ಮೊದಲ ಬಾರಿಗೆ 23 ಮಂದಿಗೆ ‘ನ್ಯಾಷನಲ್ ಕ್ರಿಯೇಟರ್ಸ್‌ ಪ್ರಶಸ್ತಿ’ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ

0
101

ಯೂಟ್ಯೂಬ್‌, ಇನ್ಸ್‌ಟಾಗ್ರಾಮ್‌ ಸೇರಿದಂತೆ ಹಲವು ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಕಟೆಂಟ್ ಕ್ರಿಯೇಟ್ ಮಾಡಿ, ಹೆಸರು ಗಳಿಸಿಕೊಂಡಿರುವ 23 ಮಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊಟ್ಟಮೊದಲ ಬಾರಿಗೆ  ನ್ಯಾಷನಲ್ ಕ್ರಿಯೇಟರ್ಸ್‌ ಪ್ರಶಸ್ತಿ 2024′ ಅನ್ನು ವಿತರಿಸಿದರು.

ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ್ ಮಂಟಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಹೆಸರು ಮಾಡಿರುವವರಿಗೆ ಈ ಪ್ರಶಸ್ತಿಯನ್ನು ವಿತರಿಸಲಾಯಿತು.

ಆರ್‌ಜೆ ಹಾಗೂ ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಕರ್ನಾಟಕದ ‘ಅಯ್ಯೋ ಶ್ರದ್ಧಾ’ ಎಂದೇ ಹೆಸರು ಮಾಡಿರುವ ಶ್ರದ್ಧಾ ಜೈನ್‌ ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್‌ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದರು. ಉಳಿದಂತೆ ಜಾಹ್ನ್ವಿ ಸಿಂಗ್ ಅವರಿಗೆ ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿ, ಕಬಿತಾ ಸಿಂಗ್ (ಕಬಿತಾಸ್ ಕಿಚನ್) ಅವರಿಗೆ ಆಹಾರ ವಿಭಾಗದಲ್ಲಿ ಅತ್ಯುತ್ತಮ ಕಂಟೆಂಟ್‌ ಕ್ರಿಯೇಟರ್‌ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮೂವರು ಅಂತಾರಾಷ್ಟ್ರೀಯ ಕಂಟೆಂಟ್ ಕ್ರಿಯೇಟರ್ಸ್‌ ಸೇರಿದಂತೆ ಒಟ್ಟು 23 ವಿಜೇತರಿಗೆ ಮೊದಲ ವರ್ಷದ ಈ ಪ್ರಶಸ್ತಿ ನೀಡಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಶಸ್ತಿ ನೀಡಿ ಮಾತನಾಡಿದ ಪ್ರಧಾನಿ ಮೋದಿ, “ಮುಂದಿನ ಲೋಕಸಭೆ ಚುನಾವಣೆ ಇದೆ ಎನ್ನುವ ಕಾರಣಕ್ಕಾಗಿ ನಾನು ಈ ಪ್ರಶಸ್ತಿಯನ್ನು ನೀಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಆದರೆ, ಮುಂದಿನ ವರ್ಷ ಶಿವರಾತ್ರಿಗೂ ನಾನೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದೇನೆ. ಇದು ಮೋದಿ ಗ್ಯಾರಂಟಿ” ಎನ್ನುವ ಮೂಲಕ ಮತ್ತೊಮ್ಮೆ ಕೇಂದ್ರದಲಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ:

