂಡ್‌ಗಳ ಮೂಲಕ ಒಟ್ಟು 162 ಕೋಟಿ ರೂ. ದೇಣಿಗೆ ನೀಡಿದೆ. ಈ ಕಾರ್ಪೊರೇಟ್ ಆಸ್ಪತ್ರೆಯ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು 2020ರ ಡಿಸೆಂಬರ್‌ನಲ್ಲಿ ದಾಳಿ ನಡೆಸಿದ್ದರು.

ಡಾ.ರೆಡ್ಡಿ ಲ್ಯಾಬೋರೇಟರೀಸ್ ಲಿ
80 ಬಾಂಡ್‌ಗಳ ಮೂಲಕ ಒಟ್ಟು 80 ಕೋಟಿ ರೂ. ದೇಣಿಗೆ ನೀಡಿದೆ. ಈ ಸಂಸ್ಥೆಯ 2023ರ ನವೆಂಬರ್‌ನಲ್ಲಿ

ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಅಧಿಕಾರಿಗಳ ದಾಳಿಗೆ ಒಳಗಾಗಿತ್ತು. ಡಾ ರೆಡ್ಡೀಸ್ ಲ್ಯಾಬೋರೇಟರೀಸ್‌ನ ಡಾ. ಕೆ ನಾಗೇಂದ್ರ ರೆಡ್ಡಿ ಮೇಲೆ ಮೇಲೆ ದಾಳಿ ನಡೆದಿತ್ತು.

ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
ಈ ಸಂಸ್ಥೆಯು 91 ಬಾಂಡ್‌ಗಳ ಮೂಲಕ ಒಟ್ಟು 77.5 ಕೋಟಿ ರೂ. ದೇಣಿಗೆ ನೀಡಿದೆ.

ನ್ಯಾಟ್ಕೊ ಫಾರ್ಮಾ ಲಿಮಿಟೆಡ್
76 ಬಾಂಡ್‌ಗಳು – ಒಟ್ಟು 69.25 ಕೋಟಿ ರೂ. ದೇಣಿಗೆ.

ಹೆಟೆರೊ ಗ್ರೂಪ್ಸ್‌
ಹೆಟೆರೋ ಗ್ರೂಪ್ಸ್‌ನಲ್ಲಿ ಹೆಟೆರೋ ಡ್ರಗ್ಸ್ ಲಿಮಿಟೆಡ್, ಹೆಟೆರೊ ಲ್ಯಾಬ್ಸ್ ಲಿಮಿಟೆಡ್, ಹೆಟೆರೊ ಬಯೋಫಾರ್ಮಾ ಲಿಮಿಟೆಡ್ ಸಂಸ್ಥೆಗಳಿವೆ.

ಈ ಗ್ರೂಪ್‌ 60 ಬಾಂಡ್‌ಗಳ ಮೂಲಕ ಒಟ್ಟು 60 ಕೋಟಿ ರೂ. ದೇಣಿಗೆ ನೀಡಿದೆ.

ಈ ಸಂಸ್ಥೆಯ ಮೇಲೆ ಐಟಿ ದಾಳಿ ನಡೆಸಿತ್ತು. ಆಗ, 550 ಕೋಟಿ ರೂ. ಲೆಕ್ಕಕ್ಕೆ ಸಿಗದ ಆದಾಯ ಪತ್ತೆಯಾಗಿದೆ.

ದಿವಿ ಎಸ್ ಲ್ಯಾಬೋರೇಟರೀಸ್ ಲಿಮಿಟೆಡ್
ಸಂಸ್ಥೆಯು 55 ಬಾಂಡ್‌ಗಳ ಮೂಲಕ ಒಟ್ಟು 55 ಕೋಟಿ ರೂ. ದೇಣಿಗೆ ನೀಡಿದೆ.

ಹೈದರಾಬಾದ್ ಮೂಲದ ದಿವಿ ಎಸ್ ಲ್ಯಾಬೊರೇಟರಿ ಮೇಲೆ 2019ರ ಫೆಬ್ರವರಿಯಲ್ಲಿ ಐಟಿ ದಾಳಿ ನಡೆದಿತ್ತು.

ಅರಬಿಂದೋ ಫಾರ್ಮಾ ಲಿಮಿಟೆಡ್
70 ಬಾಂಡ್‌ಗಳು – ಒಟ್ಟು 52 ಕೋಟಿ ರೂ. ದೇಣಿಗೆ

ಜಾರಿ ನಿರ್ದೇಶನಾಲಯವು 2022ರ ನವೆಂಬರ್‌ನಲ್ಲಿ ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿಯನ್ನು ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಬಂಧಿಸಿದೆ.

