ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ: ಬಿಜೆಪಿ ಮಾಜಿ ಸಚಿವೆ ಸೇರಿ 68 ಆರೋಪಿಗಳ ಖುಲಾಸೆಗೊಳಿಸಿದ ಕೋರ್ಟ್

Date:

  • ಫೆಬ್ರವರಿ 28, 2002 ರಂದು, ಅಹಮದಾಬಾದ್ ನರೋಡಾ ಗಾಮದಲ್ಲಿ ನಡೆದ ಹತ್ಯಾಕಾಂಡ
  • ಕುಂಭರ್ ವಾಸ್ ಪ್ರದೇಶದ ಮನೆಗಳಿಗೆ ಬೆಂಕಿ ಹಚ್ಚಿ 11 ಮುಸ್ಲಿಮರನ್ನು ಸುಟ್ಟು ಹಾಕಲಾಗಿತ್ತು

2002ರ ನರೋಡಾ ಗಾಮ್ ಹತ್ಯಾಕಾಂಡ ಕೋಮು ಗಲಭೆ ಪ್ರಕರಣದಲ್ಲಿ 11 ಮಂದಿ ಮುಸ್ಲಿಂ ಸಮುದಾಯದವರನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕಿ ಮಾಯಾ ಕೊಡ್ನಾನಿ, ಮಾಜಿ ಬಜರಂಗದಳ ನಾಯಕ ಬಾಬು ಬಜರಂಗಿ ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡ ಜಯದೀಪ್ ಪಟೇಲ್ ಸೇರಿದಂತೆ 69 ಆರೋಪಿಗಳನ್ನು ಅಹಮದಾಬಾದ್‌ನ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

2002ರ ಗುಜರಾತ್ ಗಲಭೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಚಿಸಲಾಗಿದ್ದ ನ್ಯಾಯಾಧೀಶರಾದ ಶುಭದಾ ಕೃಷ್ಣಕಾಂತ್ ಬಕ್ಷಿ ಅವರ ವಿಶೇಷ ನಿಯೋಜಿತ ನ್ಯಾಯಾಲಯವು ಏಪ್ರಿಲ್ 5 ರಂದು ವಿಚಾರಣೆಯನ್ನು ಮುಕ್ತಾಯಗೊಳಿಸಿತ್ತು. ಪ್ರಕರಣದ 86 ಆರೋಪಿಗಳ ಪೈಕಿ 17 ಮಂದಿ ಈಗಾಗಲೇ ಮೃತಪಟ್ಟಿದ್ದರೆ, ಒಬ್ಬ ಆರೋಪಿ ಬಿಡುಗಡೆಗೊಂಡಿದ್ದ. ಉಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದರು. ಪ್ರಕರಣದಲ್ಲಿ ಸುಮಾರು 182 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಜಮ್ಮು ಕಾಶ್ಮೀರ | ಸೇನಾ ವಾಹನ ಹೊತ್ತಿ ಉರಿದು ನಾಲ್ವರು ಸೈನಿಕರು ಸಜೀವ ದಹನ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಚಾರಣಾ ನ್ಯಾಯಾಲಯವು ನರೋಡಾ ಪಾಟಿಯಾ ಪ್ರಕರಣದಲ್ಲಿ ಕೊಡ್ನಾನಿ ಮತ್ತು ಬಜರಂಗಿ ಇಬ್ಬರನ್ನೂ ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದಾಗ್ಯೂ, ಗುಜರಾತ್ ಹೈಕೋರ್ಟ್ ಕೊಡ್ನಾನಿ ಅವರ ಶಿಕ್ಷೆಯನ್ನು ರದ್ದುಗೊಳಿಸಿ ಅವರನ್ನು ಖುಲಾಸೆಗೊಳಿಸಿತು. 2018 ರಲ್ಲಿ ನರೋಡಾ ಪಾಟಿಯಾ ಪ್ರಕರಣದಲ್ಲಿ ಬಜರಂಗಿ ಅವರ ಶಿಕ್ಷೆಯನ್ನು ಎತ್ತಿಹಿಡಿದಿತ್ತು.

ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ಅನ್ನು ಸುಟ್ಟುಹಾಕಿದ ನಂತರ ಗುಜರಾತ್‌ನಲ್ಲಿ ನಡೆದ ಒಂಬತ್ತು ಪ್ರಮುಖ ಗಲಭೆಗಳಲ್ಲಿ ನರೋಡಾ ಗಾಮ್ ಪ್ರಕರಣವೂ ಸೇರಿದೆ. ಪ್ರಕರಣದ ತ್ವರಿತ ವಿಚಾರಣೆಗೆ ಆದೇಶಿಸಲಾಯಿತು. ವಿಚಾರಣೆಗಳು ಗೊತ್ತುಪಡಿಸಿದ ನ್ಯಾಯಾಲಯಗಳಿಗೆ ಬದ್ಧವಾಗಿದ್ದು, ಸುಪ್ರೀಂ ಕೋರ್ಟ್‌ನಿಂದ ಮೇಲ್ವಿಚಾರಣೆ ಮಾಡಲ್ಪಟ್ಟಿದೆ. ಆದರೂ ನರೋಡಾ ಗಾಮ್ ಪ್ರಕರಣದ ತೀರ್ಪು ಪ್ರಕಟವಾಗಲು 21 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ.

ಫೆಬ್ರವರಿ 28, 2002 ರಂದು, ಅಹಮದಾಬಾದ್‌ನ ನರೋಡಾ ಗಾಮ ಪ್ರದೇಶದ ಮುಸ್ಲಿಂ ಮಹೋಲ್ಲಾ, ಕುಂಭರ್ ವಾಸ್ ಎಂಬ ಪ್ರದೇಶದಲ್ಲಿದ್ದ ಮನೆಗಳಿಗೆ ಬೆಂಕಿ ಹಚ್ಚಿದ ನಂತರ 11 ಮುಸ್ಲಿಂ ಸಮುದಾಯದವರನ್ನು ಸುಟ್ಟುಹಾಕಲಾಗಿತ್ತು. ಪ್ರಕರಣ ಸಂಬಂಧ ನರೋಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಈ ದಿನʼ ಸಮೀಕ್ಷೆ | ಬಿಗಡಾಯಿಸಿದ ನಿರುದ್ಯೋಗ ; ಮೋದಿ ಆಡಳಿತಕ್ಕೆ ಬೇಸರಗೊಂಡ ಮತದಾರ

“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು” ಎಂಬ ಘೋಷಣೆಯನ್ನು ನರೇಂದ್ರ ಮೋದಿಯವರು...

ನೇಹಾ ಕನ್ನಡ ನಾಡಿನ ಮಗಳು, ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಬೇಡ: ಸುರ್ಜೇವಾಲ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ಅವರು ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ...

ಕೋಟಕ್ ಮಹೀಂದ್ರ ಬ್ಯಾಂಕ್‌ನ ಹೊಸ ಗ್ರಾಹಕರ ಸೇರ್ಪಡೆ, ಕ್ರೆಡಿಟ್ ಕಾರ್ಡ್‌ಗೆ ನಿಷೇಧವೇರಿದ ಆರ್‌ಬಿಐ

ಕೋಟಕ್‌ ಮಹೀಂದ್ರ ಬ್ಯಾಂಕ್‌ ನ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ಗಳ ಮೂಲಕ...

‘ಈ ದಿನ’ ಸಮೀಕ್ಷೆ | ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಅಂತಾರೆ ಮತದಾರರು!

2014ರಲ್ಲಿ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಪ್ರಮುಖ ವಿಚಾರವಾಗಿದ್ದು...