 1. ಅತ್ಯುತ್ತಮ ಕಥೆಗಾರ್ತಿ ಪ್ರಶಸ್ತಿ: ಕೀರ್ತಿಕಾ ಗೋವಿಂದಸಾಮಿ
 2. ದಿ ಡಿಸ್ಟ್ರಪ್ಟರ್ ಆಫ್ ದಿ ಇಯರ್: ರಣವೀರ್ ಅಲಹಾಬಾದಿಯಾ
 3. ವರ್ಷದ ಸೆಲೆಬ್ರಿಟಿ ಕ್ರಿಯೇಟರ್: ಅಮನ್ ಗುಪ್ತಾ
 4. ಗ್ರೀನ್ ಚಾಂಪಿಯನ್ ಪ್ರಶಸ್ತಿ: ಪಂಕ್ತಿ ಪಾಂಡೆ
 5. ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಸೃಷ್ಟಿಕರ್ತ: ಜಯ ಕಿಶೋರಿ
 6. ಅತ್ಯಂತ ಪ್ರಭಾವಶಾಲಿ ಕೃಷಿ ಸೃಷ್ಟಿಕರ್ತ: ಲಕ್ಷಯ್ ದಾಬಸ್
 7. ವರ್ಷದ ಸಾಂಸ್ಕೃತಿಕ ರಾಯಭಾರಿ: ಮೈಥಿಲಿ ಠಾಕೂರ್
 8. ಅಂತಾರಾಷ್ಟ್ರೀಯ ಸೃಷ್ಟಿಕರ್ತ ಪ್ರಶಸ್ತಿ: ಡ್ರೂ ಹಿಕ್ಸ್
 9. ಅತ್ಯುತ್ತಮ ಟ್ರಾವೆಲ್ ಕ್ರಿಯೇಟರ್ ಪ್ರಶಸ್ತಿ: ಕಾಮಿಯಾ ಜಾನಿ
 10. ಸ್ವಚ್ಛತಾ ರಾಯಭಾರಿ ಪ್ರಶಸ್ತಿ: ಮಲ್ಹಾರ ಕಾಳಂಬೆ
 11. ದಿ ನ್ಯೂ ಇಂಡಿಯಾ ಚಾಂಪಿಯನ್ ಪ್ರಶಸ್ತಿ: ಅಭಿ ಮತ್ತು ನಿಯು
 12. ಟೆಕ್ ಕ್ರಿಯೇಟರ್ ಪ್ರಶಸ್ತಿ: ಗೌರವ್ ಚೌಧರಿ
 13. ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿ: ಜಾಹ್ನ್ವಿ ಸಿಂಗ್
 14. ಅತ್ಯಂತ ಸೃಜನಶೀಲ ಸೃಷ್ಟಿಕರ್ತ (ಪುರುಷರ ವಿಭಾಗ): RJ ರೌನಾಕ್
 15. ಅತ್ಯಂತ ಸೃಜನಶೀಲ ಸೃಷ್ಟಿಕರ್ತ (ಮಹಿಳೆಯರ ವಿಭಾಗ) : ಅಯ್ಯೋ ಶ್ರದ್ಧಾ ಜೈನ್
 16. ಆಹಾರ ವಿಭಾಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ: ಕಬಿತಾ ಸಿಂಗ್ (ಕಬಿತಾಸ್ ಕಿಚನ್)
 17. ಶಿಕ್ಷಣ ವಿಭಾಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ: ನಮನ್ ದೇಶಮುಖ್
 18. ಗೇಮಿಂಗ್ ವಿಭಾಗದಲ್ಲಿ ಅತ್ಯುತ್ತಮ ರಚನೆಕಾರ: ನಿಶ್ಚಯ್
 19. ಅತ್ಯುತ್ತಮ ಮೈಕ್ರೋ ಕ್ರಿಯೇಟರ್: ಅರಿದಮನ್
 20. ಅತ್ಯುತ್ತಮ ನ್ಯಾನೋ ಸೃಷ್ಟಿಕರ್ತ: ಪಿಯೂಷ್ ಪುರೋಹಿತ್
 21. ಅತ್ಯುತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ಸೃಷ್ಟಿಕರ್ತ: ಅಂಕಿತ್ ಬೈಯಾನ್‌ಪುರಿಯಾ

LEAVE A REPLY

Please enter your comment!
Please enter your name here