ಸಿಪ್ಲಾ ಲಿಮಿಟೆಡ್
41 ಬಾಂಡ್‌ಗಳು – ಒಟ್ಟು 39.2 ಕೋಟಿ ರೂ. ದೇಣಿಗೆ

ಎಂಎಸ್‌ಎನ್‌ ಫಾರ್ಮಾಚೆಮ್, ಎಂಎಸ್‌ಎನ್‌ ಲ್ಯಾಬೋರೇಟರೀಸ್, ಎಂಎಸ್‌ಎನ್‌ ಆಗರ್ಗಾನಿಕ್ಸ್‌ ಪ್ರೈ. ಲಿ.
38 ಬಾಂಡ್‌ಗಳು – ಒಟ್ಟು 38 ಕೋಟಿ ರೂ. ದೇಣಿಗೆ

ಆದಾಯ ತೆರಿಗೆ ಇಲಾಖೆಯು 2021ರಲ್ಲಿ ಎಂಎಸ್‌ಎನ್ ಫಾರ್ಮಾ ಮತ್ತು ಅದರ ಕಚೇರಿಗಳ ಮೇಲೆ ದಾಳಿ ನಡೆಸಿತ್ತು.

ಸನ್ ಫಾರ್ಮಾ ಲ್ಯಾಬೊರೇಟರೀಸ್ ಲಿಮಿಟೆಡ್
36 ಬಾಂಡ್‌ಗಳು ಒಟ್ಟು 31.5 ಕೋಟಿ ರೂ. ದೇಣಿಗೆ

ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್
30 ಬಾಂಡ್‌ಗಳು – ಒಟ್ಟು 24.6 ಕೋಟಿ ರೂ. ದೇಣಿಗೆ

ತೆರಿಗೆ ವಂಚನೆ ಆರೋಪದ ಮೇಲೆ ಮೇ 11 ರಂದು ಆದಾಯ ತೆರಿಗೆ ಇಲಾಖೆ ಮ್ಯಾನ್‌ಕೈಂಡ್ ಫಾರ್ಮಾದ ಮೇಲೆ ದಾಳಿ ನಡೆಸಿತ್ತು.

ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
20 ಬಾಂಡ್‌ಗಳು – ಒಟ್ಟು 20 ಕೋಟಿ ರೂ. ದೇಣಿಗೆ

ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್
10 ಬಾಂಡ್‌ಗಳು – ಒಟ್ಟು 10 ಕೋಟಿ ರೂ. ದೇಣಿಗೆ

ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
21 ಬಾಂಡ್‌ಗಳು – ಒಟ್ಟು 9.75 ಕೋಟಿ ರೂ. ದೇಣಿಗೆ

ಕಿರಣ್ ಮಜುಂದಾರ್ ಶಾ
6 ಬಾಂಡ್‌ಗಳು ಒಟ್ಟು 6 ಕೋಟಿ ರೂ. ದೇಣಿಗೆ

ಅಂಕಿಅಂಶಗಳ ಪ್ರಕಾರ, ಮೇಲೆ ಹೆಸರಿಸಲಾದ ಎಲ್ಲ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಒಟ್ಟು ಮೌಲ್ಯವು 900 ಕೋಟಿ ರೂ. ಆಗಿದೆ.

ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 7 ಕಂಪನಿಗಳು ಬಾಂಡ್‌ ಖರೀದಿಸಿವೆ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...

ಧ್ವನಿ ಬದಲಾಯಿಸುವ ಆ್ಯಪ್ ಬಳಸಿ 7 ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

30 ವರ್ಷದ ವ್ಯಕ್ತಿಯೊಬ್ಬ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಳಸಿ, ಶಿಕ್ಷಕಿಯಾಗಿ...

ಮೊದಲ ಬಾರಿಗೆ ಮತ ಚಲಾಯಿಸಿದ ಹಣಕಾಸು ಆಯೋಗದ ಮುಖ್ಯಸ್ಥ ಅರವಿಂದ್ ಪನಗಾರಿಯಾ

ಹದಿನಾರನೇ ಹಣಕಾಸು ಆಯೋಗದ ಅಧ್ಯಕ್ಷ, 71 ವರ್ಷ ವಯಸ್ಸಿನ ಅರವಿಂದ್ ಪನಗಾರಿಯಾ...

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...